ಹೈದರಾಬಾದ್: ಪ್ರತಿ ವರ್ಷ ಮೇ 10 ಅನ್ನು ಅಂತಾರಾಷ್ಟ್ರೀಯ ಅರ್ಗಾನ್ ದಿನವನ್ನಾಗಿ ಆಚರಿಸಲಾಗುತ್ತದೆ. ಈ ಮೂಲಕ 80 ಮಿಲಿಯನ್ ವರ್ಷಗಳ ಇತಿಹಾಸ ಹೊಂದಿರುವ ಮೊರಾಕ್ಕೋದಲ್ಲಿ ಪ್ರಾಚೀನ ಮರದ ಪ್ರಾಮುಖ್ಯತೆ ಸಾರಲಾಗುವುದು. ಇದು ಕೇವಲ ಪ್ರಾಚೀನ ಮರವಲ್ಲ, ಇದು ಸ್ಥಳೀಯ ಆರ್ಥಿಕತೆ ಮತ್ತು ಪರಿಸರದ ಮೇಲೆ ನಿರ್ಣಾಯಕ ಪಾತ್ರ ಹೊಂದಿದೆ. ಈ ದಿನ ಆಚರಣೆ ಮಾಡುವ ಮೂಲಕ ಇದರ ಕುರಿತು ಜಾಗೃತಿ, ಮರದ ವೈಶಿಷ್ಟ್ಯ ಮತ್ತು ಪ್ರಯೋಜನ ಹಾಗೂ ಸವಾಲುಗಳನ್ನು ತಿಳಿಯುವ ಪ್ರಯತ್ನ ನಡೆಸಲಾಗುವುದು.
ಮೊರಾಕ್ಕೋದ ಉಪ ಸಹರನ್ ಪ್ರದೇಶದ ಸ್ಥಳೀಯ ತಳಿಯ ಮರ ಇದಾಗಿದೆ. ಇದು ಶುಷ್ಕ ಮತ್ತು ಅರೆ ಶುಷ್ಕ ಪ್ರದೇಶಗಳಲ್ಲಿ ಬೆಳೆಯುತ್ತದೆ. ಕಾಡುಪ್ರದೇಶದ ಪರಿಸರ ವ್ಯವಸ್ಥೆಯನ್ನು ಈ ಮರ ಕಾಪಾಡುತ್ತದೆ. ಇದನ್ನು ಅರ್ಗಾನೆರೈ ಎಂದೂ ಕರೆಯುತ್ತಾರೆ. ಇದು ಸ್ಥಳೀಯ ಸಸ್ಯವರ್ಗದಲ್ಲಿ ಸಮೃದ್ಧವಾಗಿದೆ. ಇದು ನೀರಿನ ಕೊರತೆ, ಸವೆತದ ಅಪಾಯ ಮತ್ತು ಕಳಪೆ ಮಣ್ಣಿನ ಪರಿಸರದ ಸ್ಥಿತಿಸ್ಥಾಪಕವಾಗಿದೆ.
ಸಂರಕ್ಷಣೆಯಿಂದ ಮಾತ್ರವಲ್ಲದೇ ಇದು ಸಾಮಾಜಿಕ ಅರ್ಥಿಕ ಅಭಿವೃದ್ಧಿಯಿಂದಲೂ ಈ ಮರ ಪ್ರಮುಖವಾಗಿದೆ. ಇದನ್ನು ಅರಣ್ಯ, ಕೃಷಿ ಮತ್ತು ಜಾನುವಾರುಗಳಿಗಾಗಿ ಬಳಕೆಗೆ ಮಾಡಲಾಗುವುದು. ಅರ್ಗಾನ್ ಮರದ ಕಾಡುಗಳು, ಅರಣ್ಯ ಉತ್ಪನ್ನಗಳು, ಹಣ್ಣುಗಳು ಮತ್ತು ಮೇವನ್ನು ಒದಗಿಸುತ್ತವೆ. ಈ ಮರದ ಉತ್ಪನ್ನಗಳು ತಿನ್ನಲು ಯೋಗ್ಯವಾಗಿದೆ. ಬರಗಾಲದಲ್ಲೂ ಇವು ಮೇವನ್ನು ನೀಡುತ್ತದೆ.
ಈ ಮರಗಳು ಅಡುಗೆ ಮತ್ತು ಶಾಖಕ್ಕೆ ಕಟ್ಟಿಗೆಯನ್ನು ನೀಡುತ್ತದೆ. ಜೊತೆಗೆ ವಿಶ್ವ ಪ್ರಸಿದ್ದ ಅರ್ಗಾನ್ ಎಣ್ಣೆಯನ್ನು ಈ ಮರದ ಬೀಜಗಳಿಂದ ಸಂಸ್ಕರಿಸಲಾಗುತ್ತದೆ. ಜೊತೆಗೆ ಸಾಂಪ್ರದಾಯಿಕ ಮತ್ತು ಆಧುನಿಕ ಔಷಧ ಹಾಗೂ ಅಡುಗೆ ಮತ್ತು ಸೌಂದರ್ಯ ವರ್ಧಕ ಉದ್ಯಮದಲ್ಲೂ ಈ ಮರಗಳು ಉಪಯುಕ್ತವಾಗಿವೆ.
ಅರ್ಗಾನ್ ಮರದ ಕುರಿತು: ವಿಶಿಷ್ಟ ಪ್ರದೇಶದಲ್ಲಿ ಬೆಳೆಯುವ ಈ ಮರವು ಕೃಷಿ ವೈವಿಧ್ಯತೆಯನ್ನು ಹೊಂದಿದೆ. ಪರಿಸರ ವ್ಯವಸ್ಥೆಗಳು ಮತ್ತು ಮೌಲ್ಯಯುತವಾದ ಸಾಂಸ್ಕೃತಿಕ ಪರಂಪರೆ ಹೊಂದಿದೆ. ಈ ಕಾರಣದಿಂದಾಗಿ ಮರವನ್ನು ವಿಶ್ವ ಸಂಸ್ಥೆಯನ್ನು ಗುರುತಿಸಲಾಗಿದ್ದು, 1988ರಲ್ಲಿ ಯುನೆಸ್ಕೋ ಸ್ಥಳೀಯ ಉತ್ಪಾದನಾ ಪ್ರದೇಶವನ್ನು ಅರ್ಗಾನ್ ರೈ ಬಯೋಸ್ಪಿಯರ್ ರಿಸರ್ವ್ ಎಂದು ಗುರುತಿಸಿದೆ.
2021 ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೇ 10ರಂದು ಅರ್ಗಾನಿಯಾದ ಅಂತಾರಾಷ್ಟ್ರೀಯ ದಿನವೆಂದು ಘೋಷಿಸಿತು. ಮೊರಾಕ್ಕೋ ಸಲ್ಲಿಸಿದ ನಿರ್ಣಯವನ್ನು ವಿಶ್ವಸಂಸ್ಥೆಯ 113 ಸದಸ್ಯ ರಾಷ್ಟ್ರಗಳು ಸಹ-ಪ್ರಾಯೋಜಿಸಿದವು ಮತ್ತು ಒಮ್ಮತದಿಂದ ಅಂಗೀಕರಿಸಿದವು.
ಮರದ ಕುರಿತು ಆಸಕ್ತಿಕರ ಅಂಶಗಳು
- ಮೊರಾಕ್ಕೋ ಮತ್ತು ವಿಶ್ವಸಂಸ್ಥೆಯು ಅರ್ಗಾನಿಯಾದ ಅಂತಾರಾಷ್ಟ್ರೀಯ ದಿನವನ್ನು ಆಚರಿಸುತ್ತದೆ.
- ಅರ್ಗಾನ್ ಮರಗಳು ಸುಮಾರು 80 ಮಿಲಿಯನ್ ವರ್ಷಗಳ ಪ್ರಾಚೀನ ಇತಿಹಾಸವನ್ನು ಹೊಂದಿವೆ.
- ಇದು ಸಮುದಾಯದ ಅಭಿವೃದ್ಧಿ ಮತ್ತು ಸುಸ್ಥಿರತೆಯಲ್ಲಿ ಅರ್ಗಾನ್ ಮರದ ಪಾತ್ರ ಪ್ರಮುಖವಾಗಿದೆ.
- ರೈತರು ಮತ್ತು ಜಾನುವಾರು ಸಾಕುವವರು ಅರ್ಗಾನ್ ಮರವನ್ನು ಉರುವಲು ಮತ್ತು ಮೇವಿನ ಆಹಾರಕ್ಕಾಗಿ ಉಪಯೋಗಿಸುತ್ತಿದ್ದಾರೆ
- ಮೊರಾಕ್ಕೋದ ಶಾಖದಿಂದ ಉಂಟಾಗುವ ಶುಷ್ಕತೆ ನಿವಾರಣೆಯಲ್ಲಿ ಅರ್ಗಾನ್ ಎಣ್ಣೆ ಪ್ರಮುಖವಾಗಿದೆ.
- ಈ ಮರಗಳು 33 ಅಡಿ ಉದ್ದ ಬೆಳೆಯುತ್ತವೆ.
- ಮೊರಾಕ್ಕೋ ಸಂಸ್ಕೃತಿಯಲ್ಲಿ ಈ ಮರ ಪ್ರಮುಖವಾಗಿದೆ. ದೇಶದ ರಫ್ತಿನಲ್ಲಿ ಪ್ರಮುಖವಾಗಿ ಈ ಮರದ ಉತ್ಪನ್ನಗಳಿವೆ
- ಮೊರಾಕ್ಕೋ ವಾರ್ಷಿಕವಾಗಿ 4 ಸಾವಿರದಿಂದ 6 ಸಾವಿರ ಟನ್ ಅರ್ಗಾನ್ ಎಣ್ಣೆ ಉತ್ಪಾದಿಸುತ್ತದೆ
- ಯುನೆಸ್ಕೊ ಅರ್ಗಾನ್ ಮರವನ್ನು 2014 ರಲ್ಲಿ ಮಾನವೀಯತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆ ಪ್ರತಿನಿಧಿ ಪಟ್ಟಿಗೆ ಸೇರಿಸಿದೆ.
ಅಂತಾರಾಷ್ಟ್ರೀಯ ದಿನದ ಪ್ರಾಮುಖ್ಯುತೆ
- ಅರ್ಗಾನ್ ಮರದ ಕುರಿತು ಜಾಗೃತಿ ಹೆಚ್ಚಿಸುವುದು.
- ಅರ್ಗಾನ್ ಮರದ ಮುನ್ನಲೆಗೆ ತರುವುದು.
- ದೊಡ್ಡ ಸಸ್ಯದ ಮೇಲೆ ಗಮನ ಹೆಚ್ಚಿಸುವುದು.
- ಈ ದಿನದ ಕಾರಣಕ್ಕಾಗಿ ಎಲ್ಲರನ್ನೂ ಒಟ್ಟುಗೂಡಿಸುತ್ತದೆ.
ಇದನ್ನೂ ಓದಿ: ಬಯಲು ಸೀಮೆಯಲ್ಲೂ ಶ್ರೀಗಂಧ, ಅಡಿಕೆ, ಸಾಗುವಾನಿ ಮರ: ನಳನಳಿಸುತ್ತಿವೆ ವಾಣಿಜ್ಯ ಬೆಳೆ