ETV Bharat / international

ಪಾಕಿಸ್ತಾನ: ಸಮ್ಮಿಶ್ರ ಸರ್ಕಾರ ರಚಿಸುವ ನವಾಜ್ ಷರೀಫ್‌ ಕರೆಗೆ ಸೇನೆ ಬೆಂಬಲ - ಪಾಕಿಸ್ತಾನ ಚುನಾವಣೆ

ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ದೊರೆತಿಲ್ಲ. ಈ ಹಿನ್ನೆಲೆಯಲ್ಲಿ ಸೇನಾಪಡೆಗಳ ಮುಖ್ಯಸ್ಥ ಜನರಲ್ ಅಸೀಮ್ ಮುನೀರ್, ಸಮ್ಮಿಶ್ರ ಸರ್ಕಾರ ರಚಿಸುವ ಮಾಜಿ ಪ್ರಧಾನಿ ನವಾಜ್ ಷರೀಫ್ ಕರೆಯನ್ನು ಬೆಂಬಲಿಸಿದ್ದಾರೆ.

ಸಮ್ಮಿಶ್ರ ಸರ್ಕಾರ  ಪಾಕಿಸ್ತಾನ  Pakistan  coalition government  ನವಾಜ್ ಷರೀಫ್ ಸಮ್ಮಿಶ್ರ ಸರ್ಕಾರ  ಪಾಕಿಸ್ತಾನ  Pakistan  coalition government  ನವಾಜ್ ಷರೀಫ್
ಸಮ್ಮಿಶ್ರ ಸರ್ಕಾರ ರಚನೆಗೆ ನವಾಜ್ ಷರೀಫ್​ಗಾಗಿ ಬೆಂಬಲಿಸಿ ಅಖಾಡಕ್ಕೆ ಇಳಿದ ಪಾಕ್ ಸೇನೆ
author img

By PTI

Published : Feb 11, 2024, 9:52 AM IST

ಇಸ್ಲಾಮಾಬಾದ್/ಲಾಹೋರ್: ಸಮ್ಮಿಶ್ರ ಸರ್ಕಾರ ರಚನೆಗೆ ಮಾಜಿ ಪ್ರಧಾನಿ ನವಾಜ್ ಷರೀಫ್ ನೀಡಿರುವ ಕರೆಯನ್ನು ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಬೆಂಬಲಿಸಿದ್ದಾರೆ. ಈ ಮೂಲಕ ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ನಾಯಕನ ಪರವಾಗಿ ಸೇನೆ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ.

ಪಾಕಿಸ್ತಾನವನ್ನು ಪ್ರಸ್ತುತ ಸಂಕಷ್ಟಗಳಿಂದ ಹೊರತರಲು ಕೈಜೋಡಿಸುವಂತೆ ಷರೀಫ್ ತಮ್ಮ ಪ್ರತಿಸ್ಪರ್ಧಿ ರಾಜಕೀಯ ಪಕ್ಷಗಳಿಗೆ ಶುಕ್ರವಾರ ಮನವಿ ಮಾಡಿದ್ದರು. ಇದರಿಂದ ಸಮ್ಮಿಶ್ರ ಸರ್ಕಾರ ರಚನೆಯ ನಿಟ್ಟಿನಲ್ಲಿ ಪ್ರಯತ್ನಗಳಿಗೆ ವೇಗ ಸಿಕ್ಕಿದೆ. ಗುರುವಾರ ನಡೆದ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ ಬೆಂಬಲಿತ ಸ್ವತಂತ್ರ ಅಭ್ಯರ್ಥಿಗಳು 100 ಸ್ಥಾನಗಳನ್ನು ಗೆದ್ದುಕೊಂಡಿದ್ದಾರೆ.

''ಚುನಾವಣೆ ಮತ್ತು ಪ್ರಜಾಪ್ರಭುತ್ವ ಪಾಕಿಸ್ತಾನದ ಜನರಿಗೆ ಸೇವೆ ಸಲ್ಲಿಸುವ ಸಾಧನಗಳು. 25 ಕೋಟಿ ಜನರಿರುವ ಪ್ರಗತಿಪರ ದೇಶವನ್ನು ಅರಾಜಕತೆ ಮತ್ತು ಧ್ರುವೀಕರಣದ ರಾಜಕೀಯದಿಂದ ಹೊರ ತರಬೇಕು. ನೂತನ ಸರ್ಕಾರವನ್ನು ಮುನ್ನಡೆಸಲು ಸ್ಥಿರವಾದ ಕೈಗಳಿಗೆ ಹಸ್ತಾಂತರಿಸುವ ಅಗತ್ಯವಿದೆ" ಎಂದು ಅಸಿಮ್ ಮುನೀರ್ ತಿಳಿಸಿದ್ದಾರೆ.

ಸರ್ಕಾರ ರಚನೆಗೆ ಮ್ಯಾಜಿಕ್​ ಸಂಖ್ಯೆ 133: ಪಾಕಿಸ್ತಾನ ಚುನಾವಣಾ ಆಯೋಗವು 265 ಸ್ಥಾನಗಳ ಪೈಕಿ 255 ಸ್ಥಾನಗಳಿಗೆ ಘೋಷಿಸಿದ ಫಲಿತಾಂಶಗಳ ಪ್ರಕಾರ, ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಬೆಂಬಲಿತ ಸ್ವತಂತ್ರರು 100, ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) 73, ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) 53, ಮತ್ತು ಇತರ ಪಕ್ಷಗಳು ಉಳಿದ ಸ್ಥಾನಗಳನ್ನು ಗೆದ್ದುಕೊಂಡಿವೆ. ಸರ್ಕಾರ ರಚನೆಗೆ ಅಗತ್ಯವಿರುವ 133 ಸ್ಥಾನಗಳನ್ನು ಯಾವುದೇ ಪಕ್ಷವೂ ಪಡೆದಿಲ್ಲ. ಅಭ್ಯರ್ಥಿಯ ಮರಣದ ನಂತರ ಒಂದು ಸ್ಥಾನಕ್ಕೆ ಚುನಾವಣೆ ಮುಂದೂಡಲಾಗಿದೆ.

ಇಮ್ರಾನ್ ಖಾನ್ ಬೆಂಬಲಿತ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ರಾಷ್ಟ್ರೀಯ ಅಸೆಂಬ್ಲಿಯಲ್ಲಿ ತಾವು ಪೂರ್ಣ ಬಹುಮತವನ್ನು ಪಡೆದುಕೊಂಡಿದ್ದೇವೆ ಎಂದು ಹೇಳಿಕೊಂಡಿದೆ. ಹೆಚ್ಚಿನ ಸ್ಥಾನಗಳನ್ನು ಗೆದ್ದಿರುವುದರಿಂದ ರಾಷ್ಟ್ರಪತಿ ತಮ್ಮನ್ನು ಸರ್ಕಾರ ರಚಿಸಲು ಆಹ್ವಾನಿಸುತ್ತಾರೆ. ದೇಶದ ಭವಿಷ್ಯದ ಪ್ರಧಾನಿಯನ್ನು ಇಮ್ರಾನ್ ಖಾನ್ ನಿರ್ಧರಿಸುತ್ತಾರೆ ಎಂದು ಪಿಟಿಐ ಹೇಳಿದೆ.

ಇದನ್ನೂ ಓದಿ: ಪಾಕಿಸ್ತಾನ ಚುನಾವಣೆ ವೇಳೆ ಇಮ್ರಾನ್‌ಗೆ ಬಿಗ್ ರಿಲೀಫ್: 12 ಪ್ರಕರಣಗಳಲ್ಲಿ ಜಾಮೀನು ಮಂಜೂರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.