ETV Bharat / opinion

Explained: ಹವಾಮಾನ ಬದಲಾವಣೆ, ಸಂಭಾವ್ಯ ಪರಿಹಾರೋಪಾಯಗಳು - ಹವಾಮಾನ ಬದಲಾವಣೆ

ಭೂವಿಜ್ಞಾನಿ ಸಿಪಿ ರಾಜೇಂದ್ರನ್ ಹವಾಮಾನ ಬದಲಾವಣೆಯ ಪರಿಣಾಮಗಳು ಮತ್ತು ಆಯಾಯ ದೇಶಗಳು ಹೇಗೆಲ್ಲ ಸವಾಲುಗಳನ್ನು ತಗ್ಗಿಸಬಹುದು ಎಂಬುದನ್ನು ವಿವರಿಸಿದ್ದಾರೆ. ಅವರ ಲೇಖನದ ಪೂರ್ಣ ಪಾಠ ಇಲ್ಲಿದೆ.

Explained: Climate Change Adapatation Strategies for Potential Changes in the Environment
Explained: ಹವಾಮಾನ ಬದಲಾವಣೆ, ಸಂಭಾವ್ಯ ಪರಿಹಾರೋಪಾಯಗಳು
author img

By ETV Bharat Karnataka Team

Published : Feb 20, 2024, 8:17 AM IST

ಹೈದರಾಬಾದ್: ಕೈಗಾರಿಕಾ ಪೂರ್ವ ಯುಗದಿಂದ ಇಲ್ಲಿವರೆಗೆ ಜಾಗತಿಕ ತಾಪಮಾನದ ದಾಖಲೆಗಳ ಪ್ರಕಾರ ತಾಪಮಾನದಲ್ಲಿ ಸರಾಸರಿ 1 ಡಿಗ್ರಿ ಸೆಲ್ಸಿಯಸ್ ಹೆಚ್ಚಳ ಆಗಿದೆ ಎಂಬುದನ್ನ ಅಂಕಿ - ಅಂಶಗಳು ತೋರಿಸುತ್ತಿವೆ. ಈ ತಾಪಮಾನ ಏರಿಕೆ ಈ ಪ್ರವೃತ್ತಿಯು 2016, 2017, ಮತ್ತು 2019 ಮತ್ತು 2023 ರಲ್ಲಿ ಭಾಗಶಃ 1.5 ಡಿಗ್ರಿ ಸೆಲ್ಸಿಯಸ್​ಗಿಂತ ಹೆಚ್ಚಿದೆ ಎಂದು ಹೇಳಲಾಗುತ್ತಿದೆ. ಅಂತಾರಾಷ್ಟ್ರೀಯವಾಗಿ ಒಪ್ಪಿಕೊಂಡಿರುವ 1.5 ಡಿಗ್ರಿ ಮಿತಿಯನ್ನು 2024 ರಲ್ಲಿ ಮೀರುವ ಸಾಧ್ಯತೆಯಿದೆ ಎಂದು ಹವಾಮಾನ ವಿಜ್ಞಾನಿಗಳು ಅಂದಾಜಿಸಿದ್ದಾರೆ.

ತಜ್ಞರು ಹೇಳುವುದಿಷ್ಟು: ತಜ್ಞರ ಪ್ರಕಾರ, 2050 ರ ವೇಳೆಗೆ, ಭಾರತ ಸೇರಿದಂತೆ ವಿಶ್ವದ ಹಲವು ಭಾಗಗಳಲ್ಲಿ ತಾಪಮಾನ ಮಾನವ ಬದುಕುಳಿಯಲು ಬೇಕಾದ ವಾತಾವರಣದ ಮಿತಿಗಳನ್ನು ದಾಟಿ ಮುಂದುವರೆಯಲಿದೆ ಎಂದು ಅಂದಾಜಿಸಲಾಗಿದೆ. ಹೀಗಾಗಿ ವಾತಾವರಣವನ್ನು ತಂಪಾಗಿಸುವ ಕ್ರಮಗಳನ್ನು ಅಳವಡಿಸಿಕೊಳ್ಳುವ ಅಗತ್ಯ ಹಿಂದೆಂದಿಗಿಂತಲೂ ಈ ಹೆಚ್ಚಾಗಿದೆ. ಹೆಚ್ಚುವರಿ ಶಾಖವು ಕಾಲೋಚಿತ ತಾಪಮಾನದ ವಿಪರೀತತೆಯನ್ನು ಹೆಚ್ಚುವಂತೆ ಮಾಡುತ್ತದೆ. ಧ್ರುವ ಪ್ರದೇಶಗಳಲ್ಲಿ ಮತ್ತು ಹಿಮಾಲಯದಂತಹ ಪರ್ವತ ಸರಪಳಿಗಳ ಮೇಲೆ ಮೇಲೆ ಏರುತ್ತಿರುವ ತಾಪಮಾನ ಪರಿಣಾಮ ಬೀರಲಿದ್ದು, ಹಿಮದ ಹೊದಿಕೆಯನ್ನು ಕಡಿಮೆ ಮಾಡುತ್ತದೆ. ಭಾರಿ ಮಳೆಯನ್ನು ತೀವ್ರಗೊಳಿಸುತ್ತದೆ ಮತ್ತು ಸಸ್ಯಗಳು ಮತ್ತು ಪ್ರಾಣಿಗಳ ಆವಾಸಸ್ಥಾನಗಳ ಶ್ರೇಣಿಗಳ ಮೇಲೆ ಭಾರಿ ಪರಿಣಾಮ ಬೀರುವ ಸಾಧ್ಯತೆಗಳು ಹೆಚ್ಚು ಎಂದು ತಜ್ಞರು ಎಚ್ಚರಿಸಿದ್ದಾರೆ.

ಎಚ್ಚರಿಕೆ ಅಗತ್ಯ: ಭಾರತ ಸೇರಿದಂತೆ ವಿಶ್ವದ ವಿವಿಧ ಭಾಗಗಳಲ್ಲಿ ಭೂಕುಸಿತ, ಕಾಳ್ಗಿಚ್ಚು, ಹಠಾತ್ ಪ್ರವಾಹ ಮತ್ತು ಚಂಡಮಾರುತದಂತಹ ನೈಸರ್ಗಿಕ ವಿಕೋಪಗಳ ಆವರ್ತನಗಳನ್ನು ನಾವು ನೀವೆಲ್ಲ ಈಗಾಗಲೇ ಕಾಣುತ್ತಿದ್ದೇವೆ. ಇದರಿಂದಾಗಿ ಭಾರಿ ಮಾನವ ಮತ್ತು ಆರ್ಥಿಕ ನಷ್ಟಗಳು ಉಂಟಾಗುತ್ತವೆ. ವಿಶ್ವಸಂಸ್ಥೆಯ ಇಂಟರ್‌ಗವರ್ನಮೆಂಟಲ್ ಪ್ಯಾನೆಲ್‌ನ ಇತ್ತೀಚಿನ ವರದಿ ಪ್ರಕಾರ, ಜಾಗತಿಕ ತಾಪಮಾನ ಏರಿಕೆಯು ಶತಮಾನಗಳಿಂದ ಸಹಸ್ರಮಾನಗಳವರೆಗೆ ಬದಲಾಯಿಸಲಾಗದ ಬದಲಾವಣೆಗಳಾಗಿವೆ. ವಿಶೇಷವಾಗಿ ಸಾಗರ, ಹಿಮದ ಹಾಳೆಗಳು ಮತ್ತು ಜಾಗತಿಕ ಸಮುದ್ರ ಮಟ್ಟದಲ್ಲಿನ ಬದಲಾವಣೆಗಳು ಈಗ ಆ ನಂಬಿಕೆಗಳನ್ನು ಸುಳ್ಳು ಮಾಡಿದ್ದು ಅಪಾಯದ ಮುನ್ಸೂಚನೆ ಎಂದು ಎಚ್ಚರಿಸಿದೆ. ಹಸಿರುಮನೆ ಅನಿಲ ಹೊರಸೂಸುವಿಕೆಯ ಪ್ರಮಾಣವನ್ನು ಕಡಿಮೆ ಮಾಡಲು ನಮ್ಮ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ ಹವಾಮಾನ ಬದಲಾವಣೆಗಳು ಸಂಭವಿಸುತ್ತಲೇ ಸಾಗಿವೆ. ಹೀಗಾಗಿ ತುರ್ತಾಗಿ ಅವುಗಳನ್ನು ಕಡಿಮೆ ಮಾಡಬೇಕಾಗಿರುವುದು ಸದ್ಯದ ಅಗತ್ಯವಾಗಿದೆ.

ಹವಾಮಾನ ವೈಪರೀತ್ಯ ತಡೆದುಕೊಳ್ಳಬಲ್ಲರೇ?: ಹವಾಮಾನ ಬದಲಾವಣೆಯ ಸವಾಲುಗಳನ್ನು ಎದುರಿಸಲು, ಪರಿಸರ ಹಾನಿ ತಗ್ಗಿಸುವಿಕೆ ಮತ್ತು ಹೊಂದಾಣಿಕೆ ಎರಡರ ಗುರಿಗಳನ್ನು ಸಾಧಿಸುವ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ. 2022 ರಲ್ಲಿ ಪ್ರಕಟವಾದ ಮಾಪನಗಳ ಪ್ರಕಾರ, ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಚರ್ಚೆಯ ನಡುವೆ, ಅದರ ಪ್ರಮಾಣ ಹೆಚ್ಚಾಗುತ್ತಲೇ ಸಾಗಿದೆ.

ಹವಾಮಾನ ಬದಲಾವಣೆ ಮತ್ತು ಗಂಭೀರತೆ: ಜಾಗತಿಕ ಸರಾಸರಿ ತಾಪಮಾನವು ಮಿತಿಮೀರುತ್ತದೆ. ಅದು 1.5 ಡಿಗ್ರಿ ಸೆಲ್ಸಿಯಸ್ ನಷ್ಟು ಹೆಚ್ಚಳವಾಗುತ್ತಿದೆ. ಈ ಸನ್ನಿವೇಶವನ್ನು ನಾವು ಹೆಚ್ಚು ಗಂಭೀರವಾಗಿ ತೆಗೆದುಕೊಳ್ಳುವ ಕಾಲ ಬಂದಿದೆ. ಇದನ್ನು ಕಡಿಮೆ ಮಾಡಲು ಗಂಭೀರ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯತೆ ಇದೆ.

ಹವಾಮಾನ ಬದಲಾವಣೆಗೆ ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ಹೊಂದಿಕೊಳ್ಳುವುದು ಹವಾಮಾನ - ಸ್ಥಿತಿಸ್ಥಾಪಕ ಸಮಾಜ ಸ್ಥಾಪನೆ ಮಾಡಬೇಕಾಗಿದೆ. ಪ್ಯಾರಿಸ್ ಒಪ್ಪಂದದ ಅಡಿಯಲ್ಲಿ ಸ್ಥಾಪಿಸಲಾದ ಜಾಗತಿಕ ಅಳವಡಿಕೆ ಕಾರ್ಯಕ್ರಮಗಳ ನಿರ್ದಿಷ್ಟ ಗುರಿಗಳು ಹೊಂದಾಣಿಕೆಯ ಸಾಮರ್ಥ್ಯವನ್ನು ಹೆಚ್ಚಿಸುವುದು ಮತ್ತು ಸ್ಥಿತಿಸ್ಥಾಪಕತ್ವವನ್ನು ಬಲಪಡಿಸುವುದು ತುರ್ತು ಅಗತ್ಯವಾಗಿದೆ. ಈ ಮೂಲಕ ಜಾಗತಿಕ ತಾಪಮಾನ ಏರಿಕೆಯನ್ನು ಕಡಿಮೆ ಮಾಡಲು ಮುಂದಾಗಬೇಕಿದೆ.

ಹವಾಮಾನ ಬದಲಾವಣೆಯ ಕುರಿತಾದ ಇಂಟರ್‌ಗವರ್ನಮೆಂಟಲ್ ಪ್ಯಾನೆಲ್ ಆನ್ ಕ್ಲೈಮೇಟ್ ಚೇಂಜ್ (IPCC) ವರದಿಗಳು, ಹವಾಮಾನ ಬದಲಾವಣೆಯಿಂದ ಪ್ರತಿಕೂಲ ಪರಿಣಾಮ ಮಾನವರಿಗೆ ಮಾತ್ರವಲ್ಲ, ಪರಿಸರ ವ್ಯವಸ್ಥೆಗಳ ಮೇಲೂ ಆಗುತ್ತದೆ ಎಂದು ಹೇಳುತ್ತಿವೆ.

ಹವಾಮಾನ ಬದಲಾವಣೆಗೆ ಹೊಂದಿಕೊಳ್ಳುವುದು ಪರಿಸರ, ಸಮಾಜ, ಸಾರ್ವಜನಿಕ ಆರೋಗ್ಯ, ಆರ್ಥಿಕತೆ ಮತ್ತು ಹೆಚ್ಚಿನವುಗಳ ಮೇಲೆ ಜಾಗತಿಕ ತಾಪಮಾನ ಏರಿಕೆಯ ಪ್ರತಿಕೂಲ ಪರಿಣಾಮಗಳನ್ನು ಕಡಿಮೆ ಮಾಡಲು, ಸಮಾಜಗಳು ತೆಗೆದುಕೊಳ್ಳಬಹುದಾದ ವ್ಯಾಪಕ ಶ್ರೇಣಿಯ ಕ್ರಮ ನಿಂತಿದೆ ಎಂಬುದನ್ನು ಸೂಚಿಸುತ್ತದೆ. ಈ ಪರಿಣಾಮಗಳನ್ನು ಮೆಟ್ಟಿ ನಿಲ್ಲಲು, ಪ್ರತಿ ದೇಶ, ಪ್ರದೇಶ ಅಥವಾ ಸಮುದಾಯಕ್ಕೆ ಅನುಗುಣವಾಗಿ ಪ್ರಾಯೋಗಿಕ ಪರಿಹಾರಗಳ ಅಗತ್ಯವಿದೆ.

ಹೊಸ ತಂತ್ರಜ್ಞಾನಗಳನ್ನು ಬಳಸಿಕೊಂಡು, ಹವಾಮಾನ ಬದಲಾವಣೆಯ ಪರಿಣಾಮಗಳಿಗೆ ಹೊಂದಿಕೊಳ್ಳಲು ಮಾನವರು ಪ್ರಕೃತಿ ಆಧಾರಿತ ಪರಿಹಾರಗಳನ್ನು ಬಳಸಬಹುದು. ಹದಗೆಟ್ಟ ಪರಿಸರ ವ್ಯವಸ್ಥೆಗಳನ್ನು ಮರುಸ್ಥಾಪಿಸಬೇಕಿದೆ. ಅಂತರ್ಜಲ ಮರುಪೂರಣ, ಪರಿಸರ ಸ್ನೇಹಿ ಜಾನುವಾರು ನಿರ್ವಹಣೆ, ಸುಸ್ಥಿರ ಕೃಷಿ ಮತ್ತು ಕರಾವಳಿ ಆವಾಸಸ್ಥಾನಗಳ ಮರುಸ್ಥಾಪನೆಗಾಗಿ ಹೊಸ ತಂತ್ರಗಳನ್ನು ಅಳವಡಿಸಿಕೊಳ್ಳುವುದು ಈಗಿನ ತುರ್ತು ಅಗತ್ಯವಾಗಿದೆ.

ರಸಗೊಬ್ಬರ ಬಳಕೆ ಕಡಿಮೆ ಮಾಡುವ ಅವಶ್ಯಕತೆ: ಕೃಷಿ ವಿಜ್ಞಾನಿಗಳು ಸೂಚಿಸಿದಂತೆ, ಕಡಿಮೆ ನೀರು ಮತ್ತು ರಸಗೊಬ್ಬರಗಳನ್ನ ಆದಷ್ಟು ಕಡಿಮೆ ಬಳಕೆ ಮಾಡಬೇಕಿದೆ. ಕೃಷಿ-ಪರಿಸರ ತಂತ್ರಜ್ಞಾನಗಳ ಪರಿಣಾಮಕಾರಿ ಬಳಕೆಯನ್ನು ಅವಲಂಬಿಸಿ ಹವಾಮಾನ - ನಿರೋಧಕ ಕೃಷಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಅವಶ್ಯಕತೆಯಿದೆ. ಕಾಡು ಬೆಳೆ ಪ್ರಭೇದಗಳ ಬೀಜಗಳನ್ನು ಮತ್ತೆ ಹೊಲಗಳಿಗೆ ಹಾಕಲು ಅಥವಾ ನೈಸರ್ಗಿಕವಾಗಿ ನಿರ್ದಿಷ್ಟ ಮೈಕ್ರೋಕ್ಲೈಮೇಟ್‌ಗೆ ಸೂಕ್ತವಾದ ಹೊಸ ಮಿಶ್ರತಳಿಗಳನ್ನು ಉತ್ಪಾದಿಸುವಂತೆ ಶಿಫಾರಸು ಮಾಡಬೇಕಿದೆ.

ಇದನ್ನು ಓದಿ:ಸಾರ್ವತ್ರಿಕ ಸಾಮಾಜಿಕ ಭದ್ರತೆ: ಕಾರ್ಮಿಕರ ಹಿತಾಸಕ್ತಿ ಕಾಪಾಡಲು ಮುಂದಾಗದ ಭಾರತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.