ETV Bharat / international

ಶನಿವಾರ ಲಾಹೋರ್​ನಲ್ಲಿ ತೆಹ್ರೀಕ್-ಇ-ಇನ್ಸಾಫ್ ಬೃಹತ್ ರ‍್ಯಾಲಿ: ಬಲಪ್ರದರ್ಶನಕ್ಕೆ ಇಮ್ರಾನ್ ಖಾನ್​ ಸಜ್ಜು - Tehreek e Insaf To Hold Rally

ಪಾಕಿಸ್ತಾನದ ಲಾಹೋರ್​ನಲ್ಲಿ ಶನಿವಾರ ತೆಹ್ರೀಕ್-ಇ-ಇನ್ಸಾಫ್ ಬೃಹತ್ ರ‍್ಯಾಲಿ ನಡೆಯಲಿದೆ.

ತೆಹ್ರೀಕ್-ಇ-ಇನ್ಸಾಫ್ ರ‍್ಯಾಲಿ (ಸಂಗ್ರಹ ಚಿತ್ರ)
ತೆಹ್ರೀಕ್-ಇ-ಇನ್ಸಾಫ್ ರ‍್ಯಾಲಿ (ಸಂಗ್ರಹ ಚಿತ್ರ) (IANS)
author img

By ANI

Published : Sep 20, 2024, 2:04 PM IST

ಲಾಹೋರ್: ತಾನು ಹೊಂದಿರುವ ಅಪಾರ ಜನಬೆಂಬಲವನ್ನು ತೋರಿಸುವ ಸಲುವಾಗಿ ಲಾಹೋರ್‌ನಲ್ಲಿ ಶನಿವಾರ 'ಪವರ್ ಶೋ' ರ‍್ಯಾಲಿ ನಡೆಸುವುದಾಗಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಪಕ್ಷ ಘೋಷಿಸಿದೆ ಎಂದು ಎಆರ್​ವೈ ನ್ಯೂಸ್​ ವರದಿ ಮಾಡಿದೆ. ಬೃಹತ್​ ರ‍್ಯಾಲಿಯನ್ನು ಯಶಸ್ವಿಯಾಗಿ ಸಂಘಟಿಸಲು ಲಾಹೋರ್​ನ ತೆಹ್ರೀಕ್-ಇ-ಇನ್ಸಾಫ್ ಪ್ರಧಾನ ಕಾರ್ಯದರ್ಶಿ ಅವೈಸ್ ಯೂನಿಸ್ ಅವರು ಗುರುವಾರ ಪಕ್ಷದ ಪದಾಧಿಕಾರಿಗಳಿಗೆ ವಿವಿಧ ಜವಾಬ್ದಾರಿಗಳನ್ನು ಹಂಚಿದ್ದಾರೆ ಎಂದು ವರದಿ ತಿಳಿಸಿದೆ.

"ಲಾಹೋರ್ ನಿವಾಸಿಗಳು ತೆಹ್ರೀಕ್-ಎ-ಇನ್ಸಾಫ್ ಪಕ್ಷ ಮತ್ತು ಅದರ ಸ್ಥಾಪಕ ಇಮ್ರಾನ್ ಖಾನ್ ಅವರನ್ನು ಬೆಂಬಲಿಸಿ ದೊಡ್ಡ ಸಂಖ್ಯೆಯಲ್ಲಿ ರ‍್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸಂಪೂರ್ಣ ಲಾಹೋರ್ ಇಮ್ರಾನ್ ಖಾನ್ ಅವರ ಪರವಾಗಿದೆ ಎಂಬುದು ಮತ್ತೊಮ್ಮೆ ಸಾಬೀತಾಗಲಿದೆ" ಎಂದು ಯೂನಿಸ್ ಹೇಳಿದರು.

ಮುಖ್ಯಮಂತ್ರಿ ಅಲಿ ಅಮೀನ್ ಗಂಡಾಪುರ್ ಅವರು ಖೈಬರ್ ಪಖ್ತುನಖ್ವಾ (ಕೆಪಿ) ಕಡೆಯಿಂದ ರ‍್ಯಾಲಿಯ ನೇತೃತ್ವ ವಹಿಸಲಿದ್ದು, ಪಂಜಾಬಿನಲ್ಲಿನ ಪಕ್ಷದ ಪ್ರಾದೇಶಿಕ ಮತ್ತು ಜಿಲ್ಲಾ ಅಧ್ಯಕ್ಷರು ಆಯಾ ಪ್ರದೇಶಗಳ ರ‍್ಯಾಲಿಗಳನ್ನು ಮುನ್ನಡೆಸಲಿದ್ದಾರೆ. ವಿಧಾನಸಭೆಯಲ್ಲಿನ ಪಿಟಿಐ ಸದಸ್ಯರು ಮತ್ತು ಪಕ್ಷದ ಟಿಕೆಟ್ ಹೊಂದಿರುವವರು ರ‍್ಯಾಲಿಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಯೂನಿಸ್ ಹೇಳಿದರು.

ಇದಕ್ಕೂ ಮುನ್ನ ಲಾಹೋರ್​ನ ಮಿನಾರ್-ಇ-ಪಾಕಿಸ್ತಾನ್​ನಲ್ಲಿ ಈ ರ‍್ಯಾಲಿ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಪಕ್ಷದ ಹಲವಾರು ನಾಯಕರನ್ನು ಬಂಧಿಸಿದ ನಂತರ ರ‍್ಯಾಲಿಯನ್ನು ಸೆಪ್ಟೆಂಬರ್ 21 ಕ್ಕೆ ಮರು ನಿಗದಿಪಡಿಸಲಾಗಿದೆ ಎಂದು ಎಆರ್​ವೈ ನ್ಯೂಸ್ ವರದಿ ಮಾಡಿದೆ.

ಈ ಮುನ್ನ ಸೆಪ್ಟೆಂಬರ್​ 8 ರಂದು ಸಂಗ್ಜಾನಿಯಲ್ಲಿ ನಡೆದ ತೆಹ್ರೀಕ್​​-ಎ-ಇನ್ಸಾಫ್​ ರ‍್ಯಾಲಿಯ ಸಮಯದಲ್ಲಿ ಸ್ಥಳೀಯ ಆಡಳಿತವು ಹಲವಾರು ನಿರ್ಬಂಧಗಳನ್ನು ಹೇರಿತ್ತು. ಸಂಜೆ 7 ಗಂಟೆಯ ಒಳಗೆ ರ‍್ಯಾಲಿ ಮುಗಿಸಿ ಜಾಗ ಖಾಲಿ ಮಾಡುವಂತೆ ಪಕ್ಷಕ್ಕೆ ತಿಳಿಸಲಾಗಿತ್ತು. ಆದರೆ ಈ ಸಮಯದ ನಂತರವೂ ಸಭೆ ಮುಂದುವರೆದಿದ್ದರಿಂದ ಸ್ಥಳೀಯಾಡಳಿತವು ಪಕ್ಷದ ಮುಖಂಡರ ವಿರುದ್ಧ ಕ್ರಮಕ್ಕೆ ಮುಂದಾಗಿತ್ತು.

ವಿವಿಧ ಮಾರ್ಗಗಳ ಮೂಲಕ ರ‍್ಯಾಲಿ ಸ್ಥಳಕ್ಕೆ ಆಗಮಿಸುತ್ತಿದ್ದ ಪಕ್ಷದ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿ ಪೊಲೀಸರೊಂದಿಗೆ ಘರ್ಷಣೆಗಿಳಿದಿದ್ದರು. ಈ ಸಂದರ್ಭದಲ್ಲಿ ಚೂಂಗಿ ಸಂಖ್ಯೆ 26 ಪ್ರದೇಶದಲ್ಲಿ ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದರು ಎಂದು ಎಆರ್​ವೈ ನ್ಯೂಸ್ ವರದಿ ಮಾಡಿದೆ.

ರ‍್ಯಾಲಿಯಲ್ಲಿ ಭಾಗವಹಿಸಿದ್ದವರು ನಿಗದಿಪಡಿಸಿದ ಮಾರ್ಗ ಬಿಟ್ಟು ಬೇರೆ ಮಾರ್ಗವಾಗಿ ಹೊರಟು ಪೊಲೀಸರೊಂದಿಗೆ ಸಂಘರ್ಷ ನಡೆಸಿದ್ದರು. ಈ ಸಮಯದಲ್ಲಿ ನಡೆದ ಕಲ್ಲು ತೂರಾಟದಲ್ಲಿ ಸೇಫ್ ಸಿಟಿ ಎಸ್ಎಸ್​ಪಿ ಶೋಯೆಬ್ ಖಾನ್ ಸೇರಿದಂತೆ ಹಲವಾರು ಅಧಿಕಾರಿಗಳು ಗಾಯಗೊಂಡಿದ್ದರು ಎಂದು ಪೊಲೀಸ್ ಮೂಲಗಳು ಹೇಳಿವೆ.

ಇದನ್ನೂ ಓದಿ: ಲೆಬನಾನ್​ ಮೇಲೆ ಇಸ್ರೇಲ್​ ಬೃಹತ್ ಕ್ಷಿಪಣಿ ದಾಳಿ: ಹಿಜ್ಬುಲ್ಲಾದ 100 ರಾಕೆಟ್​ ಲಾಂಚರ್‌ಗಳು​ ಧ್ವಂಸ - Israel Attacks Hezbollah

ETV Bharat Logo

Copyright © 2024 Ushodaya Enterprises Pvt. Ltd., All Rights Reserved.