ETV Bharat / international

14 ವರ್ಷಗಳ ಬಳಿಕ ಬಂಧನದಿಂದ ಮುಕ್ತಿ ಪಡೆದ ಜೂಲಿಯನ್ ಅಸ್ಸಾಂಜೆ ತಾಯ್ನಾಡಿಗೆ ವಾಪಸ್​ - Julian Assange Released

author img

By PTI

Published : Jun 26, 2024, 1:41 PM IST

ಸೇನೆ ರಹಸ್ಯ ಬಹಿರಂಗ ಪ್ರಕರಣದಲ್ಲಿ ಬಂಧನದಲ್ಲಿದ್ದ ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸ್ಸಾಂಜೆ ಅವರನ್ನು ನ್ಯಾಯಾಂಗ ಇಲಾಖೆಯೊಂದಿಗಿನ ಒಪ್ಪಂದದಲ್ಲಿ ಅವರ ತವರು ರಾಷ್ಟ್ರ ಆಸ್ಟ್ರೇಲಿಯಾಕ್ಕೆ ಮರಳಲು ಅಮೆರಿಕ​ ಮುಕ್ತಗೊಳಿಸಿದೆ.

ಜೂಲಿಯನ್ ಅಸ್ಸಾಂಜೆ
ಜೂಲಿಯನ್ ಅಸ್ಸಾಂಜೆ ಬಿಡುಗಡೆ (IANS)

ಸೈಪನ್: ಸೇನೆ ರಹಸ್ಯ ಬಹಿರಂಗ ಪ್ರಕರಣದಲ್ಲಿ ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸ್ಸಾಂಜೆ ಅವರನ್ನು ನ್ಯಾಯಾಂಗ ಇಲಾಖೆಯೊಂದಿಗಿನ ಒಪ್ಪಂದದಲ್ಲಿ ತವರು ರಾಷ್ಟ್ರ ಆಸ್ಟ್ರೇಲಿಯಾಕ್ಕೆ ಮರಳಲು ಅಮೆರಿಕ​ ಮುಕ್ತಗೊಳಿಸಿದೆ.

ಒಂದು ದಶಕದ ಹಿಂದೆ ವಿಕಿಲೀಕ್ಸ್‌ ಇರಾಕ್ ಮತ್ತು ಅಫ್ಘಾನಿಸ್ತಾನದಲ್ಲಿನ ಯುದ್ಧಗಳಿಗೆ ಸಂಬಂಧಿಸಿದಂತೆ ಅಮೆರಿಕದ ಮಿಲಿಟರಿಯ ಸಾವಿರಾರು ರಹಸ್ಯಗಳ ಮಿಲಿಟರಿ ದಾಖಲೆಗಳನ್ನು ಪ್ರಕಟಿಸಿತ್ತು. ಇದು ಸಾಕಷ್ಟು ವಿವಾದ ಹಾಗೂ ಕಾನೂನು ಹೋರಾಟವನ್ನು ಹುಟ್ಟುಹಾಕಿತ್ತು.

ಅಲ್ಲದೇ, ಅಮೆರಿಕಕ್ಕೆ ಹಸ್ತಾಂತರದ ವಿರುದ್ಧ ಅಸ್ಸಾಂಜೆ ಹೋರಾಟ ಮಾಡಿದ್ದರು. ಹೀಗಾಗಿ ಪಶ್ಚಿಮ ಪೆಸಿಫಿಕ್‌ನಲ್ಲಿರುವ ಯುಎಸ್ ಕಾಮನ್‌ವೆಲ್ತ್‌ನ ಉತ್ತರ ಮರಿಯಾನಾ ದ್ವೀಪಗಳ ರಾಜಧಾನಿಯಲ್ಲಿರುವ ಯುಎಸ್ ಫೆಡರಲ್ ನ್ಯಾಯಾಲಯದಲ್ಲಿ ಅಸ್ಸಾಂಜೆ ಬುಧವಾರ ಹಾಜರಾದರು. ಇದರ ಅವರು ವಿಮಾನದ ಮೂಲಕ ಆಸ್ಟ್ರೇಲಿಯಾಕ್ಕೆ ತೆರಳಿದ್ದಾರೆ.

ಸೋಮವಾರ ನ್ಯಾಯಾಲಯದ ಪೇಪರ್‌ಗಳಲ್ಲಿ ಬಹಿರಂಗಪಡಿಸಿದ ಒಪ್ಪಂದದ ಅಡಿಯಲ್ಲಿ ಅಸ್ಸಾಂಜೆ ರಾಷ್ಟ್ರೀಯ ರಕ್ಷಣಾ ಮಾಹಿತಿಯನ್ನು ಕಾನೂನುಬಾಹಿರವಾಗಿ ಪಡೆಯಲು ಮತ್ತು ಪ್ರಸಾರ ಮಾಡಲು ಪಿತೂರಿ ನಡೆಸಿದ ಬೇಹುಗಾರಿಕೆ ಕಾಯ್ದೆಯ ಆರೋಪದಲ್ಲಿ ತಪ್ಪಿತಸ್ಥರೆಂದು ಒಪ್ಪಿಕೊಂಡಿದ್ದರು. 14 ವರ್ಷಗಳಿಂದ ಬಂಧನದಲ್ಲಿರುವ ಅಸ್ಸಾಂಜೆ, ಈಗಾಗಲೇ ಯುನೈಟೆಡ್ ಕಿಂಗ್‌ಡಂ ಜೈಲಿನಲ್ಲಿ ಐದು ವರ್ಷಗಳ ಶಿಕ್ಷೆ ಅನುಭವಿಸಿದ್ದನ್ನು ಪ್ರಾಸಿಕ್ಯೂಟರ್‌ಗಳು ಸಹ ಒಪ್ಪಿಕೊಂಡಿದ್ದರು. ಹೀಗಾಗಿ ಅಮೆರಿಕದ ಜೈಲಿನಲ್ಲಿ ಯಾವುದೇ ಸಮಯ ಕಳೆಯದೆ ತನ್ನ ತಾಯ್ನಾಡು ಆಸ್ಟ್ರೇಲಿಯಾಕ್ಕೆ ಮರಳಲು ಅಸ್ಸಾಂಜೆ ಅವರಿಗೆ ಅನುಮತಿ ನೀಡಲಾಗಿದೆ.

ಇದನ್ನೂ ಓದಿ: ಚಿತ್ರಹಿಂಸೆಗೆ ಒಳಗಾದವರ ಬೆಂಬಲಕ್ಕಾಗಿ ವಿಶ್ವಸಂಸ್ಥೆ ಅಂತಾರಾಷ್ಟ್ರೀಯ ದಿನ 2024: ಚಿತ್ರಹಿಂಸೆ ಈಗಲೇ ಕೊನೆಗೊಳಿಸಿ.. - SUPPORT OF VICTIMS OF TORTURE 2024

ETV Bharat Logo

Copyright © 2024 Ushodaya Enterprises Pvt. Ltd., All Rights Reserved.