ETV Bharat / international

ಇರಾನ್ ಅಧ್ಯಕ್ಷೀಯ ಚುನಾವಣೆಯಿಂದ ದೂರ ಸರಿಯುತ್ತಿರುವ ಮತದಾರರು: ಕಾರಣವೇನು ಗೊತ್ತಾ? - Iran Presidential Election - IRAN PRESIDENTIAL ELECTION

ಇರಾನ್ ಅಧ್ಯಕ್ಷೀಯ ಚುನಾವಣೆ ಶುಕ್ರವಾರ ನಡೆಯಲಿದೆ. ಆದರೆ ಹಲವು ಕಾರಣಗಳಿಂದ ಜನರು ಮತದಾನ ಮಾಡಲು ನಿರಾಸಕ್ತಿ ತೋರಿಸುತ್ತಿದ್ದಾರೆ.

ಸಯೀದ್ ಜಲೀಲಿ ಮತ್ತು ಮಸೌದ್ ಪೆಜೆಶ್ಕಿಯಾನ್
ಸಯೀದ್ ಜಲೀಲಿ ಮತ್ತು ಮಸೌದ್ ಪೆಜೆಶ್ಕಿಯಾನ್ (AP Photos)
author img

By ETV Bharat Karnataka Team

Published : Jul 2, 2024, 8:15 PM IST

ದುಬೈ (ಯುನೈಟೆಡ್ ಅರಬ್ ಎಮಿರೇಟ್ಸ್): 20 ವರ್ಷಗಳ ಹಿಂದೆ, ಇರಾನ್​ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಶುಕ್ರವಾರದ ಪ್ರಾರ್ಥನೆಯಲ್ಲಿ ಜನಸಮೂಹದ ಮುಂದೆ ನಿಂತು ಯುನೈಟೆಡ್ ಸ್ಟೇಟ್ಸ್‌ನ ಮತದಾನದ ಪ್ರಮಾಣವನ್ನು ಖಂಡಿಸಿದ್ದರು. ಅಧ್ಯಕ್ಷೀಯ ಚುನಾವಣೆಗಳನ್ನು ನಡೆಸುವ ಕೆಲವು ದೇಶಗಳಲ್ಲಿ ಸಂಬಂಧಿಸಿದಂತೆ, ಒಂದು ರಾಷ್ಟ್ರದಲ್ಲಿ ಶೇ.35 ಅಥವಾ ಶೇ.40 ಮತದಾನ ನಡೆಯುವುದು ನಾಚಿಕೆಗೇಡಿನ ಸಂಗತಿ. ಆ ದೇಶದ ಜನರು ತಮ್ಮ ರಾಜಕೀಯ ವ್ಯವಸ್ಥೆಯನ್ನು ನಂಬುವುದಿಲ್ಲ, ಅವರು ಅದರ ಬಗ್ಗೆ ಕಾಳಜಿ ವಹಿಸುವುದಿಲ್ಲ ಮತ್ತು ಅವರಿಗೆ ಯಾವುದೇ ಭರವಸೆ ಇಲ್ಲ ಎಂಬುದು ಇದರಿಂದ ಸ್ಪಷ್ಟವಾಗಿದೆ ಎಂದು ಖಮೇನಿ 2001 ರಲ್ಲಿ ಹೇಳಿದ್ದರು.

ಸದ್ಯ ಇರಾನ್ ಈಗ ಅಯತೊಲ್ಲಾ ಈ ಹಿಂದೆ ಹೇಳಿದ್ದ ಪರಿಸ್ಥಿಯನ್ನು ಎದುರಿಸುತ್ತಿದೆ. ಹೌದು, 1979 ರ ಇಸ್ಲಾಮಿಕ್ ಕ್ರಾಂತಿಯ ನಂತರ ಎರಡನೇ ಬಾರಿಗೆ ಇರಾನ್ ಅಧ್ಯಕ್ಷೀಯ ಚುನಾವಣೆ ಶುಕ್ರವಾರ ನಡೆಯಲಿದೆ. ಇದಕ್ಕೂ ಮೊದಲು ಕಳೆದ ವಾರ ನಡೆದ ಚುನಾವಣೆಯಲ್ಲಿ ಕೇವಲ 39.9 ರಷ್ಟು ಮತದಾರರು ಮಾತ್ರ ಮತ ಚಲಾಯಿಸಿದ್ದರು.

24.5 ಮಿಲಿಯನ್‌ಗಿಂತಲೂ ಹೆಚ್ಚಿನ ಮತಗಳಲ್ಲಿ, 1 ಮಿಲಿಯನ್‌ಗಿಂತಲೂ ಹೆಚ್ಚು ಮತಗಳನ್ನು ತಿರಸ್ಕರಿಸಲಾಗಿತ್ತು. ಸಾಮಾನ್ಯವಾಗಿ ಜನರು ಮತದಾನ ಮಾಡುವುದು ತಮ್ಮ ಜವಾಬ್ದಾರಿ ಎಂದು ಅರಿತ್ತಿದ್ದಾರೆ. ಆದರೆ, ಚುನಾವಣಾ ಕಣದಲ್ಲಿರುವ ಎಲ್ಲ ಅಭ್ಯರ್ಥಿಗಳನ್ನು ತಿರಸ್ಕರಿಸಲು ಬಯಸುತ್ತಾರೆ ಎಂಬುದು ಇದರ ಸಂಕೇತವಾಗಿದೆ.

ಆರ್ಥಿಕತೆ ಕುಸಿತದಿಂದ ಜನರಲ್ಲಿ ಆಕ್ರೋಶ: ಇದರ ಮಧ್ಯೆ ಇರಾನ್‌ನ ಆರ್ಥಿಕತೆ ಕುಸಿತಕೊಂಡ ವರ್ಷಗಳ ಬಳಿಕ ಸಾರ್ವಜನಿಕರಲ್ಲಿ ಆಕ್ರೋಶ ತೀವ್ರಗೊಂಡಿದೆ. ಜೊತೆಗೆ ಭಿನ್ನಾಭಿಪ್ರಾಯದ ಮೇಲೆ ರಕ್ತಸಿಕ್ತ ದಮನಗಳು, ಪೊಲೀಸರು ತಮ್ಮ ಇಚ್ಛೆಯಂತೆ ತಲೆಗೆ ಸ್ಕಾರ್ಫ್ ಧರಿಸದಿದ್ದಕ್ಕಾಗಿ ಮಹ್ಸಾ ಅಮಿನಿಯರನ್ನು ಬಂಧಿಸಿದ್ದರು. ನಂತರ ಅವರು ಸಾವನ್ನಪ್ಪಿದ್ದರು ಇದರಿಂದ 2022ರಲ್ಲಿ ಸಾಮೂಹಿಕ ಪ್ರತಿಭಟನೆಗಳು ನಡೆದಿದ್ದವು. ಇರಾನ್ ಯುರೇನಿಯಂ ಸಂಗ್ರಹ ಸಾಮರ್ಥ್ಯ ಹೆಚ್ಚಿಸಿರುವುದರಿಂದ ಪಶ್ಚಿಮ ದೇಶಗಳೊಂದಿಗೆ ಉದ್ವಿಗ್ನತೆಯೂ ಹೆಚ್ಚಾಗಿದೆ.

ಹಾರ್ಡ್ - ಲೈನ್ ಮಾಜಿ ಪರಮಾಣು ಸಮಾಲೋಚಕ ಸಯೀದ್ ಜಲೀಲಿ ಅವರು ಸುಧಾರಣಾವಾದಿ ಮಸೌದ್ ಪೆಜೆಶ್ಕಿಯಾನ್ ಅವರನ್ನು ಚುನಾವಣಾ ಕಣದಲ್ಲಿ ಎದುರಿಸುತ್ತಿದ್ದಾರೆ. ಅಧ್ಯಕ್ಷ ಸ್ಥಾನವನ್ನು ಗೆಲ್ಲಲು ಜಲೀಲಿಗೆ ಭಾರಿ ಪ್ರಮಾಣದ ಮತಗಳ ಅಗತ್ಯವಿದೆ. ಮತ್ತೊಂದೆಡೆ, ಪೆಜೆಶ್ಕಿಯಾನ್ ಬೆಂಬಲಿಗರು, ಜಲೀಲಿ ಗೆದ್ದರೆ ಕರಾಳ ದಿನಗಳನ್ನು ಎದುರಿಸಬೇಕಾಗುತ್ತಿದೆ ಎಂದು ಜನರನ್ನು ಎಚ್ಚರಿಸುತ್ತಿದ್ದಾರೆ.

"ನಾನು ಈ ಹಿಂದೆ ಮತ ಚಲಾಯಿಸಲಿಲ್ಲ ಮತ್ತು ಮುಂದೆ ಮತ ಚಲಾಯಿಸುವುದಿಲ್ಲ, ಏಕೆಂದರೆ ಮಹ್ಸಾ ಮತ್ತು ಯುವಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಯಾರೂ ಕ್ಷಮೆಯಾಚಿಸಲಿಲ್ಲ" ಎಂದು ಗ್ರಾಫಿಕ್ ವಿನ್ಯಾಸವನ್ನು ಅಧ್ಯಯನ ಮಾಡುತ್ತಿರುವ 23 ವರ್ಷದ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಲೈಲಾ ಸೆಯೆಡಿ ಹೇಳಿದರು.

ಗೆಲುವು ಸಾಧಿಸಲು ಶೇ.50ಕ್ಕಿಂತ ಹೆಚ್ಚು ಮತ ಪಡೆಯಬೇಕು: ಇರಾನ್ ಕಾನೂನಿನ ಪ್ರಕಾರ, ಯಾವುದೇ ಒಬ್ಬ ಅಭ್ಯರ್ಥಿ ಗೆಲುವು ಸಾಧಿಸಬೇಕು ಎಂದರೆ, ಚಲಾವಣೆಯಾದ ಒಟ್ಟು ಮತಗಳ ಪೈಕಿ ಶೇ.50ಕ್ಕಿಂತ ಹೆಚ್ಚು ಮತ ಪಡೆಯಬೇಕು. ಕಳೆದ ಶನಿವಾರ ಬಿಡುಗಡೆಯಾದ ಫಲಿತಾಂಶಗಳಲ್ಲಿ, ಪೆಜೆಶ್ಕಿಯಾನ್ 10.4 ಮಿಲಿಯನ್ ಮತಗಳನ್ನು ಪಡೆದಿದ್ದರೆ, ಜಲೀಲಿ 9.4 ಮಿಲಿಯನ್ ಮತಗಳನ್ನು ಪಡೆದಿದ್ದರು.

ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಗರ್ ಖಲಿಬಾಫ್ 3.3 ಮಿಲಿಯನ್ ಮತಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದರೆ, ಶಿಯಾ ಧರ್ಮಗುರು ಮುಸ್ತಫಾ ಪೌರ್ಮೊಹಮ್ಮದಿ 206,000 ಕ್ಕೂ ಹೆಚ್ಚು ಮತಗಳನ್ನು ಗಳಿಸಿದ್ದರು. ಅದು 1980ರ ಇರಾನ್ - ಇರಾಕ್ ಯುದ್ಧದಲ್ಲಿ ಕಾಲು ಕಳೆದುಕೊಂಡಿದ್ದಕ್ಕಾಗಿ "ಜೀವಂತ ಹುತಾತ್ಮ" ಎಂದು ಕರೆಸಿಕೊಳ್ಳುವ 58 ವರ್ಷ ವಯಸ್ಸಿನ ಜಲೀಲಿ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರಬಲ ಅಭ್ಯರ್ಥಿಯಾಗಿದ್ದಾರೆ.

ಇರಾನಿನ ಮಾಜಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಸಚಿವ ಮೊಹಮ್ಮದ್ ಜಾವೇದ್ ಅಜಾರಿ ಜಹ್ರೋಮಿ, ಜಲೀಲಿ ಮತ್ತು ಪೆಜೆಶ್ಕಿಯಾನ್ ನಡುವೆ ತೀವ್ರ ಸ್ಪರ್ಧೆ ಇರುತ್ತದೆ ಎಂದು ಸ್ಪಷ್ಟವಾಗಿ ಪ್ರತಿಪಾದಿಸಿದ್ದರು. ನಾವು ಇರಾನ್ ಅನ್ನು ತಾಲಿಬಾನ್ ಕೈ ಸೇರಲು ಬಿಡುವುದಿಲ್ಲ ಎಂದು ಅವರು ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಬರೆದುಕೊಂಡಿದ್ದರು.

ಇನ್ನು ಜೂನ್ 28ರ ಮತದಾನದ ನಂತರ ಟೆಹ್ರಾನ್‌ನ ಅನೇಕ ಮತದಾರರು ಮಾಧ್ಯಮವೊಂದಕ್ಕೆ ಈ ಚುನಾವಣೆಯ ಬಗ್ಗೆ ಹೆಚ್ಚು ಕಾಳಜಿ ವಹಿಸುವುದಿಲ್ಲ ಎಂದು ಹೇಳಿದ್ದರು. ಮಾಜಿ ಅಧ್ಯಕ್ಷರು ತಮ್ಮ ಭರವಸೆಗಳನ್ನು ಈಡೇರಿಸಲು ವಿಫಲವಾದ ಕಾರಣ ನಾನು ಮತ ಚಲಾಯಿಸಲಿಲ್ಲ" ಎಂದು 27 ವರ್ಷದ ಮನೋವಿಜ್ಞಾನ ವಿದ್ಯಾರ್ಥಿ ಅಹ್ಮದ್ ತಾಹೇರಿ ಹೇಳಿದರು.

ಎಲೆಕ್ಟ್ರಾನಿಕ್ ಇಂಜಿನಿಯರ್ ಆದ ಮೊಹಮ್ಮದ್ ಅಲಿ ರೊಬಾತಿ, ಜನರ ಆರ್ಥಿಕ ಸಂಕಷ್ಟಗಳ ಬಗ್ಗೆ ಇರಾನ್ ಅಧಿಕಾರಿಗಳು ತೋರುತ್ತಿರುವ ಉದಾಸೀನತೆಯು ಮತದಾನ ಮಾಡದಿರಲು ಕಾರಣವಾಯಿತು ಎಂದರು. ವರ್ಷಗಳ ಆರ್ಥಿಕ ಸಂಕಷ್ಟದ ನಂತರ, ನನಗೆ ರಾಜಕೀಯದಲ್ಲಿ ಆಸಕ್ತಿಯಿಲ್ಲ ಎಂದು ರೊಬಾಟಿ ತಿಳಿಸಿದರು.

2015 ರ ಪರಮಾಣು ಒಪ್ಪಂದದ ಸಮಯದಲ್ಲಿ, ಇರಾನ್‌ನ ಕರೆನ್ಸಿಯ ವಿನಿಮಯ ದರವು 1 ಡಾಲರ್​ಗೆ 32,000 ರಿಯಾಲ್‌ಗಳಷ್ಟಿತ್ತು. ಇಂದು, ಇದು1 ಡಾಲರ್​ಗೆ 6,17,000 ರಿಯಾಲ್ ಆಗಿದೆ. ಏಪ್ರಿಲ್‌ನಲ್ಲಿ ಇಸ್ರೇಲ್‌ನ ಮೇಲೆ ಇರಾನ್‌ನ ನೇರ ದಾಳಿಯ ನಂತರ ರಿಯಾಲ್‌ಗಳ ಮೌಲ್ಯ ದಾಖಲೆ ಮಟ್ಟದಲ್ಲಿ ಕುಸಿದು 700,000 ಆಗಿದೆ.

ಮತದಾರರ ಭಾಗವಹಿಸುವಿಕೆಯ ಪ್ರಮಾಣ ಮತ್ತು ಖಾಲಿ ಮತಪತ್ರಗಳು ಆಡಳಿತ ನೀತಿಗಳ ನಿರಾಕರಣೆಯನ್ನು ಪ್ರತಿನಿಧಿಸುತ್ತವೆ. ವಿಶೇಷವಾಗಿ ಪೂರ್ಣ ತಲೆ ಮುಚ್ಚುವ ಅಗತ್ಯವಿರುವ ಕಾನೂನುಗಳನ್ನು ಅನುಸರಿಸಲು ನಿರಾಕರಿಸುವ ಟೀಕಾಕಾರರು ಮತ್ತು ಮಹಿಳೆಯರ ಮೇಲಿನ ದಬ್ಬಾಳಿಕೆ ಎಂದು ನ್ಯೂಯಾರ್ಕ್ ಮೂಲದ ಸೌಫನ್ ಸೆಂಟರ್ ಥಿಂಕ್ ಟ್ಯಾಂಕ್ ಸೋಮವಾರ ತನ್ನ ವಿಶ್ಲೇಷಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಹಮಾಸ್​ ನಿರ್ಮೂಲನೆಯ ಅಂತಿಮ ಹಂತದಲ್ಲಿದ್ದೇವೆ: ಇಸ್ರೇಲ್ ಪ್ರಧಾನಿ ನೆತನ್ಯಾಹು - Israel Hamas War

ETV Bharat Logo

Copyright © 2025 Ushodaya Enterprises Pvt. Ltd., All Rights Reserved.