ETV Bharat / international

ಭಯೋತ್ಪಾದನೆ ನಿಗ್ರಹ: ಪಾಕಿಸ್ತಾನದ ಸಹಾಯಕ್ಕೆ ಮುಂದಾದ ಚೀನಾ - terrorism - TERRORISM

ಭಯೋತ್ಪಾದನೆ ನಿಗ್ರಹಕ್ಕೆ ಸಹಾಯ ಮಾಡಲು ಸಿದ್ಧ ಇರುವುದಾಗಿ ಚೀನಾ ಪಾಕಿಸ್ತಾನಕ್ಕೆ ಭರವಸೆ ನೀಡಿದೆ.

Chinese military offers help to Pakistan to curb terrorism

author img

By ETV Bharat Karnataka Team

Published : Mar 29, 2024, 5:38 PM IST

ಇಸ್ಲಾಮಾಬಾದ್: ಭಯೋತ್ಪಾದನೆ ನಿಗ್ರಹಿಸಲು ಪಾಕಿಸ್ತಾನಕ್ಕೆ ಸಹಾಯ ಮಾಡಲು ಸಿದ್ಧವಿರುವುದಾಗಿ ಚೀನಾ ಹೇಳಿದೆ. ಪಾಕಿಸ್ತಾನದ ಖೈಬರ್-ಪಖ್ತುಂಖ್ವಾ ಪ್ರಾಂತ್ಯದ ಬೆಶಾಮ್​ನಲ್ಲಿ ನಡೆದ ಆತ್ಮಾಹುತಿ ಬಾಂಬ್ ಸ್ಫೋಟದಲ್ಲಿ ಐವರು ಚೀನೀ ಪ್ರಜೆಗಳು ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಚೀನಾದ ಈ ಪ್ರಸ್ತಾವನೆ ಮಹತ್ವ ಪಡೆದುಕೊಂಡಿದೆ. ಈ ಮಾರಣಾಂತಿಕ ದಾಳಿಯ ನಂತರ ಪಾಕಿಸ್ತಾನದಲ್ಲಿರುವ ತನ್ನ ಪ್ರಜೆಗಳಿಗೆ ಹೆಚ್ಚಿನ ಭದ್ರತೆ ನೀಡಬೇಕೆಂದು ಚೀನಾ ಸರ್ಕಾರ ಪಾಕಿಸ್ತಾನ ಸರ್ಕಾರಕ್ಕೆ ಕರೆ ನೀಡಿದೆ.

"ಭಯೋತ್ಪಾದಕ ದಾಳಿಗಳು ಸೇರಿದಂತೆ ವಿವಿಧ ಭದ್ರತಾ ಅಪಾಯಗಳು ಮತ್ತು ಸವಾಲುಗಳನ್ನು ನಿಭಾಯಿಸಲು, ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಯನ್ನು ಜಂಟಿಯಾಗಿ ರಕ್ಷಿಸಲು ಚೀನಾದ ಮಿಲಿಟರಿ ಪಾಕಿಸ್ತಾನದೊಂದಿಗೆ ಕೆಲಸ ಮಾಡಲು ಸಿದ್ಧವಿದೆ" ಎಂದು ಚೀನಾದ ರಾಷ್ಟ್ರೀಯ ರಕ್ಷಣಾ ಸಚಿವಾಲಯದ ವಕ್ತಾರ ಕರ್ನಲ್ ವು ಕಿಯಾನ್ ಹೇಳಿದ್ದಾರೆ.

"ಚೀನಾ ಎಲ್ಲ ರೀತಿಯ ಭಯೋತ್ಪಾದನೆಯನ್ನು ವಿರೋಧಿಸುತ್ತದೆ. ಭಯೋತ್ಪಾದನೆಯ ವಿರುದ್ಧ ಹೋರಾಡಲು ಪಾಕಿಸ್ತಾನವನ್ನು ದೃಢವಾಗಿ ಬೆಂಬಲಿಸುತ್ತದೆ ಮತ್ತು ಪಾಕಿಸ್ತಾನದಲ್ಲಿನ ಚೀನಾದ ಸಿಬ್ಬಂದಿ, ಯೋಜನೆಗಳು ಮತ್ತು ಸಂಸ್ಥೆಗಳ ಸುರಕ್ಷತೆ ಮತ್ತು ಭದ್ರತೆಗಾಗಿ ಸಾಧ್ಯವಿರುವ ಎಲ್ಲವನ್ನೂ ಮಾಡಲು ಚೀನಾ ಬದ್ಧವಾಗಿದೆ" ಎಂದು ಅವರು ತಿಳಿಸಿದರು.

ಚೀನಾದ ಪ್ರಜೆಗಳು, ಯೋಜನೆಗಳು ಮತ್ತು ಸಂಸ್ಥೆಗಳನ್ನು ರಕ್ಷಿಸಲು ಸುರಕ್ಷತಾ ಕ್ರಮಗಳನ್ನು ಹೆಚ್ಚಿಸುವಂತೆ ಇದೇ ಸಂದರ್ಭದಲ್ಲಿ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರರು ಪಾಕಿಸ್ತಾನಕ್ಕೆ ಒತ್ತಾಯಿಸಿದರು. ಭಯೋತ್ಪಾದಕ ದಾಳಿಯ ಬಗ್ಗೆ ಹೆಚ್ಚಿನ ತನಿಖೆ ನಡೆಸಲು ಪಾಕಿಸ್ತಾನದ ಭದ್ರತಾ ಪಡೆಗಳೊಂದಿಗೆ ಕೆಲಸ ಮಾಡಲು ಚೀನಾದ ತನಿಖಾ ತಂಡ ಈಗಾಗಲೇ ಇಸ್ಲಾಮಾಬಾದ್​ನಲ್ಲಿದೆ.

ಈ ಮಧ್ಯೆ ಪಾಕಿಸ್ತಾನದ ಆಂತರಿಕ ಸಚಿವ ಮೊಹ್ಸಿನ್ ನಖ್ವಿ ಶುಕ್ರವಾರ ಇಸ್ಲಾಮಾಬಾದ್​ನಲ್ಲಿರುವ ಚೀನಾ ದೂತಾವಾಸಕ್ಕೆ ಭೇಟಿ ನೀಡಿ ಚೀನಾದ ತನಿಖಾ ತಂಡದೊಂದಿಗೆ ಸಂಕ್ಷಿಪ್ತ ಸಭೆ ನಡೆಸಿದರು. ಭಯೋತ್ಪಾದನಾ ದಾಳಿಯ ಬಗ್ಗೆ ನಡೆಯುತ್ತಿರುವ ತನಿಖೆಯ ಬಗ್ಗೆ ಮತ್ತು ದಾಳಿಯಲ್ಲಿ ಭಾಗಿಯಾಗಿರುವವರನ್ನು ಪತ್ತೆ ಮಾಡಿ ಶಿಕ್ಷೆ ವಿಧಿಸುವ ನಿಟ್ಟಿನಲ್ಲಿ ಪಾಕಿಸ್ತಾನವು ಸಂಪೂರ್ಣ ಸಹಕಾರ ನೀಡುವುದಾಗಿ ಅವರು ಚೀನಾದ ತನಿಖಾ ತಂಡಕ್ಕೆ ಭರವಸೆ ನೀಡಿದರು.

ಎರಡೂ ದೇಶಗಳ ಮಿಲಿಟರಿಗಳು ಆಗಾಗ ನಿಕಟ ಮತ್ತು ಉನ್ನತ ಮಟ್ಟದ ಕಾರ್ಯಾಚರಣೆಗಳನ್ನು ನಡೆಸುತ್ತಿವೆ. ಇದರ ಪರಿಣಾಮವಾಗಿ ಜಂಟಿ-ಮಿಲಿಟರಿ ಕಾರ್ಯಾಚರಣೆಗಳು ಮತ್ತು ವೃತ್ತಿಪರ ತರಬೇತಿ, ಸಿಬ್ಬಂದಿ ತರಬೇತಿ ಮತ್ತು ಉಪಕರಣಗಳ ವಿನಿಮಯ ಮತ್ತು ತಾಂತ್ರಿಕ ಸಹಕಾರ ಸೇರಿದಂತೆ ಹಲವಾರು ಯಶಸ್ವಿ ಫಲಿತಾಂಶಗಳು ಕಂಡು ಬಂದಿವೆ.

ಇದನ್ನೂ ಓದಿ : ಭಾರತದೊಂದಿಗೆ ವ್ಯಾಪಾರ ಸಂಬಂಧ ಪುನಾರಂಭ ಸಾಧ್ಯವಿಲ್ಲ: ಪಾಕಿಸ್ತಾನ ಸರ್ಕಾರ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.