ETV Bharat / international

ಬಾಂಗ್ಲಾ ಅಲ್ಲೋಲ ಕಲ್ಲೋಲ: ಒಂದೇ ಹೋಟೆಲ್​ನಲ್ಲಿ 24 ಜನರು ಸಜೀವ ದಹನ, 440ಕ್ಕೇರಿದ ಸಾವಿನ ಸಂಖ್ಯೆ! - Bangladesh Crisis - BANGLADESH CRISIS

ಬಾಂಗ್ಲಾದೇಶದ ಹೊಟೇಲ್‌ಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದು 24 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದರೊಂದಿಗೆ ಗಲಭೆಯಲ್ಲಿ ಮೃತಪಟ್ಟವರ ಸಂಖ್ಯೆ 440 ತಲುಪಿದೆ.

DEATH TOLL  SITUATION UNDER CONTROL  SHEIKH HASINA GOVERNMENT  VIOLENCE HIT NATION
ಬಾಂಗ್ಲಾದೇಶದಲ್ಲಿ ವ್ಯಾಪಕ ಹಿಂಸಾಚಾರ (AP)
author img

By PTI

Published : Aug 6, 2024, 7:50 PM IST

ಢಾಕಾ(ಬಾಂಗ್ಲಾದೇಶ): ಬಾಂಗ್ಲಾದೇಶದಲ್ಲಿ ಹಿಂಸಾಚಾರ ಮುಂದುವರಿದಿದೆ. ವಿದ್ಯಾರ್ಥಿ ಸಂಘಟನೆಗಳ ದಂಗೆಯಿಂದ ದೇಶ ತತ್ತರಿಸಿದೆ. ಜಶೋರ್ ಜಿಲ್ಲೆಯಲ್ಲಿ ಅವಾಮಿ ಲೀಗ್ ಪ್ರಧಾನ ಕಾರ್ಯದರ್ಶಿ ಶಾಹಿನ್ ಚಕ್ಲದಾರ್ ಅವರಿಗೆ ಸೇರಿದ ಜಬೀರ್ ಇಂಟರ್ನ್ಯಾಷನಲ್ ಹೋಟೆಲ್​ಗೆ ಗಲಭೆಕೋರರು ಬೆಂಕಿ ಹಚ್ಚಿದ್ದು, 24 ಮಂದಿ ಸಜೀವ ದಹನವಾಗಿದ್ದಾರೆ.

440ಕ್ಕೇರಿದ ಸಾವಿನ ಸಂಖ್ಯೆ: ಕಳೆದ 21 ದಿನಗಳಿಂದ ನಡೆಯುತ್ತಿರುವ ವ್ಯಾಪಕ ಪ್ರತಿಭಟನೆಗಳಿಂದ ನೂರಾರು ಜನ ಸಾವನ್ನಪ್ಪಿದ್ದಾರೆ. ಇಲ್ಲಿಯವರೆಗೆ ಸಾವಿನ ಸಂಖ್ಯೆ 440 ತಲುಪಿದೆ. ಪರಿಸ್ಥಿತಿ ಹತೋಟಿಗೆ ತರಲು ಸೇನೆ ಪ್ರಯತ್ನಿಸುತ್ತಿದೆ. ಶೇಖ್ ಹಸೀನಾ ರಾಜೀನಾಮೆ ನೀಡಿ ದೇಶ ತೊರೆದ ಕೆಲವೇ ಗಂಟೆಗಳಲ್ಲಿ 100ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಜುಲೈನಲ್ಲಿ ಪೊಲೀಸರು ಮತ್ತು ವಿದ್ಯಾರ್ಥಿ ಪ್ರತಿಭಟನಾಕಾರರ ನಡುವಿನ ಹಿಂಸಾತ್ಮಕ ಘರ್ಷಣೆಯಲ್ಲಿ 200ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ನಂತರ ವಿವಿಧ ಭಾಗಗಳಲ್ಲಿ ಹಸೀನಾ ರಾಜೀನಾಮೆಗೆ ಒತ್ತಾಯಿಸಿದ ಪ್ರತಿಭಟನಾಕಾರರು ಘರ್ಷಣೆಗೆ ಇಳಿದಿದ್ದರು.

ರಾಜೀನಾಮೆ ನೀಡಿ ದೇಶ ತೊರೆದ ಹಸೀನಾ: ಮೀಸಲಾತಿ ವಿರೋಧಿ ಹಿಂಸಾತ್ಮಕ ಹೋರಾಟಕ್ಕೆ ಮಣಿದ ಶೇಕ್​ ಹಸೀನಾ ಆಗಸ್ಟ್​ 5ರಂದು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ, ದೇಶ ಬಿಟ್ಟು ಭಾರತಕ್ಕೆ ಆಗಮಿಸಿದ್ದಾರೆ. ಅನುಮತಿ ಸಿಕ್ಕ ಬಳಿಕ ಅವರು ಇಲ್ಲಿಂದ ಲಂಡನ್​​ಗೆ ತೆರಳುವ ಸಾಧ್ಯತೆ ಇದೆ.

ಪ್ರತಿಭಟನಾಕಾರರ ಪುಂಡಾಟಿಕೆ: ಸಾವಿರಾರು ಸಂಖ್ಯೆಯಲ್ಲಿದ್ದ ಉದ್ರಿಕ್ತ ಪ್ರತಿಭಟನಾಕಾರರು, ಸೋಮವಾರ ಪ್ರಧಾನಿ ನಿವಾಸಕ್ಕೆ ಮುತ್ತಿಗೆ ಹಾಕಿ ಸಿಕ್ಕ ಸಿಕ್ಕ ವಸ್ತುಗಳನ್ನು ನಾಶ ಮಾಡಿ ಕೆಲವನ್ನು ಕದ್ದೊಯ್ದರು. ಸಂಸತ್ತಿನ ಸೀಟುಗಳಲ್ಲಿ ಕುಳಿತು ಸಿಗರೇಟ್​ ಸೇದಿದ್ದಾರೆ. ಹಸೀನಾ ಬಳಸುತ್ತಿದ್ದ ಬೆಡ್​ ಮೇಲೆ ಮಲಗಿ, ತುಳಿದಿದ್ದಾರೆ. ಅವರ ಸೀರೆ, ವಸ್ತುಗಳನ್ನು ಜನ ತೆಗೆದುಕೊಂಡು ಹೋಗಿದ್ದಾರೆ. ಬೆಲೆಬಾಳುವ ವಸ್ತುಗಳನ್ನು ಪ್ರತಿಭಟನಾಕಾರರು ಕಳುವು ಮಾಡಿದ್ದಾರೆ. ಇದರ ವಿಡಿಯೋ, ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ.

ಇದನ್ನೂ ಓದಿ: ಬಾಂಗ್ಲಾದೇಶ ಸಂಸತ್​ ವಿಸರ್ಜನೆ: ಮಾಜಿ ಪ್ರಧಾನಿ ಖಲೀದಾ ಜಿಯಾ, ಬಂಧಿತ ಪ್ರತಿಭಟನಾಕಾರರ ಬಿಡುಗಡೆ - Bangladesh Parliament Dissolved

ETV Bharat Logo

Copyright © 2024 Ushodaya Enterprises Pvt. Ltd., All Rights Reserved.