ETV Bharat / international

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದಾಳಿಗೆ ಯುಎಸ್​ ರಾಜಕೀಯ ನಾಯಕನ ಕಳವಳ - Call for normalcy in Bangladesh - CALL FOR NORMALCY IN BANGLADESH

ಭಾರತೀಯ-ಅಮೆರಿಕನ್ ರಾಜಕೀಯ ನಾಯಕ ಶ್ರೀ ಥನೇದರ್ ಅವರು ಬಾಂಗ್ಲಾದೇಶದಲ್ಲಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವಂತೆ ಕರೆ ನೀಡಿದ್ದಾರೆ. ಜೊತೆಗೆ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದಾಳಿಗೆ ಅವರು ಕಳವಳ ವ್ಯಕ್ತಪಡಿಸಿದ್ದಾರೆ.

Shri Thanedar  Bangladesh  Bangladesh violence  Muhammad Yunus
ಭಾರತೀಯ-ಅಮೆರಿಕನ್ ರಾಜಕೀಯ ನಾಯಕ ಶ್ರೀ ಥನೇದರ್ (ANI)
author img

By ANI

Published : Aug 9, 2024, 7:49 AM IST

ಮಿಚಿಗನ್ (ಅಮೆರಿಕ): ''ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರ ಕೊನೆಗಾಣಬೇಕು. ಪ್ರಸ್ತುತ ಪ್ರಕ್ಷುಬ್ಧತೆಯನ್ನು ದೇಶದ ಪ್ರಜಾಪ್ರಭುತ್ವಕ್ಕೆ ತೀವ್ರ ಬೆದರಿಕೆಯಾಗಿದೆ'' ಎಂದು ಭಾರತೀಯ-ಅಮೆರಿಕನ್ ಕಾಂಗ್ರೆಸ್​ನ ನಾಯಕ ಶ್ರೀ ಥನೇದರ್ ತೀವ್ರ ಆತಂಕ ವ್ಯಕ್ತಪಡಿಸಿದರು.

ಬಾಂಗ್ಲಾದೇಶದಲ್ಲಿ ಇತ್ತೀಚಿನ ಹಿಂಸಾಚಾರದ ಘಟನೆಗಳ ಕುರಿತು ಪ್ರಕ್ರಿಯೆ ನೀಡಿದ ಅವರು, "ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಪ್ರಕ್ಷುಬ್ಧತೆಯು ಭಯಾನಕವಾಗಿದೆ. ಆ ದೇಶದ ಪ್ರಜಾಪ್ರಭುತ್ವಕ್ಕೆ ಬೆದರಿಕೆಯಾಗಿದೆ. ಕಳೆದ ತಿಂಗಳು, ವಿದ್ಯಾರ್ಥಿಗಳು ಮತ್ತು ನಾಗರಿಕರಿಂದ ನಡೆದ ಉಗ್ರ ಪ್ರತಿಭಟನೆಗಳು ನಡೆದಿದ್ದವು. ಈ ವೇಳೆಯಲ್ಲಿ ಸೃಷ್ಟಿಯಾದ ಹಿಂಸಾಚಾರದಲ್ಲಿ ನೂರಾರು ಜನರು ಸಾವನ್ನಪ್ಪಿದ್ದಾರೆ. ಹಿಂದೂಗಳು, ಬೌದ್ಧರು ಮತ್ತು ಕ್ರಿಶ್ಚಿಯನ್ನರು ಸೇರಿದಂತೆ ಅಲ್ಪಸಂಖ್ಯಾತರು ತುಂಬಾ ಕಿರುಕುಳ ಅನುಭವಿಸಿದ್ದಾರೆ" ಎಂದು ಶ್ರೀ ಥನೇದರ್ ಕಳವಳ ವ್ಯಕ್ತಪಡಿಸಿದ್ದಾರೆ.

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂ ಸಮುದಾಯವನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, "ಬಾಂಗ್ಲಾದೇಶದಲ್ಲಿರುವ ಹಿಂದೂ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ನಡೆಸಲಾದ ದಾಳಿಗಳ ವರದಿಗಳ ಬಗ್ಗೆ ನಾನು ತೀವ್ರ ಕಳವಳಗೊಂಡಿದ್ದೇನೆ. ದೇವಾಲಯಗಳನ್ನು ನಾಶಪಡಿಸಲಾಗಿದೆ, ಮನೆಗಳನ್ನು ನೆಲಸಮಗೊಳಿಸಿರುವುದು ಮತ್ತು ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವುದು ಖಂಡನೀಯವಾಗಿವೆ" ಎಂದು ಅವರು ಕಿಡಿಕಾರಿದ್ದಾರೆ.

ಹಿಂಸಾಚಾರ ಕೊನೆಗಾಣಿಸುವಂತ ಕರೆ: ಹಿಂಸಾಚಾರವನ್ನು ಕೊನೆಗಾಣಿಸುವಂತೆ ಥಾನೇದಾರ್ ಎಲ್ಲಾ ಬಾಂಗ್ಲಾದೇಶೀಯರಿಗೆ ಕರೆ ನೀಡಿದರು. "ಆಗಸ್ಟ್ 6 ರಂದು, ಪ್ರಧಾನಿ ಶೇಖ್ ಹಸೀನಾ ಅವರು ಕಚೇರಿಗೆ ರಾಜೀನಾಮೆ ನೀಡಿ ಭಾರತಕ್ಕೆ ಪಲಾಯನ ಮಾಡಿದ್ದರು. ಇದಾದ ಬಳಿಕ ಬಾಂಗ್ಲಾದೇಶ ಪರಿಸ್ಥಿತಿ ಅಸ್ತವ್ಯಸ್ತವಾಗಿತ್ತು. ಬಳಿಕ ಸೇನೆಯು ಬಾಂಗ್ಲಾದೇಶದ ಉಸ್ತುವಾರಿ ವಹಿಸಿಕೊಂಡಿತು. ಬಾಂಗ್ಲಾದೇಶವು ತನ್ನ ಮಧ್ಯಂತರ ಸರ್ಕಾರಕ್ಕೆ ಪರಿವರ್ತನೆಯಾಗುತ್ತಿದ್ದಂತೆ, ನಾನು ಪ್ರತಿ ಬಾಂಗ್ಲಾದೇಶದ ನಾಯಕತ್ವ ವಹಿಸಿಕೊಂಡ ನಾಯಕರಿಂದ ಹಿಡಿದು ಜನಸಾಮಾನ್ಯರವರೆಗೆ ಮನವಿ ಮಾಡುತ್ತೇನೆ. ಬಾಂಗ್ಲಾದೇಶವನ್ನು ಬಾಧಿಸುತ್ತಿರುವ ಹಿಂಸಾಚಾರವನ್ನು ಕೊನೆಗಾಣಿಸಿ'' ಎಂದು ಸಲಹೆ ನೀಡಿದರು.

ಪರಿಸ್ಥಿತಿ ಮೇಲ್ವಿಚಾರಣೆಗೆ ವಾಗ್ದಾನ: ಥಾನೇದಾರ್ ಅವರು ಅಮೆರಿಕ ವಿದೇಶಾಂಗ ಇಲಾಖೆಯೊಂದಿಗೆ ಸಮನ್ವಯದಿಂದ ಪರಿಸ್ಥಿತಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಲಾಗುವುದು ಎಂದು ವಾಗ್ದಾನ ಮಾಡಿದರು. "ಯುಎಸ್ ಸ್ಟೇಟ್ ಡಿಪಾರ್ಟ್‌ಮೆಂಟ್‌ನೊಂದಿಗೆ ಸಮನ್ವಯದೊಂದಿಗೆ ಬಾಂಗ್ಲಾದೇಶದಲ್ಲಿನ ಬೆಳವಣಿಗೆಗಳ ಮೇಲೆ ನಿಕಟವಾಗಿ ಮೇಲ್ವಿಚಾರಣೆ ಮಾಡಲು ನಾನು ಪ್ರತಿಜ್ಞೆ ಮಾಡುತ್ತೇನೆ. ಮತ್ತು ಪ್ರತಿಯೊಬ್ಬ ಬಾಂಗ್ಲಾದೇಶಿಯು ಶಾಂತಿ ಮತ್ತು ಸ್ಥಿರತೆಗೆ ಮರಳಲು ನಾನು ಬಯಸುತ್ತೇನೆ" ಎಂದು ಅವರು ಇದೇ ವೇಳೆ ಭರವಸೆ ವ್ಯಕ್ತಪಡಿಸಿದ್ದಾರೆ.

ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ಪ್ರೊಫೆಸರ್ ಮುಹಮ್ಮದ್ ಯೂನಸ್ ಅವರು ತಮ್ಮ ಹೊಸ ಜವಾಬ್ದಾರಿಗಳನ್ನು ವಹಿಸಿಕೊಂಡ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಶುಭ ಹಾರೈಸಿದ್ದಾರೆ. ಮತ್ತು ಶೀಘ್ರವಾಗಿ ಸಹಜ ಸ್ಥಿತಿಗೆ ಮರಳಲು ಮತ್ತು ಹಿಂದೂ ಅಲ್ಪಸಂಖ್ಯಾತರ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಮೊದಲ ಆದ್ಯತೆ ನೀಡುವಂತೆ ಅವರು ಮನವಿ ಕೂಡಾ ಮಾಡಿದ್ದಾರೆ. 84 ವರ್ಷದ ಯೂನಸ್ ಗುರುವಾರ ರಾತ್ರಿ ಢಾಕಾದಲ್ಲಿ ನಡೆದ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಇದನ್ನೂ ಓದಿ: ಬಾಂಗ್ಲಾ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ಯೂನುಸ್​ ಪ್ರಮಾಣ; ಶುಭ ಕೋರಿದ ಪ್ರಧಾನಿ ಮೋದಿ - Muhammad Yunus

ETV Bharat Logo

Copyright © 2024 Ushodaya Enterprises Pvt. Ltd., All Rights Reserved.