ETV Bharat / international

ಇದು ವಿಶ್ವದ ಅತಿದೊಡ್ಡ ಚಿನ್ನದ ಬಾರ್; ತೂಕ 300 ಕೆ.ಜಿ! ಎಲ್ಲಿದೆ ಗೊತ್ತಾ? - WORLDS LARGEST GOLD BAR

ಚಿನ್ನದ ಕಾರ್ಖಾನೆಯ ಸಿಬ್ಬಂದಿ ಸುಮಾರು 8ರಿಂದ 10 ಗಂಟೆಗಳಷ್ಟು ಸಮಯ ತೆಗೆದುಕೊಂಡು 300 ಕೆ.ಜಿ ತೂಕದ ವಿಶ್ವದ ಅತಿದೊಡ್ಡ ಚಿನ್ನದ ಬಾರ್​ ತಯಾರಿಸಿದ್ದಾರೆ.

World's Largest Gold Bar
ವಿಶ್ವದ ಅತಿದೊಡ್ಡ ಚಿನ್ನದ ಬಾರ್​ (AEP)
author img

By ETV Bharat Karnataka Team

Published : Dec 8, 2024, 4:28 PM IST

ದುಬೈ: ಸುಮಾರು 25 ಮಿಲಿಯನ್ ಡಾಲರ್ (211 ಕೋಟಿ ರೂ.) ಮೌಲ್ಯದ 300.12 ಕೆ.ಜಿ ತೂಕದ ವಿಶ್ವದ ಅತಿದೊಡ್ಡ ಶುದ್ಧ ಚಿನ್ನದ ಬಾರ್ ಅನ್ನು ಶನಿವಾರ ದುಬೈನಲ್ಲಿ ಅನಾವರಣಗೊಳಿಸಲಾಯಿತು.

ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್‌ಗೆ ಸೇರಿರುವ ಚಿನ್ನದ ಬಾರ್ ಅನ್ನು ಈ ವಾರಾಂತ್ಯದಲ್ಲಿ ದುಬೈ ಗೋಲ್ಡ್ ಸೌಕ್ ಎಕ್ಸ್‌ಟೆನ್ಶನ್‌ನಲ್ಲಿ ಪ್ರದರ್ಶನಕ್ಕಿಡಲಾಗಿದೆ. ಎಮಿರೇಟ್ಸ್ ಮಿಂಟಿಂಗ್ ಫ್ಯಾಕ್ಟರಿ ಅಂಗಡಿಯ ಹೊರಗೆ ಗಾಜಿನ ಪೆಟ್ಟಿಗೆಯಲ್ಲಿ ವೀಕ್ಷಕರು ಚಿನ್ನದ ಬಾರ್​ ನೋಡಬಹುದು. ಈ ಹಿಂದೆ ದಾಖಲೆ ನಿರ್ಮಿಸಿದ್ದ 250 ಕೆ.ಜಿ ಚಿನ್ನದ ಬಾರ್ ಅನ್ನು ಜಪಾನ್‌ನಲ್ಲಿ ಪ್ರದರ್ಶನಕ್ಕಿಡಲಾಗಿತ್ತು.

ಚಿನ್ನದ ಕಾರ್ಖಾನೆಯ ಉಪ ಪ್ರಧಾನ ವ್ಯವಸ್ಥಾಪಕ ಮೊಹಮ್ಮದ್​ ಖಾರ್ಸಾ ಮಾಹಿತಿ ನೀಡಿ, "ಚಿನ್ನದ ಬಾರ್​ ತಯಾರಿಸಲು ಸುಮಾರು 8ರಿಂದ 10 ಗಂಟೆ ಬೇಕಾಯಿತು. ನಿಯಮಗಳ ಪ್ರಕಾರವೇ 300 ಕೆ.ಜಿ ಚಿನ್ನದ ಬಾರ್​ ಮಾಡಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಇದನ್ನು ಗಿನ್ನೆಸ್​ಗೆ ಕಳುಹಿಸಲಾಗಿದೆ. ಇದರ ಮೌಲ್ಯ ಸುಮಾರು 25 ಮಿಲಿಯನ್​ ಡಾಲರ್​ ಅಥವಾ 93 ಮಿಲಿಯನ್​ (ಯುಎಇ) ದಿರ್ಹಾಮ್" ಎಂದು ತಿಳಿಸಿದರು.

ಪ್ರದರ್ಶನದಲ್ಲಿ ಚಿನ್ನದ ಬಾರ್​ ಪಕ್ಕದಲ್ಲೇ ದುಬೈ, ಯುಎಇಯಲ್ಲಿ ಎಮಿರೇಟ್ಸ್ ಮಿಂಟಿಂಗ್ ಫ್ಯಾಕ್ಟರಿ LLC (ಯುಎಇ) 300.12 ಕೆಜಿ (661 ಪೌಂಡ್ 10 ಔನ್ಸ್) ತೂಕದ ಅತಿದೊಡ್ಡ ಚಿನ್ನದ ಬಾರ್​ ತಯಾರಿಸಿ ದಾಖಲೆ ನಿರ್ಮಿಸಿದೆ ಎಂದು ಬರೆದಿರುವ ಗಿನ್ನೆಸ್​ ವರ್ಲ್ಡ್​ ರೆಕಾರ್ಡ್ ಪ್ರಮಾಣಪತ್ರವನ್ನೂ ಇರಿಸಲಾಗಿದೆ.

ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ವೆಬ್‌ಸೈಟ್‌ ಪ್ರಕಾರ, ಎಮಿರೇಟ್ಸ್ ಮಿಂಟಿಂಗ್ ಫ್ಯಾಕ್ಟರಿ LLC ವರ್ಷಗಳ ಹಿಂದೆ "ಯುಎಇಯ ಪರಂಪರೆ ಗೌರವಿಸುವ ಮತ್ತು ಸಿಕ್ಕ ಬೆಂಬಲಕ್ಕಾಗಿ ಕೃತಜ್ಞತೆ ತೋರಿಸುವ ಸಲುವಾಗಿ ಈ ಹಿಂದೆ ಇದ್ದ ದಾಖಲೆ ಮುರಿಯಲು ಯೋಜಿಸಿತ್ತು. ಇದೀಗ ವಿಶ್ವದ ಅತಿದೊಡ್ಡ ಚಿನ್ನದ ಬಾರ್​ ತಯಾರಿಸಿರುವುದು ಶ್ರೇಷ್ಠತೆ ಮತ್ತು ನಾವೀನ್ಯತೆಗೆ ಅವರ ಬದ್ಧತೆಯನ್ನು ಸಂಕೇತಿಸುತ್ತದೆ. ಈ ಸಾಧನೆ ಅವರ ಸಮರ್ಪಣೆ, ನಿಖರವಾದ ಯೋಜನೆ ಮತ್ತು ಶ್ರೇಷ್ಠತೆಯನ್ನು ಪ್ರೇರೇಪಿಸುವ ರಾಷ್ಟ್ರದ ಬೆಂಬಲವನ್ನು ಪ್ರತಿಬಿಂಬಿಸುತ್ತದೆ."

ಶನಿವಾರ ಹಾಗೂ ಭಾನುವಾರ ಎಮಿರೇಟ್ಸ್ ಮಿಂಟಿಂಗ್ ಫ್ಯಾಕ್ಟರಿ ಅಂಗಡಿಯ ಹೊರಗೆ ಗಾಜಿನ ಪೆಟ್ಟಿಗೆಯಲ್ಲಿ ಇರಿಸಲಾಗಿದ್ದ ಚಿನ್ನದ ಬಾರ್​ ಪಕ್ಕ ನಿಂತು ಹಲವರು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದರು.

ಇದನ್ನೂ ಓದಿ: ಶಿಲೆಗಳಲ್ಲಿ ಕಲೆ ಅರಳಿಸುವ ಪ್ರತಿಭೆ: ದಾಖಲೆ ಪುಟ ಸೇರಿದ ಯುವತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.