ವಾಷಿಂಗ್ಟನ್ (ಅಮೆರಿಕ): ''ತಾವು ಅಧ್ಯಕ್ಷರಾಗಿ ಮರು ಆಯ್ಕೆಯಾದರೆ, ಅಮೆರಿಕದ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಿಂದ ಪದವಿ ಪೂರ್ಣಗೊಳಿಸಿದ ವಿದೇಶಿ ವಿದ್ಯಾರ್ಥಿಗಳಿಗೆ ಸ್ವಯಂಚಾಲಿತವಾಗಿ ಗ್ರೀನ್ ಕಾರ್ಡ್‌ಗಳನ್ನು ನೀಡುವ ಕಾರ್ಯಕ್ರಮವನ್ನು ಜಾರಿಗೆ ತರಲಾಗುವುದು ಎಂದು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಟ್ರಂಪ್ ನಿಜವಾಗಿಯೂ ಮರು ಆಯ್ಕೆಯಾದರೆ ಮತ್ತು ಅವರ ಭರವಸೆಯನ್ನು ಪೂರೈಸಿದರೆ, ಭಾರತದ ವಿದ್ಯಾರ್ಥಿಗಳು ಅತಿದೊಡ್ಡ ಫಲಾನುಭವಿಗಳಾಗಲಿದ್ದಾರೆ. ಅಮರಿಕದಲ್ಲಿ ಚೀನಾದ ವಿದ್ಯಾರ್ಥಿಗಳು ಅತಿ ಹೆಚ್ಚು ಸಂಖ್ಯೆಯಲ್ಲಿದ್ದಾರೆ. 2023ರಲ್ಲಿ ಅಮೆರಿಕದಲ್ಲಿ ದಾಖಲಾದ ಎಲ್ಲಾ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆ ಶೇ. 53ರಷ್ಟಿದೆ.
ಗುರುವಾರ, ಇಬ್ಬರು ಸಿಲಿಕಾನ್ ವ್ಯಾಲಿ ಹೂಡಿಕೆದಾರರೊಂದಿಗಿನ ಪಾಡ್‌ಕ್ಯಾಸ್ಟ್‌ನಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಟ್ರಂಪ್ ಅವರು, "ನಾನು ಭರವಸೆ ನೀಡುತ್ತೇನೆ, ಜೊತೆಗೆ ನಾನು ಅದನ್ನು ಒಪ್ಪುತ್ತೇನೆ. ಪ್ರಮುಖವಾಗಿ ನಾನು ಏನು ಮಾಡುತ್ತೇನೆಂದ್ರೆ, ನೀವು ಅಮೆರಿಕದ ಕಾಲೇಜಿನಿಂದ ಪದವಿ ಪೂರ್ಣಗೊಳಿಸಿದ ನಂತರ, ಈ ದೇಶದಲ್ಲಿ ಉಳಿಯಲು ಗ್ರೀನ್ ಕಾರ್ಡ್ ಅನ್ನು ನೀವು ಸ್ವಯಂಚಾಲಿತವಾಗಿ ಪಡೆಯಬೇಕು ಎಂದು ನಾನು ಭಾವಿಸುತ್ತೇನೆ'' ಎಂದು ಭರವಸೆ ನೀಡಿದರು.
ಗ್ರೀನ್ ಕಾರ್ಡ್ ಹೊಂದಿರುವವರು ಶಾಶ್ವತವಾಗಿ ಅಮೆರಿಕದಲ್ಲಿ ಉಳಿಯಲು ಮತ್ತು ಕೆಲಸ ಮಾಡಲು ಅನುಮತಿಸಲಾಗುತ್ತದೆ. ಶಾಶ್ವತ ನಿವಾಸ ಮತ್ತು ಇದು ಪೂರ್ಣ ಪೌರತ್ವದಿಂದ ಒಂದು ಹೆಜ್ಜೆ ದೂರದಲ್ಲಿರಲಿದೆ. ಅಮೆರಿಕ ಪ್ರತಿ ವರ್ಷ ಅಂದಾಜು 1 ಮಿಲಿಯನ್ ಗ್ರೀನ್ ಕಾರ್ಡ್‌ಗಳನ್ನು ನೀಡುತ್ತದೆ ಮತ್ತು ಹೆಚ್ಚಾಗಿ ಚೀನಾ ಮತ್ತು ಭಾರತದಿಂದ ಪ್ರತಿ ವರ್ಷ 1 ಮಿಲಿಯನ್ ವಿದೇಶಿ ವಿದ್ಯಾರ್ಥಿಗಳಿಗೆ ಈ ಲಾಭ ದೊರೆಯಲಿದ್ದಾರೆ. ಮಾಜಿ ಅಧ್ಯಕ್ಷ ಟ್ರಂಪ್ ಚುನಾಯಿತರಾದರೆ ಈ ಭರವಸೆಯನ್ನು ನಿಜವಾಗಿ ಪೂರೈಸಿದರೆ, ಇದು ಕಾರ್ಯಕ್ರಮದ ಪ್ರಮುಖ ವಿಸ್ತರಣೆ ಆಗುತ್ತದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ವಾರ್ಷಿಕವಾಗಿ ನೀಡಲಾಗುವ ಗ್ರೀನ್ ಕಾರ್ಡ್‌ಗಳ ಸಂಖ್ಯೆಯನ್ನು ದ್ವಿಗುಣಗೊಳಿಸುತ್ತದೆ. ಆದರೆ, ಅವರು ನಿಜವಾಗಿಯೂ ಈ ಭರವಸೆಯನ್ನು ಈಡೇರಿಸುತ್ತಾರೆಯೇ ಎಂಬುದು ಈಗಿರುವ ದೊಡ್ಡ ಪ್ರಶ್ನೆಯಾಗಿದೆ.
H-1B ಅಲ್ಪಾವಧಿಯ ವಲಸೆಯೇತರ ಕೆಲಸದ ವೀಸಾ: 2017 ರಿಂದ 2021 ರವರೆಗೆ ಅಧಿಕಾರದಲ್ಲಿದ್ದಾಗ, ಅವರ ಆಡಳಿತವು ವಲಸಿಗರನ್ನು ನಿರ್ಬಂಧಿಸಲು ಪ್ರಯತ್ನಿಸಿತ್ತು ಮತ್ತು ವಾಸ್ತವವಾಗಿ, H-1B ಅಲ್ಪಾವಧಿಯ ವಲಸೆಯೇತರ ಕೆಲಸದ ವೀಸಾಗಳಲ್ಲಿ ಅಮೆರಿಕಕ್ಕೆ ಬರುವ ಭಾರತೀಯರನ್ನು ಟಾರ್ಗೆಟ್ ಮಾಡಲಾಗಿತ್ತು. ಅಧಿಕಾರ ವಹಿಸಿಕೊಳ್ಳುವ ಮೊದಲು ಅವರು H-1B ಕಾರ್ಯಕ್ರಮವನ್ನು ಬೆಂಬಲಿಸಿದ್ದರು.
ಅಮೆರಿಕ ಶಾಲೆಗಳು ಮತ್ತು ಕಾಲೇಜುಗಳಲ್ಲಿ ಹೆಚ್ಚಿನ ಭಾರತೀಯ ವಿದ್ಯಾರ್ಥಿಗಳು H-1B ವೀಸಾಗಳಲ್ಲಿ ಅಮೆರಿಕನ್ ಕಂಪನಿಗಳಿಗೆ ಕೆಲಸ ಮಾಡಲು ಹೋಗುತ್ತಾರೆ. ನಂತರ ಗ್ರೀನ್ ಕಾರ್ಡ್‌ಗಳು ಮತ್ತು ಪೌರತ್ವಕ್ಕೆ ಪಡೆದುಕೊಳ್ಳುತ್ತಾರೆ. ಗೂಗಲ್ ಸಿಇಒ ಸುಂದರ್ ಪಿಚೈ ಮತ್ತು ಅಡೋಬ್ ಸಿಇಒ ಶಾಂತನು ನಾರಾಯಣ್ ಇದಕ್ಕೆ ಪ್ರಮುಖ ಉದಾಹರಣೆಗಳಾಗಿದ್ದಾರೆ.
ವಿದೇಶಿ ವಿದ್ಯಾರ್ಥಿಗಳು ಗ್ರೀನ್ ಕಾರ್ಡ್‌ಗಳನ್ನು ಪಡೆಯಲು H-1B ಅಥವಾ ಇತರ ಕೆಲಸದ ವೀಸಾಗಳ ಹಂತವನ್ನು ದಾಟಿಕೊಂಡು ಹೋಗಬೇಕಾಗುತ್ತದೆ. ಮಾಜಿ ಅಧ್ಯಕ್ಷ ಟ್ರಂಪ್ ಆ ಹಂತವನ್ನು ತೆಗೆದುಹಾಕುವುದಾಗಿ ಮತ್ತು ವಿದೇಶಿ ವಿದ್ಯಾರ್ಥಿಗಳಿಗೆ ಅವರ ಪದವಿ ಪೂರ್ಣಗೊಳಿಸಿದ ನಂತರ ಗ್ರೀನ್ ಕಾರ್ಡ್‌ಗಳನ್ನು ನೀಡುವುದಾಗಿ ಭರವಸೆ ಕೊಟ್ಟಿದ್ದಾರೆ.
ಇದನ್ನೂ ಓದಿ: ಭಾರತ - ಪಾಕಿಸ್ತಾನ ನಡುವಣ ಸಮಸ್ಯೆ: ನೇರ ಚರ್ಚೆಗೆ ನಮ್ಮ ಬೆಂಬಲ ಎಂದ ಅಮೆರಿಕ - US Support for Direct discussion