ETV Bharat / international

ಮಾ.10ರೊಳಗೆ ಮಾಲ್ಡೀವ್ಸ್​ನಿಂದ ಮೊದಲ ಯೋಧರ ತುಕಡಿ ಭಾರತಕ್ಕೆ ವಾಪಸ್: ಅಧ್ಯಕ್ಷ ಮುಯಿಝು

ಭಾರತೀಯ ಯೋಧರ ಮೊದಲ ತುಕಡಿಯನ್ನು ಮಾರ್ಚ್​ 10ರೊಳಗೆ ಸ್ವದೇಶಕ್ಕೆ ವಾಪಸ್ ಕಳುಹಿಸಲಾಗುವುದು ಎಂದು ಮಾಲ್ಡೀವ್ಸ್​ ಅಧ್ಯಕ್ಷ ಮೊಹಮ್ಮದ್ ಮುಯಿಝು ಹೇಳಿದ್ದಾರೆ.

First group of Indian troops to be sent before March 10: Maldives President

author img

By ETV Bharat Karnataka Team

Published : Feb 5, 2024, 3:55 PM IST

ಮಾಲೆ(ಮಾಲ್ಡೀವ್ಸ್​): ಮಾಲ್ಡೀವ್ಸ್‌ನಲ್ಲಿ ನಿಯೋಜಿಸಲಾದ ಭಾರತೀಯ ಸೈನಿಕರ ಮೊದಲ ತುಕಡಿಯನ್ನು ಈ ವರ್ಷದ ಮಾರ್ಚ್ 10ರೊಳಗೆ ವಾಪಸ್ ಕಳುಹಿಸಲು ಭಾರತ ಮತ್ತು ಮಾಲ್ಡೀವ್ಸ್ ಒಪ್ಪಿಕೊಂಡಿವೆ ಎಂದು ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಸೋಮವಾರ ಹೇಳಿದ್ದಾರೆ ಎಂದು ಮಾಲ್ಡೀವ್ಸ್ ಮೂಲದ ಸನ್ ಆನ್‌ಲೈನ್ ವರದಿ ಮಾಡಿದೆ. 19ನೇ ಸಂಸತ್ತಿನ ಕೊನೆಯ ಅಧಿವೇಶನದ ಪ್ರಾರಂಭದಲ್ಲಿ ತಮ್ಮ ಮೊದಲ ಅಧ್ಯಕ್ಷೀಯ ಭಾಷಣ ಮಾಡಿದ ಅವರು, ಸೈನ್ಯವನ್ನು ವಾಪಸ್ ಕಳುಹಿಸಲು ಭಾರತದೊಂದಿಗೆ ಮಾತುಕತೆ ನಡೆಯುತ್ತಿದೆ ಎಂದು ಹೇಳಿದರು.

ಮಾರ್ಚ್ 10, 2024ರೊಳಗೆ ಭಾರತೀಯ ಸೇನೆಯು ಮಾಲ್ಡೀವ್ಸ್​ನ ಮೂರು ವಾಯುಯಾನ ಪ್ಲಾಟ್‌ಫಾರ್ಮ್​ಗಳ ಪೈಕಿ ಒಂದರಲ್ಲಿನ ಮಿಲಿಟರಿ ಸಿಬ್ಬಂದಿಯನ್ನು ವಾಪಸ್ ಕರೆಸಿಕೊಳ್ಳಲಿದೆ. ಉಳಿದ ಎರಡು ಪ್ಲಾಟ್​ಫಾರ್ಮ್​ನಲ್ಲಿನ ಮಿಲಿಟರಿ ಸಿಬ್ಬಂದಿ ಮೇ 10 ರೊಳಗೆ ನಿರ್ಗಮಿಸಲಿದ್ದಾರೆ ಎಂದು ಅವರು ಹೇಳಿದರು ಎಂದು ಸನ್ ಆನ್​ಲೈನ್ ವರದಿ ಹೇಳಿದೆ. ಮಾಲ್ಡೀವ್ಸ್ ಜನರ ಸ್ವಾತಂತ್ರ್ಯ ಮತ್ತು ಸಾರ್ವಭೌಮತ್ವವನ್ನು ರಕ್ಷಿಸುವುದು ಅಧ್ಯಕ್ಷನಾಗಿ ಇದು ನಮ್ಮ ಅತಿದೊಡ್ಡ ಭರವಸೆ ಎಂದು ಮುಯಿಝು ತಿಳಿಸಿದ್ದಾರೆ.

ಮಾಲ್ಡೀವ್ಸ್​ನಿಂದ ವಿದೇಶಿ ಪಡೆಗಳನ್ನು ವಾಪಸ್ ಕಳುಹಿಸಲು, ಮಾಲ್ಡೀವ್ಸ್ ಸಮುದ್ರದ ಕಳೆದುಹೋದ ಭಾಗವನ್ನು ಮರಳಿ ಪಡೆಯಲು ಮತ್ತು ಮಾಲ್ಡೀವ್ಸ್ ಸಾರ್ವಭೌಮತ್ವವನ್ನು ದುರ್ಬಲಗೊಳಿಸುವ ಯಾವುದೇ ಒಪ್ಪಂದವನ್ನು ರದ್ದುಗೊಳಿಸಲು ಜನತೆ ತಮಗೆ ಜನಾದೇಶ ನೀಡಿದ್ದಾರೆ ಎಂದು ಅವರು ತಿಳಿಸಿದರು. ದಿನದ 24 ಗಂಟೆಗಳ ಕಾಲವೂ ವಿಶೇಷ ಆರ್ಥಿಕ ವಲಯವನ್ನು (ಇಇಝಡ್) ನಿರ್ವಹಿಸುವ ಸಾಮರ್ಥ್ಯದ ಮಿಲಿಟರಿಯನ್ನು ಸ್ಥಾಪಿಸುವುದಾಗಿ ಸಂಸತ್ತಿನಲ್ಲಿ ಮಾಡಿದ ಭಾಷಣದಲ್ಲಿ ಮೊಹಮ್ಮದ್ ಮುಯಿಝು ಘೋಷಿಸಿದರು.

ಮುಯಿಝು ತಮ್ಮ ಮೊದಲ ಅಧ್ಯಕ್ಷೀಯ ಭಾಷಣ ಮಾಡಿದ ಪೀಪಲ್ಸ್ ಮಜ್ಲಿಸ್​ನ ಉದ್ಘಾಟನಾ ಅಧಿವೇಶನದಲ್ಲಿ ಕೇವಲ 24 ಮಾಲ್ಡೀವ್ಸ್ ಸಂಸದರು ಭಾಗವಹಿಸಿದ್ದರು. ಪ್ರತಿಪಕ್ಷ ಮಾಲ್ಡೀವಿಯನ್ ಡೆಮಾಕ್ರಟಿಕ್ ಪಾರ್ಟಿ (ಎಂಡಿಪಿ) ಮತ್ತು ಡೆಮೋಕ್ರಾಟ್​ಗಳು ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ನೀತಿಗಳಿಗಾಗಿ ಅಧಿವೇಶನವನ್ನು ಬಹಿಷ್ಕರಿಸಿದರು. ಒಟ್ಟು 56 ಸಂಸದರು ಪ್ರಥಮ ಅಧಿವೇಶನಕ್ಕೆ ಗೈರಾಗಿದ್ದರು. ಇದರಲ್ಲಿ ಡೆಮಾಕ್ರಟಿಕ್ ನ 13 ಸಂಸದರು ಮತ್ತು ಎಂಡಿಪಿಯ 44 ಸಂಸದರು ಸೇರಿದ್ದಾರೆ.

ಮಾಲ್ಡೀವ್ಸ್​ನಲ್ಲಿನ ಭಾರತೀಯ ಪಡೆಗಳನ್ನು ವಾಪಸ್ ಕಳುಹಿಸುವುದು ಮುಯಿಝು ಅವರ ಪಕ್ಷದ ಮುಖ್ಯ ಅಭಿಯಾನವಾಗಿತ್ತು. ಪ್ರಸ್ತುತ, ಡಾರ್ನಿಯರ್-228 ಕಡಲ ಗಸ್ತು ವಿಮಾನಗಳು ಮತ್ತು ಎರಡು ಎಚ್ಎಎಲ್ ಧ್ರುವ್ ಹೆಲಿಕಾಪ್ಟರ್​ಗಳು ಸೇರಿದಂತೆ ಸುಮಾರು 70 ಭಾರತೀಯ ಸೈನಿಕರು ಮಾಲ್ಡೀವ್ಸ್​ನಲ್ಲಿ ಬೀಡುಬಿಟ್ಟಿದ್ದಾರೆ. ಭಾರತವು ಮಾಲ್ಡೀವ್ಸ್​ನಿಂದ ತನ್ನ ಪಡೆಗಳನ್ನು ವಾಪಸ್ ಕರೆಸಿಕೊಳ್ಳಬೇಕೆಂದು ಅಧಿಕಾರ ವಹಿಸಿಕೊಂಡ ಎರಡನೇ ದಿನವೇ ಮುಯಿಝು ಭಾರತಕ್ಕೆ ಮನವಿ ಮಾಡಿದ್ದರು.

ಇದನ್ನೂ ಓದಿ: ಮಾದಕ ವಸ್ತು ಸೇವನೆಯ ಆರೋಪ: ಎಲೋನ್ ಮಸ್ಕ್ ಹೇಳಿದ್ದೇನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.