ETV Bharat / international

154 ಸ್ಥಾನಗಳಲ್ಲಿ ಇಮ್ರಾನ್​ಖಾನ್​​​​ ಪಕ್ಷದ ಬೆಂಬಲಿತರ ಮುನ್ನಡೆ: ಪಾಕ್​​ ನೆಟಿಜನ್​​ಗಳ ಹೇಳಿಕೆ - ಪಾಕ್​​ ನೆಟಿಜನ್​​

ಪಾಕಿಸ್ತಾನದಲ್ಲಿ ನಿನ್ನೆ ಸಾರ್ವತ್ರಿಕ ಚುನಾವಣೆಯ ಮತದಾನ ಮುಕ್ತಾಯಗೊಂಡಿದ್ದು, ಮತ ಎಣಿಕೆ ನಡೆಯುತ್ತಿದೆ. ಈ ನಡುವೆ ಜಾಲತಾಣಿಗರು ಇಮ್ರಾನ್ ಖಾನ್​ ಅವರ ಪಿಟಿಐ ಬೆಂಬಲಿತ ಸ್ವತಂತ್ರರು 154 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

Independents backed by Imran's party leading in 154 seats, claims Pak netizen
ಇಮ್ರಾನ್​​ ಪಕ್ಷದ ಬೆಂಬಲಿತರು 154 ಸ್ಥಾನಗಳಲ್ಲಿ ಮುನ್ನಡೆ: ಪಾಕ್​​ ನೆಟಿಜನ್​​ಗಳ ವಿಶ್ವಾಸ
author img

By ANI

Published : Feb 9, 2024, 6:50 AM IST

Updated : Feb 9, 2024, 12:45 PM IST

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಪ್ರಮುಖ ರಾಜಕೀಯ ಕ್ರಾಂತಿ ಉಂಟಾಗಬಹುದು ಎಂದು ಪಾಕ್​ ಜಾಲತಾಣಿಗರು ಹೇಳುತ್ತಿದ್ದಾರೆ. ಸಾರ್ವತ್ರಿಕ ಚುನಾವಣೆಯ ಮತಗಳ ಎಣಿಕೆ ನಡುವೆ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್ - ಎ - ಇನ್ಸಾಫ್ 154 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ ಎಂದು ಜಾಲತಾಣಿಗರು ಹೇಳಿಕೊಂಡಿದ್ದಾರೆ.

ಅಂತಾರಾಷ್ಟ್ರೀಯ ಥಿಂಕ್ ಟ್ಯಾಂಕ್‌ನ ಉಪ ನಿರ್ದೇಶಕ ಅಂತಲೇ ಗುರುತಿಸಿಕೊಂಡಿರುವ ಪಾಕಿಸ್ತಾನಿ ನೆಟಿಜನ್ ಒಬ್ಬ, ಪಾಕಿಸ್ತಾನದಲ್ಲಿ ನಡೆಯುತ್ತಿರುವ ಮತ ಎಣಿಕೆಯ ಆರಂಭಿಕ ಟ್ರೆಂಡ್​​ಗಳನ್ನು ಪೋಸ್ಟ್​ ಮಾಡಿದ್ದು, ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸ್ಥಾಪಿಸಿದ ಪಕ್ಷವನ್ನು ಸ್ವತಂತ್ರರು ಬೆಂಬಲಿಸಿದ್ದಾರೆಂದು ಹೇಳಿಕೊಂಡಿದ್ದಾನೆ. ಈ ಸ್ವತಂತ್ರರು 150 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ ಎಂದು ಆತ ಮಾಹಿತಿ ನೀಡಿದ್ದಾನೆ.

ಎಕ್ಸ್​​​​​​​ ಪೋಸ್ಟ್ ಪ್ರಕಾರ, ಪಿಟಿಐ ಬೆಂಬಲಿತ ಅಭ್ಯರ್ಥಿಗಳು 154 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಮತ್ತು ಪಾಕಿಸ್ತಾನ್ ಮುಸ್ಲಿಂ ಲೀಗ್ -ನವಾಜ್ (ಪಿಎಂಎಲ್-ಎನ್) ಪರಸ್ಪರ 47 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ ಎಂದು ಹೇಳಲಾಗಿದೆ. ಮುತ್ತಹಿದಾ ಕ್ವಾಮಿ ಮೂವ್‌ಮೆಂಟ್ (MQM) ಮತ್ತು ಜಮಿಯತ್ ಉಲೇಮಾ-ಎ-ಇಸ್ಲಾಂ (F) ಆರಂಭಿಕ ಟ್ರೆಂಡ್‌ಗಳ ಪ್ರಕಾರ ತಲಾ 4 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ. ಪಿಟಿಐ ಅಧ್ಯಕ್ಷ, ಬ್ಯಾರಿಸ್ಟರ್ ಗೋಹರ್ ಅಲಿ ಖಾನ್ ಕೂಡ ತಮ್ಮ ಪಕ್ಷವು 150 ಕ್ಕೂ ಹೆಚ್ಚು ರಾಷ್ಟ್ರೀಯ ಅಸೆಂಬ್ಲಿ (ಎನ್‌ಎ) ಸ್ಥಾನಗಳಲ್ಲಿ ಮುನ್ನಡೆ ಸಾಧಿಸುತ್ತಿದೆ ಎಂದು ಹೇಳಿಕೊಂಡಿದ್ದಾರೆ ಎಂದು ಅಲ್ಲಿನ ಎಆರ್‌ವೈ ನ್ಯೂಸ್ ವರದಿ ಮಾಡಿದೆ.

X ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಬ್ಯಾರಿಸ್ಟರ್ ಗೋಹರ್ ಅವರು "ಇಂದಿನ ಪ್ರಚಂಡ ವಿಜಯದ" ನಂತರ ಕೇಂದ್ರದಲ್ಲಿ ಮತ್ತು ಖೈಬರ್-ಪಖ್ತುಂಕ್ವಾ (ಕೆಪಿ) ನಲ್ಲಿ ಪಿಟಿಐ ಸರ್ಕಾರಗಳು ರಚನೆ ಆಗಲಿವೆ ಎಂದು ಅವರು ಹೇಳಿದ್ದಾರೆ. ಇನ್ನು ದೇಶದ ಅತ್ಯಂತ ಜನಪ್ರಿಯ ನಾಯಕರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿರುವ ಇಮ್ರಾನ್, ಪ್ರಸ್ತುತ ಅನೇಕ ಪ್ರಕರಣಗಳಲ್ಲಿ ಶಿಕ್ಷೆಯ ಮೇರೆಗೆ ಅಡಿಯಾಲಾ ಜೈಲಿನಲ್ಲಿ ಬಂಧಿಯಾಗಿದ್ದಾರೆ. ಈ ಹಿಂದೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವರು ಅನರ್ಹಗೊಂಡಿದ್ದರು. ಅಲ್ಲದೇ ಅವರು ತೋಷಖಾನಾ ಪ್ರಕರಣದಲ್ಲಿ 14 ವರ್ಷಗಳ ಶಿಕ್ಷೆಗೆ ಒಳಗಾಗುವ ಮೂಲಕ ಮತ್ತೆ ಪ್ರಧಾನಿಯಾಗಿ ಮರಳುವುದು ಅಸಾಧ್ಯವಾಗಿದೆ. ಮತ್ತೊಂದು ಕಡೆ ಅವರ ಪಕ್ಷದ ಬ್ಯಾಟ್​ ಚಿನ್ಹೆಯನ್ನು ಪಾಕಿಸ್ತಾನದ ಚುನಾವಣಾ ಆಯೋಗ ಹಿಂಪಡೆದುಕೊಂಡಿದೆ. ಆಯೋಗದ ಈ ಕ್ರಮವನ್ನು ಅಲ್ಲಿನ ಸುಪ್ರೀಂಕೋರ್ಟ್​ ಸಹ ಎತ್ತಿ ಹಿಡಿದಿದೆ.

ಇನ್ನು ಎಲ್ಲ ಪ್ರಕರಣಗಳಲ್ಲಿ ಶಿಕ್ಷೆಗೆ ಒಳಗಾಗಿರುವ ಇಮ್ರಾನ್​ಖಾನ್​, ತನ್ನ ವಿರುದ್ಧದ ಎಲ್ಲ ಪ್ರಕರಣಗಳು 'ರಾಜಕೀಯ ಪ್ರೇರಿತ' ಎಂದು ಹೇಳಿದ್ದಾರೆ. ಫೆಬ್ರವರಿ 8 ರಂದು ತಮ್ಮ ಪಕ್ಷವು ದೇಶದಲ್ಲಿ ಅಚ್ಚರಿಯನ್ನು ಉಂಟು ಮಾಡುತ್ತದೆ ಎಂದು ಪ್ರತಿಜ್ಞೆ ಮಾಡಿದ್ದಾರೆ ಎಂದು ಡಾನ್ ವರದಿ ಮಾಡಿದೆ.

ತಮ್ಮ ಅಧಿಕೃತ X ಆ್ಯಪ್​ ನಲ್ಲಿ ಪೋಸ್ಟ್ ಮಾಡಿದ ವಿಡಿಯೋ ಸಂದೇಶದಲ್ಲಿ ಇಮ್ರಾನ್​ ಖಾನ್, ತಮ್ಮ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಇನ್ನು PTI ಅಧಿಕೃತ X ಹ್ಯಾಂಡಲ್‌ನ ಪೋಸ್ಟ್‌ನಲ್ಲಿ, "ಇದು ಕಾನೂನುಬಾಹಿರ, ಫ್ಯಾಸಿಸ್ಟ್ ಆಡಳಿತವು ಯಾವ ಮಟ್ಟಕ್ಕೆ ಇಳಿದಿದೆ ಎಂಬುದನ್ನು ಜಗತ್ತಿಗೆ ತಿಳಿಸಲಿ. ಪಿಟಿಐ ಪಕ್ಷವು ಚುನಾವಣೆಯನ್ನು ಬಹಿಷ್ಕರಿಸುವ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ ಎಂದು ಸ್ಪಷ್ಟನೆ ಕೂಡಾ ನೀಡಿದೆ. ಗುರುವಾರ ಬೆಳಗ್ಗೆ 8 ಗಂಟೆಗೆ ಆರಂಭವಾದ ಮತದಾನ ಪ್ರಕ್ರಿಯೆ ಸಂಜೆ 5ರವರೆಗೆ ನಡೆಯಿತು.

ಇದನ್ನು ಓದಿ: ಪಾಕಿಸ್ತಾನ ಸಾರ್ವತ್ರಿಕ ಚುನಾವಣೆ ವೇಳೆ ಉಗ್ರರ ದಾಳಿ: 5 ಪೊಲೀಸ್ ಸಿಬ್ಬಂದಿ ಸಾವು

Last Updated : Feb 9, 2024, 12:45 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.