ETV Bharat / international

ಇರಾನ್​ನಲ್ಲಿ ಭೀಕರ ಬಸ್ ಅಪಘಾತ: 28 ಪಾಕಿಸ್ತಾನಿ ಶಿಯಾ ಯಾತ್ರಾರ್ಥಿಗಳು ಸಾವು - Iran Bus Accident - IRAN BUS ACCIDENT

ಮಧ್ಯ ಇರಾನ್​ನಲ್ಲಿ ಸಂಭವಿಸಿದ ಬಸ್​ ಅಪಘಾತದಲ್ಲಿ 28 ಪಾಕಿಸ್ತಾನಿ ಯಾತ್ರಾರ್ಥಿಗಳು ಸಾವಿಗೀಡಾಗಿದ್ದಾರೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (IANS)
author img

By PTI

Published : Aug 21, 2024, 2:44 PM IST

ಟೆಹ್ರಾನ್: ಪಾಕಿಸ್ತಾನದಿಂದ ಇರಾಕ್​ಗೆ ಶಿಯಾ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಮಧ್ಯ ಇರಾನ್‌ನಲ್ಲಿ ಅಪಘಾತಕ್ಕೀಡಾಗಿದ್ದು, ಕನಿಷ್ಠ 28 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ. ಮಧ್ಯ ಇರಾನಿನ ಯಾಜ್ದ್ ಪ್ರಾಂತ್ಯದಲ್ಲಿ ಮಂಗಳವಾರ ರಾತ್ರಿ ಈ ಅಪಘಾತ ಸಂಭವಿಸಿದೆ ಎಂದು ಸ್ಥಳೀಯ ತುರ್ತು ಸೇವೆಗಳ ಅಧಿಕಾರಿ ಮೊಹಮ್ಮದ್ ಅಲಿ ಮಾಲೆಕ್ ಜಾದೆ ತಿಳಿಸಿದ್ದಾರೆ ಎಂದು ಸರ್ಕಾರಿ ಸ್ವಾಮ್ಯದ ಐಆರ್​ಎನ್ಎ ಸುದ್ದಿ ಸಂಸ್ಥೆ ತಿಳಿಸಿದೆ.

ಅಪಘಾತದಲ್ಲಿ 23 ಜನ ಗಾಯಗೊಂಡಿದ್ದು, ಅವರಲ್ಲಿ 14 ಜನರ ಸ್ಥಿತಿ ಗಂಭೀರವಾಗಿದೆ. ಬಸ್​ನಲ್ಲಿದ್ದ ಎಲ್ಲಾ ಪ್ರಯಾಣಿಕರು ಪಾಕಿಸ್ತಾನ ಮೂಲದವರು ಎಂದು ಅವರು ಹೇಳಿದರು. ಇರಾನ್ ರಾಜಧಾನಿ ಟೆಹ್ರಾನ್​ನಿಂದ ಆಗ್ನೇಯಕ್ಕೆ 500 ಕಿಲೋಮೀಟರ್ ದೂರದಲ್ಲಿರುವ ಟಾಫ್ಟ್ ನಗರದ ಹೊರಗೆ ಬಸ್​ ಅಪಘಾತಕ್ಕೀಡಾಗಿದ್ದು, ಬಸ್​ನಲ್ಲಿ 51 ಜನ ಪ್ರಯಾಣಿಸುತ್ತಿದ್ದರು.

ಇರಾನಿನ ಸರ್ಕಾರಿ ಟೆಲಿವಿಷನ್ ಅಪಘಾತಕ್ಕೀಡಾದ ಬಸ್​ನ ದೃಶ್ಯಾವಳಿಗಳನ್ನು ಪ್ರಸಾರ ಮಾಡಿದೆ. ಹೆದ್ದಾರಿಯಲ್ಲಿ ತಲೆಕೆಳಗಾಗಿ ಬಿದ್ದಿರುವ ಬಸ್​ನ ಮೇಲ್ಛಾವಣಿಯನ್ನು ಒಡೆದು ಅದರ ಎಲ್ಲ ಬಾಗಿಲುಗಳನ್ನು ತೆರೆಯಲಾಯಿತು. ರಸ್ತೆಯುದ್ದಕ್ಕೂ ಒಡೆದ ಗಾಜಿನ ಚೂರುಗಳು ಮತ್ತು ಅವಶೇಷಗಳ ಬಿದ್ದಿರುವುದು ದೃಶ್ಯಗಳಲ್ಲಿ ಕಾಣಿಸಿದೆ. ಬಸ್​ನ ಬ್ರೇಕ್​ಗಳು ವಿಫಲವಾಗಿರುವುದು ಮತ್ತು ಚಾಲಕನ ಅಜಾಗರೂಕತೆ ಅಪಘಾತಕ್ಕೆ ಕಾರಣ ಎಂದು ಅಧಿಕಾರಿ ಮೊಹಮ್ಮದ್ ಅಲಿ ಮಾಲೆಕ್ ಜಾದೆ ಹೇಳಿದ್ದಾರೆ.

ಬಸ್​ನಲ್ಲಿ ಪ್ರಯಾಣಿಸುತ್ತಿದ್ದವರೆಲ್ಲರೂ ಪಾಕಿಸ್ತಾನದ ದಕ್ಷಿಣ ಸಿಂಧ್ ಪ್ರಾಂತ್ಯದ ಲರ್ಕಾನಾ ನಗರದ ನಿವಾಸಿಗಳು ಎಂದು ಪಾಕಿಸ್ತಾನದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಪಘಾತದಲ್ಲಿ ಮಡಿದವರ ಕುಟುಂಬಗಳಿಗೆ ತೀವ್ರ ಸಂತಾಪ ಸೂಚಿಸಿರುವ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್, ರಾಜತಾಂತ್ರಿಕ ಅಧಿಕಾರಿಗಳು ಸಂತ್ರಸ್ತರಿಗೆ ನೆರವು ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.

ವಿಶ್ವದಲ್ಲಿ ಅತ್ಯಂತ ಕೆಟ್ಟ ಸಂಚಾರ ವ್ಯವಸ್ಥೆಯನ್ನು ಹೊಂದಿರುವ ದೇಶಗಳಲ್ಲಿ ಇರಾನ್ ಕೂಡ ಒಂದಾಗಿದೆ. ಇರಾನ್​ನಲ್ಲಿ ರಸ್ತೆ ಅಪಘಾತಗಳಲ್ಲಿ ಪ್ರತಿವರ್ಷ ಸುಮಾರು 17,000 ಜನ ಸಾವಿಗೀಡಾಗುತ್ತಾರೆ. ಸಂಚಾರ ನಿಯಮಗಳ ಬಗ್ಗೆ ವ್ಯಾಪಕ ನಿರ್ಲಕ್ಷ್ಯ, ಅಸುರಕ್ಷಿತ ವಾಹನಗಳು ಮತ್ತು ಅದರ ವಿಶಾಲ ಗ್ರಾಮೀಣ ಪ್ರದೇಶಗಳಲ್ಲಿ ಅಸಮರ್ಪಕ ತುರ್ತು ಸೇವೆಗಳಿಂದಾಗಿ ಇರಾನ್​ನಲ್ಲಿ ಅಪಘಾತಗಳಿಂದ ಸಾವಿಗೀಡಾಗುವವರ ಸಂಖ್ಯೆ ಹೆಚ್ಚಾಗಿದೆ. ಇರಾನ್​ನ ಆಗ್ನೇಯ ಸಿಸ್ತಾನ್ ಮತ್ತು ಬಲೂಚೆಸ್ತಾನ್ ಪ್ರಾಂತ್ಯದಲ್ಲಿ ಬುಧವಾರ ಮುಂಜಾನೆ ಸಂಭವಿಸಿದ ಮತ್ತೊಂದು ಬಸ್ ಅಪಘಾತದಲ್ಲಿ ಆರು ಜನರು ಸಾವನ್ನಪ್ಪಿದ್ದು, 18 ಜನ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಅನುಮತಿಯಿಲ್ಲದೆ ಕ್ರೋಮ್​ ಬ್ರೌಸರ್​ನಿಂದ ಬಳಕೆದಾರರ ಡೇಟಾ ಸಂಗ್ರಹ: ಗೂಗಲ್ ವಿರುದ್ಧ ವಿಚಾರಣೆಗೆ ಆದೇಶ - Inquiry against Google

ETV Bharat Logo

Copyright © 2025 Ushodaya Enterprises Pvt. Ltd., All Rights Reserved.