ETV Bharat / international

ಅಫ್ಘಾನಿಸ್ತಾನದಲ್ಲಿ ಈ ವರ್ಷ 30 ಲಕ್ಷ ಮಕ್ಕಳಿಗೆ ಅಪೌಷ್ಟಿಕತೆ ಭೀತಿ: ಡಬ್ಲ್ಯುಎಫ್‌ಪಿ ಎಚ್ಚರಿಕೆ - Afghanistan malnutrition - AFGHANISTAN MALNUTRITION

ಅಪೌಷ್ಟಿಕತೆ ಹೋಗಲಾಡಿಲು ಇಡೀ ವಿಶ್ವವೇ ಹೆಣಗಾಡುತ್ತಿದ್ದರೆ, ಇತ್ತ ಅಫ್ಘಾನಿಸ್ತಾನದಲ್ಲಿ ಅದು ವಿಪರೀತವಾಗುತ್ತಿದೆ. ಈ ವರ್ಷ (2024) ಅದು ಮತ್ತಷ್ಟು ಹೆಚ್ಚಳ ಸಾಧ್ಯತೆ ಇದೆ ಎಂಬ ಮನ್ಸೂಚನೆ ನೀಡಲಾಗಿದೆ.

ಆಫ್ಘಾನಿಸ್ತಾನದಲ್ಲಿ ಈ ವರ್ಷ 30 ಲಕ್ಷ ಮಕ್ಕಳಿಗೆ ಅಪೌಷ್ಟಿಕತೆ ಭೀತಿ

author img

By ANI

Published : Mar 30, 2024, 5:19 PM IST

ಕಾಬೂಲ್ (ಅಫ್ಘಾನಿಸ್ತಾನ): ತಾಲಿಬಾನ್​ ಆಡಳಿತ ಇರುವ ಆಫ್ಘಾನಿಸ್ತಾನದಲ್ಲಿ ಈ ವರ್ಷ (2024) ಸುಮಾರು 30 ಲಕ್ಷಕ್ಕೂ ಅಧಿಕ ಮಕ್ಕಳು ಅಪೌಷ್ಟಿಕತೆಯಿಂದ ಬಳಲಿದ್ದಾರೆ ಎಂದು ವಿಶ್ವ ಆಹಾರ ಕಾರ್ಯಕ್ರಮ (ಡಬ್ಲ್ಯುಎಫ್‌ಪಿ) ಎಚ್ಚರಿಕೆ ನೀಡಿದ್ದಾಗಿ ವರದಿಯಾಗಿದೆ.

ತಾಲಿಬಾನ್​ ಆಡಳಿತ ವಹಿಸಿಕೊಂಡಾಗಿನಿಂದ ದೇಶದಲ್ಲಿ ಅಪೌಷ್ಟಿಕತೆ ಹೆಚ್ಚಿದೆ. ಕಳೆದ ವರ್ಷದಿಂದ ವಿದೇಶಿ ನೆರವು ಕೂಡ ಕಡಿತವಾಗಿದೆ. ಇದರಿಂದಾಗಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಿದೆ ಎಂದು ಸಂಸ್ಥೆ ತಿಳಿಸಿದೆ. ಅಫ್ಘಾನಿಸ್ತಾನದಲ್ಲಿ ವಿಶ್ವ ಆಹಾರ ಕಾರ್ಯಕ್ರಮ ಮುಖ್ಯಸ್ಥ ಮೋನಾ ಶೇಖ್ ಅವರು ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ ಖಾತೆಯಲ್ಲಿ ವಿಡಿಯೋ ಹೇಳಿಕೆಯೊಂದನ್ನು ಪೋಸ್ಟ್ ಮಾಡಿದ್ದು, "ನಾವು ಸುಮಾರು 1.6 ಮಿಲಿಯನ್ ಅಪೌಷ್ಟಿಕ ಮಕ್ಕಳಿಗೆ ಸಹಾಯ ಮಾಡುವಷ್ಟು ಶಕ್ತರಾಗಿದ್ದೇವೆ" ಎಂದು ಹೇಳಿದ್ದಾರೆ.

ಅಂತಾರಾಷ್ಟ್ರೀಯ ನೆರವಿನಲ್ಲೇ ಕೊರತೆ: ಅಂತಾರಾಷ್ಟ್ರೀಯ ಸಂಸ್ಥೆಗಳ ಪ್ರಕಾರ, ಅಫ್ಘಾನಿಸ್ತಾನದಲ್ಲಿ ಅನೇಕ ಕುಟುಂಬಗಳು ತಮ್ಮ ಮಕ್ಕಳಿಗೆ ಸೂಕ್ತ ಆಹಾರ ಒದಗಿಸಲು ಸಾಧ್ಯವಾಗುತ್ತಿಲ್ಲ. ತಾಲಿಬಾನ್ ಆಡಳಿತ ವಹಿಸಿಕೊಂಡ ಬಳಿಕ ಅಲ್ಲಿ ಭೀಕರ ಮಾನವೀಯ ಬಿಕ್ಕಟ್ಟು ಸೃಷ್ಟಿಯಾಗಿದೆ. ಇದು ಈಗಾಗಲೇ ಅನಿಶ್ಚಿತ ಪರಿಸ್ಥಿತಿ ಉಲ್ಬಣಗೊಳ್ಳುವಂತೆ ಮಾಡಿದೆ. ವಿಶೇಷವಾಗಿ ಇದು ಮಕ್ಕಳು ಮತ್ತು ಮಹಿಳೆಯಲ್ಲಿ ವ್ಯಾಪಕವಾಗಿ ಹರಡಿದೆ ಎಂದು ಹೇಳಿವೆ.

ಇದರ ಜೊತೆಗೆ, ಅಂತಾರಾಷ್ಟ್ರೀಯ ಸಂಸ್ಥೆಗಳಲ್ಲಿನ ಹಣಕಾಸು ಕೊರತೆಯಿಂದಾಗಿ ಅಫ್ಘಾನಿಸ್ತಾನದಲ್ಲಿ ಪರಿಹಾರ ಪ್ರಯತ್ನಗಳಿಗೆ ಗಮನಾರ್ಹ ಹಿನ್ನಡೆ ಉಂಟಾಗಿದೆ. ಇದು ಲಕ್ಷಾಂತರ ಜನರನ್ನು ಕ್ಷಾಮದ ಅಪಾಯಕ್ಕೆ ಸಿಲುಕಿಸಿದೆ. ಅಗತ್ಯವಿರುವ ಜನರಿಗೆ ಮಾನವೀಯ ನೆರವು ಸಿಗದೇ ವಂಚಿತರಾಗುತ್ತಿದ್ದಾರೆ. ದೇಶದಲ್ಲಿ ಮಾನವೀಯ ಬಿಕ್ಕಟ್ಟು ಇನ್ನಷ್ಟು ಜಟಿಲವಾಗುತ್ತಿದೆ.

ಮಹಿಳಾ ಶಿಕ್ಷಣ ಮರೀಚಿಕೆ: ಇನ್ನೂ, ಮಹಿಳೆಯರು ಶಿಕ್ಷಣ ಪಡೆಯುವುದನ್ನು ನಿಷೇಧಿಸಲಾಗಿದೆ. ಇದರಿಂದ ಅಲ್ಲಿನ ಹೆಣ್ಣು ಮಕ್ಕಳು ಶಾಲಾ ಶಿಕ್ಷಣದ ಬಳಿಕ ಕಾಲೇಜು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಕಳೆದ ವರ್ಷದಿಂದ ದೇಶದಲ್ಲಿ ವಿಶ್ವವಿದ್ಯಾಲಯಗಳು ಯುವತಿಯರಿಗೆ ಅವಕಾಶ ನಿರಾಕರಿಸುತ್ತಿವೆ. ಮತ್ತೆ ಅವಕಾಶ ಸಿಗುವ ನಿರೀಕ್ಷೆಯೂ ಇಲ್ಲವಾಗಿದೆ ಎಂದು ವರದಿಯೊಂದು ತಿಳಿಸಿದೆ.

ತೀವ್ರ ಹತಾಶೆ ವ್ಯಕ್ತಪಡಿಸುತ್ತಿರುವ ಅಲ್ಲಿನ ಮಹಿಳಾ ವಿದ್ಯಾರ್ಥಿಗಳು, ತಮ್ಮ ಶೈಕ್ಷಣಿಕ ಪ್ರಗತಿಗಾಗಿ ಉನ್ನತ ಶಿಕ್ಷಣವನ್ನು ಕಲಿಯಲು ಅವಕಾಶ ಮಾಡಿಕೊಡಬೇಕು ಎಂದು ಕೋರಿ ಅಲ್ಲಿನ ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ. ಮಹಿಳಾ ಶಿಕ್ಷಣಕ್ಕೆ ನಿರ್ಬಂಧ ವಿಧಿಸಿರುವುದು ಸಮಾಜದ ಪ್ರಗತಿಗೆ ಮಾರಕವಾಗಲಿದೆ ಎಂಬುದು ಮಹಿಳಾಪರ ವಾದಿಗಳ ಅಭಿಪ್ರಾಯವಾಗಿದೆ.

ವಿಶ್ವಸಂಸ್ಥೆಯ ಮಕ್ಕಳ ನಿಧಿ (UNICEF) ಈ ಹಿಂದೆ ಅಂದರೆ 2023 ರಲ್ಲಿ ಅಫ್ಘಾನಿಸ್ತಾನದಲ್ಲಿ 7,15,000 ಅಪೌಷ್ಟಿಕ ಮಕ್ಕಳಿಗೆ ಸಹಾಯ ಮಾಡಿದೆ ಎಂದು ಘೋಷಿಸಿತ್ತು.

ಇದನ್ನು ಓದಿ: ಗಾಜಾದ ಮಕ್ಕಳಲ್ಲಿ ತೀವ್ರ ಅಪೌಷ್ಟಿಕತೆ, ಆಹಾರ ಕ್ಷಾಮದ ಆತಂಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.