ETV Bharat / international

11,000 ನೌಕರರಿಗೆ ಮಾರಕವಾಗಿರುವ ನಿರ್ಧಾರ ಕೈಬಿಡುವಂತೆ ಒತ್ತಾಯಿಸಿ ಬೃಹತ್​ ಪ್ರತಿಭಟನೆ: ಎಲ್ಲಿ ಗೊತ್ತಾ? - Massive protest - MASSIVE PROTEST

ಪಾಕಿಸ್ತಾನದಲ್ಲಿ ಸರ್ಕಾರಿ ಸ್ವಾಮ್ಯದ ದಿನಸಿ ಸರಪಳಿಯಾದ ಯುಟಿಲಿಟಿ ಸ್ಟೋರ್ ಕಾರ್ಪೊರೇಷನ್ ನೌಕರರು ಎರಡು ವಾರಗಳಿಂದ ಬೃಹತ್​ ಪ್ರತಿಭಟನೆ ನಡೆಸುತ್ತಿದ್ದಾರೆ.

ಯುಟಿಲಿಟಿ ಸ್ಟೋರ್ ಕಾರ್ಪೊರೇಷನ್
ಯುಟಿಲಿಟಿ ಸ್ಟೋರ್ ಕಾರ್ಪೊರೇಷನ್ (ETV Bharat)
author img

By ANI

Published : Sep 7, 2024, 9:38 PM IST

ಇಸ್ಲಾಮಾಬಾದ್(ಪಾಕಿಸ್ತಾನ): ಇಲ್ಲಿನ ಸರ್ಕಾರಿ ಸ್ವಾಮ್ಯದ ದಿನಸಿ ಸರಪಳಿಯಾದ ಯುಟಿಲಿಟಿ ಸ್ಟೋರ್ ಕಾರ್ಪೊರೇಷನ್ (ಯುಎಸ್‌ಸಿ) ನೌಕರರು ನಡೆಸುತ್ತಿರುವ ಪ್ರತಿಭಟನೆ ಎರಡನೇ ವಾರಕ್ಕೆ ಕಾಲಿಟ್ಟಿದೆ, ಪ್ರತಿಭಟನಾಕಾರರು ಹಿಂದೆ ಸರಿಯುವ ಯಾವುದೇ ಲಕ್ಷಣಗಳನ್ನು ತೋರಿಸುತ್ತಿಲ್ಲ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಯುಎಸ್​ಸಿಯನ್ನು ಮುಚ್ಚುವ ಸರ್ಕಾರದ ಘೋಷಣೆಯಿಂದಾಗಿ ಈ ಪ್ರತಿಭಟನೆ ಪ್ರಾರಂಭವಾಯಿತು, ಈ ಕ್ರಮವು ಸುಮಾರು 6,000 ಖಾಯಂ ಸಿಬ್ಬಂದಿ ಸೇರಿದಂತೆ 11,000 ಕ್ಕೂ ಹೆಚ್ಚು ಉದ್ಯೋಗಿಗಳ ಜೀವನೋಪಾಯವನ್ನು ಅಪಾಯಕ್ಕೆ ಸಿಲುಕಿಸಲಿದೆ. ಆಲ್ ಪಾಕಿಸ್ತಾನ್ ವರ್ಕರ್ಸ್ ಅಲೈಯನ್ಸ್ ಪ್ರಧಾನ ಕಾರ್ಯದರ್ಶಿ ಆತಿಫ್ ಶಾ ಅವರು ಸರ್ಕಾರದ ನಿರ್ಧಾರವನ್ನು ಟೀಕಿಸಿದ್ದಾರೆ ಮತ್ತು ಸಾವಿರಾರು ಕಾರ್ಮಿಕರ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಈ ಕಾರ್ಮಿಕರಲ್ಲಿ ಹೆಚ್ಚಿನವರು ಕಡಿಮೆ ಆದಾಯದ ಗುಂಪುಗಳಿಗೆ ಸೇರಿದವರಾಗಿದ್ದಾರೆ. ಯುಎಸ್​ಸಿ ಮುಚ್ಚುವುದರಿಂದ ಉದ್ಯೋಗಿಗಳ ಮೇಲೆ ಪರಿಣಾಮ ಬೀರುವುದಲ್ಲದೆ, ಕೈಗೆಟುಕುವ ಅಗತ್ಯ ಸರಕುಗಳಿಗಾಗಿ ಅಂಗಡಿಗಳನ್ನು ಅವಲಂಬಿಸಿರುವ ಸಾಮಾನ್ಯ ಪಾಕಿಸ್ತಾನಿ ಪ್ರಜೆಗಳ ಜೀವನ ಅಸ್ತವ್ಯಸ್ತಗೊಳಿಸುತ್ತದೆ. ಯುಎಸ್​ಸಿ ಆರ್ಥಿಕತೆಯ ಮೇಲೆ ಹೊರೆಯಲ್ಲ. ವಾಸ್ತವವಾಗಿ, ಇದು ವಾರ್ಷಿಕವಾಗಿ ಸುಮಾರು 120 ಮಿಲಿಯನ್ ಪಿಕೆಆರ್ ತೆರಿಗೆಯಾಗಿ ಕೊಡುಗೆ ನೀಡುತ್ತದೆ. ಸರ್ಕಾರವು ತನ್ನ ಈ ನಿರ್ಧಾರವನ್ನು ಮರು ಪರಿಶೀಲಿಸಬೇಕೆಂದು ಆತಿಫ್ ಶಾ ಒತ್ತಾಯಿಸಿದರು.

ಇಸ್ಲಾಮಾಬಾದ್​​​​​ನ ಯುಎಸ್ಸಿ ಪ್ರಧಾನ ಕಚೇರಿಯ ಹೊರಗೆ ಪ್ರತಿಭಟನಾಕಾರ ಅಲಿ ಅಮೀನ್, ಕಾರ್ಮಿಕರು ಐದು ದಿನಗಳಿಂದ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರ ತನ್ನ ನಿರ್ಧಾರವನ್ನು ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸಲು ನೂರಾರು ಜನರು ಇಲ್ಲಿ ಜಮಾಯಿಸಿದ್ದೇವೆ. ಕಾರ್ಮಿಕರು ಮತ್ತು ಸಾರ್ವಜನಿಕರಿಗೆ ಉಂಟಾಗುವ ಪರಿಣಾಮಗಳನ್ನು ಪರಿಗಣಿಸದೇ ಅಧಿಕಾರಿಗಳು ಈ ನಿರ್ಧಾರ ಕೈಗೊಂಡಿದ್ದಾರೆ. ಈ ಭಯಾನಕ ನಿರ್ಧಾರ ತೆಗೆದುಕೊಳ್ಳುವ ಮೊದಲು ಚರ್ಚೆಗಳು ಅಥವಾ ಸಂಶೋಧನೆ ನಡೆಸಲಾಗಿಲ್ಲ ಎಂದು ಅಮೀನ್ ಹೇಳಿದರು.

ಪಾಕಿಸ್ತಾನ ಆಕ್ರಮಿತ ಗಿಲ್ಗಿಟ್ ಬಾಲ್ಟಿಸ್ತಾನದ (ಪಿಒಜಿಬಿ) ಸ್ಕಾರ್ಡುದಿಂದ ಬಲೂಚಿಸ್ತಾನದ ಗ್ವಾದರ್ ವರೆಗೆ ಪಾಕಿಸ್ತಾನದಾದ್ಯಂತದ ಕಾರ್ಮಿಕರು ತಮ್ಮ ಬೇಡಿಕೆ ಈಡೇರಿಕೆಗಾಗಿ ಒಗ್ಗಟ್ಟಾಗಿದ್ದಾರೆ. ಇದು ಉದ್ಯೋಗಿಗಳಾದ ನಮಗೆ ವಿಪತ್ತು ಮತ್ತು ನಮಗೆ ಬೀದಿಗಿಳಿಯುವುದನ್ನು ಬಿಟ್ಟು ಬೇರೆ ದಾರಿಯಿಲ್ಲ. ಈ ವಿಷಯವು ಮಿತಿ ಮೀರುತ್ತಿದೆ, ನಾವು ಇದನ್ನು ಇನ್ನು ಮುಂದೆ ಸಹಿಸಲು ಸಾಧ್ಯವಿಲ್ಲ ಎಂದರು.

ನಾವು ಸಂಕಷ್ಟಗಳನ್ನು ಎದುರಿಸುತ್ತಿರುವಾಗ, ಆಡಳಿತ ವರ್ಗ ಐಷಾರಾಮಿ ಜೀವನ ನಡೆಸುತ್ತಿದೆ. ಸಾರ್ವಜನಿಕರಿಗೆ ಅಗತ್ಯ ವಸ್ತುಗಳನ್ನು ಸಬ್ಸಿಡಿ ದರದಲ್ಲಿ ನೀಡಲು ಯುಎಸ್​ಸಿಯನ್ನು ಸ್ಥಾಪಿಸಲಾಯಿತು. ವಿಶೇಷವಾಗಿ ತುರ್ತು ಸಂದರ್ಭಗಳಲ್ಲಿ. ಕೋವಿಡ್ -19 ಮತ್ತು ಪ್ರವಾಹ ಮತ್ತು ಭೂಕಂಪಗಳಂತಹ ನೈಸರ್ಗಿಕ ವಿಪತ್ತುಗಳ ಸಮಯದಲ್ಲಿ ನಾವು ನಿರ್ಣಾಯಕ ಪಾತ್ರವಹಿಸಿದ್ದೇವೆ. ನಾವು ಸುಮಾರು 20 ಕಾರ್ಮಿಕರನ್ನು ಕೋವಿಡ್​ನಿಂದ ಕಳೆದುಕೊಂಡಿದ್ದೇವೆ, ಆದರೂ ಅವರ ಕುಟುಂಬಗಳು ಇನ್ನೂ ಪರಿಹಾರ ಪಡೆದಿಲ್ಲ ಎಂದು ಅಮೀನ್ ಅಳಲು ತೋಡಿಕೊಂಡರು.

ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿಗಳು ರಾಜಕೀಯ ಪ್ರೇರಿತ: ಯೂನುಸ್ ಪ್ರತಿಪಾದನೆ - Attacks on Hindus in Bangladesh

ETV Bharat Logo

Copyright © 2025 Ushodaya Enterprises Pvt. Ltd., All Rights Reserved.