ETV Bharat / international

ಬ್ರಿಟನ್ ಸಾರ್ವತ್ರಿಕ ಚುನಾವಣೆ ಗುರುವಾರವೇ ನಡೆಯುವುದೇಕೆ? - UK General Election

author img

By ETV Bharat Karnataka Team

Published : Jul 4, 2024, 2:41 PM IST

ಬ್ರಿಟನ್​​ನಲ್ಲಿ ಯಾವಾಗಲೂ ಗುರುವಾರವೇ ಏಕೆ ಸಾರ್ವತ್ರಿಕ ಚುನಾವಣೆ ನಡೆಯುತ್ತದೆ ಎಂಬ ಬಗೆಗಿನ ಕುತೂಹಲಕರ ಮಾಹಿತಿ ಇಲ್ಲಿದೆ.

ಬ್ರಿಟನ್ ಸಾರ್ವತ್ರಿಕ ಚುನಾವಣೆಗೆ ಮತದಾನ ಆರಂಭ
ಸಾಂದರ್ಭಿಕ ಚಿತ್ರ (IANS)

ನವದೆಹಲಿ: ಇಂದು (ಜುಲೈ 4ರಂದು) ಯುನೈಟೆಡ್​ ಕಿಂಗ್​ಡಮ್​ನಲ್ಲಿ (ಬ್ರಿಟನ್​) ಸಾರ್ವತ್ರಿಕ ಚುನಾವಣೆಗಳು ನಡೆಯುತ್ತಿವೆ. ದೇಶಾದ್ಯಂತ ಈಗಾಗಲೇ ಮತದಾನವೂ ಆರಂಭವಾಗಿದೆ. ಆದರೆ ಬ್ರಿಟನ್‌ನಲ್ಲಿ ಸಾರ್ವತ್ರಿಕ ಚುನಾವಣೆಗಾಗಿ ಮತದಾನವು ಯಾವಾಗಲೂ ಗುರುವಾರದಂದೇ ನಡೆಯುತ್ತದೆ ಎಂಬುದು ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ. 1930ರ ದಶಕದಿಂದಲೂ ಗುರುವಾರವೇ ಮತದಾನ ನಡೆಯುವ ಸಂಪ್ರದಾಯವನ್ನು ಇಲ್ಲಿ ಪಾಲಿಸಿಕೊಂಡು ಬರಲಾಗುತ್ತಿದೆ. ಈ ಗುರುವಾರ ಮತದಾನದ ಹಿಂದಿನ ಕುತೂಹಲಕಾರಿ ಮಾಹಿತಿ ಇಲ್ಲಿದೆ.

ಗುರುವಾರವೇ ಯಾಕೆ ಮತದಾನ?: ಈ ಹಿಂದೆ ಬ್ರಿಟನ್​​ನ ಅನೇಕ ಪಟ್ಟಣಗಳಲ್ಲಿ ಗುರುವಾರ ಸಂತೆಯ ದಿನವಾಗಿತ್ತು. ಅಂದರೆ ಸಂತೆಗಾಗಿ ಜನ ಕೇಂದ್ರ ಸ್ಥಳಗಳಲ್ಲಿ ಒಂದುಗೂಡುತ್ತಿದ್ದರು. ಹೀಗಾಗಿ ಅವರಿಗೆ ಮತ ಚಲಾಯಿಸಲು ಅನುಕೂಲವಾಗುತ್ತಿತ್ತು. ಇದಲ್ಲದೆ ಗುರುವಾರದಂದು ಬಹುತೇಕ ಕಾರ್ಮಿಕರಿಗೆ ಸಂಬಳದ ದಿನವೂ ಆಗಿತ್ತು. ಹೀಗಾಗಿ ಸಂಬಳ ಪಡೆದ ದಿನದಂದು ಅವರು ಖುಷಿಯಿಂದ ಉತ್ಸಾಭರಿತರಾಗಿ ಮತ ಚಲಾಯಿಸುತ್ತಿದ್ದರು.

ಇನ್ನೂ ವಿವರವಾಗಿ ನೋಡುವುದಾದರೆ, ಗುರುವಾರ ವಾರಾಂತ್ಯದಿಂದ ದೂರವಿರುವ ದಿನ. ಸಾಮಾನ್ಯವಾಗಿ ಶುಕ್ರವಾರ, ಶನಿವಾರ ಅಥವಾ ಭಾನುವಾರಗಳಂದು ಏನಾದರೂ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿರುತ್ತದೆ. ಗುರುವಾರ ವಾರದ ಮಧ್ಯದಲ್ಲಿರುವುದರಿಂದ ಈ ದಿನದಂದು ಜನ ವಾರಾಂತ್ಯ ರಜೆಗೆ ಹೋಗಲಾರರು. ಇದೂ ಕೂಡ ಹೆಚ್ಚಿನ ಮತ ಚಲಾವಣೆಗೆ ಅನುಕೂಲವಾಗುತ್ತದೆ ಎಂಬುದು ಕೂಡ ಗುರುವಾರದ ಮತದಾನಕ್ಕೆ ಕಾರಣವಾಗಿದೆ.

ಚುನಾವಣೆ ಘೋಷಣೆ: ಅಕ್ಟೋಬರ್ 2022ರಿಂದ ಪ್ರಧಾನಿಯಾಗಿರುವ ರಿಷಿ ಸುನಕ್ ಅವರು ಚುನಾವಣೆಯ ದಿನಾಂಕದ ಬಗ್ಗೆ ತಿಂಗಳುಗಳ ಊಹಾಪೋಹಗಳ ನಂತರ ಚುನಾವಣೆ ದಿನಾಂಕ ಘೋಷಣೆ ಮಾಡಿದ್ದರು. 2025ರ ಜನವರಿಯ ಒಳಗೆ ಚುನಾವಣೆ ನಡೆಸುವ ಗಡುವು ನೀಡಲಾಗಿತ್ತು.

ಇದಕ್ಕೂ ಮುನ್ನ ಚುನಾವಣೆಯನ್ನು ಘೋಷಿಸಿದ ಪ್ರಧಾನಿ, "ಮಹಾರಾಜರು ಸಂಸತ್ತಿನ ವಿಸರ್ಜನೆಗೆ ಅನುಮತಿ ನೀಡಿದ್ದಾರೆ ಮತ್ತು ಚುನಾವಣೆ ಜುಲೈ 4ರಂದು ನಡೆಯಲಿದೆ. ಭದ್ರತೆ ಮತ್ತು ಆರ್ಥಿಕತೆಯು ಪ್ರಮುಖ ಚುನಾವಣಾ ವಿಷಯಗಳಾಗಲಿವೆ ಎಂಬ ಸೂಚನೆ ನೀಡಿದ ಅವರು, ಶೀತಲ ಸಮರದ ಅಂತ್ಯದ ನಂತರ ಜಗತ್ತು ಹೆಚ್ಚು ಅಪಾಯಕಾರಿಯಾಗಿರುವ ಸಮಯದಲ್ಲಿ ಈ ಚುನಾವಣೆ ನಡೆಯಲಿದೆ ಎಂದು ಹೇಳಿದ್ದರು.

ಬ್ರಿಟಿಷ್ ಭಾರತೀಯರ ಮತಗಳ ಪ್ರಾಮುಖ್ಯತೆ: ಜುಲೈ 4, 2024ರಂದು ನಿಗದಿಯಾಗಿರುವ ಯುಕೆ ಸಾರ್ವತ್ರಿಕ ಚುನಾವಣೆ ಒಂದು ಪ್ರಮುಖ ಘಟನೆಯಾಗಿದ್ದು, ಇದು ಮುಂದಿನ ಕೆಲ ವರ್ಷಗಳ ಅವಧಿಗೆ ದೇಶದ ರಾಜಕೀಯ ಪಥವನ್ನು ನಿರ್ಣಯಿಸಲಿದೆ.

ಈ ಚುನಾವಣೆಯ ಮೇಲೆ ಬ್ರಿಟಿಷ್ ಭಾರತೀಯರ ಮತಗಳು ಗಮನಾರ್ಹವಾಗಿ ಪ್ರಭಾವ ಬೀರುವುದು ಗಮನಿಸಬೇಕಾದ ವಿಷಯವಾಗಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಕಾರ, ಯುಕೆಯಲ್ಲಿ ಸರಿಸುಮಾರು 1.9 ಮಿಲಿಯನ್ ಭಾರತೀಯ ಮೂಲದ ಜನರು ವಾಸಿಸುತ್ತಿದ್ದಾರೆ. ಇದು ಇಂಗ್ಲೆಂಡ್ ಮತ್ತು ವೇಲ್ಸ್​ನ ಒಟ್ಟು ಜನಸಂಖ್ಯೆಯ ಸುಮಾರು ಶೇಕಡಾ 3.1ರಷ್ಟಿದೆ. ಇದರಲ್ಲಿ ಅನಿವಾಸಿ ಭಾರತೀಯರು (ಎನ್ಆರ್​ಐ) ಮತ್ತು ಭಾರತೀಯ ಮೂಲದ ವ್ಯಕ್ತಿಗಳು (ಪಿಐಒ) ಸೇರಿದ್ದಾರೆ. ಭಾರತೀಯ ಸಮುದಾಯವು ಉನ್ನತ ಮಟ್ಟದ ಶಿಕ್ಷಣ, ವೃತ್ತಿಪರ ಯಶಸ್ಸು ಮತ್ತು ಆರ್ಥಿಕ ಕೊಡುಗೆಗೆ ಹೆಸರುವಾಸಿಯಾಗಿದೆ.

ಬ್ರಿಟಿಷ್ ಭಾರತೀಯರ ಪ್ರಭಾವ: ಈ ಬಗ್ಗೆ 'ಈಟಿವಿ ಭಾರತ್' ಜೊತೆ ಮಾತನಾಡಿದ ಮಾಜಿ ಭಾರತೀಯ ರಾಯಭಾರಿ ಅಶೋಕ್ ಸಜ್ಜನರ್, "ಯುಕೆಯಲ್ಲಿ ಭಾರತೀಯ ಸಮುದಾಯದ ಗಮನಾರ್ಹ ಪ್ರಭಾವವನ್ನು ಒತ್ತಿ ಹೇಳಿದರು. ಲೇಬರ್ ಮತ್ತು ಕನ್ಸರ್ವೇಟಿವ್ ಪಕ್ಷಗಳು ಭಾರತೀಯ ಮತದಾರರ ಮನಸನ್ನು ಗೆಲ್ಲಲು ಸಕ್ರಿಯವಾಗಿ ಪ್ರಯತ್ನಿಸುತ್ತಿವೆ. ಭಾರತೀಯ ಮತದಾರರ ಬೆಂಬಲದೊಂದಿಗೆ ಸಂಭಾವ್ಯ ರಾಜತಾಂತ್ರಿಕ ಮತ್ತು ಆರ್ಥಿಕ ಬೆಂಬಲವೂ ಸಿಗುವುದನ್ನು ಪಕ್ಷಗಳು ಗುರುತಿಸಿವೆ ಎಂದು ಸಜ್ಜನರ್ ಗಮನಸೆಳೆದರು. ಇದಲ್ಲದೆ, ಕನ್ಸರ್ವೇಟಿವ್ ಪಕ್ಷದ 14 ವರ್ಷಗಳ ಆಳ್ವಿಕೆಯ ನಂತರ ಅವರ ವಿರುದ್ಧ ಆಡಳಿತ ವಿರೋಧಿ ಭಾವನೆ ಹೆಚ್ಚಾಗುತ್ತಿದೆ" ಎಂದು ಹೇಳಿದರು.

"ಎರಡೂ ದೇಶಗಳು ಭಾರತ-ಯುಕೆ ಮುಕ್ತ ವ್ಯಾಪಾರ ಒಪ್ಪಂದದ ವಿಷಯದಲ್ಲಿ ಗಮನಾರ್ಹ ಪ್ರಗತಿ ಸಾಧಿಸಿವೆ. ಪರಸ್ಪರ ಗೆಲುವಿನ ಮತ್ತು ಗುಣಮಟ್ಟದ ಒಪ್ಪಂದವನ್ನು ಬಯಸುವುದು ಇದಕ್ಕೆ ಕಾರಣವಾಗಿದೆ. ಇದು ದ್ವಿಪಕ್ಷೀಯ ಸಂಬಂಧಗಳಲ್ಲಿ ಪ್ರಮುಖ ಅಂಶ" ಎಂದು ಅವರು ಹೇಳಿದರು.

"ಬ್ರಿಟನ್​​ಗೆ ತನ್ನ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳಲು ಮತ್ತು ಈ ಪ್ರದೇಶದಲ್ಲಿ ಚೀನಾದ ಪ್ರಭಾವವನ್ನು ಎದುರಿಸಲು ಭಾರತದಂಥ ಮತ್ತೊಂದು ಮಿತ್ರ ರಾಷ್ಟ್ರ ಅದಕ್ಕೆ ಎಂದಿಗೂ ಸಿಗಲಾರದು" ಎಂದು ಸಜ್ಜನರ್ ನುಡಿದರು.

ಇದನ್ನೂ ಓದಿ: ಹಮಾಸ್​ ನಿರ್ಮೂಲನೆಯ ಅಂತಿಮ ಹಂತದಲ್ಲಿದ್ದೇವೆ: ಇಸ್ರೇಲ್ ಪ್ರಧಾನಿ ನೆತನ್ಯಾಹು - Israel Hamas War

ETV Bharat Logo

Copyright © 2024 Ushodaya Enterprises Pvt. Ltd., All Rights Reserved.