ಲಂಡನ್: ಬ್ರಿಟನ್ ಕಿಂಗ್ ಚಾರ್ಲ್ಸ್ III ರ ಏಕೈಕ ಸಹೋದರಿ ಬ್ರಿಟನ್‌ನ ರಾಜಕುಮಾರಿ ಅನ್ನಿ ತಲೆಗೆ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ಗ್ಯಾಟ್‌ಕೊಂಬ್ ಪಾರ್ಕ್ ಎಸ್ಟೇಟ್‌ನಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದೆ. "ನಿನ್ನೆ ಸಂಜೆ ಗ್ಯಾಟ್‌ಕೊಂಬ್ ಪಾರ್ಕ್ ಎಸ್ಟೇಟ್‌ನಲ್ಲಿ ನಡೆದ ಘಟನೆಯಲ್ಲಿ ರಾಜಕುಮಾರಿ ರಾಯಲ್‌ಗೆ(ಅನ್ನಿ) ಸಣ್ಣ ಗಾಯಗಳಾಗಿವೆ" ಎಂದು ಬಕಿಂಗ್‌ಹ್ಯಾಮ್ ಅರಮನೆ ತನ್ನ ಹೇಳಿಕೆಯಲ್ಲಿ ಸೋಮವಾರ ತಿಳಿಸಿದೆ. " ಬ್ರಿಸ್ಟಲ್‌ನ ಸೌತ್‌ಮಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದ್ದು, ಶೀಘ್ರವಾಗಿ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ" ಎಂದು ಹೇಳಿಕೆಯಲ್ಲಿ ಸೇರಿಸಲಾಗಿದೆ. ಅರಮನೆಯ ಅಧಿಕಾರಿಗಳು ಈ ಘಟನೆಯ ಬಗ್ಗೆ ಕಿಂಗ್ ಚಾರ್ಲ್ಸ್‌ಗೆ ತಿಳಿಸಲಾಗಿದೆ ಎಂದಿದ್ದಾರೆ.
ಸದ್ಯಕ್ಕಿರುವ ಮಾಹಿತಿ ಪ್ರಕಾರ, ಭಾನುವಾರ ರಾತ್ರಿ ರಾಜಮನೆತನದ ಮೈದಾನದ ಸುತ್ತಲೂ ಓಡಾಡುತ್ತಿದ್ದಾಗ 73 ವರ್ಷದ ರಾಜಕುಮಾರಿ ಅನ್ನಿ ಕುದುರೆಯ ಕಾಲಿನ ಅಡಿ ಅಥವಾ ತಲೆ ಭಾಗದಡಿ ಸಿಲುಕಿ ಗಾಯಗೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.