ವಾಷಿಂಗ್ಟನ್: ಇಸ್ರೇಲ್ ವಿರುದ್ಧ ಮಿಲಿಟರಿ ದಾಳಿ ಬೆದರಿಕೆಗಳನ್ನು ನಿಲ್ಲಿಸಲು ಅಮೆರಿಕ ಮತ್ತು ಯುರೋಪಿಯನ್ ಮಿತ್ರರಾಷ್ಟ್ರಗಳು ಇರಾನ್‌ಗೆ ಎಚ್ಚರಿಕೆ ನೀಡಿವೆ. ಇಸ್ರೇಲ್‌ಗೆ ಬೆಂಬಲ ನೀಡಲು ಅಮೆರಿಕ ಕ್ಷಿಪಣಿ ಜಲಾಂತರ್ಗಾಮಿ ಮತ್ತು ವಿಮಾನವಾಹಕ ನೌಕೆ ಗುಂಪನ್ನು ಧಾವಿಸಿದೆ. ಇರಾನ್ ಮತ್ತು ಅದರ ಲೆಬನಾನಿನ ಮಿತ್ರ ಹೆಜ್ಬುಲ್ಲಾ, ಟೆಹ್ರಾನ್‌ನಲ್ಲಿ ಪ್ಯಾಲೆಸ್ಟೀನಿಯನ್ ಗುಂಪಿನ ಹಮಾಸ್‌ನ ರಾಜಕೀಯ ನಾಯಕನನ್ನು ಮತ್ತು ಬೈರುತ್‌ನಲ್ಲಿ ಹೆಜ್ಬುಲ್ಲಾ ಕಮಾಂಡರ್‌ನ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದೆ.
ಇರಾನ್ ದಾಳಿಯನ್ನು ತಡೆಯಲು ಅಂತಾರಾಷ್ಟ್ರೀಯ ಪ್ರಯತ್ನಗಳು ತೀವ್ರಗೊಂಡಿವೆ. ಯುಎಸ್ ಅಧ್ಯಕ್ಷ ಜೋ ಬೈಡನ್ ಮತ್ತು ಫ್ರಾನ್ಸ್, ಜರ್ಮನಿ, ಇಟಲಿ ಮತ್ತು ಬ್ರಿಟನ್ ನಾಯಕರು ಸೋಮವಾರ ನೀಡಿದ ಜಂಟಿ ಹೇಳಿಕೆಯಲ್ಲಿ ಟೆಹ್ರಾನ್‌ಗೆ ಎಚ್ಚರಿಕೆ ರವಾನಿಸಿದ್ದಾರೆ. "ಇಸ್ರೇಲ್ ವಿರುದ್ಧ ಮಿಲಿಟರಿ ದಾಳಿಯ ನಿರಂತರ ಬೆದರಿಕೆಗಳನ್ನು ನಿಲ್ಲಿಸಲು ನಾವು ಇರಾನ್‌ಗೆ ಕರೆ ನೀಡಿದ್ದೇವೆ. ಮತ್ತು ಅಂತಹ ದಾಳಿ ನಡೆದರೆ ಪ್ರಾದೇಶಿಕ ಭದ್ರತೆಗೆ ಗಂಭೀರ ಪರಿಣಾಮಗಳ ಬಗ್ಗೆ ಚರ್ಚಿಸಿದ್ದೇವೆ" ಎಂದು ಅವರು ಹೇಳಿದ್ದಾರೆ.
ಇಸ್ರೇಲ್ ಮಿಲಿಟರಿ ವಕ್ತಾರ ಡೇನಿಯಲ್ ಹಗರಿ ಪ್ರತಿಕ್ರಿಯಿಸಿ, ''ತಮ್ಮ ದೇಶವು ಈ ಸಮಯದಲ್ಲಿ ಯಾವುದೇ ಬೆದರಿಕೆಯನ್ನು ವಿಫಲಗೊಳಿಸಲು ಸಿದ್ಧವಾಗಿದೆ. ಆದರೆ, ಮುಂದಿನ 24 ಗಂಟೆಗಳಲ್ಲಿ ಇರಾನ್ ದಾಳಿಯನ್ನು ಪ್ರಾರಂಭಿಸುವ ನಿರೀಕ್ಷೆಯಿದೆ ಎಂಬ ವರದಿಗಳ ಬಗ್ಗೆ ತನಗೆ ತಿಳಿದಿಲ್ಲ'' ಎಂದು ಹೇಳಿದರು.
ಇಸ್ರೇಲ್‌ನ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಮಾತನಾಡಿ, ''ದೇಶವು ರಕ್ಷಣೆಯನ್ನು ಬಲಪಡಿಸಿದೆ ಮತ್ತು ಟೆಹ್ರಾನ್ ಮತ್ತು ಬೈರುತ್‌ನಿಂದ ಬೆದರಿಕೆಗಳು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಆಕ್ರಮಣಕಾರಿ ಆಯ್ಕೆಗಳನ್ನು ಮಾಡಿಕೊಂಡಿದೆ'' ಎಂದು ಹೇಳಿದರು.
ಇತ್ತೀಚಿನ ದಾಳಿಯ ನಂತರ ಇರಾಕಿನ ಪ್ರಧಾನ ಮಂತ್ರಿಯೊಂದಿಗಿನ ಕರೆಯಲ್ಲಿ, ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಅವರು, "ಇರಾನ್ ಸಂಯೋಜಿತ ಸೇನಾಪಡೆಗಳ ದಾಳಿಯಿಂದ ಒಕ್ಕೂಟದ ಮಿಲಿಟರಿ ಸಲಹೆಗಾರರನ್ನು ರಕ್ಷಿಸುವ ಇರಾಕ್‌ನ ಜವಾಬ್ದಾರಿಯ ಪ್ರಾಮುಖ್ಯತೆಯನ್ನು ಪುನರುಚ್ಚರಿಸಿದ್ದಾರೆ" ಎಂದು ತಿಳಿಸಿದ್ದಾರೆ.
ಅಮೆರಿಕ ಮತ್ತು ನಾಲ್ಕು ಯುರೋಪಿಯನ್ ರಾಷ್ಟ್ರಗಳು ಗಾಜಾದಲ್ಲಿ ಕದನ ವಿರಾಮಕ್ಕಾಗಿ ತಮ್ಮ ಕರೆಗಳನ್ನು ತೀವ್ರಗೊಳಿಸಿವೆ. ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆಗೆ ಮೂಲ ಕಾರಣವಾಗಿ ಇಸ್ರೇಲ್ ಮೇಲೆ ಹಮಾನ್ನ ಅಕ್ಟೋಬರ್ 7 ರ ದಾಳಿಯಿಂದ ಉಂಟಾದ ಸಂಘರ್ಷದ ಬಗ್ಗೆ ಈ ಗುರುವಾರ ಇಸ್ರೇಲ್ ಮತ್ತು ಹಮಾಸ್ ನಡುವಿನ ನವೀಕೃತ ಮಾತುಕತೆಗಾಗಿ ಬೈಡನ್ ಮತ್ತು ಈಜಿಪ್ಟ್ ಮತ್ತು ಕತಾರ್ ನಾಯಕರು ಮಾಡಿದ ಕರೆಯ ಮಾತನಾಡಿದ್ದಾರೆ.
ಹಮಾಸ್ ಮಧ್ಯವರ್ತಿಗಳಿಗೆ ಹೆಚ್ಚಿನ ಮಾತುಕತೆ ನಡೆಸುವ ಬದಲು ಬೈಡನ್ ಅವರು ಈ ಹಿಂದೆ ಮಂಡಿಸಿದ ಕದನ ವಿರಾಮ ಯೋಜನೆಯನ್ನು ಜಾರಿಗೆ ತರುವಂತೆ ಎಝೆಡಿನ್ ಅಲ್-ಕಸ್ಸಾಮ್ ಬ್ರಿಗೇಡ್ಸ್ ಒತ್ತಾಯಿಸಿದೆ. ಸಂಧಾನಕಾರರನ್ನು ಕಳುಹಿಸಲು ಅಮೆರಿಕ, ಕತಾರ್ ಮತ್ತು ಈಜಿಪ್ಟ್‌ನ ಇತ್ತೀಚಿನ ಆಹ್ವಾನವನ್ನು ಇಸ್ರೇಲ್ ಒಪ್ಪಿಕೊಂಡಿದೆ. "ಒಪ್ಪಂದದ ಅನುಷ್ಠಾನದ ವಿವರಗಳನ್ನು ಅಂತಿಮಗೊಳಿಸುವುದು" ಎಂದು ಇಸ್ರೇಲ್ ಸರ್ಕಾರದ ವಕ್ತಾರ ಡೇವಿಡ್ ಮೆನ್ಸರ್ ಮಾಧ್ಯಮಗೋಷ್ಟಿಯಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಯಾವುದೇ ಕ್ಷಣದಲ್ಲಿ ನಮ್ಮ ಮೇಲೆ ಇರಾನ್, ಹಿಜ್ಬುಲ್ಲಾ ಜಂಟಿ ದಾಳಿ ಸಾಧ್ಯತೆ: ಇಸ್ರೇಲ್ ಹೇಳಿಕೆ - Israel Iran War