ETV Bharat / international

ಪರಮಾಣು ಶಸ್ತ್ರಾಸ್ತ್ರ ಮುಕ್ತ ಜಗತ್ತಿಗೆ ಶ್ರಮಿಸುತ್ತಿರುವ ಜಪಾನ್‌ನ 'ನಿಹಾನ್ ಹಿಡಂಕ್ಯೊ' ಸಂಸ್ಥೆಗೆ ನೊಬೆಲ್ ಶಾಂತಿ ಪ್ರಶಸ್ತಿ - NOBEL PEACE PRIZE

ಎರಡನೇ ವಿಶ್ವಯುದ್ಧದಲ್ಲಿ ಪರಮಾಣು ಬಾಂಬ್ ದಾಳಿಯಲ್ಲಿ ಬದುಕುಳಿದವರನ್ನು ಪ್ರತಿನಿಧಿಸುತ್ತಿರುವ ಜಪಾನ್‌ನ ಸಂಸ್ಥೆ 'ನಿಹಾನ್ ಹಿಡಂಕ್ಯೊ'ಗೆ ಈ ವರ್ಷದ ಪ್ರತಿಷ್ಟಿತ ನೊಬೆಲ್ ಶಾಂತಿ ಪ್ರಶಸ್ತಿ ಘೋಷಿಸಲಾಗಿದೆ.

ಜಪಾನೀಸ್ ಸಂಸ್ಥೆ ನಿಹಾನ್ ಹಿಡಾಂಕ್ಯೊ
ಜಪಾನಿನ ಸಂಸ್ಥೆ ನಿಹಾನ್ ಹಿಡಂಕ್ಯೊ (Nobel Prize Website)
author img

By PTI

Published : Oct 11, 2024, 3:20 PM IST

Updated : Oct 11, 2024, 3:57 PM IST

ಓಸ್ಲೋ(ನಾರ್ವೆ): ಪರಮಾಣು ಶಸ್ತ್ರಾಸ್ತ್ರ ಮುಕ್ತ ಜಗತ್ತು ನಿರ್ಮಾಣಕ್ಕಾಗಿ ಶ್ರಮಿಸುತ್ತಿರುವ ಜಪಾನಿನ ಸಂಸ್ಥೆ 'ನಿಹಾನ್ ಹಿಡಂಕ್ಯೊ'ಗೆ 2024ರ ಪ್ರತಿಷ್ಟಿತ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಇಂದು ಪ್ರಕಟಿಸಲಾಯಿತು.

ನಿಹಾನ್ ಹಿಡಂಕ್ಯೊ ಜಪಾನಿನ ಹಿರೋಷಿಮಾ ಮತ್ತು ನಾಗಸಾಕಿ ನಗರಗಳ ಮೇಲಿನ ಪರಮಾಣು ಬಾಂಬ್ ದಾಳಿಯಲ್ಲಿ ಬದುಕುಳಿದವರ ಸಂಘಟನೆ. 1956ರಲ್ಲಿ ಸ್ಥಾಪನೆಯಾದ ನಿಹಾನ್ ಹಿಡಂಕ್ಯೊ ಪರಮಾಣು ಬಾಂಬ್ ಬದುಕುಳಿದವರ ಅತಿದೊಡ್ಡ ಮತ್ತು ಅತ್ಯಂತ ಪ್ರಭಾವಶಾಲಿ ಸಂಸ್ಥೆಯಾಗಿದೆ.

"ಪರಮಾಣು ಶಸ್ತ್ರಾಸ್ತ್ರಗಳ ಬಳಕೆಯನ್ನು ನಿಷೇಧಿಸಬೇಕೆಂಬ ಒತ್ತಡದಲ್ಲಿರುವ ಈ ಸಂದರ್ಭದಲ್ಲಿ ನಿಹಾನ್ ಹಿಡಂಕ್ಯೊ ಕಾರ್ಯವನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ" ಎಂದು ನಾರ್ವೇಜಿಯನ್ ನೊಬೆಲ್ ಸಮಿತಿ ಅಧ್ಯಕ್ಷ ಜರ್ಗೆನ್ ವಾಟ್ನೆ ಫ್ರೈಡ್ನೆಸ್ ಹೇಳಿದರು.

"ನಾವು ಪರಮಾಣು ಬಾಂಬ್ ದಾಳಿಯಲ್ಲಿ ಬದುಕುಳಿದವರನ್ನು ಗೌರವಿಸಲು ಬಯಸುತ್ತೇವೆ. ಅವರು ದೈಹಿಕ ನೋವಿನ ಹೊರತಾಗಿಯೂ ಜಾಗತಿಕ ಶಾಂತಿ ಸ್ಥಾಪನೆಗೆ ಶ್ರಮಿಸುತ್ತಿದ್ದಾರೆ" ಎಂದು ನಾರ್ವೇಜಿಯನ್ ನೊಬೆಲ್ ಸಮಿತಿ ಶ್ಲಾಘಿಸಿದೆ.

ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವುದರಿಂದ ಉಂಟಾಗುವ ವಿನಾಶಕಾರಿ ಮಾನವೀಯ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ನಿಹಾನ್ ಹಿಡಂಕ್ಯೊ ಸಂಸ್ಥೆಯ ಸದಸ್ಯರು ದಣಿವರಿಯದೆ ಕೆಲಸ ಮಾಡಿದ್ದಾರೆ. ಇದು ಕ್ರಮೇಣ ಜಾಗತಿಕ ಆಂದೋಲನವಾಗಿ ಮಾರ್ಪಟ್ಟಿತು.

ಹಿರೋಷಿಮಾ ಮತ್ತು ನಾಗಾಸಾಕಿ ಮೇಲಿನ ಬಾಂಬ್‌ ದಾಳಿಯಿಂದ ಬದುಕುಳಿದವರನ್ನು ಪ್ರತಿನಿಧಿಸುವ ಈ ಜಪಾನೀಸ್ ಸಂಸ್ಥೆಯನ್ನು ಹಿಬಾಕುಶಾ ಎಂದು ಕೂಡ ಕರೆಯಲಾಗುತ್ತದೆ. ದಾಳಿಯಲ್ಲಿ ಬದುಕುಳಿದವರು ತಮ್ಮ ಸ್ವಂತ ಅನುಭವನ್ನು ಹಂಚಿಕೊಳ್ಳುವ ಮೂಲಕ ಪ್ರಪಂಚದಾದ್ಯಂತ ಪರಮಾಣು ಶಸ್ತ್ರಾಸ್ತ್ರಗಳ ಬಳಕೆಗೆ ವ್ಯಾಪಕ ವಿರೋಧ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ.

1945ರಲ್ಲಿ ಅಮೆರಿಕದ ಎರಡು ಪರಮಾಣು ಬಾಂಬ್‌ ದಾಳಿಯಿಂದ ಹಿರೋಷಿಮಾ ಮತ್ತು ನಾಗಸಾಕಿಯ ಅಂದಾಜು 1,20,000 ಜನರು ಮೃತಪಟ್ಟಿದ್ದರು. ಈ ಘಟನೆಗೆ 2025ಕ್ಕೆ 80 ವರ್ಷ.

ಇದನ್ನೂ ಓದಿ: ದಕ್ಷಿಣ ಕೊರಿಯಾದ ಲೇಖಕಿ ಹನ್ ಕಾಂಗ್​​ರಿಗೆ ಸಾಹಿತ್ಯ ನೊಬೆಲ್ ಪ್ರಶಸ್ತಿ ಗರಿ

Last Updated : Oct 11, 2024, 3:57 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.