ಟೆಲ್ ಅವಿವ್ ,ಇಸ್ರೇಲ್ : ಹಮಾಸ್‌ನ ರಾಜಕೀಯ ಬ್ಯೂರೋದ ರಾಷ್ಟ್ರೀಯ ಸಂಬಂಧಗಳ ಮುಖ್ಯಸ್ಥ ಇಜ್ ಅಲ್-ದಿನ್ ಕಸಬ್ ಮೃತಪಟ್ಟಿದ್ದಾರೆ ಎಂದು ಇಸ್ರೇಲ್ ಸೇನೆ IDF ಘೋಷಿಸಿದೆ. ಗಾಜಾದಲ್ಲಿ ಹಮಾಸ್ ಮತ್ತು ಇತರ ಭಯೋತ್ಪಾದಕ ಸಂಘಟನೆಗಳ ನಡುವಿನ ಸಂಪರ್ಕಗಳನ್ನು ಮೇಲ್ವಿಚಾರಣೆ ಮಾಡುವಲ್ಲಿ ಕಸಬ್ ನಿರ್ಣಾಯಕ ಪಾತ್ರವನ್ನು ವಹಿಸಿದ್ದ. ಅಷ್ಟೇ ಅಲ್ಲ ಜೊತೆಗೆ ಪ್ರದೇಶದ ಇತರ ಬಣಗಳೊಂದಿಗೆ ಕಾರ್ಯತಂತ್ರ ಮತ್ತು ಮಿಲಿಟರಿ ಕಾರ್ಯಾಚರಣೆಗಳನ್ನು ಈತ ನಿರ್ದೇಶಿಸುತ್ತಿದ್ದ. ಗಾಜಾ ಪಟ್ಟಿಯಲ್ಲಿ ಜೀವಂತವಾಗಿ ಉಳಿದಿರುವ ಹಮಾಸ್‌ನ ರಾಜಕೀಯ ಬ್ಯೂರೋದ ಕೊನೆಯ ಉನ್ನತ ಶ್ರೇಣಿಯ ಸದಸ್ಯರಲ್ಲಿ ಕಸಬ್ ಒಬ್ಬರಾಗಿದ್ದರು ಎಂದು ಐಡಿಎಫ್ ಹೇಳಿಕೊಂಡಿದೆ.
ಈ ಬಗ್ಗೆ IDF ತನ್ನ ಅಧಿಕೃತ X ಹ್ಯಾಂಡಲ್ನಿಂದ ಪೋಸ್ಟ್ ಹಂಚಿಕೊಳ್ಳುತ್ತಾ, ಇಸ್ರೇಲ್ ರಕ್ಷಣಾ ಪಡೆಗಳು ಈ ಮಾಹಿತಿ ನೀಡಿವೆ. ಇಜ್ ಅಲ್-ದಿನ್ ಕಸಬ್, ಹಮಾಸ್ ರಾಜಕೀಯ ಬ್ಯೂರೋದ ರಾಷ್ಟ್ರೀಯ ಸಂಬಂಧಗಳ ಮುಖ್ಯಸ್ಥನಾಗಿದ್ದ. ಗಾಜಾದಲ್ಲಿ ಹಮಾಸ್ ಮತ್ತು ಇತರ ಭಯೋತ್ಪಾದಕ ಸಂಘಟನೆಗಳ ನಡುವಿನ ಸಮನ್ವಯ ಮತ್ತು ಸಂಪರ್ಕವನ್ನು ಈತ ಮೇಲ್ವಿಚಾರಣೆ ಮಾತ್ತಿದ್ದ. ಗಾಜಾದಲ್ಲಿನ ಇತರ ಶಾಖೆಗಳೊಂದಿಗೆ ಹಮಾಸ್‌ನ ಮಿಲಿಟರಿ ಸಂಬಂಧಗಳಿಗೆ ಕಸಬ್ ಕಾರಣನಾಗಿದ್ದ ಎಂದು IDF ಹೇಳಿದೆ. ಇಸ್ರೇಲ್ ವಿರುದ್ಧ ಭಯೋತ್ಪಾದಕ ದಾಳಿಗಳನ್ನು ನಿರ್ದೇಶಿಸುವ ಅಧಿಕಾರವನ್ನು ಆತ ಹೊಂದಿದ್ದ ಎಂದು ಪೋಸ್ಟ್ ನಲ್ಲಿ ಹೇಳಲಾಗಿದೆ.
ಈ ಬೆಳವಣಿಗೆಯು ಇಸ್ರೇಲ್ ಮತ್ತು ಹೆಜ್ಬುಲ್ಲಾ ನಡುವಣ ಉದ್ವಿಗ್ನೆತೆಯನ್ನು ಮತ್ಟಷ್ಟು ಹೆಚ್ಚುವಂತೆ ಮಾಡಿದೆ. ಕಳೆದ ತಿಂಗಳಲ್ಲಿ ಹಮಾಸ್ ಮತ್ತು ಹೆಜ್ಬುಲ್ಲಾ ಸುಮಾರು 4,400 ಕ್ಕೂ ಹೆಚ್ಚು ಸ್ಪೋಟಕಗಳನ್ನು ಇಸ್ರೇಲ್ನತ್ತ ಹಾರಿಬಿಟ್ಟಿದೆ ಎಂದು ಐಡಿಎಫ್ ಶುಕ್ರವಾರ ಹೇಳಿದೆ.
ಯುದ್ಧದ ಆರಂಭದಿಂದಲೂ ಇಸ್ರೇಲ್ ಸುಮಾರು 1,500 ಕ್ಕೂ ಹೆಚ್ಚು ಭಯೋತ್ಪಾದಕರನ್ನು ನಿರ್ಮೂಲನೆ ಮಾಡಿದ್ದೇವೆ ಎಂದು IDF ಹೇಳಿದೆ. ಇದೇ ವೇಳೆ ಲೆಬನಾನ್‌ನ ನಾಗರಿಕ ಮನೆಗಳಲ್ಲಿ ಅಡಾಲ್ಫ್ ಹಿಟ್ಲರ್ ಮತ್ತು ನಾಜಿ ಚಿಹ್ನೆಗಳ ಪ್ರತಿಮೆಯನ್ನು ಇರುವುದನ್ನು ಕಂಡು ಹಿಡಿಯಲಾಗಿದೆ ಎಂದು IDF ಹೇಳಿದೆ. ಹಿಜ್ಬುಲ್ಲಾ ಯಾವಾಗಲೂ ಇಸ್ರೇಲ್ ಅನ್ನು ನಾಶಮಾಡುವ ಗುರಿಯನ್ನು ಹೊಂದಿದೆ ಎಂದೂ ಅದು ಸೇರಿಸಿದೆ.
ದಕ್ಷಿಣ ಲೆಬನಾನ್‌ನಲ್ಲಿ ಹಿಜ್ಬುಲ್ಲಾದಿಂದ ಶೋಷಣೆಗೊಳಗಾದ ನಾಗರಿಕರ ಮನೆಗಳಲ್ಲಿ ನಾಜಿ ಚಿಹ್ನೆಗಳು ಕಂಡು ಬಂದಿರುವುದು ಕಾಕತಾಳೀಯವಲ್ಲ. ಹಿಜ್ಬುಲ್ಲಾದ ಗುರಿ ಯಾವಾಗಲೂ ಒಂದೇ ಆಗಿರುತ್ತದೆ, ಅದು ಇಸ್ರೇಲ್ ನಿರ್ಮೂಲನೆ ಮಾಡುವುದಾಗಿದೆ ಐಡಿಎಫ್ ತನ್ನ ಎಕ್ಸ್ ಪೋಸ್ಟ್ನಲ್ಲಿ ಹೇಳಿದೆ.
ಇದನ್ನು ಓದಿ:ಉತ್ತರ ಇಸ್ರೇಲ್ ಮೇಲೆ ಹಿಜ್ಬುಲ್ಲಾ ದಾಳಿ: 7 ಮಂದಿ ಸಾವು
ನಸ್ರಲ್ಲಾರ ಹೋರಾಟದ ದಾರಿಯಲ್ಲೇ ಸಾಗುವೆ: ಹಿಜ್ಬುಲ್ಲಾದ ಹೊಸ ನಾಯಕ ಖಾಸಿಮ್