ETV Bharat / international

ಕಟ್ಟಡ ಕುಸಿತ ಪ್ರಕರಣ: ಅವಶೇಷಗಳಡಿ ಸಿಲುಕಿ 6 ದಿನಗಳ ಬಳಿಕ ಹೊರಬಂದ ಕಾರ್ಮಿಕ! - South Africa Building Collapse - SOUTH AFRICA BUILDING COLLAPSE

ದಕ್ಷಿಣ ಆಫ್ರಿಕಾದಲ್ಲಿ ಒಂದು ವಾರದ ಹಿಂದೆ ಸಂಭವಿಸಿದ್ದ ಐದಂತಸ್ತಿನ ಕಟ್ಟಡ ಕುಸಿತ ಘಟನೆಯಲ್ಲಿ ಹತ್ತಾರು ಕೂಲಿ ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದರು. ಇದರಲ್ಲಿ ಓರ್ವ ವ್ಯಕ್ತಿ ಆರು ದಿನಗಳ ಬಳಿಕವೂ ಬದುಕುಳಿದು ಅಚ್ಚರಿ ಮೂಡಿಸಿದ್ದಾರೆ.

RESCUE TEAMS  SOUTH AFRICA BUILDING COLLAPSE  DEATH TOLL RISE  CONSTRUCTION WORKERS
ದಕ್ಷಿಣ ಆಫ್ರಿಕಾದಲ್ಲಿ ಕಟ್ಟಡ ಕುಸಿತ (AP)
author img

By PTI

Published : May 14, 2024, 7:24 AM IST

ಕೇಪ್ ಟೌನ್(ದಕ್ಷಿಣ ಆಫ್ರಿಕಾ): ಒಂದು ವಾರದ ಹಿಂದೆ ಇಲ್ಲಿನ ದಕ್ಷಿಣ ಕರಾವಳಿಯ ಜಾರ್ಜ್ ನಗರದಲ್ಲಿ ನಿರ್ಮಾಣ ಹಂತದ ಅಪಾರ್ಟ್‌ಮೆಂಟ್ ಕಟ್ಟಡ ಕುಸಿದುಬಿದ್ದ ಘಟನೆಯಲ್ಲಿ ಸಾವಿನ ಸಂಖ್ಯೆ 32ಕ್ಕೇರಿದೆ. ಅವಶೇಷಗಳಡಿ ಬದುಕುಳಿದವರನ್ನು ಹುಡುಕುವ ಪ್ರಯತ್ನ ನಿರಂತರವಾಗಿ ನಡೆಯುತ್ತಿವೆ.

Rescue teams  South Africa building collapse  Death toll rise  construction workers
ದಕ್ಷಿಣ ಆಫ್ರಿಕಾದಲ್ಲಿ ಕಟ್ಟಡ ಕುಸಿತ (AP)

ಎರಡು ದಿನಗಳ ಹಿಂದೆ ಅವಶೇಷಗಳಡಿ ಸಿಲುಕಿದ್ದ ಕಾರ್ಮಿಕನೊಬ್ಬನನ್ನು ರಕ್ಷಿಸಲಾಗಿದೆ. ಈತ ಆಹಾರ, ನೀರಿಲ್ಲದೆ ಆರು ದಿನಗಳ ಕಾಲ ಅವಶೇಷಗಳಡಿ ಸಿಲುಕಿದ್ದ. ರಕ್ಷಣಾ ಸಿಬ್ಬಂದಿ ಈ ಕಾರ್ಮಿಕನನ್ನು ಜೀವಂತವಾಗಿ ಹೊರತಂದಾಗ ಅಲ್ಲಿ ನೆರೆದಿದ್ದವರ ಕಣ್ಣಾಲಿಗಳು ತೇವಗೊಂಡಿದ್ದವು.

ಆರು ದಿನಗಳ ಬಳಿಕ ಬದುಕುಳಿದ ವ್ಯಕ್ತಿಯ ಹೆಸರು ಗೇಬ್ರಿಯಲ್ ಗುವಾಂಬೆ (32) ಎಂದು ತಿಳಿದುಬಂದಿದೆ. ಸದ್ಯ ಇವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆರೋಗ್ಯ ಸ್ಥಿರವಾಗಿದೆ. ಈ ಕಾರ್ಮಿಕ 118 ಗಂಟೆಗಳ ಕಾಲ ಅವಶೇಷಗಳಲ್ಲಿ ಸಿಕ್ಕಿಹಾಕಿಕೊಂಡಿದ್ದರು ಎಂಬುದು ಅಚ್ಚರಿಯ ಸಂಗತಿ.

ರಕ್ಷಣಾ ಕಾರ್ಯ (AP)

ಅವಶೇಷಗಳಡಿ ಇನ್ನೂ ಹಲವರು ಬದುಕಿರುವ ಸಾಧ್ಯತೆ ಇದ್ದು, ಕಾರ್ಯಾಚರಣೆ ತೀವ್ರಗೊಂಡಿದೆ. ಸಾವಿನ ಸಂಖ್ಯೆಯೂ ಹೆಚ್ಚುತ್ತಲೇ ಇದೆ. ಸೋಮವಾರ 11 ಶವಗಳನ್ನು ಹೊರತೆಗೆಯಲಾಗಿದೆ. ಇನ್ನೂ 20 ಕಾರ್ಮಿಕರು ಕಾಣೆಯಾಗಿದ್ದಾರೆ.

ಮೇ 6ರಂದು ಕಟ್ಟಡ ಕುಸಿದು ಬಿದ್ದಿದೆ. ರಕ್ಷಣಾ ಕಾರ್ಯದಲ್ಲಿ 600ಕ್ಕೂ ಹೆಚ್ಚು ತುರ್ತು ಸೇವೆ ಮತ್ತು ಇತರ ಸಿಬ್ಬಂದಿ ತೊಡಗಿಸಿಕೊಂಡಿದ್ದಾರೆ. ಘಟನೆ ನಡೆದಾಗ ಸ್ಥಳದಲ್ಲಿ 81 ಕಾರ್ಮಿಕರಿದ್ದರು. ಈ ಪೈಕಿ 29 ಜನರನ್ನು ತಕ್ಷಣವೇ ರಕ್ಷಿಸಲಾಗಿದೆ. ಇವರಲ್ಲಿ 12 ಮಂದಿಯ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಕ್ಷಣಾ ತಂಡಗಳು ಕ್ರೇನ್‌ಗಳು ಮತ್ತು ಇತರ ಭಾರೀ ಯಂತ್ರೋಪಕರಣಗಳನ್ನು ಬಳಸಿ ಸಾವಿರಾರು ಟನ್‌ಗಳಷ್ಟು ಕಾಂಕ್ರೀಟ್‌ ಅವಶೇಷಗಳನ್ನು ತೆರವುಗೊಳಿಸುತ್ತಿವೆ. ಅಷ್ಟೇ ಅಲ್ಲದೇ ಸ್ನೈಫರ್ ಶ್ವಾನಗಳನ್ನೂ ಸಹ ಶೋಧ ಕಾರ್ಯಕ್ಕೆ ಬಳಸಲಾಗುತ್ತಿದೆ. ಈ ಮುಖೇನ ಬದುಕುಳಿದವರ ಪತ್ತೆ ಮಾಡಲಾಗುತ್ತಿದೆ. ಇಲ್ಲಿ ಕೆಲಸ ಮಾಡುತ್ತಿದ್ದ ಅನೇಕ ಕೆಲಸಗಾರರು ಮೊಜಾಂಬಿಕ್, ಜಿಂಬಾಬ್ವೆ ಮತ್ತು ಮಲಾವಿ ದೇಶಗಳ ಪ್ರಜೆಗಳಾಗಿದ್ದಾರೆ.

ಕಟ್ಟಡದ ಕುಸಿತದ ಕಾರಣಗಳಿಗಾಗಿ ಬಹು ಆಯಾಮದ ತನಿಖೆಗಳು ನಡೆಯುತ್ತಿವೆ. ಘಟನಾ ಸ್ಥಳವನ್ನು ಪೊಲೀಸರು ಅಪರಾಧದ ಸ್ಥಳವೆಂದು ಘೋಷಿಸಿದ್ದಾರೆ. ನಿರ್ಮಾಣ ಕಂಪನಿಯು ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಅನುಸರಿಸಿದೆಯೇ ಎಂಬುದರ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: ಗಾಜಾ: ಜಬಾಲಿಯಾದಲ್ಲಿ ಇಸ್ರೇಲ್ ಮತ್ತು ಹಮಾಸ್ ಮಧ್ಯೆ ಮತ್ತೆ ಭುಗಿಲೆದ್ದ ಭೀಕರ ಸಂಘರ್ಷ - Israel Hamas War

ETV Bharat Logo

Copyright © 2025 Ushodaya Enterprises Pvt. Ltd., All Rights Reserved.