ETV Bharat / international

ಸಿರಿಯಾದ ಶೇ 90ರಷ್ಟು ಕ್ಷಿಪಣಿ ವ್ಯವಸ್ಥೆ ಧ್ವಂಸ: ಇಸ್ರೇಲ್ - ISRAEL ATTACKS SYRIA

ಸಿರಿಯಾದ ಶೇ 90ರಷ್ಟು ವಾಯು ರಕ್ಷಣಾ ಸಾಮರ್ಥ್ಯವನ್ನು ನಾಶ ಮಾಡಿರುವುದಾಗಿ ಇಸ್ರೇಲ್ ಹೇಳಿದೆ.

ಸಿರಿಯಾದಲ್ಲಿ ನಡೆದ ದಾಳಿ
ಸಿರಿಯಾದಲ್ಲಿ ನಡೆದ ದಾಳಿ (IANS)
author img

By ETV Bharat Karnataka Team

Published : Dec 13, 2024, 7:46 PM IST

ಜೆರುಸಲೇಂ(ಇಸ್ರೇಲ್): ಸಿರಿಯಾದ ವಾಯು ರಕ್ಷಣಾ ವ್ಯವಸ್ಥೆಯನ್ನು ತೀವ್ರವಾಗಿ ಹಾನಿಗೊಳಿಸಿರುವುದಾಗಿ ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಘೋಷಿಸಿದೆ. ಸಿರಿಯಾದ ಮೇಲ್ಮೈಯಿಂದ ಗಾಳಿಯಲ್ಲಿ ದಾಳಿ ನಡೆಸಬಲ್ಲ ಶೇ 90ರಷ್ಟು ಕ್ಷಿಪಣಿ ವ್ಯವಸ್ಥೆಯನ್ನು ನಾಶ ಮಾಡಲಾಗಿದೆ ಎಂದು ಅದು ಹೇಳಿದೆ. ಬಷರ್ ಅಲ್-ಅಸ್ಸಾದ್ ಸರ್ಕಾರದ ಪತನದ ಹಿನ್ನೆಲೆಯಲ್ಲಿ ಸಿರಿಯಾದ ಪರಿಸ್ಥಿತಿಯನ್ನು ಸಮಗ್ರವಾಗಿ ಮೌಲ್ಯಮಾಪನ ಮಾಡುತ್ತಿರುವುದಾಗಿ ಐಡಿಎಫ್ ತಿಳಿಸಿದೆ.

ಕಳೆದ ಹಲವಾರು ದಿನಗಳಲ್ಲಿ ನೂರಾರು ಇಸ್ರೇಲಿ ಫೈಟರ್ ಜೆಟ್​ಗಳು ಮತ್ತು ವಿಮಾನಗಳು ಸಿರಿಯಾದ ಫೈಟರ್ ಜೆಟ್​ಗಳು, ಹೆಲಿಕಾಪ್ಟರ್​ಗಳು, ಕ್ಷಿಪಣಿಗಳು, ಯುಎವಿಗಳು, ರಾಡಾರ್​ಗಳು ಮತ್ತು ರಾಕೆಟ್​ಗಳು ಸೇರಿದಂತೆ ಅದರ ಅತ್ಯಂತ ಕಾರ್ಯತಂತ್ರದ ಶಸ್ತ್ರಾಸ್ತ್ರಗಳನ್ನು ಗಮನಾರ್ಹವಾಗಿ ಧ್ವಂಸಗೊಳಿಸಿವೆ.

ಸಿರಿಯಾದ ಹಲವು ಪ್ರಮುಖ ವಾಯುನೆಲೆಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ. ಉತ್ತರ ಡಮಾಸ್ಕಸ್ ಬಳಿಯ ಟಿ 4 ವಿಮಾನ ನಿಲ್ದಾಣವು ಗಮನಾರ್ಹವಾಗಿ ಹಾನಿಗೊಳಗಾಗಿದ್ದು, ಅಲ್ಲಿ ಬೀಡುಬಿಟ್ಟಿದ್ದ ಎಸ್​ಯು -22 ಮತ್ತು ಎಸ್​ಯು -24 ಫೈಟರ್ ಸ್ಕ್ವಾಡ್ರನ್​ಗಳು ಸಂಪೂರ್ಣವಾಗಿ ನಾಶವಾಗಿವೆ. ಮೂರು ಹೆಚ್ಚುವರಿ ಫೈಟರ್ ಸ್ಕ್ವಾಡ್ರನ್​ಗಳನ್ನು ಹೊಂದಿರುವ "ಬ್ಲೆ" ವಿಮಾನ ನಿಲ್ದಾಣ ಮತ್ತು ಹತ್ತಿರದ ಶಸ್ತ್ರಾಸ್ತ್ರ ಶೇಖರಣಾ ಸ್ಥಳವೂ ಇಸ್ರೇಲ್ ದಾಳಿಯಲ್ಲಿ ಹಾನಿಗೊಳಗಾಗಿದೆ.

ಸಿರಿಯಾದಲ್ಲಿನ ಹೊಸ ಸರ್ಕಾರದೊಂದಿಗೆ ಹೇಗೆ ವ್ಯವಹರಿಸಬೇಕೆಂದು ಮಧ್ಯಪ್ರಾಚ್ಯ ಮತ್ತು ಅದರಾಚೆಗಿನ ದೇಶಗಳು ಯೋಚಿಸುತ್ತಿರುವ ಮಧ್ಯೆ ಈ ವಿಷಯದಲ್ಲಿ ಇಸ್ರೇಲ್ ಒಂದು ಹೆಜ್ಜೆ ಮುಂದೆ ಹೋಗಿದೆ. ತನ್ನ ದೇಶದ ಸುರಕ್ಷತೆಗೆ ಧಕ್ಕೆ ಬರಕೂಡದು ಎಂಬ ತನ್ನ ಬೇಡಿಕೆಯನ್ನು ಸಿರಿಯಾ ಸರ್ಕಾರ ಒಪ್ಪುವವರೆಗೂ ಪ್ರಸ್ತುತ ತನ್ನ ನಿಯಂತ್ರಣದಲ್ಲಿರುವ ಸಿರಿಯನ್ ಭೂಪ್ರದೇಶದಲ್ಲಿಯೇ ಮಿಲಿಟರಿ ನಿಯೋಜಿತವಾಗಿರಲಿದೆ ಎಂದು ಅದು ಹೇಳಿದೆ.

ಅಸ್ಸಾದ್ ಆಡಳಿತದ ಹಠಾತ್ ಕುಸಿತದಿಂದ ಸಿರಿಯಾದೊಂದಿಗಿನ ಇಸ್ರೇಲ್​ನ ಗಡಿಯಲ್ಲಿ ನಿರ್ವಾತ ಸ್ಥಿತಿ ಉಂಟಾಗಿದೆ ಮತ್ತು ಜಿಹಾದಿ ಗುಂಪುಗಳು ಆ ಖಾಲಿತನದ ಸ್ಥಿತಿಯನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ಮತ್ತು ಇಸ್ರೇಲಿ ಜನರಿಗೆ ಅಪಾಯ ಉಂಟು ಮಾಡುವುದನ್ನು ಇಸ್ರೇಲ್ ಸಹಿಸಲಾರದು ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.

ಇರಾನ್ ತನ್ನ ಅಸ್ತಿತ್ವವನ್ನು ಸ್ಥಾಪಿಸಲು ಅಥವಾ ಹಿಜ್ಬುಲ್ಲಾಗೆ ಶಸ್ತ್ರಾಸ್ತ್ರಗಳನ್ನು ವರ್ಗಾಯಿಸಲು ಅವಕಾಶ ನೀಡದಂತೆ ನೆತನ್ಯಾಹು ಹೊಸ ಸಿರಿಯನ್ ಆಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ. ಸಿರಿಯಾದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವ ಉದ್ದೇಶವನ್ನು ಇಸ್ರೇಲ್ ಹೊಂದಿಲ್ಲವಾದರೂ, ತನ್ನ ಭದ್ರತೆಗೆ ಬೆದರಿಕೆ ಕಂಡು ಬಂದರೆ ಅಗತ್ಯ ಕ್ರಮ ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ : ಟ್ರಂಪ್ ಅಚ್ಚರಿಯ ನಡೆ: ಪದಗ್ರಹಣ ಸಮಾರಂಭಕ್ಕೆ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್‌ಗೆ ಆಹ್ವಾನ - TRUMP INVITES XI JINPING

ETV Bharat Logo

Copyright © 2025 Ushodaya Enterprises Pvt. Ltd., All Rights Reserved.