ETV Bharat / international

ಗಾಜಾ ಶಾಲಾ ಕಟ್ಟಡದ ಮೇಲೆ ಇಸ್ರೇಲ್​ ರಾಕೆಟ್​ ದಾಳಿ: ನೂರಕ್ಕೂ ಹೆಚ್ಚು ಮಂದಿ ಸಾವು - Israel rocket attack on Gaza - ISRAEL ROCKET ATTACK ON GAZA

ಇದು 'ಭಯಾನಕ ಹತ್ಯಾಕಾಂಡ' ಸಾವನ್ನಪ್ಪಿದ್ದವರ ಶವಗಳನ್ನು ಹೊರತೆಗೆಯಲು ಹಾಗೂ ಗಾಯಾಳುಗಳನ್ನು ರಕ್ಷಿಸಲು ಸಿಬ್ಬಂದಿ ಹರಸಾಹಸ ಮಾಡುತ್ತಿದ್ದಾರೆ ಎಂದು ನಾಗರಿಕ ರಕ್ಷಣಾ ಸಂಸ್ಥೆ ವಕ್ತಾರ ಮಹ್ಮದ್​ ಬಾಸ್ಸಲ್​​ ತಿಳಿಸಿದ್ದಾರೆ.

israel-rocket-attack-on-gaza-school-building-more-than-hundred-dead
ಗಾಜಾ ಶಾಲಾ ಕಟ್ಟಡದ ಮೇಲೆ ಇಸ್ರೇಲ್​ ರಾಕೆಟ್​ ದಾಳಿ: ನೂರಕ್ಕೂ ಹೆಚ್ಚು ಮಂದಿ ಸಾವು (AP)
author img

By ETV Bharat Karnataka Team

Published : Aug 10, 2024, 10:28 AM IST

Updated : Aug 10, 2024, 10:40 AM IST

ಗಾಜಾ: ಗಾಜಾ ನಗರದ ಶಾಲಾ ಕಟ್ಟಡವೊಂದರ ಮೇಲೆ ಇಸ್ರೇಲ್​ ಶನಿವಾರ ಏಕಾಏಕಿ ದಾಳಿ ನಡೆಸಿದ್ದು, ಘಟನೆಯಲ್ಲಿ ಕನಿಷ್ಠ 100 ಮಂದಿ ಸಾವನ್ನಪ್ಪಿದ್ದಾರೆ ಎಂದು ಗಾಜಾದ ನಾಗರಿಕ ರಕ್ಷಣಾ ಸಂಸ್ಥೆ ತಿಳಿಸಿದೆ. ಆದರೆ, ಇಸ್ರೇಲ್​ ಮಿಲಿಟರಿ, ಹಮಾಸ್​ ಕಮಾಂಡ್​ ಸೆಂಟರ್​ಗಳನ್ನು ಗುರಿಯಾಗಿಸಿ ದಾಳಿ ನಡೆಸಿರುವುದಾಗಿ ಹೇಳಿದೆ.

"90 ರಿಂದ 100 ಮಂದಿ ಸಾವನ್ನಪ್ಪಿದ್ದು,ಹಲವಾರು ಮಂದಿ ಗಾಯಗೊಂಡಿದ್ದಾರೆ. ಸ್ಥಳಾಂತರಗೊಂಡ ಪ್ಯಾಲೆಸ್ಟೀನಿಯಾದವರಿಗೆ ವಸತಿ ವ್ಯವಸ್ಥೆ ಹೊಂದಿದ್ದ ಶಾಲಾ ಕಟ್ಟಡದ ಮೇಲೆ ಮೂರು ಇಸ್ರೇಲಿ ರಾಕೆಟ್​ಗಳು ಅಪ್ಪಳಿಸಿದವು" ಎಂದು ರಕ್ಷಣಾ ಸಂಸ್ಥೆ ವಕ್ತಾರ ಮಹ್ಮದ್​ ಬಾಸ್ಸಲ್​​ ತಿಳಿಸಿದ್ದಾರೆ. "ದಾಳಿಯಲ್ಲಿ ನೂರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ" ಎಂದು ಗಾಜಾದ ಸರ್ಕಾರಿ ಮಾಧ್ಯಮ ಕಚೇರಿ ತಿಳಿಸಿದೆ.

"ಕೆಲವು ದೇಹಗಳು ಬೆಂಕಿಯಲ್ಲಿ ಬೇಯುತ್ತಿವೆ, ಇದು 'ಭಯಾನಕ ಹತ್ಯಾಕಾಂಡ' ಸಾವನ್ನಪ್ಪಿದ್ದವರ ಶವಗಳನ್ನು ಹೊರತೆಗೆಯಲು ಹಾಗೂ ಗಾಯಾಳುಗಳನ್ನು ರಕ್ಷಿಸಲು ಸಿಬ್ಬಂದಿ ಬೆಂಕಿಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ" ಎಂದು ಬಾಸ್ಸಲ್​, ಘಟನೆಯನ್ನು ವಿವರಿಸಿದ್ದಾರೆ.

ನಾವು ನಿಖರವಾಗಿ ಹಮಾಸ್​ ಭಯೋತ್ಪಾಕರ ಮೇಲೆ ದಾಳಿ ಮಾಡಿದ್ದೇವೆ- ಇಸ್ರೇಲ್​: ಇಸ್ರೇಲ್​ ಸೇನೆಯು ಈ ಬಗ್ಗೆ ಶನಿವಾರ ಪ್ರತಿಕ್ರಿಯಿಸಿದ್ದು, "ಅಲ್​ ತಬಾಯೀನ್​ ಶಾಲೆಯ ಕಟ್ಟಡದಲ್ಲಿ ಅಡಗಿರುವ ಹಮಾಸ್​ ಕಮಾಂಡ್​ ಮತ್ತು ಕಂಟ್ರೋಲ್​ ಸೆಂಟರ್​ನಲ್ಲಿ ಕಾರ್ಯನಿರ್ವಹಿಸುತ್ತಿರುವ ಹಮಾಸ್​ ಭಯೋತ್ಪಾದಕರನ್ನು ನಿಖರವಾಗಿ ಹೊಡೆಯಲಾಗಿದೆ" ಎಂದು ಹೇಳಿದೆ.

ಗಾಜಾ ನಗರದ ಎರಡು ಶಾಲೆಗಳ ಮೇಲೆ ಇಸ್ರೇಲಿ ದಾಳಿ ಮಾಡಿದ್ದು, 18ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು ಎಂದು ಗುರುವಾರ ರಕ್ಷಣಾ ಸಂಸ್ಥೆ ಹೇಳಿತ್ತು. ಆಗ ಹಮಾಸ್​ ಕಮಾಂಡ್​ ಸೆಂಟರ್​ಗಳ ಮೇಲೆ ದಾಳಿ ನಡೆಸಿರುವುದಾಗಿ ಇಸ್ರೇಲಿ ಸೇನೆ ಹೇಳಿತ್ತು. ಇಸ್ರೇಲಿ ಅಂಕಿ ಅಂಶಗಳ ಆಧಾರದಲ್ಲಿ ಕಳೆದ ವರ್ಷ ಅಕ್ಟೋಬರ್​ 7 ರಂದು 1198 ಮಂದಿ, ಹೆಚ್ಚಾಗಿ ನಾಗರಿಕರ ಜೀವವನ್ನು ಬಲಿ ಪಡೆದ ಹಮಾಸ್​ ದಾಳಿಯೊಂದಿಗೆ ಗಾಜಾದಲ್ಲಿ ಯುದ್ಧ ಪ್ರಾರಂಭವಾಯಿತು. ಪ್ಯಾಲೆಸ್ಟೀನಿಯನ್​ ಉಗ್ರಗಾಮಿಗಳು 251 ಮಂದಿಯನ್ನು ಒತ್ತೆಯಾಳಾಗಿಸಿಕೊಂಡರು. ಅವರಲ್ಲಿ 11 ಮಂದಿ ಇನ್ನೂ ಗಾಜಾದಲ್ಲಿ ಸೆರೆಯಲ್ಲಿದ್ದಾರೆ. ಇದರಲ್ಲಿ 39 ಮಂದಿ ಸಾವನ್ನಪ್ಪಿದ್ದಾರೆ ಎಂದು ಇಸ್ರೇಲಿ ಮಿಲಿಟರಿ ಹೇಳಿದೆ.

ಕಳೆದ 10 ತಿಂಗಳಿಂದ ಇಸ್ರೇಲ್​​​​ ಹಮಾಸ್​ ಉಗ್ರರನ್ನು ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿದೆ. ಹಮಾಸ್​ ಆಡಳಿತವಿರುವ ಪ್ರದೇಶದ ಆರೋಗ್ಯ ಸಚಿವಾಲಯದ ಪ್ರಕಾರ, ಗಾಜಾದಲ್ಲಿ ಇಸ್ರೇಲ್​ನ ಪ್ರತೀಕಾರದ ಮಿಲಿಟರಿ ಕಾರ್ಯಾಚರಣೆಯಿಂದಾಗಿ ಇದುವರೆಗೆ ಕನಿಷ್ಠ 39,699 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇದರಲ್ಲಿ ನಾಗರಿಕರು ಹಾಗೂ ಉಗ್ರಗಾಮಿಗಳ ಸಾವಿನ ವಿವರ ನೀಡಿಲ್ಲ. ಹಮಾಸ್​ ದಾಳಿಗೆ ಪ್ರತೀಕಾರವಾಗಿ ಇಸ್ರೇಲ್​ ಪ್ಯಾಲೆಸ್ಟೀನಿಯನ್​ ಗುಂಪನ್ನು ನಾಶಮಾಡಲು ಪ್ರತಿಜ್ಞೆ ಮಾಡಿದೆ.

ಹಮಾಸ್‌ನೊಂದಿಗೆ ತಿಂಗಳುಗಟ್ಟಲೆ ನಡೆದ ಭೀಕರ ಹೋರಾಟದ ನಂತರ ಏಪ್ರಿಲ್‌ನಲ್ಲಿ ಸೈನಿಕರು ಹಿಂದೆ ಸರಿದ ದಕ್ಷಿಣ ಗಾಜಾ ನಗರವಾದ ಖಾನ್ ಯೂನಿಸ್‌ನ ಸುತ್ತಲೂ ಪಡೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ಇಸ್ರೇಲ್‌ನ ಮಿಲಿಟರಿ ಶುಕ್ರವಾರ ಹೇಳಿದೆ.

ಇನ್ನೊಂದು ಕಡೆ ಇಸ್ರೇಲ್​​​​​​​​​ ಹಮಾಸ್​​​ನ ಅತ್ಯುನ್ನತ ನಾಯಕನನ್ನು ಇರಾನ್​ಗೆ ಕೊಂದು ಹಾಕಿತ್ತು. ಆದರೆ ಈ ಬಗ್ಗೆ ಅಧಿಕೃತವಾಗಿ ಇಸ್ರೇಲ್ ಏನನ್ನೂ ಹೇಳಿಕೊಂಡಿಲ್ಲ. ಆದರೆ ಇರಾನ್​ ತನ್ನ ನೆಲದಲ್ಲಿ ಹಮಾಸ್ ನಾಯಕನನ್ನು ಹತ್ಯೆ ಮಾಡಿದ್ದಕ್ಕೆ ಪ್ರತೀಕಾರ ತೆಗೆದುಕೊಳ್ಳುವುದಾಗಿ ಈಗಾಗಲೇ ಘೋಷಿಸಿದೆ. ಮಧ್ಯ ಏಷ್ಯಾದಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರೆದಿದೆ.

ಇದನ್ನೂ ಓದಿ: ಹಮಾಸ್​ ನೂತನ ಮುಖ್ಯಸ್ಥ ಸಿನ್ವರ್​ ಗಾಜಾದಲ್ಲಿ ಅಡಗಿರುವ ಶಂಕೆ: ಇಸ್ರೇಲ್​ನಿಂದ ತೀವ್ರ ಹುಡುಕಾಟ - Israel Hamas War

Last Updated : Aug 10, 2024, 10:40 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.