ETV Bharat / international

ಪ್ರಧಾನಿ ಮೋದಿ ಪ್ರಮಾಣ ವಚನ ಸಮಾರಂಭಕ್ಕೆ ಸಕಲ ಸಿದ್ಧತೆ: ಆಹ್ವಾನ ಸ್ವೀಕರಿಸಿದ ನೇಪಾಳ ಪ್ರಧಾನಿ, ಶ್ರೀಲಂಕಾ ಅಧ್ಯಕ್ಷರು - Sri Lankan president to arrive on June 9 - SRI LANKAN PRESIDENT TO ARRIVE ON JUNE 9

ನಾಳಿನ ಪ್ರಮಾಣವಚನ ಸಮಾರಂಭದಲ್ಲಿ ಪಾಲ್ಗೊಳ್ಳುವುದಾಗಿ ಶ್ರೀಲಂಕಾ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ, ನೇಪಾಳ ಪ್ರಧಾನಿ ಪ್ರಚಂಡ ಹೇಳಿದ್ದಾರೆ. ಬಾಂಗ್ಲಾ ಪ್ರಧಾನಿ ಇಂದೇ ನವದೆಹಲಿಗೆ ಆಗಮಿಸಲಿದ್ದಾರೆ. ಮತ್ತೊಂದು ಕಡೆ ದೆಹಲಿಯಲ್ಲಿ ಭಾರಿ ಬಿಗಿ ಭಧ್ರತೆ ಕೈಗೊಳ್ಳಲಾಗಿದೆ.

Nepal PM, Sri Lankan president to arrive on June 9 for PM Modi's swearing-in ceremony
ಪ್ರಧಾನಿ ಮೋದಿ ಪ್ರಮಾಣ ವಚನ ಸಮಾರಂಭಕ್ಕೆ ಸಕಲ ಸಿದ್ಧತೆ: ಆಹ್ವಾನ ಸ್ವೀಕರಿಸಿದ ನೇಪಾಳ ಪ್ರಧಾನಿ, ಶ್ರೀಲಂಕಾ ಅಧ್ಯಕ್ಷರು (ANI)
author img

By ETV Bharat Karnataka Team

Published : Jun 8, 2024, 7:38 AM IST

ಕಠ್ಮಂಡು, ನೇಪಾಳ: ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಾಲ್ ಮತ್ತು ಶ್ರೀಲಂಕಾ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಲು ಜೂನ್ 9 ರಂದು ನವದೆಹಲಿಗೆ ಆಗಮಿಸಲಿದ್ದಾರೆ.

ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಹಲ್ ಅವರು ಬುಧವಾರ ಸಂಜೆ ಪ್ರಧಾನಿ ಮೋದಿ ಅವರೊಂದಿಗೆ ದೂರವಾಣಿ ಸಂಭಾಷಣೆ ನಂತರ ತಮ್ಮ ಭೇಟಿಯನ್ನು ದೃಢಪಡಿಸಿದ್ದಾರೆ. ಶೀಘ್ರದಲ್ಲೇ ಔಪಚಾರಿಕ ಘೋಷಣೆಯನ್ನೂ ನಿರೀಕ್ಷಿಸಲಾಗಿದೆ.

"ಬುಧವಾರ ಸಂಜೆ ಇಬ್ಬರು ನಾಯಕರ ನಡುವೆ ದೂರವಾಣಿ ಸಂಭಾಷಣೆ ನಡೆದಿದೆ. ಈ ವೇಳೆ, ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಳ್ಳಲು ನೇಪಾಳಿ ಪ್ರಧಾನಿಗೆ ಆಹ್ವಾನ ನೀಡಲಾಯಿತು. ನೇಪಾಳಿ ಪ್ರಧಾನಿ ಕೂಡಾ ಇದಕ್ಕೆ ಸಮ್ಮತಿ ಸೂಚಿಸಿದ್ದಾರೆ. ಶೀಘ್ರದಲ್ಲೇ ಔಪಚಾರಿಕ ಪ್ರಕಟಣೆ ಮಾಡಲಾಗುವುದು" ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಸುದ್ದಿಸಂಸ್ಥೆ ತಿಳಿಸಿದೆ.

ಇತ್ತೀಚಿನ ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ ಎನ್‌ಡಿಎ ಸರಳ ಬಹುಮತ ಗಳಿಸುವ ಮೂಲಕ ಮೂರನೇ ಬಾರಿಗೆ ಅಧಿಕಾರದ ಗದ್ದುಗೆ ಏರಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ಪ್ರಧಾನಿ ಮೋದಿಯವರಿಗೆ ಪಿಎಂ ದಹಲ್ ಅಭಿನಂದನೆಗಳನ್ನು ಸಲ್ಲಿಸಿದ್ದರು.

ನೇಪಾಳ ಪ್ರಧಾನಿ ಪ್ರಚಂಡ ಅಷ್ಟೇ ಅಲ್ಲ ಇನ್ನೊಂದು ನೆರೆಯ ರಾಷ್ಟ್ರ ಶ್ರೀಲಂಕಾ ಸಹ ಮೂರನೇ ಅವಧಿಗೆ ಪ್ರಧಾನಿ ಆಗುತ್ತಿರುವ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಕೆ ಮಾಡಿದೆ. ಲಂಕಾ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಅವರು ಪ್ರಮಾಣವಚನ ಸಮಾರಂಭದಲ್ಲಿ ಪಾಲ್ಗೊಳ್ಳುವ ಆಹ್ವಾನ ಸ್ವೀಕರಿಸಿದ್ದಾರೆ.

ಪಿಎಂ ಮೋದಿ ಅವರು ಪ್ರಮಾಣವಚನ ಸಮಾರಂಭಕ್ಕೆ ಅಧ್ಯಕ್ಷ ವಿಕ್ರಮಸಿಂಘೆ ಅವರನ್ನು ಆಹ್ವಾನಿಸಿದ್ದರು. ಪ್ರಧಾನಿ ಅವರ ಈ ಆಹ್ವಾನವನ್ನು ಶ್ರೀಲಂಕಾ ಅಧ್ಯಕ್ಷರು ಸ್ವೀಕರಿಸಿದರು. ಏತನ್ಮಧ್ಯೆ, ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ಪ್ರಧಾನಿ ಮೋದಿಯವರ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಲು ಇಂದು ಢಾಕಾದಿಂದ ಹೊರಡಲಿದ್ದಾರೆ.

“ಪ್ರಧಾನಿ ಶೇಖ್ ಹಸೀನಾ ಅವರು ಜೂನ್ 8 ರ ಶನಿವಾರ ಬೆಳಗ್ಗೆ 11 ಗಂಟೆಗೆ ಢಾಕಾದಿಂದ ದೆಹಲಿಗೆ ತೆರಳಲಿದ್ದಾರೆ ಮತ್ತು ಪ್ರಮಾಣವಚನ ಸಮಾರಂಭದ ದಿನಾಂಕಗಳಲ್ಲಿ ಬದಲಾವಣೆಯಿಂದಾಗಿ ಪ್ರಧಾನಿ ನರೇಂದ್ರ ಮೋದಿಯವರ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಿದ ನಂತರ ಜೂನ್ 10 ರಂದು ಮಧ್ಯಾಹ್ನ ವಾಪಸ್​ ಢಾಕಾಗೆ ಮರಳಲಿದ್ದಾರೆ." ಎಂದು ಬಾಂಗ್ಲಾದೇಶದ ಪ್ರಧಾನಮಂತ್ರಿ ಭಾಷಣ ಬರಹಗಾರ ಎಂ ನಜ್ರುಲ್ ಇಸ್ಲಾಂ ಹೇಳಿದ್ದಾರೆ.

18ನೇ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 293 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ನರೇಂದ್ರ ಮೋದಿ ಮೂರನೇ ಬಾರಿಗೆ ದೇಶದ ಪ್ರಧಾನಿಯಾಗಿ ಪ್ರಮಾಣ ಸ್ವೀಕರಿಸಲಿದ್ದಾರೆ. ಈ ಬಾರಿ ಪ್ರತಿಪಕ್ಷ ಇಂಡಿಯಾ ಒಕ್ಕೂಟ 234 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ತೀವ್ರ ಪೈಪೋಟಿ ನೀಡಿದೆ. ಈ ಮೊದಲು ಅಂದುಕೊಂಡಂತೆ ಜೂನ್ 8ರಂದು ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಬೇಕಿತ್ತು.

ದೆಹಲಿಯಲ್ಲಿ ಭಾರಿ ಬಿಗಿ ಭದ್ರತೆ: ಪ್ರಮಾಣವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಭಾರಿ ಪೊಲೀಸ್ ಬಂದೋಬಸ್ತ್​ ಕೈಗೊಂಡಿದ್ದಾರೆ. ದೆಹಲಿ ಪೊಲೀಸ್ ಕಮಿಷನರ್ ಸಂಜಯ್ ಅರೋರಾ, ಪ್ಯಾರಾ-ಗ್ಲೈಡರ್‌ಗಳು, ಪ್ಯಾರಾ-ಮೋಟರ್‌ಗಳು, ಹ್ಯಾಂಗ್-ಗ್ಲೈಡರ್‌ಗಳಂತಹ ಉಪ-ಸಾಂಪ್ರದಾಯಿಕ ವೈಮಾನಿಕ ವೇದಿಕೆಗಳ ಬಳಕೆಯನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ಜೂನ್ 9 ಮತ್ತು ಜೂನ್ 10 ರಂದು UAV ಗಳು, ಮೈಕ್ರೋಲೈಟ್ ವಿಮಾನಗಳು, ರಿಮೋಟ್ ಪೈಲಟ್ ವಿಮಾನಗಳು, ಹಾಟ್ ಏರ್ ಬಲೂನ್‌ಗಳು, ಸಣ್ಣ ಗಾತ್ರದ ಚಾಲಿತ ವಿಮಾನಗಳು, ಕ್ವಾಡ್‌ಕಾಪ್ಟರ್‌ಗಳ ಹಾರಾಟವನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ.

ಇದನ್ನು ಓದಿ: ರಾಷ್ಟ್ರಪತಿ ಭೇಟಿಯಾಗಿ ಹೊಸ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಮೋದಿ - PM Modi Meets President Murmu

ಇಂದು ಕಾಂಗ್ರೆಸ್ ಸಂಸದೀಯ ಪಕ್ಷದ ಸಭೆ: ರಾಹುಲ್ ಗಾಂಧಿ ವಿರೋಧ ಪಕ್ಷದ ನಾಯಕರಾಗಿ ಆಯ್ಕೆ ಆಗುವ ಸಾಧ್ಯತೆ! - Rahul Gandhi

ETV Bharat Logo

Copyright © 2024 Ushodaya Enterprises Pvt. Ltd., All Rights Reserved.