ETV Bharat / international

ಲೆಬನಾನ್​ ಮೇಲೆ ಮುಂದುವರೆದ ದಾಳಿ, ಮತ್ತೆ 72 ಜನ ಸಾವು: ಕದನವಿರಾಮ ಇಲ್ಲವೆಂದ ಇಸ್ರೇಲ್, 620ಕ್ಕೇರಿದ ಸಾವಿನ ಸಂಖ್ಯೆ - ISRAEL ATTACKS LEBANON - ISRAEL ATTACKS LEBANON

ಗುರುವಾರವೂ ಲೆಬನಾನ್ ಮೇಲೆ ಇಸ್ರೇಲ್ ದಾಳಿಗಳು ಮುಂದುವರೆದಿವೆ.

ಲೆಬನಾನ್ ಮೇಲೆ ನಡೆದ ದಾಳಿಯ ದೃಶ್ಯ
ಲೆಬನಾನ್ ಮೇಲೆ ನಡೆದ ದಾಳಿಯ ದೃಶ್ಯ (IANS)
author img

By ETV Bharat Karnataka Team

Published : Sep 26, 2024, 4:07 PM IST

ಬೈರುತ್: ಪೂರ್ವ ಮತ್ತು ದಕ್ಷಿಣ ಲೆಬನಾನ್ ಮೇಲೆ ಇಸ್ರೇಲ್ ಯುದ್ಧ ವಿಮಾನಗಳು ಗುರುವಾರ ತೀವ್ರ ವೈಮಾನಿಕ ದಾಳಿಯನ್ನು ಪುನರಾರಂಭಿಸಿವೆ ಎಂದು ಲೆಬನಾನ್ ಮಿಲಿಟರಿ ಮೂಲಗಳು ತಿಳಿಸಿವೆ.

ಪೂರ್ವ ಲೆಬನಾನ್​ನ ಬಾಲ್ಬೆಕ್, ಹರ್ಮೆಲ್ ಮತ್ತು ಪಶ್ಚಿಮ ಬೆಕಾ ಪ್ರದೇಶಗಳ ಮೇಲೆ ಇಸ್ರೇಲಿ ಯುದ್ಧ ವಿಮಾನಗಳು ಬುಧವಾರ ಸುಮಾರು 70 ದಾಳಿಗಳನ್ನು ನಡೆಸಿದ್ದು, ಇದರಲ್ಲಿ ಸುಮಾರು 72 ಜನ ಸಾವಿಗೀಡಾಗಿದ್ದು, ಈವರೆಗೆ ಮೃತರ ಒಟ್ಟು ಸಂಖ್ಯೆ 620ನ್ನೂ ದಾಟಿದೆ. ಲೆಬನಾನ್ ನಾದ್ಯಂತ ಇಸ್ರೇಲ್ ನಡೆಸಿದ ಬೃಹತ್ ಬಾಂಬ್ ದಾಳಿಗೆ ಬೆದರಿ ಸುಮಾರು 5 ಲಕ್ಷ ಜನ ಸ್ಥಳಾಂತರಗೊಂಡಿದ್ದಾರೆ.

ಕದನ ವಿರಾಮಕ್ಕೆ ಅಮೆರಿಕ ಕರೆ: ಏತನ್ಮಧ್ಯೆ 21 ದಿನಗಳ ಕಾಲ ಕದನವಿರಾಮ ಘೋಷಿಸಬೇಕು ಎಂದು ಇಸ್ರೇಲ್ ಮತ್ತು ಹಿಜ್ಬುಲ್ಲಾಗೆ ಅಮೆರಿಕ ಮತ್ತು ಮಿತ್ರ ರಾಷ್ಟ್ರಗಳು ಕರೆ ನೀಡಿವೆ. ಆದರೆ, ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ಇಸ್ರೇಲ್ ಪ್ರಧಾನ ಮಂತ್ರಿಗಳ ಕಚೇರಿ, ಅಂಥ ಯಾವುದೇ ಪ್ರಸ್ತಾವನೆ ನಮ್ಮ ಮುಂದಿಲ್ಲ ಮತ್ತು ಲೆಬನಾನ್ ಮೇಲೆ ದಾಳಿಗಳು ಮುಂದುವರಿಯಯಲಿವೆ ಎಂದು ಎಕ್ಸ್​ನಲ್ಲಿ ಪೋಸ್ಟ್​ ಮಾಡಿದೆ.

ಲೆಬನಾನ್​ನಲ್ಲಿ ಪ್ರಸ್ತಾವಿತ 21 ದಿನಗಳ ಕದನ ವಿರಾಮಕ್ಕೆ ಹಲವಾರು ಬಲಪಂಥೀಯ ಇಸ್ರೇಲಿ ನಾಯಕರು ಬಲವಾದ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹಂತದಲ್ಲಿ ಕದನವಿರಾಮಕ್ಕೆ ಒಪ್ಪಿದರೆ ಅದರಿಂದ ಇಸ್ರೇಲ್​ ಮಿಲಿಟರಿ ಕಾರ್ಯಾಚರಣೆಗೆ ಹಿನ್ನಡೆಯಾಗಲಿದೆ ಮತ್ತು ಈ ಅವಧಿಯನ್ನು ಬಳಸಿಕೊಂಡು ಹಿಜ್ಬುಲ್ಲಾ ಉಗ್ರರು ಮರು ಸಂಘಟನೆಯಾಗಬಹುದು ಎಂದು ಅವರು ವಾದಿಸಿದ್ದಾರೆ. ಈಗ ಕದನವಿರಾಮಕ್ಕೆ ಒಪ್ಪುವುದು ಎಂದರೆ ಹಿಜ್ಬುಲ್ಲಾಗೆ ಶರಣಾದಂತೆ ಎಂದು ನೆತನ್ಯಾಹು ಅವರ ಲಿಕುಡ್ ಪಕ್ಷದ ಸಂಸತ್ ಸದಸ್ಯ ನಿಸ್ಸಿಮ್ ವಟುರಿ ಹೇಳಿದ್ದಾರೆ.

ರಾತ್ರೋರಾತ್ರಿ ಹಿಜ್ಬುಲ್ಲಾ ನೆಲೆಗಳ ಮೇಲೆ ದಾಳಿ: ರಾತ್ರೋರಾತ್ರಿ ಲೆಬನಾನ್ ನ 75 ಹಿಜ್ಬುಲ್ಲಾ ನೆಲೆಗಳ ಮೇಲೆ ದಾಳಿ ನಡೆಸಿದ್ದೇವೆ ಎಂದು ಇಸ್ರೇಲ್ ವಾಯುಪಡೆ ಹೇಳಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಲೆಬನಾನ್​ನ ಸರ್ಕಾರಿ ಮಾಧ್ಯಮ, ಸುಮಾರು ಎರಡು ಡಜನ್ ಸ್ಥಳಗಳಲ್ಲಿ ರಾತ್ರಿಯಿಡೀ ಮತ್ತು ಇಂದು ಬೆಳಗ್ಗೆ ದಾಳಿಗಳು ನಡೆದಿವೆ ಎಂದು ವರದಿ ಮಾಡಿದೆ. ಲೆಬನಾನ್​ನಿಂದ ಉತ್ತರ ಇಸ್ರೇಲ್ ನ ಪಶ್ಚಿಮ ಗೆಲಿಲಿ ಕಡೆಗೆ 45 ರಾಕೆಟ್​ಗಳನ್ನು ಹಾರಿಸಲಾಗಿದೆ ಎಂದು ಇಸ್ರೇಲ್ ಸೇನೆ ತಿಳಿಸಿದೆ.

ಮತ್ತೊಂದೆಡೆ ಗಾಜಾದಲ್ಲಿಯೂ ಇಸ್ರೇಲ್ ಸೇನೆ ದಾಳಿಗಳನ್ನು ಮುಂದುವರೆಸಿದೆ. ಗಾಜಾದಲ್ಲಿ ಇಸ್ರೇಲ್ ನಡೆಸಿದ ದಾಳಿಯಲ್ಲಿ 16 ಮಂದಿ ಸಾವನ್ನಪ್ಪಿದ್ದಾರೆ. ಆಕ್ರಮಿತ ವೆಸ್ಟ್​ ಬ್ಯಾಂಕ್​​ನಲ್ಲಿಯೂ ಇಸ್ರೇಲಿ ದಾಳಿಗಳು ಮುಂದುವರೆದಿದ್ದು, ಕನಿಷ್ಠ 10 ಪ್ಯಾಲೆಸ್ಟೈನಿಯರನ್ನು ಬಂಧಿಸಲಾಗಿದೆ ಮತ್ತು ಅವರಲ್ಲಿ ಹಲವರು ಗಾಯಗೊಂಡಿದ್ದಾರೆ ಎಂದು ವರದಿಗಳು ಹೇಳಿವೆ.

ಇದನ್ನೂ ಓದಿ : ಸಂಘರ್ಷ ಕೊನೆಗೊಳಿಸುವಂತೆ ಇಸ್ರೇಲ್, ಹಿಜ್ಬುಲ್ಲಾಗೆ ವಿಶ್ವರಾಷ್ಟ್ರಗಳ ಒತ್ತಾಯ - Israel Hezbollah War

ETV Bharat Logo

Copyright © 2024 Ushodaya Enterprises Pvt. Ltd., All Rights Reserved.