ETV Bharat / international

ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಉದ್ವಿಗ್ನ: ಇರಾನ್​​ನ ಮಿಲಿಟರಿ ನೆಲೆಗಳ ಮೇಲೆ ಇಸ್ರೇಲ್​ ದಾಳಿ - ISRAEL LAUNCHED AIRSTRIKE UPON IRAN

ಇರಾನ್​ ದಾಳಿಗೆ ಪ್ರತೀಕಾರವಾಗಿ ಇಸ್ರೇಲ್,​ ಟೆಹ್ರಾನ್‌​​​​ನ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ.

Israeli military launches strikes on military targets in Iran
ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಉದ್ವಿಗ್ನ: ಇರಾನ್​​ನ ಮಿಲಿಟರಿ ನೆಲೆಗಳ ಮೇಲೆ ಇಸ್ರೇಲ್​ ಮಿಲಿಟರಿಯಿಂದ ದಾಳಿ (IANS)
author img

By ETV Bharat Karnataka Team

Published : Oct 26, 2024, 6:27 AM IST

ದುಬೈ: ಅಕ್ಟೋಬರ್ 1 ರಂದು ಇಸ್ರೇಲ್​ ಮೇಲೆ ಇರಾನ್​ ಮಾಡಿದ್ದ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಗೆ ಪ್ರತೀಕಾರವಾಗಿ ಇರಾನ್‌ನ ಮಿಲಿಟರಿ ನೆಲೆಗಳ ಮೇಲೆ ಇಸ್ರೇಲ್ ಶನಿವಾರ ಮುಂಜಾನೆ ವೈಮಾನಿಕ ದಾಳಿ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇರಾನ್‌ನಲ್ಲಿ ಈ ದಾಳಿಯಿಂದ ಯಾವುದೇ ಹಾನಿ ಆಗಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಇಸ್ರೇಲ್‌ನ ಸೇನೆಯು ದಾಳಿಯ ಬಗ್ಗೆ ವಿವರಣೆ ನೀಡಿದೆ. ಇರಾನ್‌ನಲ್ಲಿನ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ನಿಖರವಾದ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್​ ತಿಳಿಸಿದೆ,.

ಇರಾನ್‌ನಲ್ಲಿನ ಆಡಳಿತ ಮತ್ತು ಅದರ ಪ್ರಾಕ್ಸಿಗಳು ಅಕ್ಟೋಬರ್ 7 ರಿಂದ ಇಸ್ರೇಲ್ ಮೇಲೆ ಪಟ್ಟುಬಿಡದೆ ದಾಳಿ ಮಾಡುತ್ತಿವೆ. ಏಳು ರಂಗಗಳಲ್ಲಿ - ಇರಾನ್ ನೆಲದಿಂದ ನೇರ ದಾಳಿ ಸೇರಿದಂತೆ ಹಲವು ಬಾರಿ ಇಸ್ರೇಲ್​ ಮೇಲೆ ದಾಳಿ ಮಾಡಿದೆ ಎಂದು ಇಸ್ರೇಲ್​ ಮಿಲಟರಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ವಿಶ್ವದ ಇತರ ಸಾರ್ವಭೌಮ ರಾಷ್ಟ್ರಗಳಂತೆ, ಇಸ್ರೇಲ್ ರಾಜ್ಯವು ತನ್ನ ರಕ್ಷಣೆಯ ಸಾರ್ವಭೌಮತೆ ಹೊಂದಿದ್ದು, ದಾಳಿಗೆ ತಕ್ಕ ಪ್ರತ್ಯುತ್ತರ ನೀಡುವ ಹಕ್ಕು ಮತ್ತು ಕರ್ತವ್ಯವನ್ನು ಹೊಂದಿದೆ ಎಂದು ಅದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಇರಾನಿನ ರಾಜಧಾನಿಯಾದ ಟೆಹ್ರಾನ್‌ನಲ್ಲಿ ಸ್ಫೋಟಗಳ ಸದ್ದು ಕೇಳಿಸುತ್ತಿತ್ತು ಅಲ್ಲಿನ ಸರ್ಕಾರಿ ಮಾಧ್ಯಮಗಳು ಆರಂಭದಲ್ಲಿ ಸ್ಫೋಟಗಳ ವರದಿಯನ್ನು ಒಪ್ಪಿಕೊಂಡಿವೆ ಮತ್ತು ಕೆಲವು ಶಬ್ದಗಳು ನಗರದ ಸುತ್ತಲಿನ ವಾಯು ರಕ್ಷಣಾ ವ್ಯವಸ್ಥೆಗಳಿಂದ ಬಂದಿವೆ ಎಂದು ಹೇಳಿವೆ.

ಅಕ್ಟೋಬರ್ 7, 2023 ರಂದು ಇಸ್ರೇಲ್ ಮೇಲೆ ಹಮಾಸ್ ದಾಳಿ ಮಾಡಿತ್ತು. ಈ ಪರಿಣಾಮ ಗಾಜಾ ಪಟ್ಟಿಯಲ್ಲಿ ನಡೆಯುತ್ತಿರುವ ಇಸ್ರೇಲ್-ಹಮಾಸ್ ಯುದ್ಧದ ಮಧ್ಯೆ ಇರಾನ್ ಇತ್ತೀಚಿನ ತಿಂಗಳುಗಳಲ್ಲಿ ಇಸ್ರೇಲ್ ಮೇಲೆ ಎರಡು ಬಾರಿ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಗಳನ್ನು ಮಾಡಿದೆ. ಇದು ಈಗ ಮಧ್ತಪ್ರಾಚ್ಯದಲ್ಲಿ ಬಿಕ್ಕಟ್ಟು ಉಲ್ಬಣಗೊಳ್ಳುವಂತೆ ಮಾಡಿದೆ.

ಇಸ್ರೇಲ್ ಸಹ ಲೆಬನಾನ್ ಮೇಲೆ ನೇರ ಮಿಲಿಟರಿ ಕಾರ್ಯಾಚರಣೆಯನ್ನು ಆರಂಭಿಸಿದೆ. ಮಧ್ಯಪ್ರಾಚ್ಯ ಪ್ರವಾಸದ ನಂತರ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಅಮೆರಿಕಕ್ಕೆ ಹಿಂತಿರುಗುತ್ತಿದ್ದಂತೆಯೇ ಈ ದಾಳಿ ನಡೆದಿದೆ. ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಸೀನ್ ಸಾವೆಟ್ ಹೇಳಿಕೆ ನೀಡಿದ್ದು "ಇರಾನ್‌ನಲ್ಲಿನ ಮಿಲಿಟರಿ ನೆಲೆಗಳ ಮೇಲೆ ಇಸ್ರೇಲ್ ಉದ್ದೇಶಿತ ದಾಳಿಗಳನ್ನು ನಡೆಸುತ್ತಿದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ ಎಂದು ಹೇಳಿದ್ದಾರೆ.

ಇದನ್ನು ಓದಿ:ಪಾಕಿಸ್ತಾನದ ಚೆಕ್‌ಪೋಸ್ಟ್‌ ಮೇಲೆ ಉಗ್ರರ ದಾಳಿ: ನಾಲ್ವರು ಭದ್ರತಾ ಸಿಬ್ಬಂದಿ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.