Pudina Pulao Recipe: ಪುದೀನಾವನ್ನು ಹಲವು ವಿಧಗಳ ಖಾದ್ಯಗಳನ್ನು ತಯಾರಿಸಲು ಬಳಸುತ್ತಾರೆ. ತರಕಾರಿಗಳಿಂದ ಸಿದ್ಧಪಡಿಸುವ ಪದಾರ್ಥಗಳಿಂದ ಹಿಡಿದು ಮಾಂಸಾಹಾರಿ ಪದಾರ್ಥಗಳಾದ ಮಟನ್ ಮತ್ತು ಚಿಕನ್‌ನಲ್ಲಿ ಕರಿಗಳಲ್ಲಿ ಪುದೀನಾ ಬಳಕೆ ಮಾಡುತ್ತಾರೆ. ಪುದೀನಾ ಘಮಲು ಖಾದ್ಯಕ್ಕೆ ಹೊಸ ಟೇಸ್ಟ್ ಅನ್ನು ನೀಡುತ್ತದೆ. ಹಾಗಾದ್ರೆ ಈ ಬಾರಿ ಪುದೀನಾ ಪುಲಾವ್ ಅನ್ನು ಟ್ರೈ ಮಾಡಿ ನೋಡಿ.
ರಾತ್ರಿ ಉಳಿದ ಅನ್ನದೊಂದಿಗೆ ಅಥವಾ ಫ್ರೆಶ್ ಆಗಿ ಮಾಡಿದ ಅನ್ನದಿಂದಲೂ ಹೆಚ್ಚು ಶ್ರಮವಿಲ್ಲದೆ ಸುಲಭವಾಗಿ ಪುದೀನಾ ಪಲಾವ್ ತಯಾರಿಸಬಹುದು. ಈ ಪುದೀನಾ ಪಲಾವ್ ಜೊತೆಗೆ ತಣ್ಣನೆಯ ರೈತಾ ತಿಂದರೆ ಅದ್ಭುತ ಟೇಸ್ಟ್ ಬರುತ್ತದೆ. ಇದಕ್ಕೆ ಬೇಕಾದ ಪದಾರ್ಥಗಳು ಯಾವುವು? ಈಗ ಅದನ್ನು ಹೇಗೆ ಮಾಡಬೇಕೆಂದು ತಿಳಿಯೋಣ.
ಪುದೀನಾ ಪಲಾವ್ಗೆ ಬೇಕಾಗುವ ಪದಾರ್ಥಗಳೇನು?
- ಎರಡು ಟೀಸ್ಪೂನ್ ಎಣ್ಣೆ
- ಒಂದು ಟೀಸ್ಪೂನ್ ತುಪ್ಪ
- ಒಂದು ಬಿರಿಯಾನಿ ಎಲೆ
- ಒಂದು ಇಂಚು ದಾಲ್ಚಿನ್ನಿ
- 5 ಲವಂಗ
- 4 ಏಲಕ್ಕಿ
- ಶಾಜೀರಿಗೆ ಒಂದು ಟೀಸ್ಪೂನ್
- ದೊಡ್ಡ ಈರುಳ್ಳಿ ಕತ್ತರಿಸಿ
- 5 ಹಸಿ ಮೆಣಸಿನಕಾಯಿ
- 1 ಟೀಸ್ಪೂನ್ ಗರಂ ಮಸಾಲಾ
- 1 ಟೀಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್
- 3 ಟೀಸ್ಪೂನ್ ಪುದೀನಾ ಪೇಸ್ಟ್
- ಪುದೀನಾ - ಸಣ್ಣ ಕಟ್ಟು
- ಒಂದು ಟೀಸ್ಪೂನ್ ನಿಂಬೆ ರಸ (ಐಚ್ಛಿಕ)
- 110 ಗ್ರಾಂ ಅಕ್ಕಿ
- ರುಚಿಗೆ ಉಪ್ಪು
ತಯಾರಿಸುವ ವಿಧಾನ:
- ಮೊದಲು ಒಲೆ ಆನ್ ಮಾಡಿ, ಅದರ ಮೇಲೆ ಪಾತ್ರೆ ಇಡಿ. ಎಣ್ಣೆ ಮತ್ತು ತುಪ್ಪ ಹಾಕಿ ಬಿಸಿ ಮಾಡಿ.
- ಅದರ ನಂತರ ಬಿರಿಯಾನಿ ಎಲೆ, ದಾಲ್ಚಿನ್ನಿ ಕಡ್ಡಿ, ಲವಂಗ, ಏಲಕ್ಕಿ ಮತ್ತು ಶಾಜೀರಿಗೆ ಸೇರಿಸಿ ಸ್ವಲ್ಪ ಫ್ರೈ ಮಾಡಿ.
- ಇದರಲ್ಲಿ ಈರುಳ್ಳಿ ಚೂರುಗಳನ್ನು ಹಾಕಿ ಸ್ವಲ್ಪ ಫ್ರೈ ಮಾಡಿ.. ನಂತರ ಹಸಿ ಮೆಣಸಿನಕಾಯಿ ಹಾಕಿ ಈರುಳ್ಳಿ ಹೊಂಬಣ್ಣ ಬರುವವರೆಗೆ ಹುರಿಯಿರಿ.
- ನಂತರ ಉಪ್ಪು, ಗರಂ ಮಸಾಲಾ, ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಮತ್ತು ಹಸಿ ವಾಸನೆ ಹೋಗುವವರೆಗೆ ಸುಮಾರು ಒಂದು ನಿಮಿಷ ಫ್ರೈ ಮಾಡಿ.
- ಹಿಂದೆ ರುಬ್ಬಿದ ಇಟ್ಟಿದ್ದ ಪುದೀನಾವನ್ನು ಸೇರಿಸಿ ಮತ್ತು ಅದನ್ನು ಮಿಶ್ರಣ ಮಾಡಿ.
- ಈಗ ಹಸಿ ವಾಸನೆ ಹೋಗುವವರೆಗೆ ಮತ್ತು ಎಣ್ಣೆ ಮೇಲ ಕಾಣಿಸುವವರೆಗೆ ಹುರಿಯಿರಿ. ಅದರ ನಂತರ ಪುದೀನಾ ಎಲೆಗಳನ್ನು ಸೇರಿಸಿ ಮತ್ತು ಒಂದು ನಿಮಿಷ ಹುರಿಯಿರಿ.
- ಇದಕ್ಕೆ ಬೇಯಿಸಿದ ಅನ್ನವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. (ಸ್ವಲ್ಪ ಹುಳಿ ಬೇಕಿದ್ದರೆ ನಿಂಬೆರಸ ಹಾಕಬಹುದು. ಆದರೆ, ಹುಣಸೆಹಣ್ಣಿನ ರಸ ಹಾಕಬಹುದು)
- ಅಂತಿಮವಾಗಿ ಕೆಲವು ತಾಜಾ ಪುದೀನಾ ಎಲೆಗಳನ್ನು ಸೇರಿಸಿ. ಮತ್ತು ಸಾಧ್ಯವಾದರೆ ಹುರಿದ ಈರುಳ್ಳಿಯನ್ನು ಟೇಸ್ಟಿಗಾಗಿ ಈ ಪಲಾವ್ನಲ್ಲಿ ಸೇರಿಸಿಬಹುದು.
- ಇದನ್ನೊಮ್ಮೆ ಮನೆಯಲ್ಲಿಯೇ ಟ್ರೈ ಮಾಡಿ ನೋಡಿ. ಮಕ್ಕಳಿಂದ ಹಿಡಿದು ಹಿರಿಯರವರೆಗೂ ಪುದೀನಾ ಪಲಾವ್ ಇಷ್ಟಪಡುತ್ತಾರೆ.