ETV Bharat / international

ಪಾಕಿಸ್ತಾನದಿಂದ ಇರಾನ್​ಗೆ ಶಾಹೀನ್​-3 ಕ್ಷಿಪಣಿ ಪೂರೈಕೆ ಸಾಧ್ಯತೆ - Pakistan Supports Iran - PAKISTAN SUPPORTS IRAN

ಪಾಕಿಸ್ತಾನವು ಇರಾನ್​ಗೆ ಕ್ಷಿಪಣಿಗಳನ್ನು ಪೂರೈಸುವ ಸಾಧ್ಯತೆಯಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ.

ಕ್ಷಿಪಣಿ (ಸಂಗ್ರಹ ಚಿತ್ರ)
ಕ್ಷಿಪಣಿ (ಸಂಗ್ರಹ ಚಿತ್ರ) (IANS)
author img

By ETV Bharat Karnataka Team

Published : Aug 8, 2024, 3:45 PM IST

ಜೆರುಸಲೇಂ: ಇರಾನ್​ ಮತ್ತು ಇಸ್ರೇಲ್ ಮಧ್ಯದ ಉದ್ವಿಗ್ನತೆಯು ಪೂರ್ಣ ಪ್ರಮಾಣದ ಯುದ್ಧದ ಸ್ವರೂಪ ಪಡೆದಲ್ಲಿ, ಪಾಕಿಸ್ತಾನವು ಇರಾನ್​ಗೆ ತನ್ನ ಶಾಹೀನ್-3 ಮಧ್ಯಮ ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಪೂರೈಸಲು ಯೋಜಿಸಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ. ಇದು ಟೆಲ್​ ಅವೀವ್ ಹಾಗೂ ದೂರದ ವಾಶಿಂಗ್ಟನ್​ನಲ್ಲಿಯೂ ಆತಂಕದ ಅಲೆಗಳನ್ನು ಎಬ್ಬಿಸಿದೆ.

ಇಸ್ಲಾಮಿಕ್ ಸಹಕಾರ ಸಂಘಟನೆಯ (ಒಐಸಿ) ಇತ್ತೀಚಿನ ಸಭೆಯಲ್ಲಿ ಪಾಲ್ಗೊಂಡಿದ್ದ ಪಾಕಿಸ್ತಾನ, ಇರಾನ್​ಗೆ ಮಧ್ಯಮ ಶ್ರೇಣಿಯ ಕ್ಷಿಪಣಿಗಳನ್ನು ಪೂರೈಸುವ ಇಚ್ಛೆಯನ್ನು ವ್ಯಕ್ತಪಡಿಸಿದೆ ಎಂದು ಹಲವಾರು ಅರಬ್ ಮೂಲಗಳನ್ನು ಉಲ್ಲೇಖಿಸಿ ಇಸ್ರೇಲ್ ದಿನಪತ್ರಿಕೆ ಜೆರುಸಲೇಮ್ ಪೋಸ್ಟ್ ವರದಿ ಮಾಡಿದೆ. ಈ ವರದಿಗಳನ್ನು ಗಮನಿಸುತ್ತಿರುವುದಾಗಿ ಮಂಗಳವಾರ ಅಮೆರಿಕ ಹೇಳಿದೆ.

ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆಹ್ ಅವರ ಹತ್ಯೆಯ ನಂತರ ಇಸ್ರೇಲ್​ ವಿರುದ್ಧ ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಚರ್ಚಿಸಲು ಇರಾನ್ ಒಐಸಿಯ 57 ರಾಷ್ಟ್ರಗಳ ಗುಂಪಿನ ಕಾರ್ಯಕಾರಿ ಸಮಿತಿಯ ವಿಶೇಷ ಸಭೆ ಕರೆದಿತ್ತು. ಈ ಸಭೆಯಲ್ಲಿ ಪಾಕಿಸ್ತಾನದ ಉಪ ಪ್ರಧಾನಿ ಮತ್ತು ವಿದೇಶಾಂಗ ಸಚಿವ ಇಶಾಕ್ ದಾರ್ ಬುಧವಾರ ಭಾಗವಹಿಸಿದ್ದರು.

ದಾರ್ ಇತ್ತೀಚೆಗೆ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರ ಪ್ರಮಾಣ ವಚನ ಸಮಾರಂಭದಲ್ಲಿ ಕೂಡ ಭಾಗವಹಿಸಿದ್ದರು ಮತ್ತು ಇರಾನ್​ನ ಹಂಗಾಮಿ ವಿದೇಶಾಂಗ ಸಚಿವ ಅಲಿ ಬಗೆಹ್ರಿ ಕಾನಿ ಅವರೊಂದಿಗೆ ನಿಕಟವಾಗಿ ಸಂಪರ್ಕದಲ್ಲಿದ್ದಾರೆ.

ಯುಎಸ್ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಕೊಲ್ಲಲು ಸಂಚು ರೂಪಿಸಿದ್ದಕ್ಕಾಗಿ ಇರಾನ್​ನೊಂದಿಗೆ ಸಂಬಂಧ ಹೊಂದಿರುವ ಪಾಕಿಸ್ತಾನಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಅಮೆರಿಕ ಈಗಾಗಲೇ ಹೇಳಿದೆ. ಏತನ್ಮಧ್ಯೆ ಇರಾನ್​ಗೆ ಶಾಹೀನ್ -3 ಕ್ಷಿಪಣಿಗಳನ್ನು ಪೂರೈಸಲು ಇಸ್ಲಾಮಾಬಾದ್ ಯೋಜಿಸುತ್ತಿದೆ ಎಂಬ ವರದಿಗಳು ಯುನೈಟೆಡ್ ಸ್ಟೇಟ್ಸ್ ಅನ್ನು ಮತ್ತಷ್ಟು ಕೆರಳಿಸಬಹುದು.

ಟೆಹ್ರಾನ್​​ನೊಂದಿಗೆ ನಿಕಟ ಸಂಬಂಧ ಹೊಂದಿದ್ದಾನೆಂದು ನಂಬಲಾದ ಕರಾಚಿಯ 46 ವರ್ಷದ ಪಾಕಿಸ್ತಾನಿ ಪ್ರಜೆ ಆಸಿಫ್ ರಾಜಾ ಮರ್ಚೆಂಟ್ ಎಂಬಾತ ಅಮೆರಿಕದ ಮಾಜಿ ಅಧ್ಯಕ್ಷರ ಕೊಲೆ ಸಂಚಿನಲ್ಲಿ ಭಾಗಿಯಾಗಿರುವುದು ಇಸ್ಲಾಮಾಬಾದ್​ ಅನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಇರಾನ್​ನೊಂದಿಗೆ ವ್ಯಾಪಾರ ಸಂಬಂಧ ಹೊಂದುವ ಯಾವುದೇ ದೇಶದ ವಿರುದ್ಧ ಕಠಿಣ ನಿರ್ಬಂಧಗಳನ್ನು ವಿಧಿಸುವುದಾಗಿ ವಾಶಿಂಗ್ಟನ್ ಈ ವರ್ಷದ ಆರಂಭದಲ್ಲಿ ಎಚ್ಚರಿಕೆ ನೀಡಿತ್ತು.

ಶಾಹೀನ್ 3 ಕ್ಷಿಪಣಿ ಕುರಿತು..: ಇದು ಎರಡು ಹಂತಗಳ, ಘನ-ಇಂಧನ ಮಧ್ಯಮ-ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಯಾಗಿದ್ದು, ಪಾಕಿಸ್ತಾನ ಅಭಿವೃದ್ಧಿಪಡಿಸುತ್ತಿದೆ. 2,750 ಕಿ.ಮೀ ವ್ಯಾಪ್ತಿಯವರೆಗೆ ಪರಮಾಣು ಮತ್ತು ಸಾಂಪ್ರದಾಯಿಕ ಪೇಲೋಡ್​ಗಳನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ. ಪಾಕ್‌ ಬತ್ತಳಿಕೆಯಲ್ಲಿರುವ ಅತಿ ದೂರಗಾಮಿ ಶ್ರೇಣಿಯ ಕ್ಷಿಪಣಿ ಇದಾಗಿದೆ.

ಇದನ್ನೂ ಓದಿ: ಹಮಾಸ್​ ನೂತನ ಮುಖ್ಯಸ್ಥ ಸಿನ್ವರ್​ ಗಾಜಾದಲ್ಲಿ ಅಡಗಿರುವ ಶಂಕೆ: ಇಸ್ರೇಲ್​ನಿಂದ ತೀವ್ರ ಹುಡುಕಾಟ - Israel Hamas War

ETV Bharat Logo

Copyright © 2025 Ushodaya Enterprises Pvt. Ltd., All Rights Reserved.