ನ್ಯೂಯಾರ್ಕ್ (ಅಮೆರಿಕ): ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಅಧ್ಯಕ್ಷ ಜೋ ಬೈಡನ್ ಡೆಮಾಕ್ರಟಿಕ್ ಪಕ್ಷದಿಂದ ಮತ್ತು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಿಪಬ್ಲಿಕನ್ ಪಕ್ಷದಿಂದ ನಾಮ ನಿರ್ದೇಶನಗೊಳ್ಳಲು ಇನ್ನಷ್ಟು ಹತ್ತಿರವಾಗಿದ್ದಾರೆ.
ಮಂಗಳವಾರ ರೋಡ್ ಐಲ್ಯಾಂಡ್ ಮತ್ತು ಕನೆಕ್ಟಿಕಟ್‌ನಲ್ಲಿ ನಡೆದ ಪ್ರಾಥಮಿಕ ಚುನಾವಣೆಯಲ್ಲಿ ಸುಲಭವಾಗಿ ಗೆಲುವು ಸಾಧಿಸಿದ್ದಾರೆ. ಆದರೆ ನ್ಯೂಯಾರ್ಕ್ ಮತ್ತು ವಿಸ್ಕಾನ್ಸಿನ್‌ನಲ್ಲಿ ನಡೆದ ಪ್ರಾಥಮಿಕ ಚುನಾವಣೆ ಫಲಿತಾಂಶಗಳು ಇನ್ನೂ ಬರಬೇಕಿದೆ. ಈಗ ಬಂದಿರುವ ಫಲಿತಾಂಶಗಳು ಅಂದುಕೊಂಡಷ್ಟು ಆಶ್ಚರ್ಯಕರವಲ್ಲದಿದ್ದರೂ ಮುಂಬರಲಿರುವ ಚುನಾವಣೆಯು ಮತದಾರರಲ್ಲಿ ಉತ್ಸಾಹಕ್ಕೆ ಕಾರಣವಾಗಿದೆ.
ಇನ್ನು ವಿಸ್ಕಾನ್ಸಿನ್ ಮತ್ತು ಮಿಚಿಗನ್‌ನಲ್ಲಿ ಡೊನಾಲ್ಡ್ ಟ್ರಂಪ್ ಮಂಗಳವಾರ ಪ್ರಚಾರ ನಡೆಸಿದರು. "ಚುನಾವಣಾ ಅಭಿಯಾನದ ಸಮಯದಲ್ಲಿ ಟ್ರಂಪ್ ನೀಡಿದ ಎಲ್ಲಾ ಭರವಸೆಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
ಪ್ರಾಥಮಿಕ ಚುನಾವಣೆಗಳ ಬಗ್ಗೆ ಮಾತನಾಡಿರುವ ಕೆನೋಶಾದ 55 ವರ್ಷದ ಕ್ಯಾಷಿಯರ್ ಥೆರೆಸಾ ಲಾಬ್ಸ್, 'ನಮ್ಮ ಕುಟುಂಬವು ಹೆಚ್ಚಿನ ಆಹಾರ ಮತ್ತು ಗ್ಯಾಸೋಲಿನ್(ಇಂಧನ) ಬೆಲೆಗಳಿಂದ ಸಂಕಷ್ಟದ ಜೀವನ ನಡೆಸುತ್ತಿದೆ. ಹೀಗಾಗಿ ಅವರು ಪ್ರೈಮರಿ ಟ್ರಯಲ್ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಜೋ ಬೈಡನ್ಗೆ ಮತ ಹಾಕಿದ್ದೇವೆ. ಬೈಡನ್ ಅವರು ರಾಷ್ಟ್ರದಲ್ಲಿ ಹಣದುಬ್ಬರವನ್ನು ತಗ್ಗಿಸಲು ಕೆಲಸ ಮಾಡುತ್ತಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಮುಂದಿನ ನಾಲ್ಕು ವರ್ಷಗಳಲ್ಲಿ ಜೋ ಬೈಡನ್ ಅವರು ಬೆಲೆ ಏರಿಕೆಗಳನ್ನು ಇಳಿಸಲು ಕೆಲಸ ಮಾಡುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ. ಬೈಡನ್ ಕಳೆದ ತಿಂಗಳು ತನ್ನ ಸ್ಟೇಟ್ ಆಫ್ ಯೂನಿಯನ್ ಭಾಷಣದ ನಂತರ ಎಲ್ಲ ರಾಜ್ಯಗಳಿಗೆ ಭೇಟಿ ನೀಡಿದ್ದಾರೆ. ಜೋ ಬೈಡನ್ ಜತೆಗೆ ಡೆಮಾಕ್ರಟಿಕ್ ರಾಷ್ಟ್ರೀಯ ಸಮಿತಿಯು ನಿಧಿಸಂಗ್ರಹದಲ್ಲಿ ಟ್ರಂಪ್ ಮತ್ತು ರಿಪಬ್ಲಿಕ್ಪಕ್ಷವನ್ನು ಮೀರಿಸಿದೆ.
ಇದನ್ನೂ ಓದಿ:ಪ್ರಬಲ ಭೂಕಂಪ: ದಕ್ಷಿಣ ಜಪಾನಿನ ಎರಡು ದ್ವೀಪಗಳಿಗೆ ಅಪ್ಪಳಿಸಿದ ಸುನಾಮಿ - tsunami first wave