ವಾಷಿಂಗ್ಟನ್(ಅಮೆರಿಕ): ದೀಪಾವಳಿಗೆ ಮುಂಚಿತವಾಗಿ, ಅಮೆರಿಕದಲ್ಲಿರುವ ಭಾರತೀಯ ಅನುಕೂಲಕ್ಕಾಗಿ ವಾಲ್‌ಮಾರ್ಟ್ ತನ್ನ ಆಯ್ದ US ಸ್ಟೋರ್‌ಗಳಲ್ಲಿ ಹಲವಾರು ಜನಪ್ರಿಯ ಭಾರತೀಯ ಬ್ರಾಂಡ್‌ಗಳ ತಿಂಡಿಗಳು ಮತ್ತು ಸಿಹಿತಿಂಡಿಗಳನ್ನು ಪರಿಚಯಿಸುವುದಾಗಿ ಗುರುವಾರ ಪ್ರಕಟಿಸಿದೆ.
ಬ್ರ್ಯಾಂಡ್‌ಗಳಲ್ಲಿ ಗುಡ್ ಡೇ ಬಿಸ್ಕೆಟ್ಗಳು, ಮತ್ತು ಬ್ರಿಟಾನಿಯಾದ ಕ್ಲಾಸಿಕ್ ಮಿಲ್ಕ್ ರಸ್ಕ್ ಮತ್ತು ಬಿಕಾನೊದ ಎರಡು ಫೆಸ್ಟಿವ್ ಪ್ಯಾಕ್‌ಗಳು, ಅಭಿನಂದನ್ ಮತ್ತು ಶಾಹಿ ನಜ್ರಾನಾಗಳು ಸೋನ್ ಪಾಪ್ಡಿ ಮತ್ತು ಗುಲಾಬ್ ಜಾಮೂನ್‌ನಂತಹ ಸಿಹಿತಿಂಡಿಗಳನ್ನು ಹೊಂದಿವೆ. ರೀಗಲ್ ಕಿಚನ್ ಮತ್ತು ವಹ್ದಮ್(VAHDAM) ನಂತಹ ಬ್ರ್ಯಾಂಡ್‌ಗಳು ಈಗಾಗಲೇ ವಾಲ್‌ಮಾರ್ಟ್ US ಗ್ರಾಹಕರಿಗೆ ಲಭ್ಯವಿವೆ. ಜಯಂತಿ ಸ್ಪೈಸಸ್ ಮತ್ತು ಹೈಫನ್ ಫುಡ್ಸ್ ಪ್ರಸ್ತುತ ವಾಲ್‌ಮಾರ್ಟ್‌ನ ಗ್ರೇಟ್ ವ್ಯಾಲ್ಯೂ ಬ್ರ್ಯಾಂಡ್ ಅಡಿ ಉತ್ಪನ್ನಗಳನ್ನು ಹೊಂದಿವೆ.
ಒಟ್ಟಾಗಿ ವಾಲ್‌ಮಾರ್ಟ್ U.S. ಗ್ರಾಹಕರಿಗೆ ವಿವಿಧ, ಅಧಿಕ ಜನರು ಇಷ್ಟಪಡುವ ತಿಂಡಿಗಳು ಮತ್ತು ಆಹಾರ ಉತ್ಪನ್ನಗಳನ್ನು ಪೂರೈಸುತ್ತಿದೆ. ಹಾಗೇ ಪ್ರೀಮಿಯಂ ಚಹಾ, ತಿನ್ನಲು ಸಿದ್ಧ ಮತ್ತು ಶೈತ್ಯೀಕರಿಸಿದ ಆಹಾರಗಳು, ಸಾಂಪ್ರದಾಯಿಕ ತಿಂಡಿಗಳು, ಮಸಾಲೆಗಳು ಮತ್ತು ಹಬ್ಬದ ಪ್ಯಾಕ್‌ಗಳು ಸೇರಿವೆ ಎಂದು ಅರ್ಕಾನ್ಸಾಸ್ ಪ್ರಧಾನ ಕಚೇರಿ ಹೊಂದಿರುವ ಕಂಪನಿ ತಿಳಿಸಿದೆ.
"ವಾಲ್‌ಮಾರ್ಟ್ ತಮ್ಮ ಗ್ರಾಹಕರಿಗೆ ವಿವಿಧ ರೀತಿಯ ಅನನ್ಯ ಮತ್ತು ವೈವಿಧ್ಯಮಯ ಉತ್ಪನ್ನ ಕೊಡುಗೆಗಳನ್ನು ಒದಗಿಸಲು ಬದ್ಧವಾಗಿದೆ. 2027 ರ ವೇಳೆಗೆ ಭಾರತದಿಂದ ರಫ್ತುಗಳನ್ನು ವರ್ಷಕ್ಕೆ 10 ಶತಕೋಟಿ ಡಾಲರ್ಗೆ ಹೆಚ್ಚಿಸುವ ನಮ್ಮ ಗುರಿಯ ಭಾಗವಾಗಿ, ರಜಾದಿನಗಳಲ್ಲಿ ಮತ್ತು ನಂತರ US ನಲ್ಲಿನ ನಮ್ಮ ಗ್ರಾಹಕರಿಗೆ ಭಾರತದ ಶ್ರೀಮಂತ ಸಂಸ್ಕೃತಿ ಮತ್ತು ಸಂಪ್ರದಾಯಗಳ ರುಚಿಯನ್ನು ತರಲು ನಾವು ಉತ್ಸುಕರಾಗಿದ್ದೇವೆ" ಎಂದು ವಾಲ್‌ಮಾರ್ಟ್‌ನ ಸೋರ್ಸಿಂಗ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷ ಆಂಡ್ರಿಯಾ ಆಲ್‌ಬ್ರೈಟ್ ಹೇಳಿದ್ದಾರೆ.
ಇದನ್ನೂ ಓದಿ: ಖಲಿಸ್ತಾನಿ ಉಗ್ರ ಪನ್ನುನ್ ಹತ್ಯೆ ಯತ್ನ ಪ್ರಕರಣ: ಅಮೆರಿಕದ ಮಾಹಿತಿಗಳನ್ನು ಗಂಭೀರವಾಗಿ ತೆಗೆದುಕೊಂಡ ಭಾರತ