ETV Bharat / international

ಶ್ವೇತಭವನಕ್ಕೂ ಡೀಪ್​ಫೇಕ್ ತಲೆಬಿಸಿ​: ಬೈಡನ್​ ಧ್ವನಿಯ AI ಜನರೇಟೆಡ್ ಕರೆಗಳು, ಗಾಯಕಿ ಚಿತ್ರ ವೈರಲ್​ - AI ಜನರೇಟೆಡ್​ ಕರೆ

Taylor Swift AI pictures: ಯುಎಸ್ ಅಧ್ಯಕ್ಷರಿಗೂ ಡೀಪ್‌ಫೇಕ್ ತಲೆಬಿಸಿ ಉಂಟಾಗಿದೆ. ಜೋ ಬೈಡನ್ ಅವರ ಧ್ವನಿಯಲ್ಲಿ ಮತದಾರರಿಗೆ AI ಜನರೇಟೆಡ್​ ಕರೆಗಳು ಹೋಗಿವೆ. ಮತ್ತೊಂದೆಡೆ, ಜನಪ್ರಿಯ ಗಾಯಕಿ ಟೇಲರ್ ಸ್ವಿಫ್ಟ್ ಅವರ ಡೀಪ್‌ಫೇಕ್ ಚಿತ್ರಗಳು ಟ್ವಿಟರ್‌ನಲ್ಲಿ ವೈರಲ್ ಆಗಿವೆ.

Deepfake explicit images  explicit images of Taylor Swift  spread on social media  Taylor Swift AI Pictures  ಶ್ವೇತಭವನಕ್ಕೆ ತಲೆಬಿಸಿಯಾದ ಡೀಪ್​ಫೇಕ್​ AI ಜನರೇಟೆಡ್​ ಕರೆ  ಗಾಯಕಿ ಚಿತ್ರಗಳು ವೈರಲ್​
ಗಾಯಕಿ ಚಿತ್ರಗಳು ವೈರಲ್​
author img

By PTI

Published : Jan 28, 2024, 9:25 AM IST

ವಾಷಿಂಗ್ಟನ್(ಯುಎಸ್ಎ): ಅಮೆರಿಕದಲ್ಲೂ ಡೀಪ್‌ಫೇಕ್ ಆತಂಕ ಮೂಡಿಸುತ್ತಿದೆ. ಅಧ್ಯಕ್ಷ ಜೋ ಬೈಡೆನ್ ಮತ್ತು ಜನಪ್ರಿಯ ಗಾಯಕಿ ಟೇಲರ್ ಸ್ವಿಫ್ಟ್ ಅವರಿಗೆ ಆಧುನಿಕ ತಂತ್ರಜ್ಞಾನ ತಲೆಬಿಸಿ ತರಿಸಿದೆ. ಬೈಡನ್ ಧ್ವನಿ ಅನುಕರಿಸುವ ಎಐ-ರಚಿತ ಫೋನ್ ಕರೆಗಳು ಮತ್ತು ಗಾಯಕಿಯ ಆಕ್ಷೇಪಾರ್ಹ ತುಣುಕುಗಳ ಬಗ್ಗೆ ವೈಟ್ ಹೌಸ್ ಕಳವಳ ವ್ಯಕ್ತಪಡಿಸಿದೆ. ನಕಲಿ​ ಚಿತ್ರಗಳು ಮತ್ತು ಮಾಹಿತಿ ಹರಡುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಗಂಭೀರ ಚಿಂತನೆ ನಡೆದಿದೆ. ಈ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಲಾಗಿದೆ. ಇದನ್ನು ತಡೆಯುವಲ್ಲಿ ಸಾಮಾಜಿಕ ಮಾಧ್ಯಮ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಹೇಳಿದ್ದಾರೆ.

ಟೇಲರ್​ ಚಿತ್ರಗಳು ವೈರಲ್: ಟೇಲರ್ ಸ್ವಿಫ್ಟ್‌ ಅವರ ಆಕ್ಷೇಪಾರ್ಹ AI ಚಿತ್ರಗಳು Xನಲ್ಲಿ ವೈರಲ್​ ಆಗುತ್ತಿವೆ. ಅಂತಹ ಚಿತ್ರಗಳ ವಿರುದ್ಧ ಎಕ್ಸ್‌ನ ನಿಯಮಗಳ ಹೊರತಾಗಿಯೂ ಅವುಗಳನ್ನು ತೆಗೆದುಹಾಕಿಲ್ಲ. ಚಿತ್ರಗಳು 17 ಗಂಟೆಗಳ ಕಾಲ ಅಂತರ್ಜಾಲದಲ್ಲಿ ಪ್ರಸಾರವಾಗಿವೆ. 4.5 ಕೋಟಿಗೂ ಹೆಚ್ಚು ವೀಕ್ಷಣೆ ಪಡೆದಿವೆ. ಅಶ್ಲೀಲ ಚಿತ್ರಗಳ ವಿರುದ್ಧ ಟೇಲರ್ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ ಎಂದು ವರದಿಯಾಗಿದೆ.

ಬೈಡನ್ AI ಕರೆಗಳು: ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಗೆ ಉಮೇದುವಾರಿಕೆಗೆ ಅಮೆರಿಕದ ರಾಜ್ಯಗಳಲ್ಲಿ ಪ್ರಾಥಮಿಕ ಚುನಾವಣೆಗಳು ನಡೆಯುತ್ತಿವೆ. ಈ ಕ್ರಮದಲ್ಲಿ ಕಳೆದ ವಾರ ನ್ಯೂ ಹ್ಯಾಂಪ್‌ಶೈರ್‌ನಲ್ಲಿ ಪ್ರಾಥಮಿಕ ಚುನಾವಣೆಗಳು ನಡೆದಿವು. ಈ ಸಂದರ್ಭದಲ್ಲಿ ಬೈಡೆನ್ ಅವರ AI ಫೋನ್ ಕರೆಗಳು ಎಲ್ಲೆಡೆ ಹರಿದಾಡಿವೆ. ಬೈಡನ್ ಪ್ರಕಾರ, ಮೊದಲೇ ರೆಕಾರ್ಡ್ ಮಾಡಿದ ಫೋನ್ ಕರೆಗಳು ನ್ಯೂ ಹ್ಯಾಂಪ್‌ಶೈರ್ ಮತದಾರರನ್ನು ತಲುಪಿವೆ. ಈ ಚುನಾವಣೆಯಲ್ಲಿ ಬೈಡನ್‌ಗೆ ಮತ ಹಾಕದಂತೆ ಧ್ವನಿ ಕರೆಗಳು ದಾಖಲಾಗಿವೆ. AIರಚಿತ ಫೋನ್ ಕರೆಗಳ ಮೇಲೆ ಅಧಿಕಾರಿಗಳು ಈಗಾಗಲೇ ಕ್ರಮ ಕೈಗೊಳ್ಳಲು ಪ್ರಾರಂಭಿಸಿದ್ದಾರೆ. ಅಧ್ಯಕ್ಷೀಯ ಚುನಾವಣೆಗೂ ಮುನ್ನ ಅಮೆರಿಕದಲ್ಲಿ AI ದುರ್ಬಳಕೆ ಅಭ್ಯರ್ಥಿಗಳಿಗೆ ಸಮಸ್ಯೆಯಾಗಿದೆ. ಬೈಡನ್ ಅವರ ಧ್ವನಿ ಅನುಕರಿಸುವ ಕರೆಗಳನ್ನು ಮಾಡುವ ಬಗ್ಗೆ ಅನೇಕರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.

ರಶ್ಮಿಕಾ, ಸಚಿನ್ ಡೀಪ್​ಫೇಕ್​​: ಸೆಲೆಬ್ರಿಟಿಗಳ ಡೀಪ್‌ಫೇಕ್ ವಿಡಿಯೋಗಳು ಇತ್ತೀಚೆಗೆ ಭಾರತದಲ್ಲಿ ಸಂಚಲನ ಮೂಡಿಸಿದ್ದವು. ರಶ್ಮಿಕಾ ಮಂಧಾನ ಅವರ ಆಕ್ಷೇಪಾರ್ಹ ವಿಡಿಯೋಗಳು ಮತ್ತು ಸಚಿನ್ ತೆಂಡೂಲ್ಕರ್ ಅವರಂತಹ ಸೆಲೆಬ್ರಿಟಿಗಳ ನಕಲಿ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು. ಇವುಗಳಿಗೆ ಪ್ರತಿಕ್ರಿಯಿಸಿದ ಕೇಂದ್ರ ಸರ್ಕಾರ ಸಾಮಾಜಿಕ ಮಾಧ್ಯಮ ಸಂಸ್ಥೆಗಳೊಂದಿಗೆ ಸಭೆ ನಡೆಸಿತು. ಇಂತಹ ಎಐ ಡೀಪ್‌ಫೇಕ್‌ಗಳನ್ನು ತಡೆಯಲು ಶೀಘ್ರ ಕಾನೂನು ತರಲಾಗುವುದು ಎಂದು ತಿಳಿಸಿತ್ತು.

ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಡೀಪ್‌ಫೇಕ್ ವಿಡಿಯೋ ಸೃಷ್ಟಿಕರ್ತ ಅರೆಸ್ಟ್: ದೆಹಲಿ ಪೊಲೀಸರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.