ETV Bharat / opinion

ಅಮೆರಿಕ ಅಧ್ಯಕ್ಷೀಯ ಹುದ್ದೆಗೆ 'ಚತುರ' ಜೆ.ಡಿ.ವ್ಯಾನ್ಸ್​ ಹೆಸರು ಘೋಷಿಸಿದ ಟ್ರಂಪ್​; ಯಾರು ಈ ಸೆನೆಟರ್​? - Vice President candidate JD Vance

ಡೊನಾಲ್ಡ್​ ಟ್ರಂಪ್​​ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿದ್ದರೆ, ಅವರ ಉಪಾಧ್ಯಕ್ಷರಾಗಿ ಯುವ ರಾಜಕಾರಣಿ ಜೆ.ಡಿ. ವ್ಯಾನ್ಸ್​ರನ್ನು ಘೋಷಿಸಿದ್ದಾರೆ. ಇದು ಟ್ರಂಪ್​​ರ ಮಹತ್ವದ ನಡೆಯಾಗಿದೆ. ವ್ಯಾನ್ಸ್​ ಯಾರು, ಅವರ ನಿಲುವುಗಳೇನು, ರಾಜಕೀಯ ಪ್ರಭಾವದ ಬಗ್ಗೆ ಲೇಖಕರಾದ ವಿವೇಕ್​​ ಮಿಶ್ರಾ ಮತ್ತು ಸಂಜೀತ್​ ಕಶ್ಯಪ್​ ಅವರು ಇಲ್ಲಿ ವಿವರಿಸಿದ್ದಾರೆ.

author img

By ETV Bharat Karnataka Team

Published : Jul 23, 2024, 11:28 AM IST

ಅಮೆರಿಕ ಅಧ್ಯಕ್ಷೀಯ ಹುದ್ದೆಗೆ 'ಚತುರ' ಜೆ.ಡಿ.ವ್ಯಾನ್ಸ್​ ಹೆಸರು ಘೋಷಿಸಿದ ಟ್ರಂಪ್
ಅಮೆರಿಕ ಅಧ್ಯಕ್ಷೀಯ ಹುದ್ದೆಗೆ 'ಚತುರ' ಜೆ.ಡಿ.ವ್ಯಾನ್ಸ್​ ಹೆಸರು ಘೋಷಿಸಿದ ಟ್ರಂಪ್ (X Handle)

ವರ್ಷಾಂತ್ಯದಲ್ಲಿ ನಡೆಯುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯು ರಂಗು ಪಡೆದಿದೆ. ರಿಪಬ್ಲಿಕನ್​ ಪಕ್ಷದಿಂದ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಕಣಕ್ಕಿಳಿಯುತ್ತಿದ್ದರೆ, ಡೆಮಾಕ್ರೆಟಿಕ್​ ಪಕ್ಷದಿಂದ ಕಮಲಾ ಹ್ಯಾರಿಸ್​ ಅವರು ಅಭ್ಯರ್ಥಿಯಾಗಿ ಪ್ರಸ್ತಾಪವಾಗಿದ್ದಾರೆ. ಟ್ರಂಪ್​​ ಮೇಲೆ ಇತ್ತೀಚೆಗೆ ಗುಂಡಿನ ದಾಳಿ ನಡೆದ ಘಟನೆ ಭಾರಿ ಸದ್ದು ಮಾಡಿತ್ತು.

ಈ ನಡುವೆ, ಟ್ರಂಪ್​ ಅವರು ತಮ್ಮ ಉಪಾಧ್ಯಕ್ಷರನ್ನಾಗಿ ಓಹಿಯೋದ ಸೆನೆಟರ್​ ಆಗಿರುವ ಜೆ.ಡಿ. ವ್ಯಾನ್ಸ್​​ ಅವರನ್ನು ಘೋಷಿಸಿದ್ದಾರೆ. ಈ ಮೂಲಕ ಅವರು ದೇಶಕ್ಕೆ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ. ವಿದೇಶಾಂಗ ನೀತಿ, ವ್ಯಾಪಾರ, ಬಲಪಂಥವಾದಿ, ಉದಾರವಾದಿ ಮತ್ತು ನಿಷ್ಠಾವಂತ ವ್ಯಾನ್ಸ್​ರನ್ನು ಉಪಾಧ್ಯಕ್ಷ ಸ್ಥಾನಕ್ಕೆ ಹೆಸರು ಸೂಚಿಸಿದ್ದು ಟ್ರಂಪ್​​ರ ಬುದ್ಧಿವಂತಿಕೆಯ ನಡೆಯಾಗಿದೆ. ಚುನಾವಣೆಯಲ್ಲಿ ಇದು ತಮ್ಮ ಪರ ಅಲೆಗೆ ಕಾರಣವಾಗಲಿದೆ ಎಂಬುದು ದೂರದೃಷ್ಟಿಯೂ ಇದರಲ್ಲಿದೆ.

ಟ್ರಂಪ್​​ರ ನಿಷ್ಠಾವಂತ ವ್ಯಾನ್ಸ್​: ಕಾರ್ಮಿಕ ವರ್ಗದ ಹಿನ್ನೆಲೆಯಿಂದ ಬೆಳೆದು ಬಂದಿರುವ ಸೆನೆಟರ್​ ವ್ಯಾನ್ಸ್​ ತಮ್ಮ ಉದಾರವಾಗಿ ಕೆಲಸಗಳಿಂದ ಹೆಸರುವಾಸಿ. ಟ್ರಂಪ್​​ರ ವಿರೋಧಿ ಬಣವನ್ನು ಮನವೊಲಿಸಿದ ನಾಯಕರಾಗಿದ್ದಾರೆ. ಹಲವಾರು ಅಭಿವೃದ್ಧಿ ದೂರದೃಷ್ಟಿ ಹೊಂದಿರುವ ಇವರು ಟ್ರಂಪ್​​ರ ನಿಷ್ಠಾವಂತರಾಗಿದ್ದಾರೆ. ಚುನಾವಣೆಯಲ್ಲಿ ಟ್ರಂಪ್​ ಅಧ್ಯಕ್ಷ ಸ್ಥಾನಕ್ಕೆ ನಿಂತಿದ್ದರೂ, ಅವರಿಗಿಂತಲೂ ಹೆಚ್ಚು ಪ್ರಚಲಿತದಲ್ಲಿರುವ ನಾಯಕ ವ್ಯಾನ್ಸ್​ ಆಗಿದ್ದಾರೆ.

ಯುವ ರಾಜಕಾರಣಿಯಾಗಿರುವ ವ್ಯಾನ್ಸ್​, ರಿಪಬ್ಲಿಕನ್​ ಪಕ್ಷದ ಮುಂಚೂಣಿ ನಾಯಕರೂ ಹೌದು. ಅವರ ತೀವ್ರ ಬಲಪಂಥೀಯ ನಿಲುವುಗಳು ಟೀಕೆಗೆ ಗುರಿಯಾಗಿದ್ದರೂ, ಜಾಣ್ಮೆಯನ್ನು ಟೀಕಾಕಾರರು ಕೂಡ ಒಪ್ಪಿಕೊಳ್ಳುತ್ತಾರೆ. ಎಡಪಂಥೀಯರೊಂದಿಗಿನ ಅವರ ಸಂಬಂಧವೂ ರಾಜಕೀಯ ವಲಯದಲ್ಲಿ ಅವರನ್ನು ಪ್ರಮುಖ ನಾಯಕನನ್ನಾಗಿ ಗುರುತಿಸಿದೆ. ಪ್ರಮುಖವಾಗಿ ರಿಪಬ್ಲಿಕನ್ ಪಕ್ಷದಲ್ಲಿ ಮುನ್ನೆಲೆಯಲ್ಲಿದ್ದಾರೆ.

ಇತ್ತ, ಹಾಲಿ ಅಧ್ಯಕ್ಷ ಜೋ ಬೈಡನ್​ ಅವರ ಡೆಮಾಕ್ರೆಟಿಕ್​ ಪಕ್ಷದಲ್ಲಿ ಮುಂದಿನ ಅಭ್ಯರ್ಥಿಯ ಗೊಂದಲಗಳು ಮತ್ತು ಟ್ರಂಪ್​ ಅವರನ್ನು ಬೈಡನ್​ ಎದುರಿಸುವಲ್ಲಿನ ಅಸಮರ್ಥತೆಯು ಪಕ್ಷದಲ್ಲಿ ತಿಕ್ಕಾಟಕ್ಕೆ ಕಾರಣವಾಗಿದೆ. ಇದರ ಲಾಭ ಗಳಿಸಿಕೊಳ್ಳಲು ಟ್ರಂಪ್​​, ವ್ಯಾನ್ಸ್​ರನ್ನು ಜನತೆಯ ಮುಂದೆ ತಂದಿದ್ದಾರೆ ಎಂಬುದು ವಿಶ್ಲೇಷಕರ ಅಭಿಮತವಾಗಿದೆ.

ವಿದೇಶಾಂಗ ನೀತಿಯಲ್ಲಿ ಚಾಣಕ್ಯ: ಉಪಾಧ್ಯಕ್ಷರಾಗಿ ಘೋಷಿತವಾಗಿರುವ ಜೆ.ಡಿ. ವ್ಯಾನ್ಸ್ ಆರ್ಥಿಕ ರಾಷ್ಟ್ರೀಯತೆ ಮತ್ತು ವಿದೇಶಾಂಗ ನೀತಿಯಲ್ಲಿ ಹಿಡಿತ ಹೊಂದಿದ್ದಾರೆ. ಅಮೆರಿಕದ ಈಗಿನ ರಾಜಕೀಯ ಸ್ಥಿತಿಗತಿಗಳು ಮತ್ತು ಉದಾರವಾದಿ ಬಲಪಂಥೀಯ ಮರುಕಲ್ಪನೆಯು ಪ್ರಬಲವಾಗಿದೆ. ದೇಶದ ಹಣ ಮತ್ತು ಸೈನ್ಯವನ್ನು ವಿದೇಶದಲ್ಲಿ ಅನಗತ್ಯ ಯುದ್ಧಗಳಲ್ಲಿ ವ್ಯರ್ಥ ಮಾಡಲಾಗುತ್ತಿದೆ ಎಂಬುದು ಇವರ ವಾದವಾಗಿದೆ. ಉದಾರವಾದಿ ಹಕ್ಕುಗಳು ಮಾದಕವಸ್ತು ಕಳ್ಳಸಾಗಣೆ ಮತ್ತು ಅಕ್ರಮ ವಲಸೆಯನ್ನು ಎದುರಿಸಲು ಗಡಿ ಭದ್ರತೆಯ ಕಡೆಗೆ ವ್ಯಾನ್ಸ್​ ಕಠಿಣವಾದ ನಿಲುವು ಹೊಂದಿದ್ದಾರೆ.

ವ್ಯಾನ್ಸ್‌ರ ವಿದೇಶಾಂಗ ನೀತಿ ಕಾರ್ಯಸೂಚಿಗಳು ಚೀನಾಕ್ಕೆ ಕಠಿಣವಾಗಿವೆ. ಪೂರ್ವ ಏಷ್ಯಾದ ಮಿತ್ರರಾಷ್ಟ್ರಗಳನ್ನು ಹೆಚ್ಚಿಸುವುದು, ರಕ್ಷಣಾವಾದಿ ವ್ಯಾಪಾರ ನೀತಿ ಡಾಲರ್ ಅಪಮೌಲ್ಯ ತಡೆಗೆ ಯತ್ನ, ಉಕ್ರೇನ್‌ನ-ರಷ್ಯಾ ಯುದ್ಧ ಸಂಧಾನ ಒಪ್ಪಂದಗಳು ವ್ಯಾನ್ಸ್‌ರ ವಿದೇಶಾಂಗ ನೀತಿಯ ಬತ್ತಳಿಕೆಯಲ್ಲಿನ ಅಸ್ತ್ರಗಳಾಗಿವೆ. ನವೆಂಬರ್​​ನಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಜೆ.ಡಿ. ವ್ಯಾನ್ಸ್​ ಗೆದ್ದರೆ ಟ್ರಂಪ್ ಆಡಳಿತದ ವಿದೇಶಾಂಗ ನೀತಿಯ ಮೇಲೆ ಪ್ರಭಾವ ಬೀರುವುದು ಪಕ್ಕಾ. ಟ್ರಂಪ್‌ರ ವಿಚಲಿತ ಬುದ್ಧಿಯು ವ್ಯಾನ್ಸ್​ರ ಆಡಳಿತಕ್ಕೆ ನೆರವಾಗಲಿದೆ.

ಇದನ್ನೂ ಓದಿ: 'ಟ್ರಂಪ್​ ಸೋಲು ನನ್ನ ಗುರಿ': ಬೈಡನ್‌ ಹಿಂದೆ ಸರಿದ ಬಳಿಕ ಕಮಲಾ ಹ್ಯಾರಿಸ್​ ಮೊದಲ ನುಡಿ - Kamala Harris

ETV Bharat Logo

Copyright © 2024 Ushodaya Enterprises Pvt. Ltd., All Rights Reserved.