ETV Bharat / opinion

ಎಲ್ಲರಿಗೂ ಮನೆಯೆಂಬ ಕನಸು: ನಗರಗಳಲ್ಲಿ ಬಾಡಿಗೆದಾರರ ಹಿತಾಸಕ್ತಿಗೆ ಬೇಕಿದೆ ರಕ್ಷಣೆ - Rental Housing In Indian Cities - RENTAL HOUSING IN INDIAN CITIES

ಭಾರತದಲ್ಲಿ ನಗರೀಕರಣ ವೇಗವಾಗಿ ಬೆಳೆಯುತ್ತಿದೆ. ಹೀಗಾಗಿ, ಬಾಡಿಗೆ ಮನೆಗಳಿಗೆ ಬೇಡಿಕೆಯೂ ಹೆಚ್ಚಿದೆ. ಈ ನಿಟ್ಟಿನಲ್ಲಿ ಬಾಡಿಗೆದಾರರ ಹಿತಾಸಕ್ತಿ ಕಾಪಾಡಲು ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಅಂಶವನ್ನು ಅರ್ಥಶಾಸ್ತ್ರ ಮತ್ತು ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಸೌಮ್ಯದೀಪ್​ ಚಟ್ಟೋಪಾಧ್ಯಯ್​ ಈ ಲೇಖನದಲ್ಲಿ ವಿವರಿಸಿದ್ದಾರೆ.

dream-of-housing-for-all-and-the-potentials-of-rental-housing-in-indian-cities
ಸಾಂದರ್ಭಿಕ ಚಿತ್ರ (Getty Images)
author img

By ETV Bharat Karnataka Team

Published : Jun 26, 2024, 3:38 PM IST

Updated : Jun 26, 2024, 6:11 PM IST

ಕೇಂದ್ರದ ಎನ್​ಡಿಎ ಸರ್ಕಾರವು ದೇಶದ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚುವರಿ 30 ಮಿಲಿಯನ್​ ಮನೆಗಳ ನಿರ್ಮಾಣಕ್ಕೆ ನಿರ್ಧರಿಸಿದೆ. ಮುಂದಿನ ಐದು ವರ್ಷಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ 20 ಮಿಲಿಯನ್​ ಮನೆ ನಿರ್ಮಿಸುವ ಕುರಿತು ಈ ವರ್ಷದ ಮಧ್ಯಂತರ ಬಜೆಟ್‌ನಲ್ಲಿಯೂ ಪ್ರಸ್ತಾಪಿಸಲಾಗಿತ್ತು. ಈ ಮೂಲಕ ನಗರ ಪ್ರದೇಶಗಳಲ್ಲಿ 10 ಮಿಲಿಯನ್​ ಹೆಚ್ಚುವರಿ ಮನೆಗಳನ್ನು ನಿರೀಕ್ಷಿಸಲಾಗಿದೆ.

2024ರ ಜೂನ್​ 10ರಂದು ಪಿಎಂಎವೈ ಯೋಜನೆಯಡಿ ಕೇಂದ್ರ 11.86 ಮಿಲಿಯನ್​ ಮನೆಗಳ ನಿರ್ಮಾಣಕ್ಕೆ ಅನುಮತಿಸಿದೆ. ಇದರನುಸಾರ 11.43 ಮಿಲಿಯನ್​ ವಸತಿ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗಿದ್ದು, 8.37 ಮಿಲಿಯನ್​ ಮನೆಗಳನ್ನು ನಿರ್ಮಿಸಲಾಗಿದೆ. ಐಸಿಆರ್​ಐಇಆರ್​ ವರದಿ (2020) ಪ್ರಕಾರ, ನಗರದ ಕಡಿಮೆ ಆದಾಯದ ಗುಂಪುಗಳಲ್ಲಿ ಶೇ.99ರಷ್ಟು ಮಂದಿ ವಸತಿ ಕೊರತೆ ಅನುಭವಿಸುತ್ತಿದ್ದಾರೆ.

ಭಾರತದಲ್ಲಿ ಅಧಿಕೃತ ವಸತಿ ಯೋಜನೆ ಇದೆ. ಪ್ರಸ್ತುತ, ಪಿಎಂಎವೈ ಎಲ್ಲರಿಗೂ ಮನೆ ಎಂಬ ಗುರಿಯೊಂದಿಗೆ ಎಲ್ಲಾ ನಿವಾಸಿಗಳಿಗೂ ಮನೆಯ ಹಕ್ಕು ನೀಡಲಾಗುತ್ತಿದೆ. ಆಯವ್ಯಯ ಆರ್ಥಿಕ ಸಮಿತಿಯು ಪಿಎಂಎವೈ-ಯು ಬಾಡಿಗೆ ಮನೆಗಳ ವಿಚಾರದಲ್ಲಿ 6 ಸಾವಿರ ಕೋಟಿ ರೂ ಮೀಸಲಿಟ್ಟಿದೆ. ಆದಾಗ್ಯೂ ಪಿಎಂಎವೈ-ಯು 2015ರ ಕೊನೆಯಲ್ಲಿ ನಾಲ್ಕು ಅಂಶಗಳ ಮೇಲೆ ಮನೆ ಮಾಲೀಕತ್ವದ ಆಯ್ಕೆಯನ್ನು ಪರಿಚಯಿಸಿತು. ಅವುಗಳೆಂದರೆ, ಕೊಳೆಗೇರಿಗಳ ಪುನರಾಭಿವೃದ್ಧಿ, ಮನೆಗಳನ್ನು ಖರೀದಿಸಲು ಸರ್ಕಾರದಿಂದ ಬಡ್ಡಿದರದ ಸಬ್ಸಿಡಿ ಪಡೆಯುವ ನಿಬಂಧನೆಯೊಂದಿಗೆ ಸಾಲ ಸಂಬಂಧಿತ ಸಬ್ಸಿಡಿ ಯೋಜನೆ, ಡೆವಲಪರ್‌ಗಳಿಗೆ ಸಬ್ಸಿಡಿ ಒದಗಿಸುವುದರೊಂದಿಗೆ ಅವರ ಸಹಭಾಗಿತ್ವದಲ್ಲಿ ಕೈಗೆಟುಕುವ ವಸತಿ ಮತ್ತು ಫಲಾನುಭವಿ ನೇತೃತ್ವದಲ್ಲಿ ಮನೆ ನಿರ್ಮಾಣ ಅಥವಾ ವರ್ಧನೆಗಾಗಿ ಹಣಕಾಸಿನ ನೆರವು ನೀಡುವುದು.

ನಗರಗಳಲ್ಲಿ ವಸತಿ ನಿರ್ಮಾಣದ ವಿಷಯದಲ್ಲಿ ಯೋಜನೆಗಳ ಪರಿಣಾಮಕಾರಿ ಅಳವಡಿಕೆಯಲ್ಲಿ ಕಂಡ ಅಡ್ಡಿಗಳೆಂದರೆ, ಭೂಮಿ ಹಕ್ಕಿನಲ್ಲಿ ಶಾಸಕಾಂಗ ಮತ್ತು ಆಡಳಿತಾತ್ಮಕ ತೊಂದರೆಗಳು, ವಸತಿ ವೆಚ್ಚ ಮತ್ತು ಸಬ್ಸಿಡಿ ಬಡ್ಡಿದರದ ಅಸಮತೋಲನ, ಮನೆ ನಿರ್ಮಾಣ ಸ್ಥಳಗಳ ದೂರದಲ್ಲಿನ ಅನಾನುಕೂಲತೆ ಮತ್ತು ಖಾಸಗಿ ವಲಯದ ಹಿತಾಸಕ್ತಿಗಳಾಗಿವೆ.

ಪಿಎಂಎವೈ ಯೋಜನೆಯಲ್ಲಿನ ಬಾಡಿಗೆ ವಸತಿ ಕೊರತೆ ನಡುವೆ ಭಾರತದ ನಗರಗಳಲ್ಲಿ ಇವುಗಳ ಬೇಡಿಕೆ ಹೆಚ್ಚಿರುವುದನ್ನು ಕಾಣಬಹುದು. ಈ ಬಾಡಿಗೆ ಮನೆಗಳು ಕಾರ್ಮಿಕರ ಚಲನಶೀಲತೆಯನ್ನು ಹೆಚ್ಚಿಸಿದೆ. ಅಂದರೆ, ಕಡಿಮೆ ಆದಾಯ ಹೊಂದಿರುವವರಿಂದ ಬಾಡಿಗೆ ವಸತಿಗೆ ಹೆಚ್ಚು ಬೇಡಿಕೆ ಇದೆ. 2011ರ ದತ್ತಾಂಶದ ಪ್ರಕಾರ, 2001ರಿಂದ 2011ರವರೆಗೆ ನಗರಗಳಲ್ಲಿ ಬಾಡಿಗೆ ಮನೆಗಳ ಸಂಖ್ಯೆ ಶೇ 27.5ರಷ್ಟು ಹೆಚ್ಚಾಗಿದೆ. ಬಾಡಿಗೆ ಮನೆಗಳಲ್ಲಿ ವಾಸಿಸುವವರ ಸಂಖ್ಯೆ 6.4 ಮಿಲಿಯನ್​ ಇದೆ.

ಇದೇ ವೇಳೆ ನಗರ ಪ್ರದೇಶದಲ್ಲಿ ಖಾಲಿ ಮನೆಗಳ ಸಂಖ್ಯೆ 4.6 ಮಿಲಿಯನ್​ ಇದೆ. ಇದು ಪರೋಕ್ಷವಾಗಿ ಖಾಸಗಿ ಮನೆಗಳ ಬೇಡಿಕೆ ಮತ್ತು ಖಾಲಿ ವಸತಿ ಘಟಕದ ನಡುವಿನ ಅಂತರ ತೋರಿಸಿದೆ. 2018ರ ಎನ್​ಎಸ್​ಎಸ್​ಒ ವರದಿ ಹೇಳುವಂತೆ ಮೂರನೇ ಒಂದು ಭಾಗದಷ್ಟು ನಗರದಲ್ಲಿರುವ ಜನರು ಬಾಡಿಗೆ ಮನೆಯಲ್ಲಿ ವಾಸಿಸುತ್ತಾರೆ. ಇದರಲ್ಲಿ ಶೇ.70ರಷ್ಟು ಮಂದಿ ಮನೆ ಮಾಲೀಕರೊಂದಿಗೆ ಯಾವುದೇ ಒಪ್ಪಂದವನ್ನೇ ನಡೆಸುವುದಿಲ್ಲ. ಇವರ ತಿಂಗಳ ಸರಾಸರಿ ಬಾಡಿಗೆ 3,150 ರೂ ಆಗಿದೆ.

ಮಾಲೀಕರು ಮತ್ತು ಬಾಡಿಗೆದಾರರು ಒಮ್ಮತ ಒಪ್ಪಂದದ ಮೂಲಕ ಮಾರುಕಟ್ಟೆಯ ಬಾಡಿಗೆಗಿಂತ ಹೆಚ್ಚಿನ ದರ ವಿಧಿಸುತ್ತಾರೆ. ಬಾಡಿಗೆ ನಿವಾಸಿಗಳು ಮನೆ ಮಾಲೀಕರಿಗಿಂತ ಕಡಿಮೆ ನೀರು, ಶೌಚಾಲಯದ ವ್ಯವಸ್ಥೆ ಹೊಂದಿರುತ್ತಾರೆ. ನಗರದಲ್ಲಿ ವಾಸಿಸುತ್ತಿರುವ ಬಾಡಿಗೆ ನಿವಾಸಿಗಳು ಕನಿಷ್ಠ ಸೇವೆಗಳ ಲಭ್ಯತೆಯನ್ನೂ ಹೊಂದಿಲ್ಲ. ಇದಕ್ಕಿಂತ ಹೆಚ್ಚಾಗಿ, ಬಾಡಿಗೆ ನಿವಾಸಿಗಳು ಕೆಳಮಟ್ಟಕ್ಕಿಂತ ಒಂದು ಮಟ್ಟ ಹೆಚ್ಚಿನ ಅಂದರೆ ಮಾಸಿಕ ತಲಾ ವೆಚ್ಚ ಹೊಂದಿರುವವರಾಗಿದ್ದಾರೆ. ಕಡಿಮೆ ಆದಾಯ ಗುಂಪುಗಳಲ್ಲಿ ಮನೆ ಮಾಲೀಕತ್ವಕ್ಕಿಂತ ಬಾಡಿಗೆ ಲಭ್ಯತೆ ಪ್ರಮುಖವಾಗಿದೆ ಎಂದು ಇದು ತೋರಿಸುತ್ತದೆ.

ಮಾಲೀಕತ್ವ ಆಧರಿತ ವಸತಿ ನೀತಿಗಳ ಮೇಲಿನ ಅತಿಯಾದ ಅವಲಂಬನೆ ಮತ್ತು ಬಾಡಿಗೆದಾರರಿಗೆ ವಿಧಿಸಬಹುದಾದ ಬಾಡಿಗೆಗಳು ಬಾಡಿಗೆ ನಿಯಂತ್ರಣ ಕಾಯ್ದೆಯ ಮೇಲೆ ಬಾಡಿಗೆ ವಸತಿ ಮಾರುಕಟ್ಟೆಯಲ್ಲಿ ಪೂರೈಕೆ ನಿರ್ಬಂಧಗಳನ್ನು ಸೃಷ್ಟಿಸಿದೆ. ಐಡಿಎಫ್​ಸಿ 2018 ವರದಿಯು ನಗರಗಳಲ್ಲಿ ವಸತಿ ಬಾಡಿಗೆಗಳಿಂದ ಶೇ2 ರಿಂದ 4ರಷ್ಟು ಲಾಭವಿರುತ್ತದೆ. ಇದರೊಂದಿಗೆ ಬಾಡಿಗೆದಾರರ ಸ್ಥಳಾಂತರಗೊಳ್ಳುವ ಪ್ರಮಾಣ, ವಿವಾದ, ಪರಿಹಾರ ಕಾರ್ಯವನ್ನು ಇದು ಹೊಂದಿರುತ್ತದೆ. ಇದು ಅನೇಕ ವೇಳೆ ಮಾಲೀಕರಿಗೆ ಮನೆ ಖಾಲಿ ಇದ್ದಾಗ ಬಾಡಿಗೆ ನೀಡಲು ತೊಂದರೆ ಉಂಟುಮಾಡುತ್ತದೆ. ಇದು ವಸತಿ ಘಟಕ ನಿರ್ವಹಣೆ, ನವೀಕರಣ ಮತ್ತು ವಿಸ್ತರಣೆ ಪ್ರಯತ್ನವನ್ನು ಹೊಂದಿರುವುದಿಲ್ಲ. ಮನೆಯ ಲಭ್ಯತೆ ಕಡಿಮೆಯಾದಾಗ ಬಾಡಿಗೆ ಹೆಚ್ಚುವಂತೆ ಮಾಡುತ್ತದೆ. ನಗರದ ಬಡವರಿಗೆ ಬಾಡಿಗೆ ಮನೆ ದುಬಾರಿಯೂ ಆಗುತ್ತದೆ.

ಬಾಡಿಗೆದಾರರ ಪರವಾಗಿ 2021ರಲ್ಲಿ ಮಾದರಿ ಬಾಡಿಗೆ ಕಾಯ್ದೆಯನ್ನು (ಎಂಟಿಎ) ಪರಿಚಯಿಸಲಾಗಿದೆ. ಇದರಲ್ಲಿ ಬಾಡಿಗೆದಾರರಿಗೆ ಪ್ರಯೋಜನವಾಗುವ ಕೆಲವು ಅಂಶಗಳಿವೆ. ಉದಾಹರಣೆಗೆ, ಎರಡು ತಿಂಗಳ ಬಾಡಿಗೆಯನ್ನು ಮುಂಗಡವಾಗಿ ಭದ್ರತಾ ಠೇವಣಿಗೆಯಾಗಿ ಇರಿಸುವುದು, ಹೇಳಿದ ಸಮಯಕ್ಕೆ ಮನೆ ಖಾಲಿ ಮಾಡದೇ ಹೋದಾಗ ದಂಡ, ಯಾವುದೇ ಕಾರಣವಿಲ್ಲದೇ, ನೋಟಿಸ್​ ನೀಡದೆ ಬಾಡಿಗೆ ಏರಿಕೆಯಂತಹ ಕೆಲವು ಅಂಶಗಳ ಮೇಲೆ ಕಠಿಣ ನಿಯಮವನ್ನು ತರಲಾಗಿದೆ.

ಬಾಡಿಗೆದಾರರ ವಿವಾದಗಳನ್ನು ಪರಿಣಾಮಕಾರಿಯಾಗಿ ಪರಿಹಾರಿಸಲು ಬಾಡಿಗೆ ನ್ಯಾಯಾಲಯ ಮತ್ತು ಬಾಡಿಗೆ ಟ್ರಿಬ್ಯೂನಲ್ಸ್​​ಗಳ ಸ್ಥಾಪಿಸುವ ಅವಕಾಶವೂ ಇದೆ. ಸದ್ಯ ತಮಿಳುನಾಡು, ಆಂಧ್ರ ಪ್ರದೇಶ, ಉತ್ತರ ಪ್ರದೇಶ ಮತ್ತು ಅಸ್ಸಾಂನಲ್ಲಿ ಎಂಟಿಎ 2021ರ ನಿಯಮದಡಿಗೆ ಬಾಡಿಗೆದಾರರ ಕಾನೂನನ್ನು ಪರಿಷ್ಕರಿಸಲಾಗಿದೆ. ಇದಕ್ಕಿಂತ ಹೆಚ್ಚಾಗಿ, ಮನೆ ಬಾಡಿಗೆ ಹೆಚ್ಚಳ ಮತ್ತು ಮಿತಿ ಸೇರಿದಂತೆ ಹಲವು ಅಂಶಗಳ ಒಮ್ಮತದ ಒಪ್ಪಂದಗಳನ್ನು ನೋಂದಣಿ ಮಾಡುವುದು ಕಡ್ಡಾಯ. ಬಾಡಿಗೆ ಕರಾರುಗಳ ಕಾನೂನು ಪರಿಭಾಷೆಯನ್ನು ಅರ್ಥೈಸಿಕೊಳ್ಳುವಲ್ಲಿ ತೋರಬಹುದಾದ ತೊಂದರೆ, ಅಲ್ಪಸಂಖ್ಯಾತರು ಸೇರಿದಂತೆ ಸಾಮಾಜಿಕವಾಗಿ ಹಿಂದುಳಿದ ವರ್ಗಗಳ ಹಿತಾಸಕ್ತಿಗಳನ್ನು ಕಾಪಾಡಲು ತಾರತಮ್ಯ-ವಿರೋಧಿ ಷರತ್ತುಗಳ ಅನುಪಸ್ಥಿತಿ ಬಾಡಿಗೆದಾರರನ್ನು, ವಿಶೇಷವಾಗಿ ನಗರ ಬಡವರನ್ನು ಔಪಚಾರಿಕ ಒಪ್ಪಂದದ ಬಾಡಿಗೆ ಒಪ್ಪಂದಗಳಿಗೆ ಪ್ರವೇಶಿಸದಂತೆ ದುರ್ಬಲಗೊಳಿಸಬಹುದು.

ಮುಂದಿನ ಹಾದಿ: ಭಾರತದಲ್ಲಿ ನಗರೀಕರಣ ಹೆಚ್ಚಾಗಿದ್ದು, ಲಕ್ಷಾಂತರ ಜನರು ನಗರ ವಾಸಕ್ಕೆ ಮುಂದಾಗುತ್ತಿದ್ದಾರೆ. ಇದರಿಂದ ಭವಿಷ್ಯದಲ್ಲಿ ಮನೆಗಳಿಗೆ ಬೇಡಿಕೆ ಹೆಚ್ಚಲಿದೆ. ಈ ನಿಟ್ಟಿನಲ್ಲಿ ಬಾಡಿಗೆ ಮನೆ ಬೇಡಿಕೆಯನ್ನು ನಿರ್ಲಕ್ಷ್ಯಿಸುವಂತಿಲ್ಲ. ಬಾಡಿಗೆ ಪದ್ಧತಿಗಳನ್ನು ವೃತ್ತಿಪರವಾಗಿ ನಿರ್ವಹಿಸಲು ಬಾಡಿಗೆ ನಿರ್ವಹಣಾ ಸಮಿತಿಗಳನ್ನು ಒಳಗೊಳ್ಳುವ ಸಾಧ್ಯತೆಗಳನ್ನು ಕಂಡುಕೊಳ್ಳುವುದು ಮುಖ್ಯ. ಎಂಟಿಎಯನ್ನು ಅಗತ್ಯ ಸುರಕ್ಷತಾ ತಿದ್ದುಪಡಿ ಮಾಡುವ ದುರ್ಬಲ ವರ್ಗದವರ ಹಿತಾಸಕ್ತಿ ಕಾಪಾಡಲು ತ್ವರಿತ ಜಾರಿಗೆ ತರುವುದು ಅವಶ್ಯವಾಗಿದೆ.

ಇದನ್ನೂ ಓದಿ: ಭಾರತದ ಕೃಷಿ ವಲಯದ ಆದಾಯ ಸುಧಾರಣೆಗೆ ಆಗಬೇಕಿರುವುದೇನು? ಒಂದು ಅವಲೋಕನ

Last Updated : Jun 26, 2024, 6:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.