ETV Bharat / international

ರಫಾ ಮೇಲೆ ದಾಳಿ ಆರಂಭಿಸಿದ ಇಸ್ರೇಲ್: ನೂರಕ್ಕೂ ಹೆಚ್ಚು ಪ್ಯಾಲೆಸ್ಟೀನಿಯರ ಸಾವು - ರಫಾ

ಹಮಾಸ್​ ಅನ್ನು ಸಂಪೂರ್ಣವಾಗಿ ನಿರ್ನಾಮ ಮಾಡಲು ಪಣ ತೊಟ್ಟಿರುವ ಇಸ್ರೇಲ್ ಈಗ ಈಜಿಪ್ಟ್​ಗೆ ಹೊಂದಿಕೊಂಡಿರುವ ರಫಾ ಪ್ರದೇಶದ ಮೇಲೆ ವಾಯುದಾಳಿ ಆರಂಭಿಸಿದೆ.

Israel's heavy strikes on Gaza's Rafah: Death toll exceeds 100

author img

By ETV Bharat Karnataka Team

Published : Feb 12, 2024, 1:42 PM IST

ಗಾಜಾ: ಗಾಜಾ ಪಟ್ಟಿಯ ದಕ್ಷಿಣ ನಗರ ರಫಾ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮೇಲೆ ಇಸ್ರೇಲ್ ಸೇನೆ ಸೋಮವಾರ ನಡೆಸಿದ ಭಾರಿ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 100ಕ್ಕೇರಿದೆ ಎಂದು ಪ್ಯಾಲೆಸ್ಟೈನ್ ಸುದ್ದಿ ಸಂಸ್ಥೆ ವಾಫಾ ತಿಳಿಸಿದೆ. ಸೋಮವಾರ ಮುಂಜಾನೆ ರಫಾ ಪ್ರದೇಶದ ಮೇಲೆ ಇಸ್ರೇಲ್ ಸೇನೆ ಸುಮಾರು 40 ವೈಮಾನಿಕ ದಾಳಿಗಳನ್ನು ನಡೆಸಿದೆ ಎಂದು ಅದು ಹೇಳಿದೆ.

ದಕ್ಷಿಣ ಗಾಜಾದಲ್ಲಿನ ಭಯೋತ್ಪಾದಕ ನೆಲೆಗಳ ಮೇಲೆ ಸೋಮವಾರ ಸರಣಿ ದಾಳಿಗಳನ್ನು ನಡೆಸಿದ್ದೇವೆ ಎಂದು ಇಸ್ರೇಲ್ ಸೇನೆ ಹೇಳಿಕೆಯಲ್ಲಿ ತಿಳಿಸಿದೆ. ಆದರೆ, ಸೇನೆ ಇತರ ವಿವರಗಳನ್ನು ನೀಡಿಲ್ಲ.

ಇಬ್ಬರು ಒತ್ತೆಯಾಳುಗಳನ್ನು ರಕ್ಷಿಸಿಕೊಂಡ ಇಸ್ರೇಲ್: ಅಕ್ಟೋಬರ್ 7 ರಂದು ಹಮಾಸ್ ಅಪಹರಿಸಿದ್ದ ಇಬ್ಬರು ಒತ್ತೆಯಾಳುಗಳನ್ನು ಇಸ್ರೇಲ್ ಮಿಲಿಟರಿ ಸೋಮವಾರ ಗಾಜಾದ ದಕ್ಷಿಣ ರಫಾ ಪ್ರದೇಶದಿಂದ ರಕ್ಷಿಸಿದೆ. ಇಸ್ರೇಲ್ ಸೇನೆಯ ಪ್ರಕಾರ, ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್), ಇಸ್ರೇಲ್​ನ ದೇಶೀಯ ಶಿನ್ ಬೆಟ್ ಭದ್ರತಾ ಪಡೆ ಮತ್ತು ರಫಾದಲ್ಲಿನ ವಿಶೇಷ ಪೊಲೀಸ್ ಘಟಕ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಫರ್ನಾಂಡೊ ಸೈಮನ್ ಮರ್ಮನ್ (60) ಮತ್ತು ಲೂಯಿಸ್ ಹಾರ್ (70) ಎಂಬ ಇಬ್ಬರು ವ್ಯಕ್ತಿಗಳನ್ನು ವಸತಿ ಕಟ್ಟಡವೊಂದರಿಂದ ರಕ್ಷಣೆ ಮಾಡಲಾಗಿದೆ.

ರಕ್ಷಿಸಲಾದ ಒತ್ತೆಯಾಳುಗಳ ಆರೋಗ್ಯ ಉತ್ತಮವಾಗಿದೆ ಮತ್ತು ಹೆಚ್ಚಿನ ವೈದ್ಯಕೀಯ ಪರೀಕ್ಷೆಗಾಗಿ ಅವರನ್ನು ಇಸ್ರೇಲ್​ಗೆ ಕಳುಹಿಸಲಾಗಿದೆ ಎಂದು ಮಿಲಿಟರಿ ತಿಳಿಸಿದೆ.

ಈಜಿಪ್ಟ್​ ವಾರ್ನಿಂಗ್: ರಫಾ ಮೇಲೆ ಇಸ್ರೇಲ್ ನೆಲದ ಮೂಲಕ ದಾಳಿ ನಡೆಸಲು ಸಿದ್ಧವಾಗುತ್ತಿರುವ ಮಧ್ಯೆ ಈಜಿಪ್ಟ್​ ಇಸ್ರೇಲ್​ಗೆ ಎಚ್ಚರಿಕೆ ನೀಡಿದೆ. ರಫಾ ಮೇಲೆ ದಾಳಿ ಆರಂಭಿಸಿದರೆ ಇಸ್ರೇಲ್​ನೊಂದಿಗಿನ 50 ವರ್ಷ ಹಳೆಯ ಶಾಂತಿ ಸಂಧಾನವನ್ನು ಸ್ಥಗಿತಗೊಳಿಸುವುದಾಗಿ ಈಜಿಪ್ಟ್ ಬೆದರಿಕೆ ಹಾಕಿದೆ. ಗಾಜಾದ 2.3 ಮಿಲಿಯನ್ ನಿವಾಸಿಗಳ ಪೈಕಿ ಅರ್ಧಕ್ಕಿಂತ ಹೆಚ್ಚು ಜನ ಈಗ ರಫಾದಲ್ಲಿ ಆಶ್ರಯ ಪಡೆದಿದ್ದಾರೆ. ರಫಾ ಗಡಿಯ ಬಳಿ ವಿಶ್ವಸಂಸ್ಥೆ ನಿರ್ವಹಿಸುವ ಟೆಂಟ್ ಶಿಬಿರಗಳು ಮತ್ತು ಆಶ್ರಯ ತಾಣಗಳಲ್ಲಿ ಪ್ಯಾಲೆಸ್ಟೈನ್ ನಿರಾಶ್ರಿತರು ಕಿಕ್ಕಿರಿದು ತುಂಬಿದ್ದಾರೆ.

ಗಾಜಾ ಪಟ್ಟಿಯಲ್ಲಿ 2023 ರ ಅಕ್ಟೋಬರ್ 7 ರಿಂದ ಇಸ್ರೇಲ್ ದಾಳಿಯಿಂದ ಸಾವನ್ನಪ್ಪಿದವರ ಸಂಖ್ಯೆ 28,176 ಕ್ಕೆ ಏರಿದೆ ಮತ್ತು 67,784 ಜನ ಗಾಯಗೊಂಡಿದ್ದಾರೆ ಎಂದು ಗಾಜಾ ಮೂಲದ ಆರೋಗ್ಯ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ : ಭಾರತೀಯ ನೌಕಾಪಡೆಯ 8 ಮಾಜಿ ಯೋಧರ ಬಿಡುಗಡೆ ಮಾಡಿದ ಕತಾರ್: 7 ಮಂದಿ ಭಾರತಕ್ಕೆ ಆಗಮನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.