ETV Bharat / international

ಬಾಂಗ್ಲಾದಲ್ಲಿ ಭುಗಿಲೆದ್ದ ಹೋರಾಟದಲ್ಲಿ 39 ಜನ ಸಾವು: ಭಾರತೀಯರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದ ಕೇಂದ್ರ ಸರ್ಕಾರ - Bangladesh Job Quota Protest - BANGLADESH JOB QUOTA PROTEST

Bangladesh Job Quota Protest: ಬಾಂಗ್ಲಾದೇಶದಲ್ಲಿ ಮೀಸಲಾತಿ ಹೋರಾಟ ಭುಗಿಲೆದ್ದಿದೆ. ದೇಶಾದ್ಯಂತ ಹಿಂಸಾತ್ಮಕ ಘರ್ಷಣೆಗಳು, ಬೆಂಕಿ ಹಚ್ಚುವುದು ಕಂಡು ಬರುತ್ತಿದೆ. ಇಲ್ಲಿಯವರೆಗೆ, ಹಿಂಸಾಚಾರದಲ್ಲಿ ಸುಮಾರು 35 ಸಾವುಗಳು ಸಂಭವಿಸಿದ್ದು, ಸಾವಿರಾರೂ ಜನರು ಗಾಯಗೊಂಡಿದ್ದಾರೆ. ಈಗಲೂ ಹಿಂಸಾಚಾರ, ಪ್ರತಿಭಟನೆಗಳು ನಿಂತಿಲ್ಲ. ಆದ್ರೆ ಭಾರತೀಯರೆಲ್ಲರೂ ಸುರಕ್ಷಿತರಾಗಿದ್ದಾರೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

INDIA ON VIOLENT PROTESTS  INTERNAL MATTER  INDIANS SAFE IN BANGLADESH  EXTERNAL AFFAIRS MINISTER
ಬಾಂಗ್ಲಾದಲ್ಲಿ ಭುಗಿಲೆದ್ದ ಹೋರಾಟ (ANI)
author img

By PTI

Published : Jul 19, 2024, 8:09 PM IST

ಢಾಕಾ (ಬಾಂಗ್ಲಾದೇಶ): ಮೀಸಲಾತಿ ವಿರೋಧಿಸಿ ಬಾಂಗ್ಲಾದೇಶದಲ್ಲಿ ಪ್ರತಿಭಟನಾಕಾರರು ನಡೆಸುತ್ತಿರುವ ಮುಷ್ಕರ ಹಿಂಸಾಚಾರಕ್ಕೆ ತಿರುಗಿದೆ. ಈ ಘರ್ಷಣೆಗಳನ್ನು ನಿಯಂತ್ರಿಸಲು ಬಾಂಗ್ಲಾದೇಶ ಸರ್ಕಾರ ಸೇನೆಯನ್ನು ನಿಯೋಜಿಸಿದೆ. ಇದರ ಬೆನ್ನೆಲ್ಲೇ ಭಾರತ ಸರ್ಕಾರ ಪ್ರತಿಕ್ರಿಯಿಸಿದೆ. ಅಲ್ಲಿರುವ ಎಲ್ಲ ಭಾರತೀಯರು ಸುರಕ್ಷಿತವಾಗಿದ್ದಾರೆ ಎಂದು ಘೋಷಿಸಿದೆ. ಬಾಂಗ್ಲಾದೇಶದ ಪ್ರಸ್ತುತ ಪರಿಸ್ಥಿತಿಯು ಆ ದೇಶದ ಆಂತರಿಕ ವಿಷಯವಾಗಿದೆ. ಅಲ್ಲಿ 15 ಸಾವಿರ ಭಾರತೀಯರಿದ್ದಾರೆ. ಅವರಲ್ಲಿ 8 ಸಾವಿರ ವಿದ್ಯಾರ್ಥಿಗಳು. ಅವರೆಲ್ಲರೂ ಸುರಕ್ಷಿತವಾಗಿದ್ದಾರೆ. ನಾವು ಅವರೊಂದಿಗೆ ಎಲ್ಲ ರೀತಿಯಲ್ಲೂ ಸಹಕರಿಸಲು ಸಿದ್ಧರಿದ್ದೇವೆ ಎಂದು ಭಾರತದ ವಿದೇಶಾಂಗ ಸಚಿವಾಲಯ ತಿಳಿಸಿದೆ.

ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ಸುಧಾರಣೆಗೆ ಒತ್ತಾಯಿಸಿ ಬಾಂಗ್ಲಾದೇಶದಾದ್ಯಂತ ಹಲವು ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳು ಒಂದು ವಾರದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗುರುವಾರ ಬಂದ್‌ಗೆ ಕರೆ ನೀಡಲಾಗಿದೆ. ಸರ್ಕಾರ ಈಗಾಗಲೇ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಿದೆ. ಆದರೆ, ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರಿಂದ ಘರ್ಷಣೆ ನಡೆದಿದೆ. ಕೆಲವೆಡೆ ಪೊಲೀಸರು ರಬ್ಬರ್ ಬುಲೆಟ್‌ಗಳನ್ನು ಹಾರಿಸಿದ್ದಾರೆ.

39 ಜನರು ಸಾವು: ಉದ್ಯೋಗಗಳಲ್ಲಿ ಮೀಸಲಾತಿ ರದ್ದುಗೊಳಿಸುವಂತೆ ಒತ್ತಾಯಿಸಿ ಬಾಂಗ್ಲಾದೇಶದ ವಿದ್ಯಾರ್ಥಿಗಳ ಚಳವಳಿ ಹಿಂಸಾಚಾರಕ್ಕೆ ತಿರುಗಿದೆ. ಪರಿಸ್ಥಿತಿ ಎಷ್ಟು ಹದಗೆಟ್ಟಿದೆ ಎಂದರೆ, ಪೊಲೀಸರೊಂದಿಗಿನ ಘರ್ಷಣೆಯಲ್ಲಿ 39 ಪ್ರತಿಭಟನಾಕಾರರು ಸಾವನ್ನಪ್ಪಿದ್ದಾರೆ. ಸಾವಿರಾರೂ ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ. ದೊಣ್ಣೆ, ರಾಡ್, ಕಲ್ಲುಗಳೊಂದಿಗೆ ಬೀದಿಗಿಳಿದ ಪ್ರತಿಭಟನಾಕಾರರು ಬಸ್, ಖಾಸಗಿ ವಾಹನಗಳಿಗೆ ಬೆಂಕಿ ಹಚ್ಚುತ್ತಿದ್ದಾರೆ.

ಇಂಟರ್ನೆಟ್​ ಸ್ಥಗಿತ: ಸದ್ಯ ಬಾಂಗ್ಲಾದೇಶದಲ್ಲಿ ಬಸ್, ರೈಲು ಮತ್ತು ಮೆಟ್ರೋ ಸೇವೆಗಳು ಸ್ಥಗಿತಗೊಂಡಿವೆ. ಹೆಚ್ಚುತ್ತಿರುವ ಹಿಂಸಾಚಾರವನ್ನು ತಡೆಯಲು, ಸರ್ಕಾರವು ಮೊಬೈಲ್ ಇಂಟರ್ನೆಟ್ ಸ್ಥಗಿತಗೊಳಿಸಿದೆ. ಶಾಲಾ - ಕಾಲೇಜುಗಳ ಜೊತೆಗೆ ಮದರಸಾಗಳನ್ನೂ ಅನಿರ್ದಿಷ್ಟಾವಧಿಗೆ ಮುಚ್ಚಲಾಗಿದೆ.

ಪ್ರಧಾನಿ ಭಾಷಣ ಬಳಿಕ ಭುಗಿಲೆದ್ದ ಹಿಂಸಾಚಾರ: ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ಇತ್ತೀಚೆಗೆ ಸರ್ಕಾರಿ ರಾಷ್ಟ್ರೀಯ ದೂರದರ್ಶನದಲ್ಲಿ ರಾಷ್ಟ್ರ ಉದ್ದೇಶಿಸಿ ಮಾತನಾಡಿದರು. ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದು, ಇದಾದ ಬಳಿಕ ಪ್ರತಿಭಟನಾಕಾರರು ಆಕ್ರೋಶಗೊಂಡರು. ಸರ್ಕಾರಿ ದೂರದರ್ಶನದ ಕಚೇರಿ ಮೇಲೆ ದಾಳಿ ಮಾಡಿ, ವಾಹನಗಳನ್ನು ಸುಟ್ಟು ಹಾಕಿದ್ದಾರೆ. ಪ್ರತಿಭಟನಾಕಾರರು ರಾಜ್ಯ ದೂರದರ್ಶನದ ಕಚೇರಿಗೆ ಬೆಂಕಿ ಹಚ್ಚಿದಾಗ, ಸುಮಾರು 1200 ನೌಕರರು ಮತ್ತು ಅನೇಕ ಪತ್ರಕರ್ತರು ಒಳಗೆ ಸಿಲುಕಿಕೊಂಡಿದ್ದರು. ಪೊಲೀಸರು-ಆಡಳಿತ ಹೇಗೋ ಕಷ್ಟಪಟ್ಟು ಅವರೆಲ್ಲರನ್ನೂ ರಕ್ಷಿಸಿದ್ದಾರೆ.

ಬಸ್​ ವ್ಯವಸ್ಥೆ ಸ್ಥಗಿತ: ಪ್ರತಿಭಟನಾಕಾರರನ್ನು ತಡೆಯಲು, ಗಲಭೆ ನಿಗ್ರಹ ಪೊಲೀಸರು ರಬ್ಬರ್ ಬುಲೆಟ್‌ಗಳು ಮತ್ತು ಅಶ್ರುವಾಯು ಶೆಲ್‌ಗಳನ್ನು ಹಾರಿಸಿದ್ದರು. ಇದರಿಂದಾಗಿ ಅನೇಕ ಪ್ರತಿಭಟನಾಕಾರರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅನೇಕ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಸೂಚಿಸಿವೆ. ಢಾಕಾ ಮತ್ತು ದೇಶದ ಇತರ ಭಾಗಗಳ ನಡುವಿನ ಬಸ್ ಸೇವೆಗಳನ್ನು ಸಹ ನಿಲ್ಲಿಸಲಾಗಿದೆ. ಢಾಕಾದ ಗಬ್ಟೋಲಿ ಮತ್ತು ಸಯೀದಾಬಾದ್ ಬಸ್ ಟರ್ಮಿನಲ್‌ಗಳಲ್ಲಿನ ಬಸ್ ಕೌಂಟರ್‌ಗಳಲ್ಲಿ ಹಾಜರಿದ್ದ ನೌಕರರ ಪ್ರಕಾರ, ಬಸ್ ಮಾಲೀಕರು ರಸ್ತೆಗಳಲ್ಲಿ ಯಾವುದೇ ಬಸ್ ಓಡಿಸದಂತೆ ಕೇಳಿಕೊಂಡಿದ್ದಾರೆ.

ವರದಿಗಾರ ನಿಧನ: ಮೆಹಂದಿ ಹಸನ್ ಎಂಬ ಪತ್ರಕರ್ತ ಢಾಕಾದಲ್ಲಿ ಘರ್ಷಣೆಯನ್ನು ವರದಿ ಮಾಡುವಾಗ ನಿಧನರಾದರು. ಢಾಕಾದ ಕೆನಡಾ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲೂ ಪ್ರತಿಭಟನಾಕಾರರು ಹಿಂಸಾತ್ಮಕವಾಗಿ ನಡೆದುಕೊಂಡಿದ್ದಾರೆ. ವಿಶ್ವವಿದ್ಯಾನಿಲಯದ ಮೇಲ್ಛಾವಣಿಯಲ್ಲಿ 60 ಪೊಲೀಸರನ್ನು ಹೆಲಿಕಾಪ್ಟರ್ ಸಹಾಯದಿಂದ ರಕ್ಷಿಸಲಾಗಿದೆ.

ಹೈಕಮಿಷನ್​ ಸಲಹೆ: ಬಾಂಗ್ಲಾದೇಶದಲ್ಲಿ ನೆಲೆಸಿರುವ ಭಾರತೀಯರಿಗೆ ಭಾರತೀಯ ಹೈಕಮಿಷನ್ ಸಲಹೆ ನೀಡಿದೆ. ಬಾಂಗ್ಲಾದೇಶದ ಇತ್ತೀಚಿನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ನಾಗರಿಕರು, ಭಾರತೀಯ ಸಮುದಾಯದ ಸದಸ್ಯರು ಮತ್ತು ಬಾಂಗ್ಲಾದೇಶದಲ್ಲಿ ವಾಸಿಸುವ ಭಾರತೀಯ ವಿದ್ಯಾರ್ಥಿಗಳು ಪ್ರಯಾಣದಿಂದ ದೂರವಿರಲು ಸೂಚಿಸಲಾಗಿದೆ. ಅಗತ್ಯವಿಲ್ಲದಿದ್ದರೆ ಅವರು ತಮ್ಮ ಮನೆಯೊಳಗೆ ಇರಬೇಕು ಎಂದು ಎಚ್ಚರಿಸಿದೆ. ಅಷ್ಟೇ ಅಲ್ಲ ಸಹಾಯಕ್ಕಾಗಿ, ಹೈ ಕಮಿಷನ್ 24 - ಗಂಟೆಗಳ ಸೇವೆಯೊಂದಿಗೆ ಕೆಲವು ತುರ್ತು ಸಂಪರ್ಕ ಸಂಖ್ಯೆಗಳನ್ನು ಸಹ ನೀಡಿದೆ.

ಏತಕ್ಕೆ ಪ್ರತಿಭಟನೆ?: ಪ್ರಸ್ತುತ ಮೀಸಲಾತಿ ವ್ಯವಸ್ಥೆಯಲ್ಲಿ 56 ಪ್ರತಿಶತ ಸರ್ಕಾರಿ ಉದ್ಯೋಗಗಳನ್ನು ಕಾಯ್ದಿರಿಸಲಾಗಿದೆ. ಇವುಗಳಲ್ಲಿ, 1971 ರ ವಿಮೋಚನಾ ಯುದ್ಧದ ಸ್ವಾತಂತ್ರ್ಯ ಹೋರಾಟಗಾರರ ವಂಶಸ್ಥರಿಗೆ 30 ಪ್ರತಿಶತ, ಹಿಂದುಳಿದ ಆಡಳಿತಾತ್ಮಕ ಜಿಲ್ಲೆಗಳಿಗೆ 10 ಪ್ರತಿಶತ, ಮಹಿಳೆಯರಿಗೆ 10 ಪ್ರತಿಶತ, ಜನಾಂಗೀಯ ಅಲ್ಪಸಂಖ್ಯಾತ ಗುಂಪುಗಳಿಗೆ ಐದು ಪ್ರತಿಶತ ಮತ್ತು ವಿಕಲಾಂಗರಿಗೆ ಒಂದು ಪ್ರತಿಶತವನ್ನು ಮೀಸಲಿಡಲಾಗಿದೆ. ಸ್ವಾತಂತ್ರ್ಯ ಹೋರಾಟಗಾರರ ವಂಶಸ್ಥರಿಗೆ ಶೇ.30ರಷ್ಟು ಮೀಸಲಾತಿ ನೀಡಿರುವುದನ್ನು ವಿರೋಧಿಸಿ ಚಳವಳಿ ನಡೆಸಲಾಗುತ್ತಿದೆ. ಬಾಂಗ್ಲಾದೇಶದಲ್ಲಿ ಪ್ರತಿ ವರ್ಷ ಕೇವಲ 3 ಸಾವಿರ ಸರ್ಕಾರಿ ಉದ್ಯೋಗಗಳನ್ನು ಮಾತ್ರ ತೆಗೆದುಕೊಳ್ಳುತ್ತದೆ. ಇದಕ್ಕಾಗಿ ಸುಮಾರು 4 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸುತ್ತಾರೆ.

ಓದಿ: ಒಸಾಮಾ ಬಿನ್ ಲಾಡೆನ್​ನ​​ ಆಪ್ತ ಸಹಾಯಕನನ್ನು ಬಂಧಿಸಿದ ಪಾಕಿಸ್ತಾನ - Osama Bin Laden close aide Arrest

ETV Bharat Logo

Copyright © 2025 Ushodaya Enterprises Pvt. Ltd., All Rights Reserved.