ETV Bharat / international

ಕ್ರಿಮಿನಲ್​ ಕೋರ್ಟ್​ನ ಅರೆಸ್ಟ್​ ವಾರಂಟ್​​ಗೆ ಪುಟಿನ್​ ಡೋಂಟ್​ ಕೇರ್​: ಮಂಗೋಲಿಯಾಗೆ ಬಂದ ರಷ್ಯಾ ಅಧ್ಯಕ್ಷ - Putin arrives in Mongolia

author img

By ETV Bharat Karnataka Team

Published : Sep 3, 2024, 5:13 PM IST

ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮಂಗೋಲಿಯಾ ಭೇಟಿಗೆ ಆಗಮಿಸಿದ್ದಾರೆ.

ಮಂಗೋಲಿಯಾದಲ್ಲಿ ರಷ್ಯಾ ಅಧ್ಯಕ್ಷ ಪುಟಿನ್​ರನ್ನು ಸ್ವಾಗತಿಸಲಾಯಿತು
ಮಂಗೋಲಿಯಾದಲ್ಲಿ ರಷ್ಯಾ ಅಧ್ಯಕ್ಷ ಪುಟಿನ್​ರನ್ನು ಸ್ವಾಗತಿಸಲಾಯಿತು (AP)

ಉಲಾನ್ ಬಾತರ್, ಮಂಗೋಲಿಯಾ: ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮಂಗಳವಾರ ಮಂಗೋಲಿಯಾಕ್ಕೆ ಆಗಮಿಸಿದ್ದಾರೆ. ಉಕ್ರೇನ್ ಮೇಲೆ ದಾಳಿ ಮಾಡಿದ್ದಕ್ಕಾಗಿ ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್​ನಿಂದ (ಐಸಿಸಿ) ಅರೆಸ್ಟ್​ ವಾರಂಟ್​ ಇರುವುದನ್ನು ಲೆಕ್ಕಿಸದೇ ಪುಟಿನ್ ಮಂಗೋಲಿಯಾಗೆ ಭೇಟಿ ನೀಡಿದ್ದಾರೆ. ಏತನ್ಮಧ್ಯೆ ಮಂಗೋಲಿಯಾ ಕೂಡ ಐಸಿಸಿ ಆದೇಶಕ್ಕೆ ಯಾವುದೇ ಬೆಲೆ ನೀಡಿದಂತಿಲ್ಲ.

ಸುಮಾರು 18 ತಿಂಗಳ ಹಿಂದೆ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯವು ಪುಟಿನ್ ವಿರುದ್ಧ ವಾರಂಟ್ ಹೊರಡಿಸಿತ್ತು. ಅದಾದ ನಂತರ ಐಸಿಸಿಯ ಸದಸ್ಯ ರಾಷ್ಟ್ರವೊಂದಕ್ಕೆ ಪುಟಿನ್ ಅವರ ಮೊದಲ ಭೇಟಿ ಇದಾಗಿದೆ.

ಪುಟಿನ್ ಅವರನ್ನು ಬಂಧಿಸಿ ಹೇಗ್​ನಲ್ಲಿರುವ ಅಂತಾರಾಷ್ಟ್ರೀಯ ಕ್ರಿಮಿನಲ್​ ಕೋರ್ಟ್​ಗೆ ಹಸ್ತಾಂತರಿಸುವಂತೆ ಪುಟಿನ್ ಭೇಟಿಗೆ ಮುನ್ನ ಉಕ್ರೇನ್ ಮಂಗೋಲಿಯಾಗೆ ಮನವಿ ಮಾಡಿತ್ತು. ಮಂಗೋಲಿಯಾ ವಾರಂಟ್​ ಅನ್ನು ಜಾರಿಗೊಳಿಸದಿರುವುದಕ್ಕೆ ಯುರೋಪಿಯನ್ ಯುನಿಯನ್ ರಾಷ್ಟ್ರಗಳು ಕಳವಳ ವ್ಯಕ್ತಪಡಿಸಿವೆ. ವಾರಂಟ್​ ಬಗ್ಗೆ ರಷ್ಯಾ ತಲೆಕೆಡಿಸಿಕೊಂಡಿಲ್ಲ ಎಂದು ಪುಟಿನ್ ವಕ್ತಾರರು ಕಳೆದ ವಾರ ಹೇಳಿದ್ದರು.

ಪುಟಿನ್ ವಿರುದ್ಧದ ವಾರಂಟ್ ಮಂಗೋಲಿಯನ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಐಸಿಸಿಯ ಮೂಲ ಕಾಯ್ದೆ ರೋಮ್ ಶಾಸನದ ಪ್ರಕಾರ ಸದಸ್ಯ ರಾಷ್ಟ್ರಗಳು ಅರೆಸ್ಟ್​ ವಾರಂಟ್​ ಹೊರಡಿಸಲಾದ ವ್ಯಕ್ತಿಯನ್ನು ಬಂಧಿಸುವುದು ಕಡ್ಡಾಯವಾಗಿದೆ. ಆದರೆ, ರಷ್ಯಾದ ಗಡಿಯಲ್ಲಿರುವ ಎಲ್ಲಾ ಕಡೆಯಿಂದಲೂ ಭೂಮಿಯಿಂದ ಸುತ್ತುವರೆಯಲ್ಪಟ್ಟಿರುವ ಮಂಗೋಲಿಯಾ, ಇಂಧನ ಮತ್ತು ಒಂದಿಷ್ಟು ಪ್ರಮಾಣದ ವಿದ್ಯುತ್ತಿಗಾಗಿ ರಷ್ಯಾದ ಮೇಲೆ ಅವಲಂಬಿತವಾಗಿದೆ.

ಮಂಗೋಲ್ ಸಾಮ್ರಾಜ್ಯದ ಸ್ಥಾಪಕ 13ನೇ ಶತಮಾನದ ಆಡಳಿತಗಾರ ಚೆಂಗೀಸ್​​​​ ಖಾನ್ ಅವರ ವೈಯಕ್ತಿಕ ಕಾವಲುಗಾರನ ಶೈಲಿಯ ಕೆಂಪು ಮತ್ತು ನೀಲಿ ಸಮವಸ್ತ್ರಗಳನ್ನು ಧರಿಸಿದ ಗೌರವ ರಕ್ಷಕರು ರಷ್ಯಾದ ನಾಯಕ ಪುಟಿನ್ ಅವರನ್ನು ರಾಜಧಾನಿ ಉಲಾನ್ ಬಾತರ್ ನ ಮುಖ್ಯ ಚೌಕದಲ್ಲಿ ಸ್ವಾಗತಿಸಿದರು.

ಪುಟಿನ್ ಮತ್ತು ಮಂಗೋಲಿಯನ್ ಅಧ್ಯಕ್ಷ ಖುರೆಲ್ಸುಖ್ ಉಖ್ನಾ ಅವರು ಸರ್ಕಾರಿ ಅರಮನೆಯ ಕೆಂಪು ಹಾಸಿನ ಮೆಟ್ಟಿಲುಗಳ ಮೇಲೆ ನಡೆದು ಚೇಂಗಿಸ್​​ ಖಾನ್ ಅವರ ಪ್ರತಿಮೆಯ ಮುಂದೆ ನಮಸ್ಕರಿಸಿದರು. ಸ್ವಾಗತ ಸಮಾರಂಭಕ್ಕೂ ಮುನ್ನ ಪುಟಿನ್​ಗೆ ಉಕ್ರೇನ್ ಧ್ವಜ ಪ್ರದರ್ಶಿಸಲು ಪ್ರಯತ್ನಿಸಿದ ಪ್ರತಿಭಟನಾಕಾರರ ಸಣ್ಣ ಗುಂಪನ್ನು ಪೊಲೀಸರು ಚದುರಿಸಿದರು.

ಖುರೆಲ್ಸುಖ್ ಅವರೊಂದಿಗೆ ಚರ್ಚೆ ನಡೆಸಿದ ಪುಟಿನ್, ಉಭಯ ದೇಶಗಳ ನಡುವಿನ ಸಂಬಂಧಗಳು ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದುತ್ತಿವೆ ಎಂದು ಹೇಳಿದರು. ಅಕ್ಟೋಬರ್ ಅಂತ್ಯದಲ್ಲಿ ರಷ್ಯಾದ ನಗರ ಕಜಾನ್ ನಲ್ಲಿ ರಷ್ಯಾ ಮತ್ತು ಚೀನಾ ಸೇರಿದಂತೆ ಇತರರನ್ನು ಒಳಗೊಂಡ ಬ್ರಿಕ್ಸ್ ರಾಷ್ಟ್ರಗಳ ಶೃಂಗಸಭೆಯಲ್ಲಿ ಭಾಗವಹಿಸುವಂತೆ ಅವರು ಮಂಗೋಲಿಯನ್ ಅಧ್ಯಕ್ಷರನ್ನು ಆಹ್ವಾನಿಸಿದರು. ಶೃಂಗಸಭೆಯಲ್ಲಿ ಭಾಗವಹಿಸಲು ಖುರೆಲ್ಸುಖ್ ಒಪ್ಪಿಕೊಂಡಿದ್ದಾರೆ ಎಂದು ರಷ್ಯಾದ ಸರ್ಕಾರಿಯ ಸುದ್ದಿ ಸಂಸ್ಥೆ ಆರ್​ಐಎ ನೋವೊಸ್ಟಿ ತಿಳಿಸಿದೆ.

ಇದನ್ನೂ ಓದಿ : ಫಿಲಡೆಲ್ಫಿ ಕಾರಿಡಾರ್​ ಎಲ್ಲಿದೆ?: ಇಸ್ರೇಲ್​ಗೆ ಇದು ಯಾಕಿಷ್ಟು ಮಹತ್ವದ್ದು? - Philadelphi Corridor

ETV Bharat Logo

Copyright © 2024 Ushodaya Enterprises Pvt. Ltd., All Rights Reserved.