ETV Bharat / international

ಮಾಲ್ಡೀವ್ಸ್ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಸಂಸದರ ಹೊಡೆದಾಟ - ಅಧಿವೇಶನದಲ್ಲಿ ತೀವ್ರ ಗಲಾಟೆ

ಮಾಲ್ಡೀವ್ಸ್ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಗಲಾಟೆ ನಡೆದಿದೆ. ನಾಲ್ವರು ಸಂಸದರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ವಿಚಾರಕ್ಕೆ ಪ್ರತಿಪಕ್ಷ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದು ಘರ್ಷಣೆಗೆ ಎಡೆಮಾಡಿಕೊಟ್ಟಿತು.

President Muizzu  Maldives Parliament  ಅಧ್ಯಕ್ಷ ಮುಯಿಝು  ಮಾಲ್ಡೀವ್ಸ್ ಸಂಸತ್ತಿನ ವಿಶೇಷ ಅಧಿವೇಶನ  ಅಧಿವೇಶನದಲ್ಲಿ ತೀವ್ರ ಗಲಾಟೆ  ಕೈ ಕೈ ಮಿಲಾಯಿಸಿದ ಸಂಸದರು
ಮಾಲ್ಡೀವ್ಸ್ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ತೀವ್ರ ಗಲಾಟೆ: ಕೈ ಕೈ ಮಿಲಾಯಿಸಿದ ಸಂಸದರು
author img

By PTI

Published : Jan 29, 2024, 11:39 AM IST

ಮಾಲೆ(ಮಾಲ್ಡೀವ್ಸ್): ಮಾಲ್ಡೀವ್ಸ್ ಸಂಸತ್ತಿನಲ್ಲಿ ಭಾನುವಾರ ನಡೆದ ವಿಶೇಷ ಅಧಿವೇಶನವು ಸಂಸದರ ಸಂಘರ್ಷಕ್ಕೆ ಕಾರಣವಾಯಿತು. ಅಧ್ಯಕ್ಷ ಮೊಹಮ್ಮದ್ ಮುಯಿಝು ಸಂಪುಟದ ನಾಲ್ವರು ಸದಸ್ಯರ ಅನುಮೋದನೆಗೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯಗಳು ವ್ಯಕ್ತವಾದವು. ಈ ಸಂದರ್ಭದಲ್ಲಿ ಆಡಳಿತಾರೂಢ ಸರ್ಕಾರದ ಪರವಾಗಿರುವ ಸಂಸದರು ಮತ್ತು ವಿರೋಧ ಪಕ್ಷದ ಸಂಸದರ ನಡುವೆ ಘರ್ಷಣೆ ನಡೆಯಿತು.

ಅಧಿವೇಶನದಲ್ಲಿ ಇಬ್ಬರು ಸಂಸದರು ಹೊಡೆದಾಟದಲ್ಲಿ ತೊಡಗಿರುವುದನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ವಿಡಿಯೋದಲ್ಲಿ ನೋಡಬಹುದು. ಆಡಳಿತ ಪಕ್ಷಗಳಾದ ಪೀಪಲ್ಸ್ ನ್ಯಾಷನಲ್ ಕಾಂಗ್ರೆಸ್ (ಪಿಎನ್‌ಸಿ), ಪ್ರೋಗ್ರೆಸ್ಸಿವ್ ಪಾರ್ಟಿ ಆಫ್ ಮಾಲ್ಡೀವ್ಸ್ (ಪಿಪಿಎಂ) ಮತ್ತು ಪ್ರತಿಪಕ್ಷ ಮಾಲ್ಡೀವಿಯನ್ ಡೆಮಾಕ್ರಟಿಕ್ ಪಾರ್ಟಿ (ಎಂಡಿಪಿ) ಸಂಸದರು ಪರಸ್ಪರ ಕೈ ಕೈ ಮಿಲಾಯಿಸಿದರು.

  • *Viewer discretion advised*

    Parliament proceedings have been disrupted after clashes between PPM/PNC MPs and opposition MPs. pic.twitter.com/vhvfCBgQ1s

    — Adhadhu (@AdhadhuMV) January 28, 2024 " class="align-text-top noRightClick twitterSection" data=" ">

ಮಾಲ್ಡೀವ್ಸ್ ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಅತಿ ಹೆಚ್ಚು ಸ್ಥಾನಗಳನ್ನು ಹೊಂದಿರುವ ಮಾಲ್ಡೀವಿಯನ್ ಡೆಮಾಕ್ರಟಿಕ್ ಪಕ್ಷವು ಮುಯಿಝು ಕ್ಯಾಬಿನೆಟ್‌ನ ನಾಲ್ವರು ಸಂಸದರನ್ನು ಅನುಮೋದಿಸಲು ನಿರಾಕರಿಸಿದಾಗ ಗಲಾಟೆ ಪ್ರಾರಂಭವಾಯಿತು. ವಿರೋಧ ಪಕ್ಷದ ಸಂಸದರು, ಆಡಳಿತ ಪಕ್ಷದ ಸಂಸದರ ನಡುವೆ ಗುದ್ದಾಟ ನಡೆಯಿತು. ಕೆಲವು ಸಂಸದರು ಸ್ಪೀಕರ್ ಕೆಲಸಕ್ಕೆ ಅಡ್ಡಿಪಡಿಸಿದರು. ಇದರಿಂದಾಗಿ ಕೋಲಾಹಲವೇ ಜರುಗಿತು.

ಮುಖ್ಯ ವಿರೋಧ ಪಕ್ಷವಾದ ಮಾಲ್ಡೀವಿಯನ್ ಡೆಮಾಕ್ರಟಿಕ್ ಪಾರ್ಟಿ, ಕ್ಯಾಬಿನೆಟ್ ಮೇಲಿನ ಮತದಾನಕ್ಕೆ ಮುಂಚಿತವಾಗಿ ಮುಯಿಝು ಪಕ್ಷದ ನಾಲ್ವರು ಸದಸ್ಯರಿಗೆ ಸಂಸತ್ತಿನ ಅನುಮೋದನೆ ತಡೆಹಿಡಿಯಲು ನಿರ್ಧರಿಸಿತು. ಇದರಿಂದ ರೊಚ್ಚಿಗೆದ್ದ ಸರ್ಕಾರದ ಪರವಾಗಿರುವ ಸಂಸದರು ಪ್ರತಿಭಟನೆ ಪ್ರಾರಂಭಿಸಿದರು ಎಂದು ಸ್ಥಳೀಯ ಮಾಧ್ಯಮ ವರದಿಗಳು ತಿಳಿಸಿವೆ.

ಘರ್ಷಣೆಯ ಸಂದರ್ಭದಲ್ಲಿ, ಕಂಡಿತೀಮು ಸಂಸದ ಅಬ್ದುಲ್ಲಾ ಶಹೀಮ್ ಅಬ್ದುಲ್ ಹಕೀಮ್ ಶಹೀಮ್ ಮತ್ತು ಕೆಂಧಿಕುಲ್ಹುಧೂ ಸಂಸದ ಅಹ್ಮದ್ ಈಸಾ ನಡುವೆ ವಾಗ್ವಾದ ನಡೆಯಿತು. ಈ ವೇಳೆ ಇಬ್ಬರು ಸಂಸದರು ಚೇಂಬರ್ ಬಳಿ ಬಿದ್ದರು. ಶಹೀಂ ಅವರ ತಲೆಗೆ ಗಾಯಯಿತು.

  • ދާދިފަހުން އެމްޑީޕީ ދޫކޮށް ޕީއެންސީއަށް ބަދަލުވި މެމްބަރުން ރިޔާސަތުގައި އިންނެވި މަޖިލީހުގެ ރައީސް މުހައްމަދު އަސްލަމަށް ޖަލްސާ ކުރިއަށްގެންދިޔުމުގެ ފުރުސަތު ދީފައި ނުވޭ. މުޅި ތަޅުމުން އިވެނީ ދުންމާރީގެ އަޑު. pic.twitter.com/1yv0wCNEAP

ಸಂಸತ್ತಿನ ಹೊರಗೂ ಪ್ರತಿಭಟನೆ: ಇದಾದ ಬಳಿಕ ಮತದಾನವನ್ನು ಸ್ಥಗಿತಗೊಳಿಸಲಾಗಿದ್ದು, ಸರ್ಕಾರದ ಪರ ಬೆಂಬಲಿಗರು ಮತ್ತು ಅಧಿಕಾರಿಗಳು ಪ್ರಸ್ತುತ ಸಂಸತ್ತಿನ ಹೊರಗೆ ಪ್ರತಿಭಟನೆ ನಡೆಸುತ್ತಿದ್ದಾರೆ. ಆಡಳಿತಾರೂಢ ಪಿಪಿಎಂ-ಪಿಎನ್‌ಸಿ ಒಕ್ಕೂಟವು ಸ್ಪೀಕರ್ ಮೊಹಮ್ಮದ್ ಅಸ್ಲಾಂ ಮತ್ತು ಡೆಪ್ಯುಟಿ ಸ್ಪೀಕರ್ ಅಹ್ಮದ್ ಸಲೀಂ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದೆ ಎಂದು ವರದಿಯಾಗಿದೆ.

ಕಳೆದ ವರ್ಷ ನವೆಂಬರ್ 17ರಂದು ಮಾಲ್ಡೀವ್ಸ್ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ, ಚೀನಾ ಪರ ನಾಯಕನೆಂದು ಪರಿಗಣಿಸಲ್ಪಟ್ಟಿರುವ ಮುಯಿಝು, ಮಾಲ್ಡೀವ್ಸ್ ಜನರು ತನಗೆ ಬಲವಾದ ಜನಾದೇಶ ನೀಡಿದ್ದಾರೆ ಎಂದು ಹೇಳಿದ್ದರು. ಇದರ ಜೊತೆಗೆ ಭಾರತ ತನ್ನ ಸೇನಾ ಪಡೆಯನ್ನು ಹಿಂತೆಗೆದುಕೊಳ್ಳುವಂತೆ ಔಪಚಾರಿಕವಾಗಿ ವಿನಂತಿಸಿದ್ದರು.

ಇದನ್ನೂ ಓದಿ: ದಕ್ಷಿಣ ಸುಡಾನ್‌ನಲ್ಲಿ ಗುಂಡಿನ ದಾಳಿ: ವಿಶ್ವಸಂಸ್ಥೆ ಶಾಂತಿಪಾಲಕ ಸೇರಿ 52 ಜನ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.