ETV Bharat / international

ರಷ್ಯಾದ ಪರಮಾಣು ವಿದ್ಯತ್​ ಸ್ಥಾವರದ ಮೇಲೆ ಉಕ್ರೇನ್​ ಡ್ರೋನ್ ದಾಳಿ - Drone attack

ಜಪೋರಿಝಿಯಾ ಪರಮಾಣು ವಿದ್ಯುತ್ ಸ್ಥಾವರದ ಮೇಲೆ ಡ್ರೋನ್‌ಗಳೊಂದಿಗೆ ಉಕ್ರೇನ್ ದಾಳಿ ಮಾಡಿದೆ ಎಂದು ಸ್ಥಾವರ ಅಧಿಕಾರಿಗಳು ತಿಳಿಸಿದ್ದಾರೆ. ಆರನೇ ವಿದ್ಯುತ್ ಘಟಕದ ಗುಮ್ಮಟಕ್ಕೆ ಡ್ರೋನ್‌ಗಳು ದಾಳಿ​ ಮಾಡಿದ್ದು, ಯಾವುದೇ ಗಂಭೀರ ಹಾನಿಯಾಗಿಲ್ಲ.

Zaporizhzhia nuclear plant  Drone attack  Ukraine  Russia
ಜಪೋರಿಜಿಯಾ ಪರಮಾಣು ಸ್ಥಾವರದ ಮೇಲೆ ಉಕ್ರೇನ್​ ಡ್ರೋನ್ ದಾಳಿ
author img

By PTI

Published : Apr 8, 2024, 8:15 AM IST

ಮಾಸ್ಕೋ (ರಷ್ಯಾ): ಝಪೊರಿಝಿಯಾ ಪರಮಾಣು ವಿದ್ಯುತ್ ಸ್ಥಾವರದ ಮೇಲೆ ಡ್ರೋನ್‌ಗಳಿಂದ ಉಕ್ರೇನ್​ ದಾಳಿ ಮಾಡಿದೆ. ಆರನೇ ವಿದ್ಯುತ್ ಘಟಕದ ಗುಮ್ಮಟಕ್ಕೆ ಡ್ರೋನ್‌ಗಳು ದಾಳಿ ನಡೆಸಿವೆ. ಈ ವೇಳೆ ಯಾವುದೇ ಗಂಭೀರ ಹಾನಿಯಾಗಿಲ್ಲ ಎಂದು ಸ್ಥಾವರ ಅಧಿಕಾರಿಗಳು ತಿಳಿಸಿದ್ದಾರೆ. ಉಕ್ರೇನ್ ವಿರುದ್ಧದ ಮಿಲಿಟರಿ ಕಾರ್ಯಾಚರಣೆಯ ಆರಂಭದಲ್ಲಿ, ಜಪೋರಿಜಿಯಾದ ಕೇಂದ್ರವನ್ನು ರಷ್ಯಾದ ಪಡೆಗಳು ವಶಪಡಿಸಿಕೊಂಡಿದ್ದವು.

ಅಂದಿನಿಂದ ಈ ಕೇಂದ್ರದ ಆಸುಪಾಸಿನಲ್ಲಿ ದಾಳಿ, ಪ್ರತಿದಾಳಿ ಮುಂದುವರಿದಿದೆ. ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಏಜೆನ್ಸಿ (IAEA) ಯುರೋಪ್‌ನ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರವಾದ ಝಪೋರಿಝಿಯ ರಕ್ಷಣೆಯ ಬಗ್ಗೆ ಪದೇ ಪದೇ ಕಳವಳ ವ್ಯಕ್ತವಾಗಿದೆ. ರಷ್ಯಾ ಇತ್ತೀಚಿನ ದಾಳಿಯನ್ನು ಐಎಇಎ ಗಮನಕ್ಕೆ ಬಂದಿದೆ. ಪರಮಾಣು ವಿದ್ಯುತ್ ಸ್ಥಾವರದ ಸುರಕ್ಷತೆಯನ್ನು ಹಾಳುಮಾಡುವ ಕ್ರಮಗಳನ್ನು ತಪ್ಪಿಸಬೇಕು ಎಂದು ಐಎಇಎ ಮುಖ್ಯಸ್ಥ ರಾಫೆಲ್ಲೊ ಮರಿಯಾನೊ ಗ್ರಾಸ್ಸಿ ಹೇಳಿದ್ದಾರೆ.

''ಉಕ್ರೇನ್​ ಡ್ರೋನ್‌ಗಳ ಮೂಲಕ 6ನೇ ಪವರ್ ಯೂನಿಟ್‌ನ ಗುಮ್ಮಟವನ್ನು ಒಳಗೊಂಡಂತೆ ಜಪೋರಿಝಿಯಾ ಪರಮಾಣು ವಿದ್ಯುತ್ ಸ್ಥಾವರ (ಎನ್‌ಪಿಪಿ) ಮೇಲೆ ಭಾನುವಾರ ದಾಳಿ ಮಾಡಿದೆ'' ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಈ ಮೊದಲು ರಷ್ಯಾ ವಿದೇಶಾಂಗ ಸಚಿವಾಲಯದ ವಕ್ತಾರ ಮಾರಿಯಾ ಜಖರೋವಾ ಅವರು, ಉಕ್ರೇನ್ ಮತ್ತು ಅದರ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳಿಗೆ ಜಪೋರಿಝಿಯಾ NPP ಮೇಲೆ ದಾಳಿ ಮಾಡುವ ಅಥವಾ ಅಸ್ಥಿರಗೊಳಿಸುವ ಪ್ರಯತ್ನಗಳ ವಿರುದ್ಧ ಎಚ್ಚರಿಕೆ ನೀಡಿದರು.

ಜಪೋರಿಝಿಯಾ NPP ಯುರೋಪ್‌ನ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರವಾಗಿದೆ. ಒಟ್ಟು 6 ಗಿಗಾವ್ಯಾಟ್‌ಗಳ ಸಾಮರ್ಥ್ಯದೊಂದಿಗೆ ಆರು ವಿದ್ಯುತ್ ಘಟಕಗಳನ್ನು ಒಳಗೊಂಡಿದೆ. ಫೆಬ್ರವರಿ 2022 ರ ಕೊನೆಯಲ್ಲಿ ಈ ಸ್ಥಾವರನ್ನು ರಷ್ಯಾದ ನಿಯಂತ್ರಣಕ್ಕೆ ತೆಗೆದುಕೊಳ್ಳಲಾಯಿತು.

ಐಎಇಎ ಮುಖ್ಯಸ್ಥರ ಹೇಳಿಕೆ: ''ರಷ್ಯಾ ನಿಯಂತ್ರಿತ ಝಪೊರಿಝಿಯಾ ಪರಮಾಣು ಸ್ಥಾವರದಲ್ಲಿನ ಪರಮಾಣು ರಿಯಾಕ್ಟರ್‌ ಒಂದರ ಮೇಲೆ ಡ್ರೋನ್ ದಾಳಿಯು ದೊಡ್ಡ ಅಪಘಾತದ ಅಪಾಯವನ್ನು ಹೆಚ್ಚಿಸಿದೆ'' ಎಂದು ಎಇಎ ಮುಖ್ಯಸ್ಥರು ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ ತಿಳಿಸಿದ್ದಾರೆ.

"ಯೂನಿಟ್ 6ರಲ್ಲಿನ ಹಾನಿಯು ಪರಮಾಣು ಸುರಕ್ಷತೆಗೆ ಧಕ್ಕೆ ತಂದಿಲ್ಲ. ಆದರೆ, ಇದು ಒಂದು ಗಂಭೀರ ಘಟನೆಯಾಗಿದ್ದು, ರಿಯಾಕ್ಟರ್‌ನ ಕಂಟೈನ್‌ಮೆಂಟ್ ಸಿಸ್ಟಮ್‌ನ ಸಮಗ್ರತೆಯನ್ನು ದುರ್ಬಲಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ'' ಎಂದು ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ.

''ಅಣು ಸ್ಥಾವರದ ಆರನೇ ವಿದ್ಯುತ್ ಘಟಕದ ಗುಮ್ಮಟದ ಮೇಲೆ ಉಕ್ರೇನಿಯನ್ ಮಿಲಿಟರಿ ಡ್ರೋನ್‌ಗಳಿಂದ ಭಾನುವಾರ ಮೇಲೆ ದಾಳಿ ನಡೆಸಲಾಗಿದೆ. ರಷ್ಯಾದ ಸರ್ಕಾರಿ ಸ್ವಾಮ್ಯದ ಪರಮಾಣು ಸಂಸ್ಥೆ ಮೇಲಿನ ಸರಣಿ ಡ್ರೋನ್ ದಾಳಿಯಲ್ಲಿ ಮೂರು ಜನರು ಗಾಯಗೊಂಡಿದ್ದಾರೆ. ಡ್ರೋನ್ ದಾಳಿಯ ಬಗ್ಗೆ ತನ್ನ ತಜ್ಞರಿಗೆ ತಿಳಿಸಲಾಗಿದೆ'' ಎಂದು ರಷ್ಯಾ ನಿಯಂತ್ರಿತ ಜಪೊರಿಝಿಯಾ ಪರಮಾಣು ವಿದ್ಯುತ್ ಸ್ಥಾವರದ ಅಧಿಕಾರಿಗಳು ಹೇಳಿದರು.

ಬಾಲಕಿ ಸಾವು, ನಾಲ್ವರು ಗಾಯ-ಗ್ಲಾಡ್ಕೊವ್: ಉಕ್ರೇನ್ ಗಡಿಯಲ್ಲಿರುವ ರಷ್ಯಾದ ಬೆಲ್ಗೊರೊಡ್ ಪ್ರದೇಶದಲ್ಲಿ ಆರು ಜನರ ಕುಟುಂಬವನ್ನು ಹೊತ್ತೊಯ್ಯುತ್ತಿದ್ದ ಕಾರಿನ ಮೇಲೆ ಉರುಳಿಬಿದ್ದ ಉಕ್ರೇನಿಯನ್ ಡ್ರೋನ್‌ನ ಅವಶೇಷಗಳು ಬಿದ್ದಿದ್ದರಿಂದ ಒಬ್ಬ ಬಾಲಕಿ ಸಾವನ್ನಪ್ಪಿದ್ದಾಳೆ ಮತ್ತು ಇತರ ನಾಲ್ವರು ಗಾಯಗೊಂಡಿದ್ದಾರೆ ಎಂದು ಪ್ರಾದೇಶಿಕ ಗವರ್ನರ್ ವ್ಯಾಚೆಸ್ಲಾವ್ ಗ್ಲಾಡ್ಕೊವ್ ಹೇಳಿದ್ದಾರೆ.

ಇದನ್ನೂ ಓದಿ: ಸಿರಿಯಾದಲ್ಲಿ ವೈಮಾನಿಕ ದಾಳಿ: ಇಸ್ರೇಲ್​ನಿಂದ ದೂರ ಉಳಿಯಲು ಅಮೆರಿಕಕ್ಕೆ ಇರಾನ್​ ಎಚ್ಚರ - israel attack

ETV Bharat Logo

Copyright © 2024 Ushodaya Enterprises Pvt. Ltd., All Rights Reserved.