ETV Bharat / international

ಆಸ್ಟ್ರೇಲಿಯಾದಲ್ಲಿ ಹೈದರಾಬಾದ್ ಮಹಿಳೆ ಶವವಾಗಿ ಪತ್ತೆ: ಪತಿಯಿಂದಲೇ ಕೊಲೆ ಶಂಕೆ - Woman murdered in Australia

ಆಸ್ಟ್ರೇಲಿಯಾದಲ್ಲಿ ಹೈದರಾಬಾದ್​ ಮೂಲದ ಮಹಿಳೆ ಶವವಾಗಿ ಪತ್ತೆಯಾಗಿದ್ದಾರೆ. ಮಹಿಳೆಯ ಪತಿ ಹೈದರಾಬಾದ್​ನ ಮನೆಯಲ್ಲಿ ಮಗು ಬಿಟ್ಟು ಪರಾರಿಯಾಗಿದ್ದಾನೆ.

ಹೈದರಾಬಾದ್ ಮಹಿಳೆ ಕೊಲೆ
ಹೈದರಾಬಾದ್ ಮಹಿಳೆ ಕೊಲೆ
author img

By ETV Bharat Karnataka Team

Published : Mar 11, 2024, 10:56 AM IST

ಹೈದರಾಬಾದ್: ಹೈದರಾಬಾದ್ ಮೂಲದ 36 ವರ್ಷದ ಮಹಿಳೆಯೊಬ್ಬರು ಆಸ್ಟ್ರೇಲಿಯಾದಲ್ಲಿ ಶವವಾಗಿ ಪತ್ತೆಯಾಗಿದ್ದು, ಪತಿಯೇ ಕೊಂದಿರುವ ಶಂಕೆ ವ್ಯಕ್ತವಾಗಿದೆ. ಹೈದರಾಬಾದ್‌ನಲ್ಲಿರುವ ಪತ್ನಿಯ ಮನೆಯಲ್ಲಿ ಮಗು ಬಿಟ್ಟು ಪತಿ ಪರಾರಿಯಾಗಿದ್ದಾನೆ. ಚೈತನ್ಯ ಮದಗಣಿ ಮೃತ ಮಹಿಳೆ. ಆಸ್ಟ್ರೇಲಿಯಾದ ಬಕ್ಲಿಯ ಪ್ರದೇಶದಲ್ಲಿನ ವೀಲಿ ಬಿನ್‌ ಎಂಬಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಆಸ್ಟ್ರೇಲಿಯಾದಲ್ಲಿ ಪತಿ ಮತ್ತು ಮಗನೊಂದಿಗೆ ಮಹಿಳೆ ವಾಸಿಸುತ್ತಿದ್ದರು.

ಈ ಬಗ್ಗೆ ಮಾಹಿತಿ ನೀಡಿರುವ ಉಪ್ಪಳ ಶಾಸಕ ಬಂಡಾರಿ ಲಕ್ಷ್ಮ ರೆಡ್ಡಿ ಅವರು, ಮೃತ ಮಹಿಳೆ ತಮ್ಮ ಕ್ಷೇತ್ರದವರಾಗಿದ್ದು, ಆಸ್ಟ್ರೇಲಿಯಾದಲ್ಲಿ ಮೃತಪಟ್ಟ ಬಗ್ಗೆ ಮಾಹಿತಿ ಸಿಕ್ಕಿದೆ. ಮಹಿಳೆಯ ಪೋಷಕರ ಕೋರಿಕೆಯ ಮೇರೆಗೆ ಪಾರ್ಥಿವ ಶರೀರವನ್ನು ಹೈದರಾಬಾದ್‌ಗೆ ತರಲು ವಿದೇಶಾಂಗ ಇಲಾಖೆಗೆ ಪತ್ರ ಬರೆಯಲಾಗಿದೆ. ಕೇಂದ್ರ ಸಚಿವ ಜಿ.ಕಿಶನ್ ರೆಡ್ಡಿ ಅವರ ಕಚೇರಿಗೂ ಮಾಹಿತಿ ನೀಡಿದ್ದಾಗಿ ತಿಳಿಸಿದರು.

ಮಗು ಬಿಟ್ಟು ಹೋದ ಪತಿ: ಮೃತ ಮಹಿಳೆಯ ಪತಿ ಆಸ್ಟ್ರೇಲಿಯಾದಿಂದ ಹೈದರಾಬಾದ್‌ಗೆ ಮಗುವಿನ ಸಮೇತ ಬಂದು ಆಕೆಯ ಮನೆಯಲ್ಲಿ ಬಿಟ್ಟು ಪರಾರಿಯಾಗಿದ್ದಾನೆ. ಮಹಿಳೆಯ ಪೋಷಕರು ಹೇಳುವಂತೆ ತನ್ನ ಪತ್ನಿಯನ್ನು ಕೊಂದಿದ್ದಾಗಿ ಪತಿ ತಪ್ಪೊಪ್ಪಿಕೊಂಡಿದ್ದಾನೆ. ಯಾವ ಕಾರಣಕ್ಕಾಗಿ ಕೊಲೆ ಮಾಡಲಾಗಿದೆ ಎಂಬುದು ತಿಳಿಸಿಲ್ಲ ಎಂದು ಅವರು ಹೇಳಿದ್ದಾಗಿ ಶಾಸಕರು ಮಾಹಿತಿ ನೀಡಿದರು.

ಮಾರ್ಚ್ 9 ರಂದು ವಿಕ್ಟೋರಿಯಾ ಪೊಲೀಸರು ತಮ್ಮ ವೆಬ್‌ಸೈಟ್‌ನಲ್ಲಿ, ಬಕ್ಲಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಕೊಲೆ ನಡೆದಿರುವ ಶಂಕೆ ಇದೆ. ತನಿಖೆ ನಡೆಸಲಾಗುತ್ತಿದೆ ಎಂದು ಹಂಚಿಕೊಂಡಿದ್ದಾರೆ. ಆರೋಪಿ ಪತಿ ವಿದೇಶಕ್ಕೆ ಪರಾರಿಯಾಗಿರುವ ಸಾಧ್ಯತೆ ಇದೆ ಎಂದು ಮಹಿಳೆಯ ಪೋಷಕರು ಹೇಳಿದ್ದಾರೆ.

ಭಾರತೀಯರ ಸಾವು: ಅಮೆರಿಕದಲ್ಲಿ ಒಂದು ತಿಂಗಳ ಅಂತರದಲ್ಲಿ ಹಲ್ಲೆ ಘಟನೆಗಳಲ್ಲಿ ಮೂವರು ವಿದ್ಯಾರ್ಥಿಗಳು ಸೇರಿ ಐವರು ಭಾರತೀಯರು ಸಾವಿಗೀಡಾಗಿದ್ದಾರೆ. ಓರ್ವ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಫೆಬ್ರವರಿ 2 ರಂದು ಡೌನ್‌ಟೌನ್ ವಾಷಿಂಗ್ಟನ್‌ನಲ್ಲಿ 41 ವರ್ಷದ ಭಾರತೀಯ ಮೂಲದ ವಿವೇಕ್​ ತನೇಜಾ ಎಂಬುವರ ಮೇಲೆ ದಾಳಿ ನಡೆಸಲಾಗಿತ್ತು. ತೀವ್ರ ಗಾಯಗೊಂಡಿದ್ದ ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ತನೇಜಾ ಅವರು ಫೆಬ್ರವರಿ 7 ರಂದು ಸಾವಿಗೀಡಾಗಿದ್ದರು. ಫೆಬ್ರವರಿ 4 ರಂದು ಚಿಕಾಗೋದಲ್ಲಿ ಭಾರತೀಯ ವಿದ್ಯಾರ್ಥಿಯೊಬ್ಬರ ಮೇಲೆ ಕ್ರೂರ ದಾಳಿ ನಡೆಸಲಾಗಿತ್ತು. ವಿದ್ಯಾರ್ಥಿಯನ್ನು ಗಂಭೀರವಾಗಿ ಥಳಿಸಲಾಗಿತ್ತು.

ಫೆಬ್ರವರಿಯಲ್ಲಿ ಶ್ರೇಯಸ್ ರೆಡ್ಡಿ ಎಂಬ ಭಾರತೀಯ ವಿದ್ಯಾರ್ಥಿ ಓಹಿಯೋದ ಸಿನ್ಸಿನಾಟಿಯಲ್ಲಿ ಶವವಾಗಿ ಪತ್ತೆಯಾಗಿದ್ದ. ಆತನ ಸಾವಿಗೆ ಕಾರಣ ಇನ್ನೂ ತಿಳಿದಿಲ್ಲ. ಜನವರಿ 30 ರಂದು ಪರ್ಡ್ಯೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ನೀಲ್ ಆಚಾರ್ಯ ದಿಢೀರ್​ ಕಾಣೆಯಾಗಿ, ಬಳಿಕ ಶವವಾಗಿ ಪತ್ತೆಯಾಗಿದ್ದ.

ಇದನ್ನೂ ಓದಿ: 9 ತಿಂಗಳ ಬಳಿಕ ಖಲಿಸ್ತಾನಿ ಉಗ್ರ ಹರ್​ದೀಪ್​ಸಿಂಗ್​ ನಿಜ್ಜರ್​ ಹತ್ಯೆಯ ವಿಡಿಯೋ ಬಹಿರಂಗ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.