ETV Bharat / international

ಅಬುಧಾಬಿಯಲ್ಲಿ ಹಿಂದೂ ದೇಗುಲ ಉದ್ಘಾಟನೆಗೆ ಫೆ.13, 14ರಂದು ಪ್ರಧಾನಿ ಮೋದಿ ಯುಎಇ ಭೇಟಿ - ಯುಎಇಗೆ ಪ್ರಧಾನಿ ಮೋದಿ

ಅರಬ್​ ನಾಡಿನ ಅಬುದಾಬಿಯಲ್ಲಿ ನಿರ್ಮಾಣವಾಗಿರುವ ಭವ್ಯ ಹಿಂದು ದೇಗುಲವನ್ನು ಫೆಬ್ರವರಿ 14 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡಲಿದ್ದಾರೆ.

ಪ್ರಧಾನಿ ಮೋದಿ ಯುಎಇ ಭೇಟಿ
ಪ್ರಧಾನಿ ಮೋದಿ ಯುಎಇ ಭೇಟಿ
author img

By PTI

Published : Feb 10, 2024, 5:36 PM IST

ನವದೆಹಲಿ: ಮುಸ್ಲಿಮರ ಬಾಹುಳ್ಯದ ಅರಬ್​ ನಾಡಿನಲ್ಲಿ ತಲೆಎತ್ತಿರುವ ಮೊಟ್ಟ ಮೊದಲ ಹಿಂದೂ ದೇಗುಲವನ್ನು ಉದ್ಘಾಟಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 13, 14 ರಂದು ಎರಡು ದಿನಗಳ ಕಾಲ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ಗೆ ಭೇಟಿ ನೀಡಲಿದ್ದಾರೆ.

ಎರಡು ದಿನಗಳ ಈ ಭೇಟಿಯಲ್ಲಿ ಅಲ್ಲಿನ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. 2014 ರಿಂದ ಎರಡು ಅವಧಿಯ ಬಿಜೆಪಿ ಸರ್ಕಾರದಲ್ಲಿ ಮುಸ್ಲಿಂ ರಾಷ್ಟ್ರಕ್ಕೆ ಮೋದಿ ನೀಡುತ್ತಿರುವ 7ನೇ ಭೇಟಿ ಇದಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಶನಿವಾರ ತಿಳಿಸಿದೆ.

ದೇಗುಲದ ವಿಸ್ತಾರ: 24 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ಭವ್ಯ ಸ್ವಾಮಿ ನಾರಾಯಣ ಹಿಂದು ದೇಗುಲವನ್ನು ಪ್ರಧಾನಿ ಮೋದಿ ಅವರಿಂದಲೇ ಉದ್ಘಾಟನೆ ಮಾಡಿಸಲಾಗುವುದು ಎಂದು ಅರಬ್​ ರಾಜ ನಹ್ಯಾನ್​ ಮೊದಲೇ ಘೋಷಿಸಿದ್ದರು. ಅದರಂತೆ ಫೆಬ್ರವರಿ 14 ರಂದು ಪ್ರಧಾನಿ ಮೋದಿ ಅವರು ಉದ್ಘಾಟನಾ ಕೈಂಕರ್ಯವನ್ನು ನೆರವೇರಿಸಲಿದ್ದಾರೆ.

ದಿಲ್ಲಿಯ ಅಕ್ಷರಧಾಮದ ಮಾದರಿಯಲ್ಲೇ ನಿರ್ಮಾಣವಾಗಿರುವ ಸ್ವಾಮಿ ನಾರಾಯಣ ದೇಗುಲಕ್ಕೆ ಅನುದಾಬಿ ದೊರೆ 24 ಎಕರೆ ಭೂಮಿಯನ್ನು ಕಾಣಿಕೆಯಾಗಿ ನೀಡಿದ್ದಾರೆ. ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳ ಧನಿಕ ಹಿಂದುಗಳು ಈ ಮಂದಿರ ನಿರ್ಮಾಣಕ್ಕೆ 700 ಕೋಟಿ ರೂಪಾಯಿ ದೇಣಿಗೆ ಭರಿಸಿದ್ದಾರೆ. ಮುಸ್ಲಿಂ ದೊರೆಗಳ ಆಡಳಿತದ ದೇಶದಲ್ಲಿ ಇದೇ ಮೊದಲ ಬಾರಿಗೆ ಹಿಂದು ದೇಗುಲ ಭವ್ಯವಾಗಿ ನಿರ್ಮಾಣಗೊಂಡು ಉದ್ಘಾಟನೆಗೊಳ್ಳಲು ಸಜ್ಜಾಗಿದೆ.

ದೇವಾಲಯದ ವಿಶೇಷ: ಈ ಮಂದಿರವನ್ನು ಬಾಫ್ಸ್​​ ಸಂಸ್ಥೆ ನೇತೃತ್ವದಲ್ಲಿ ನಿರ್ಮಿಸಲಾಗಿದೆ. ಸ್ವಾಮಿ ನಾರಾಯಣ ದೇಗುಲ 14 ಎಕರೆಯಷ್ಟಿದೆ. 180 ಅಡಿ ಅಗಲ, 262 ಅಡಿ ಉದ್ದ, 108 ಅಡಿ ಎತ್ತರದಲ್ಲಿ ದೇಗುಲವಿದೆ. 2 ಗುಮ್ಮಟಗಳು, 7 ಶಿಖರಗಳು, 12 ಸಾಮ್ರಾನ್​ ಮತ್ತು 410 ಸ್ತಂಭಗಳಿವೆ. 40 ಸಾವಿರ ಕ್ಯೂಬಿಕ್​ ಮೀಟರ್​ ಅಮೃತಶಿಲೆ, 1,80,000 ಘನ ಮೀಟರ್​ ಮರಳುಗಲ್ಲು, 18 ಲಕ್ಷ ಇಟ್ಟಿಗೆಗಳಿಂದ ಈ ದೇಗುಲವನ್ನು ನಿರ್ಮಿಸಲಾಗಿದೆ. ರಾಜಸ್ಥಾನ, ಯುರೋಪಿಯನ್​ ಮಾರ್ಬಲ್​ಗಳನ್ನು ಬಳಸಲಾಗಿದೆ. ವಿಶೇಷವೆಂದರೆ, ಎಲ್ಲೂ ಕೂಡ ಉಕ್ಕು, ಕಬ್ಬಿಣವನ್ನು ಬಳಕೆ ಮಾಡಿಲ್ಲ. ಸಂಪೂರ್ಣವಾಗಿ ಕಲ್ಲಿನಿಂದ ಕಟ್ಟಲಾಗಿರುವ ಈ ದೇಗುಲ 3 ವರ್ಷದಲ್ಲಿ ಪೂರ್ಣಗೊಂಡಿದೆ.

ಮೋದಿ, ನಹ್ಯಾನ್​ ಮಾತುಕತೆ: ಇದರ ಬಳಿಕ ಪ್ರಧಾನಿ ನರೇಂದ್ರ ಮೋದಿ, ದೊರೆ ನಹ್ಯಾನ್​ ಅವರು ನಡುವೆ ದ್ವಿಪಕ್ಷೀಯ ಮಾತುಕತೆ ನಡೆಯಲಿದೆ. ಉಭಯ ರಾಷ್ಟ್ರಗಳ ಹಿತಾಸಕ್ತಿ ಮತ್ತು ಅಂತಾರಾಷ್ಟ್ರೀಯ ವಿಚಾರಗಳ ಬಗ್ಗೆ ಮಾತುಕತೆ ನಡೆಯಲಿದೆ. ಇದರೊಂದಿಗೆ ಯುಎಇ ಉಪಾಧ್ಯಕ್ಷ, ಪ್ರಧಾನ ಮಂತ್ರಿ ಮತ್ತು ರಕ್ಷಣಾ ಸಚಿವರನ್ನೂ ಭೇಟಿಯಾಗಲಿದ್ದಾರೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.

ಮುಸ್ಲಿಂ ದೊರೆಯ ಆಹ್ವಾನದ ಮೇರೆಗೆ, ಪ್ರಧಾನಮಂತ್ರಿಗಳು ದುಬೈನಲ್ಲಿ ನಡೆಯಲಿರುವ ವಿಶ್ವ ಸರ್ಕಾರದ -ಶೃಂಗಸಭೆ 2024 ರಲ್ಲಿ ಗೌರವ ಅತಿಥಿಯಾಗಿ ಭಾಗವಹಿಸಲಿದ್ದಾರೆ. ವಿಶೇಷ ಭಾಷಣವನ್ನೂ ಮಾಡಲಿದ್ದಾರೆ ಎಂದು ಹೇಳಿಕೆ ತಿಳಿಸಿದೆ.

ಇದನ್ನೂ ಓದಿ: ಅಯೋಧ್ಯೆಯ ರಾಮಮಂದಿರಕ್ಕೆ 2ನೇ ಬಾರಿ ಭೇಟಿ ನೀಡಿದ ಅಮಿತಾಭ್​​​ ಬಚ್ಚನ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.