Dosa And Idli Batter Fermenting Tips: ಅನೇಕರು ತಿನ್ನಲು ಇಷ್ಟಪಡುವ ಉಪಹಾರಗಳಲ್ಲಿ ಮುಖ್ಯವಾಗಿ ದೋಸೆ ಹಾಗು ಇಡ್ಲಿ ಮುಖ್ಯಸ್ಥಾನದಲ್ಲಿರುತ್ತದೆ. ಇವುಗಳನ್ನು ತಯಾರಿಸಲು ಹಿಟ್ಟನ್ನು ಚೆನ್ನಾಗಿ ಹುದುಗಿಸಬೇಕಿರುತ್ತದೆ. ಹಿಟ್ಟನ್ನು ಚೆನ್ನಾಗಿ ಹುದುಗಿಸಿದಷ್ಟೂ ಉತ್ತಮ, ಸುವಾಸನೆಯುಕ್ತ ಉಪಹಾರ ಸಿದ್ಧಪಡಿಸಲು ಸಾಧ್ಯ. ಹಿಟ್ಟನ್ನು ಸರಿಯಾಗಿ ಹುದುಗಿಸದಿದ್ದರೆ ದೋಸೆ ಹಾಗೂ ಇಡ್ಲಿ ಗಟ್ಟಿಯಾಗಿ ಬರುತ್ತದೆ. ಇದಕ್ಕೆ ಕಾರಣವೇನೆಂದರೆ, ವಿಶೇಷವಾಗಿ ಚಳಿಗಾಲದಲ್ಲಿ ಹಿಟ್ಟು ಹೆಚ್ಚು ಹುದುಗುವುದಿಲ್ಲ. ಕೆಲವು ಸಲಹೆಗಳನ್ನು ಪಾಲಿಸಿದರೆ ಚಳಿಗಾಲದಲ್ಲೂ ಇಡ್ಲಿ ಹಾಗೂ ದೋಸೆಯ ಹಿಟ್ಟು ಚೆನ್ನಾಗಿ ಉಳಿಬರುತ್ತದೆ ಎನ್ನುತ್ತಾರೆ ತಜ್ಞರು.
ಮೊದಲನೆಯದಾಗಿ, ಇಡ್ಲಿ ಹಾಗೂ ದೋಸೆ ಸರಿಯಾಗಿ ಬರಲು ಹಿಟ್ಟನ್ನು ಸರಿಯಾಗಿ ತಯಾರಿಸುವುದು ತುಂಬಾ ಮುಖ್ಯ. ಹಿಟ್ಟು ಸಿದ್ಧಪಡಿಸಲು ನೆನೆಸಿದ ಇಡ್ಲಿ ರವೆ, ಉದ್ದಿನ ಬೇಳೆ ಮತ್ತು ದೋಸೆ ಅನ್ನದ ಪ್ರಮಾಣವನ್ನು ತಿಳಿದುಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ ಹಿಟ್ಟು ಹೆಚ್ಚು ಅಥವಾ ಕಡಿಮೆಯಾದರೂ ಸರಿಯಾಗಿ ಹುದುಗುವುದಿಲ್ಲ. ಹಾಗೆ ಹುದುಗಿಸದಿದ್ದರೆ ದೋಸೆ, ಇಡ್ಲಿ ಚೆನ್ನಾಗಿ ಬರುವುದಿಲ್ಲ. ಇದಕ್ಕೆ ಬೇಕಾಗಿರುವ ಅಗತ್ಯ ಪದಾರ್ಥಗಳನ್ನು ಸರಿಯಾದ ಪ್ರಮಾಣದಲ್ಲಿಯೇ ತೆಗೆದುಕೊಳ್ಳಬೇಕಾಗುತ್ತದೆ.
ಮೆಂತ್ಯ, ಚುರುಮುರಿ: ಸರಿಯಾದ ಹುದುಗುವಿಕೆಗಾಗಿ ಚಳಿಗಾಲದ ದೋಸೆ ಹಾಗೂ ಇಡ್ಲಿ ಹಿಟ್ಟನ್ನು ನೆನೆಸುವಾಗ ಒಂದು ಟೀಸ್ಪೂನ್ ಮೆಂತ್ಯ ಬೀಜಗಳನ್ನು ಸೇರಿಸಬೇಕಾಗುತ್ತದೆ. ಸ್ವಲ್ಪ ಚುರುಮುರಿಯನ್ನು ಸಹ ಮಿಶ್ರಣ ಮಾಡಬೇಕಾಗುತ್ತದೆ. ಇಲ್ಲದಿದ್ದರೆ, ಹಿಟ್ಟು ಚೆನ್ನಾಗಿ ಹುಳಿಯಾಗುವುದಿಲ್ಲ ಎಂಬುದನ್ನು ಗಮನದಲ್ಲಿರಿಸಿಕೊಳ್ಳಿ. ಇಡ್ಲಿ ಮತ್ತು ದೋಸೆ ಚೆನ್ನಾಗಿ ಬರಬೇಕಾದರೆ ಹಿಟ್ಟು ಹುದುಗುವಿಕೆ ಸರಿಯಾಗಿ ಆಗಬೇಕಾಗುತ್ತದೆ.
ಹಿಟ್ಟನ್ನು ಮಿಶ್ರಣ ಮಾಡುವಾಗ ಅನೇಕ ಜನರು ನೀರನ್ನು ಸೇರಿಸುತ್ತಾರೆ. ಚಳಿಗಾಲದಲ್ಲಿ ಹಿಟ್ಟನ್ನು ಮಿಶ್ರಣ ಮಾಡುವಾಗ ಬೆಚ್ಚಗಿನ ನೀರನ್ನು ಸೇರಿಸಬೇಕಾಗುತ್ತದೆ. ಹೀಗೆ ಮಾಡುವುದರಿಂದ ಹಿಟ್ಟು ಚೆನ್ನಾಗಿ ಸಿದ್ಧವಾಗುತ್ತದೆ.
ಹಿಟ್ಟು ಎಲ್ಲಿಡಬೇಕು ಗೊತ್ತಾ?: ಹಿಟ್ಟು ತ್ವರಿತವಾಗಿ ಹುದುಗಬೇಕಾದರೆ ಅದನ್ನು ಹೆಚ್ಚಿನ ಶಾಖವಿರುವ ಸ್ಥಳಗಳಲ್ಲಿಡಬೇಕು. ಒಲೆಯ ಬಳಿ ಇಡುವುದು ತುಂಬಾ ಒಳ್ಳೆಯದು. ಹಿಟ್ಟು ಸಿದ್ಧವಾಗಲು ಹೆಚ್ಚು ಸಮಯ ಬಿಡಬೇಕಾಗುತ್ತದೆ. ಅದೇ ರೀತಿ ಹಿಟ್ಟು ಇಡುವ ಪಾತ್ರೆಗಳ ಮೇಲೆ ಗಾಳಿಯಾಡದ ರೀತಿಯಲ್ಲಿ ಮುಚ್ಚಬೇಕಾಗುತ್ತದೆ. ಹೀಗೆ ಮಾಡಿದರೂ ಹಿಟ್ಟು ಚೆನ್ನಾಗಿ ರೆಡಿಯಾಗುತ್ತದೆ ಎನ್ನುತ್ತಾರೆ ತಜ್ಞರು.
ರುಬ್ಬಿಕೊಂಡಿರುವ ಹಿಟ್ಟಿನೊಳಗೆ ಒಂದು ಬೌಲ್ ಕುದಿಯುವ ನೀರನ್ನು ಬೆರೆಸಿಕೊಳ್ಳಬೇಕಾಗುತ್ತದೆ. ಅದರ ಮುಚ್ಚಳವನ್ನು ಸರಿಯಾಗಿ ಮುಚ್ಚಿ ರಾತ್ರಿಯಿಡೀ ಒಂದು ಸ್ಥಳದಲ್ಲಿ ಇರಿಸಿಕೊಳ್ಳಬೇಕಾಗುತ್ತದೆ. ಅಲ್ಲದೇ ಮೈಕ್ರೊವೇವ್ನಲ್ಲಿ ಸ್ವಲ್ಪ ಹೊತ್ತು ಹಿಟ್ಟನ್ನಿಟ್ಟರೆ ಚೆನ್ನಾಗಿ ಹುದುಗುತ್ತದೆ. ಹಿಟ್ಟು ತುಂಬಾ ತಂಪಾಗಿರುವಾಗ ತ್ವರಿತವಾಗಿ ಹುದುಗಿಸಲು ಈ ತಂತ್ರವು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ತಜ್ಞರು ಸಲಹೆ ನೀಡುತ್ತಾರೆ.