ETV Bharat / lifestyle

ಅಗ್ಗದ ದರದಲ್ಲಿ ಕಟೀಲು, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯದ ದರ್ಶನ ಮಾಡಿ; ವಿಸ್ಟಾಡೋಮ್ ರೈಲಿನಲ್ಲಿ ಪ್ರಯಾಣ - IRCTC VISTADOME TOUR PACKAGE

IRCTC Vistadome Tour Package: ಕರ್ನಾಟಕದ ಪ್ರಸಿದ್ಧ ದೇವಾಲಯಗಳಿಗೆ ಭೇಟಿ ನೀಡಲು ಐಆರ್​ಟಿಸಿಟಿ ಹೊಸ ಸೂಪರ್​ ಟೂರ್​ ಪ್ಯಾಕೇಜ್ ಘೋಷಿಸಿದೆ.

IRCTC latest TOUR PACKAGES  IRCTC vistadome tour package  Bengaluru TO Mangaluru PACKAGE  IRCTC ಟೂರ್ ಪ್ಯಾಕೇಜ್
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Lifestyle Team

Published : Dec 18, 2024, 4:59 PM IST

Updated : Dec 18, 2024, 6:21 PM IST

IRCTC Vistadome Tour Package: ಕಾಲಕಾಲಕ್ಕೆ ಇಂಡಿಯನ್ ರೈಲ್ವೆ ಕೇಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್(ಐಆರ್‌ಸಿಟಿಸಿ) ಪ್ರಸಿದ್ಧ ಆಧ್ಯಾತ್ಮಿಕ ಸ್ಥಳಗಳು ಹಾಗೂ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಲು ಬಯಸುವವರಿಗೆ ಹೊಸ ಹೊಸ ಟೂರ್​ ಪ್ಯಾಕೇಜ್‌ಗಳನ್ನು ಪ್ರಕಟಿಸುತ್ತದೆ. ಇತ್ತೀಚೆಗಷ್ಟೇ ಕರ್ನಾಟಕದ ಹಲವು ತಾಣಗಳನ್ನು ನೋಡಲು ಪ್ರವಾಸದ ಪ್ಯಾಕೇಜ್ ಘೋಷಿಸಿದೆ.

ಇದು 'ಕಟೀಲು-ಧರ್ಮಸ್ಥಳ-ಕುಕ್ಕೆ ವಿಸ್ಟಾಡೋಮ್ ಪ್ಯಾಕೇಜ್' ಟೂರ್. ಪ್ರವಾಸ ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದಿಂದ ಆರಂಭವಾಗುತ್ತದೆ. 2 ರಾತ್ರಿ, 3 ಹಗಲಿನ ಟೂರ್ ಇದು.

ಡಿಸೆಂಬರ್​ 28ರಂದು ವಿಸ್ಟಾಡೋಮ್ ರೈಲಿನ ಮೂಲಕ ಪ್ರವಾಸ ಆರಂಭ. ಅತ್ಯಾಧುನಿಕ ಕೋಚ್‌ಗಳು ಇದರಲ್ಲಿವೆ. ಸುತ್ತಮುತ್ತಲಿನ ಬೆಟ್ಟಗುಡ್ಡಗಳನ್ನು ಸುಲಭವಾಗಿ ಆನಂದಿಸಲು ಅನುವಾಗುವಂತೆ ರೈಲನ್ನು ವಿನ್ಯಾಸಗೊಳಿಸಲಾಗಿದೆ.

ಸಕಲೇಶಪುರ - ಸುಬ್ರಹ್ಮಣ್ಯ ಘಾಟ್: ಪಶ್ಚಿಮ ಘಟ್ಟಗಳ ಮೂಲಕ ಹಾದುಹೋಗುವ ವಿಸ್ಟಾಡೋಮ್ ಕೋಚ್‌ನಲ್ಲಿ ಪ್ರಯಾಣಿಸುವ ಮೂಲಕ ಹಸಿರು ಮತ್ತು ನೈಸರ್ಗಿಕ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಸಾಧ್ಯವಾಗುತ್ತದೆ. ರಮಣೀಯ ಸಕಲೇಶಪುರ - ಸುಬ್ರಹ್ಮಣ್ಯ ಘಾಟ್ ವಿಭಾಗ ಪ್ರಯಾಣದ ಪ್ರಮುಖ ಆಕರ್ಷಣೆ.

ಸೋಮೇಶ್ವರ ಬೀಚ್: ಸೋಮೇಶ್ವರ ಬೀಚ್ ಕರಾವಳಿ ಕರ್ನಾಟಕದ ಮಂಗಳೂರು ನಗರದ ಹೊರವಲಯದಲ್ಲಿರುವ ಕಲ್ಲಿನ ಬೀಚ್. ಕಡಲತೀರಕ್ಕೆ ಸೋಮೇಶ್ವರ ದೇವಸ್ಥಾನ ಸಮೀಪದಲ್ಲಿರುವುದರಿಂದ ಈ ಹೆಸರು ಬಂದಿದೆ. ಸಮುದ್ರತೀರದಿಂದ ಆಕರ್ಷಕ ಸೂರ್ಯಾಸ್ತ ನೋಡಬಹುದು.

ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನ: ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನ ನಂದಿನಿ ನದಿ ದಡದಲ್ಲಿವೆ. ದೇವಾಲಯವು ಉದ್ಭವ ಮೂರ್ತಿಯ ರೂಪದಲ್ಲಿದೆ. ದೇವಾಲಯದ ಕಂಬಗಳು ಸುಂದರವಾದ ಶಿಲ್ಪಗಳನ್ನು ಹೊಂದಿವೆ. ಇದು ಭಾರತದ ಪವಿತ್ರ ಹಿಂದೂ ದೇವಾಲಯಗಳ ಪೈಕಿ ಒಂದಾಗಿದೆ.

ಧರ್ಮಸ್ಥಳ: ಧರ್ಮಸ್ಥಳ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನೇತ್ರಾವತಿ ನದಿಯ ದಡದಲ್ಲಿರುವ ಪ್ರಸಿದ್ಧ ಯಾತ್ರಾ ಸ್ಥಳ. ಇದು ಕರ್ನಾಟಕದಲ್ಲಿ ಅತೀ ಹೆಚ್ಚು ಭಕ್ತರು ಭೇಟಿ ನೀಡುವ ಧಾರ್ಮಿಕ ಸ್ಥಳವೂ ಹೌದು. ಧಾರ್ಮಿಕ ಮತ್ತು ಸಾಂಸ್ಕೃತಿಕ ಸೌಹಾರ್ದತೆಗೂ ಹೆಸರುವಾಸಿ.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ: ಬೆಟ್ಟಗಳ ಮಧ್ಯೆ ನೆಲೆಸಿರುವ ಈ ಯಾತ್ರಾ ಕೇಂದ್ರವು ಕುಮಾರಧಾರ ನದಿ ದಡದಲ್ಲಿದೆ. ಅಂದಾಜು 5,000 ವರ್ಷಗಳಷ್ಟು ಹಳೆಯದು. ಇಲ್ಲಿ ಸುಬ್ರಹ್ಮಣ್ಯ ದೇವರನ್ನು ಸರ್ಪದ ರೂಪದಲ್ಲಿ ಪೂಜಿಸಲಾಗುತ್ತದೆ. ಯಾವುದೇ ರೀತಿಯ ನಾಗ ದೋಷಗಳಿಂದ ಮುಕ್ತಿ ಪಡೆಯಲು ಭಕ್ತರು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ.

ಪ್ರಯಾಣದ ವಿವರ:

1ನೇ ದಿನ: ಡಿಸೆಂಬರ್​ 28ರಂದು (ಶನಿವಾರ) ಯಶವಂತಪುರ ರೈಲು ನಿಲ್ದಾಣದಿಂದ ಬೆಳಿಗ್ಗೆ 7ಕ್ಕೆ ರೈಲು (ರೈಲು ಸಂಖ್ಯೆ- 16539, ವಿಸ್ಟಾಡೋಮ್ ಕೋಚ್) ಹೊರಡುತ್ತದೆ. ಮಧ್ಯಾಹ್ನದವರೆಗೆ ವಿಸ್ಟಾಡೋಮ್ ಕೋಚ್​ನಲ್ಲಿ ಪ್ರಕೃತಿಯ ಸೌಂದರ್ಯ ಕಣ್ತುಂಬಿಕೊಳ್ಳಿ. ಮಧ್ಯಾಹ್ನ 3.40 ಗಂಟೆಗೆ ಬಂಟ್ವಾಳ ನಿಲ್ದಾಣದಲ್ಲಿ ಇಳಿಯಬೇಕು. ಮೊದಲೇ ಗೊತ್ತುಪಡಿಸಿದ ಕ್ಯಾಬ್ ಚಾಲಕರನ್ನು ಭೇಟಿ ಮಾಡಿ ಹಾಗೂ ಸೋಮೇಶ್ವರ ಬೀಚ್‌ಗೆ ಹೋಗುವುದು. ಇಲ್ಲಿ ಸಂಜೆವರೆಗೆ ಸಮಯ ಕಳೆಯುವುದು. ರಾತ್ರಿ ತಂಗಲು ನಂತರ ಹೋಟೆಲ್‌ನಲ್ಲಿ ಚೆಕ್​ಇನ್​ ಮಾಡಬೇಕಾಗುತ್ತದೆ.

2ನೇ ದಿನ: ಡಿಸೆಂಬರ್​ 29 (ಭಾನುವಾರ), ಹೋಟೆಲ್‌ನಿಂದ ಚೆಕ್ ಔಟ್ ಮಾಡಿದ ನಂತರ, ಕಟೀಲು ದೇವಸ್ಥಾನಕ್ಕೆ ತೆರಳುವುದು. ನಂತರ ಧರ್ಮಸ್ಥಳಕ್ಕೆ ತೆರಳಿ ಶ್ರೀ ಮಂಜುನಾಥ ದೇವಸ್ಥಾನಕ್ಕೆ ಭೇಟಿ. ಬಳಿಕ ಕುಕ್ಕೆಗೆ ಪ್ರಯಾಣ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡುವುದು. ಸಂಜೆ 7.30 ಗಂಟೆಗೆ ಸುಬ್ರಹ್ಮಣ್ಯ ರೋಡ್​ ರೈಲು ನಿಲ್ದಾಣಕ್ಕೆ ರಾತ್ರಿ ಡ್ರಾಪ್ ಮಾಡಲಾಗುತ್ತದೆ. ರೈಲು ಸಂಖ್ಯೆ 16586 ಮೂಲಕ ಬೆಂಗಳೂರಿಗೆ ರಾತ್ರಿ 8.40 ಗಂಟೆಗೆ ನಿರ್ಗಮನ. ಇಡೀ ರಾತ್ರಿ ಪ್ರಯಾಣ.

3ನೇ ದಿನ: ಸೋಮವಾರ ಬೆಳಿಗ್ಗೆ 6.15 ಗಂಟೆಗೆ ಬೆಂಗಳೂರಿಗೆ ತಲುಪಿದ ನಂತರ ಪ್ರವಾಸ ಮುಕ್ತಾಯ.

ಪ್ಯಾಕೇಜ್​ನ ದರಗಳು:

  • ಕಂಪರ್ಟ್​ನಲ್ಲಿ (ಪ್ರತೀ ವ್ಯಕ್ತಿಗೆ ಟಿಕೆಟ್ ಬೆಲೆ)ಸಿಂಗಲ್​ ಸೀಟ್​ ಹಂಚಿಕೆ- ₹18,060
  • ಡಬಲ್​​ ಸೀಟ್​ ಹಂಚಿಕೆಗೆ ₹11,100
  • ಟ್ರಿಪಲ್ ಸೀಟು ಹಂಚಿಕೆಗಾಗಿ ₹9,080
  • 5-11 ವರ್ಷದೊಳಗಿನ ಮಕ್ಕಳು ಹಾಸಿಗೆ ಸಹಿತ ₹7,230, ಹಾಸಿಗೆ ರಹಿತ ₹6,670
  • ಪ್ಯಾಕೇಜ್​ನಲ್ಲಿ ಏನೆಲ್ಲಾ ಒಳಗೊಂಡಿದೆ?:
  • ರೈಲು ಟಿಕೆಟ್‌ಗಳು- EC (Vistadome)ನಲ್ಲಿ ರೈಲು ಪ್ರಯಾಣ ಮತ್ತು 3ACನಲ್ಲಿ ಹಿಂತಿರುಗುವ ರೈಲು ಪ್ರಯಾಣ
  • ಮಂಗಳೂರಿನಲ್ಲಿ 1 ರಾತ್ರಿ ವಸತಿ
  • ಹೋಟೆಲ್‌ನಲ್ಲಿ ಮಾತ್ರ ಉಚಿತ ಉಪಹಾರ
  • ಪ್ರಯಾಣದ ಪ್ರಕಾರ ಎಲ್ಲಾ ದೃಶ್ಯವೀಕ್ಷಣೆಯ ಮತ್ತು ವಿಹಾರಕ್ಕಾಗಿ AC ಮಿಡ್ ಸೆಗ್ಮೆಂಟ್ ಕ್ಯಾಬ್.
  • ಪ್ರಯಾಣ ವಿಮೆ.
  • ಮೇಲಿನ ಸೇವೆಗೆ ಟೋಲ್, ಪಾರ್ಕಿಂಗ್ ಮತ್ತು ಎಲ್ಲಾ ಅನ್ವಯವಾಗುವ ತೆರಿಗೆಗಳು.
  • ಪ್ರವಾಸದ ಬುಕ್ಕಿಂಗ್, ಈ ಪ್ಯಾಕೇಜ್‌ಗೆ ಸಂಬಂಧಿಸಿದ ಷರತ್ತುಗಳಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

ಹೆಚ್ಚಿನ ಮಾಹಿತಿಗೆ ಈ ವೆಬ್​ಸೈಟ್​ ವೀಕ್ಷಿಸಿ: https://www.irctctourism.com/pacakage_description?packageCode=SBR035

ಇದನ್ನೂ ಓದಿ: ಸೋಮನಾಥ ಜ್ಯೋತಿರ್ಲಿಂಗ, ದ್ವಾರಕಾ, ಏಕತೆಯ ಪ್ರತಿಮೆ ವೀಕ್ಷಿಸಲು IRCTC 'ಸುಂದರ ಸೌರಾಷ್ಟ್ರ ಪ್ಯಾಕೇಜ್'

Last Updated : Dec 18, 2024, 6:21 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.