ETV Bharat / international

ಯುಎಸ್​ ಕಾಂಗ್ರೆಸ್​​ಗೆ ಸ್ಪರ್ಧಿಸಲು ಅರಿಜೋನಾ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಅಮಿಶ್ ಶಾ - Indian American lawmaker

ಅಮೆರಿಕ ಸಂಸತ್​ಗೆ ಸ್ಪರ್ಧಿಸುವ ನಿಟ್ಟಿನಲ್ಲಿ ಅರಿಜೋನಾ ರಾಜ್ಯದಲ್ಲಿರುವ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ ಸ್ಥಾನಕ್ಕೆ ಭಾರತೀಯ ಅಮೆರಿಕನ್​ ಅಮಿಶ್ ಶಾ ರಾಜೀನಾಮೆ ನೀಡಿದ್ದಾರೆ.

Indian-American lawmaker from Arizona resigns to focus on congressional run
ಯುಎಸ್​ ಕಾಂಗ್ರೆಸ್​​ಗೆ ಸ್ಪರ್ಧಿಸಲು ಅರಿಜೋನಾ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಅಮಿಶ್ ಶಾ
author img

By ETV Bharat Karnataka Team

Published : Feb 9, 2024, 12:32 PM IST

ನ್ಯೂಯಾರ್ಕ್: ಚುನಾವಣೆ ಪ್ರಚಾರದತ್ತ ಗಮನಹರಿಸಲು ಭಾರತೀಯ - ಅಮೆರಿಕನ್ ವೈದ್ಯ ಅಮಿಶ್ ಶಾ ಅವರು ಅಮೆರಿಕದ ಅರಿಜೋನಾ ರಾಜ್ಯದಲ್ಲಿರುವ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅರಿಜೋನಾ ಶಾಸಕಾಂಗದಲ್ಲಿ ಸೇವೆ ಸಲ್ಲಿಸಿದ ಮೊದಲ ಭಾರತೀಯ - ಅಮೆರಿಕನ್ ಎಂಬ ಹೆಗ್ಗಳಿಕೆ ಪಡೆದುಕೊಂಡಿರುವ ಅಮಿಶ್​ ಶಾ, ಕಳೆದ ವರ್ಷ ರಾಜ್ಯದ 1 ನೇ ಕಾಂಗ್ರೆಷನಲ್ ಡಿಸ್ಟ್ರಿಕ್ಟ್‌ನಿಂದ ಡೆಮಾಕ್ರಟ್ ಆಗಿ ತಮ್ಮ ಉಮೇದುವಾರಿಕೆ ಘೋಷಿಸಿಕೊಂಡಿದ್ದಾರೆ. 46 ವರ್ಷ ವಯಸ್ಸಿನ ಶಾ ಪ್ರಚಾರದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದಾರೆ.

ಮಿಶ್ರ ಭಾವನೆಗಳೊಂದಿಗೆ ನನ್ನ ಪ್ರಚಾರವನ್ನು ಮುಂದುವರಿಸಲು ನಾನು ಈ ವಾರ ಹೌಸ್ ಆಫ್​​ ರೆಪ್ರೆಸೆಂಟೆಟಿವ್ಸ್​​ಗೆ ರಾಜೀನಾಮೆ ನೀಡಿದ್ದೇನೆ. ರಾಜ್ಯ ಶಾಸಕಾಂಗದಲ್ಲಿ ಸೇವೆ ಸಲ್ಲಿಸುವುದು ನಂಬಲಾಗದ ಗೌರವ. ಈ ಸೇವೆ ವೈವಿಧ್ಯಮಯ ದೃಷ್ಟಿಕೋನಗಳನ್ನು ನೀಡುತ್ತದೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ನಮ್ಮ ಸಾಮೂಹಿಕ ಮೌಲ್ಯಗಳನ್ನು ರಾಷ್ಟ್ರೀಯ ವೇದಿಕೆಗೆ ತರಲು ನಾನು ಉತ್ಸುಕನಾಗಿದ್ದೇನೆ. ಎಂದು ಶಾ ತಮ್ಮ X ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

15 ವರ್ಷಗಳಿಂದ ವೈದ್ಯರಾಗಿ ಸೇವೆ ಸಲ್ಲಿಸಿರುವ ಶಾ ಅವರೊಂದಿಗೆ ಕನಿಷ್ಠ ಆರು ಇತರ ಅಭ್ಯರ್ಥಿಗಳು ಡೆಮಾಕ್ರಟಿಕ್ ಉಮೇದುವಾರಿಕೆ ಬಯಸುತ್ತಿದ್ದಾರೆ, ಇದು ಸ್ಕಾಟ್ಸ್‌ಡೇಲ್ ಮತ್ತು ಉತ್ತರ ಫೀನಿಕ್ಸ್‌ನ ಭಾಗಗಳನ್ನು ಒಳಗೊಂಡಿದೆ. ಶಾ ದೇಶದ ಪ್ರಮುಖ ಸಮಸ್ಯೆಗಳಾದ ಶಿಕ್ಷಣ, ಆರೋಗ್ಯ ಮತ್ತು ಮತದಾನದ ಹಕ್ಕುಗಳು ಬಗ್ಗೆ ಧ್ವನಿ ಎತ್ತಲು ನಿರ್ಧರಿಸಿದ್ದಾರೆ. ಕಾರ್ಮಿಕರಿಗೆ ನ್ಯಾಯಯುತ ವೇತನ, ಸಾರ್ವತ್ರಿಕ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಲು ತೀರ್ಮಾನಿಸಿದ್ದಾರೆ.

ಶಾ ಅವರ ಸೇವೆ ಮತ್ತು ನಾಯಕತ್ವಕ್ಕೆ ಧನ್ಯವಾದ ಅರ್ಪಿಸುತ್ತಾ, ಅರಿಜೋನಾ ಹೌಸ್ ಡೆಮೋಕ್ರಾಟ್‌ಗಳು ಹೀಗೆ ಹೇಳಿದ್ದಾರೆ. ಇದು ಸಕಾಲಿಕ ನಿರ್ಧಾರವಾಗಿದೆ. @DrAmishShah ಅವರು ಹೌಸ್ ಆಫ್​ ರೆಪ್ರೆಸೆಂಟೇಟಿವ್​​ ಸಹೋದ್ಯೋಗಿಗಳಿಗೆ ಪ್ರೀತಿಯ ಮತ್ತು ಚಿಂತನಶೀಲ ವಿದಾಯ ಹೇಳಿದ್ದಾರೆ. ಕಾಂಗ್ರೆಸ್‌ಗೆ ಸ್ಪರ್ಧಿಸುತ್ತಿರುವ ಡಾ ಶಾ ಅವರು 5 ವರ್ಷಗಳ ಅಧಿಕಾರದ ನಂತರ ಇಂದು ರಾಜೀನಾಮೆ ನೀಡಿದ್ದಾರೆ ಎಂದು ಗುಣಗಾನ ಮಾಡಿದ್ದಾರೆ.

ಶಾ ಅವರ ನಿರ್ಗಮನದಿಂದ ಸದನದಲ್ಲಿ ಮೂರು ಸ್ಥಾನಗಳು ಖಾಲಿ ಆಗಿವೆ ಎಂದು ಅರಿಜೋನಾ ಮೂಲದ KGUN9 ಸುದ್ದಿ ವಾಹಿನಿ ವರದಿ ಮಾಡಿದೆ. ಶಾ ಅವರು ತಮ್ಮ ಕಾಂಗ್ರೆಸ್ ಅಭಿಯಾನದ ಆರಂಭಿಕ ತ್ರೈಮಾಸಿಕದಲ್ಲಿ ವೈಯಕ್ತಿಕ ದಾನಿಗಳಿಂದ $530,000 ಗಿಂತ ಹೆಚ್ಚಿನ ಹಣವನ್ನು ಸಂಗ್ರಹಿಸಿದ್ದಾರೆ. ಮತ್ತು ಈ ಪೈಕಿ 75 ಪ್ರತಿಶತದಷ್ಟು ದಾನಿಗಳು ಅರಿಜೋನಾದಿಂದ ಬಂದವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪಡೆದ ಸಹಾಯವನ್ನು ಹಿಂತಿರುಗಿ ನೀಡುವುದು ನನ್ನ ಕರ್ತವ್ಯವಾಗಿದೆ. ಅಷ್ಟೇ ಅಲ್ಲ ಅದೊಂದು ಪ್ರಮುಖ ಮೌಲ್ಯವೂ ಆಗಿದೆ. ನನ್ನ ಹೆತ್ತವರು ಉತ್ತಮ ಜೀವನವನ್ನು ಮುಂದುವರಿಸಲು ಭಾರತದಿಂದ ಈ ದೇಶಕ್ಕೆ ಬಂದರು, ಇದರಿಂದಾಗಿಯೇ ನಾನು ವೈದ್ಯನಾಗಲು ಸಾಧ್ಯವಾಯಿತು. ಮತ್ತು ಮೊದಲ ಭಾರತೀಯ - ಅಮೆರಿಕನ್ ಆಗಿ ಅರಿಜೋನಾ ಶಾಸಕಾಂಗದಲ್ಲಿ ಸೇವೆ ಸಲ್ಲಿಸಲು ದಾರಿ ಮಾಡಿಕೊಟ್ಟಿತು‘‘ ಎಂದು ಅವರು ನೆನಪು ಮಾಡಿಕೊಂಡಿದ್ದಾರೆ.

ಚಿಕಾಗೋದಲ್ಲಿ ಹುಟ್ಟಿ ಬೆಳೆದ ಶಾ ಅವರ ಪೋಷಕರು 1960 ರ ದಶಕದಲ್ಲಿ ಭಾರತದಿಂದ ವಲಸೆ ಬಂದ ಎಂಜಿನಿಯರಿಂಗ್ ವಿದ್ಯಾರ್ಥಿಗಳಾಗಿದ್ದಾರೆ. ಇವಾನ್‌ಸ್ಟನ್‌ನಲ್ಲಿರುವ ನಾರ್ತ್‌ವೆಸ್ಟರ್ನ್ ವಿಶ್ವವಿದ್ಯಾಲಯದಲ್ಲಿ ಶಾ ವ್ಯಾಸಂಗ ಮಾಡಿದರು. ಅರ್ಥಶಾಸ್ತ್ರದಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್‌ನೊಂದಿಗೆ ಕಮ್ ಲಾಡ್ ಪದವಿ ಕೂಡಾ ಪಡೆದಿದ್ದಾರೆ. ಇನ್ನು ವಾಯುವ್ಯ ವಿಶ್ವವಿದ್ಯಾಲಯದ ವೈದ್ಯಕೀಯ ಪದವಿ ಕೂಡಾ ಪಡೆದುಕೊಂಡಿದ್ದಾರೆ.

ಇದನ್ನು ಓದಿ: ಅಮೆರಿಕದಲ್ಲಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ಶವವಾಗಿ ಪತ್ತೆ; ತಿಂಗಳಲ್ಲಿ 6ನೇ ಘಟನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.