ETV Bharat / health

ವಿಶ್ವ ಪರಿಸರ ದಿನ: ಭೂಮಿ ಕಾಪಾಡಲು ಕೈಗೊಳ್ಳಬೇಕಿದೆ ಪ್ರತಿಯೊಬ್ಬರು ಪಣ - WORLD ENVIRONMENT DAY - WORLD ENVIRONMENT DAY

ಈ ವರ್ಷದ ಪರಿಸರ ದಿನದ ಧ್ಯೇಯವಾಕ್ಯ 'ನಮ್ಮ ಭೂಮಿ ನಮ್ಮ ಭವಿಷ್ಯ, ಪೀಳಿಯ ಪುನರ್​ಸ್ಥಾಪಕರು ನಾವು'

world-environment-day-all-you-need-to-know-theme-for-2024-why-it-is-important
ವಿಶ್ವ ಪರಿಸರ ದಿನ (ಈಟಿವಿ ಭಾರತ್​​)
author img

By ETV Bharat Karnataka Team

Published : Jun 5, 2024, 12:34 PM IST

ಹೈದರಾಬಾದ್​: ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮವೂ ಪ್ರತಿ ವರ್ಷ ಜೂನ್​ 5ರಂದು ವಿಶ್ವ ಪರಿಸರ ದಿನವನ್ನು ಆಚರಿಸುತ್ತದೆ. 1972ರಿಂದ ಜಾಗತಿಕ ಮಟ್ಟದಲ್ಲಿ ಈ ದಿನವನ್ನು ಆಚರಿಸಲಾಗುತ್ತಿದೆ. ಈ ಮೂಲಕ ಪರಿಸರದ ರಕ್ಷಣೆಗೆ ಅಗತ್ಯತೆ ಕುರಿತು ಒತ್ತಿ ಹೇಳಲಾಗುವುದು. ಅದರಲ್ಲೂ ವಿಶೇಷವಾಗಿ, ಮಾನವ ಸಂಬಂದಿತ ಚಟುವಟಿಕೆಗಳು ನೈಸರ್ಗಿಕ ಹವಾಮಾನ ಪರಿಸ್ಥಿತಿಗಳನ್ನು ಹದಗೆಡಿಸಲು ಕಾರಣವಾಗಿವೆ. ಇದರಿಂದಾಗಿ ತಾಪಮಾನದಲ್ಲಿ ಹೆಚ್ಚಳ, ಮಂಜುಗಡ್ಡೆಗಳ ಕರಗುವಿಕೆ ಸೇರಿದಂತೆ ಇನ್ನಿತರ ಅಡ್ಡ ಪರಿಣಾಮಗಳಿಗೆ ಸಾಕ್ಷಿಯಾಗಿದೆ.

ಈ ವರ್ಷದ ಪರಿಸರ ದಿನದ ಧ್ಯೇಯವಾಕ್ಯ 'ನಮ್ಮ ಭೂಮಿ ನಮ್ಮ ಭವಿಷ್ಯ, ಪೀಳಿಗೆಯ ಪುನರ್​ಸ್ಥಾಪಕರು ನಾವು' ಎಂಬುದಾಗಿದೆ.

ಇತಿಹಾಸ: ವಿಶ್ವಸಂಸ್ಥೆಯ ಸಾಮಾನ್ಯ ಸಭೆ 1972ರಲ್ಲಿ ಪರಿಸರ ರಕ್ಷಣೆಯ ಕ್ರಮಗಳ ಪ್ರೊತ್ಸಾಹಕ ಕ್ರಮ ಮತ್ತು ಜಾಗೃತಿಯನ್ನು ಮೂಡಿಸಿತು. ಸ್ವೀಡನ್​ನ ಸ್ಟಾಕ್​ಹೋಮ್​ನಲ್ಲಿನ ವಿಶ್ವಸಂಸ್ಥೆಯ ಕಾನ್ಫರೆನ್ಸ್​​ನಿಂದ ಇದು ಆರಂಭವಾಯಿತು. ಈ ಸಭೆಯಲ್ಲಿ ಪರಿಸರ ರಕ್ಷಣೆ ಅಗತ್ಯತೆ ಕುರಿತು ಮಾತುಕತೆ ನಡೆಸಲಾಯಿತು.

2ನೇ ವಿಶ್ವ ಯುದ್ಧದಿಂದಾದ ಪರಿಣಾಮ ಮತ್ತು ಈ ಸಂದರ್ಭದಲ್ಲಿ ನಡೆಯುತ್ತಿದ್ದ ಶೀತಲ ಸಮರದ ಹಿನ್ನೆಲೆಯಲ್ಲಿ ಇದು ನಡೆಯಿತು. ಜಪಾನ್​ನ ಹಿರೋಷಿಮಾ ಮತ್ತು ನಾಗಾಸಾಕಿಯ ಮೇಲೆ ಪರಮಾಣು ಬಾಂಬ್‌ ದಾಳಿಯಿಂದ ಚೇತರಿಸಿಕೊಳ್ಳುತ್ತಿರುವ ಹೊತ್ತಿನಲ್ಲಿಯೇ ಕ್ಯೂಬಾ, ವಿಯೆಟ್ನಾಂ ಮತ್ತು ಇತರರು ಸೇರಿದಂತೆ ಇತರೆ ಕಡೆ ಯುದ್ಧಗಳು ನಡೆಯುತ್ತಿದ್ದವು. 1973ರಲ್ಲಿ ವಿಶ್ವ ಪರಿಸರ ದಿನವಾಗಿ ಘೋಷಿಸಲಾಯಿತು.

ಧ್ಯೇಯ 2024: ಈ ವರ್ಷ ಸೌದಿ ಅರೇಬಿಯಾ ವಾರ್ಷಿಕ ಸಭೆಯನ್ನು ಆಯೋಜಿಸುತ್ತಿದ್ದು, ಭೂಮಿ ಪುನರ್​ಸ್ಥಾಪನೆ, ಬರಡುಭೂಮಿ ಮತ್ತು ಬರ ಸ್ಥಿತಿಸ್ಥಾಪಕತ್ವ ಕುರಿತು ಗಮನ ಹರಿಸಲಾಗಿದೆ. ಈ ವರ್ಷದ ಧ್ಯೇಯವಾಕ್ಯ ನಮ್ಮ ಭೂಮಿ ನಮ್ಮ ಭವಿಷ್ಯ, ಪೀಳಿಗೆಯ ಪುನರ್​ಸ್ಥಾಪಕರು ನಾವು ಎಂಬುದಾಗಿದೆ.

2024ರಲ್ಲಿ ಜಾಗತಿಕ ಸಭೆ ಆಯೋಜಿಸುತ್ತಿರುವ ಸೌದಿ ಅರೇಬಿಯಾ, 2030 ಗುರಿಗಳಿಗೆ ಅನುಗುಣವಾಗಿ ಪರಿಸರವನ್ನು ರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸಿಲು ಬದ್ಧವಾಗಿರುವುದಾಗಿ ತಿಳಿಸಿದೆ. ಈ ಕಾರ್ಯಕ್ರಮವನ್ನು ವಿಶ್ವದೆಲ್ಲೆಡೆ ಆಚರಿಸಲಾಗುತ್ತಿದ್ದು, ಹತ್ತಾರು ಮಿಲಿಯನ್​ ಜನರು ಭಾಗಿಯಾಗಲಿದ್ದಾರೆ.

ಪರಿಸರ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಪರಿಸರ ಸಂರಕ್ಷಣಾ ಕ್ರಮಗಳನ್ನು ಉತ್ತೇಜಿಸಲು ಇದು ಪ್ರಮುಖವಾಗಿದೆ. ಈ ನಿಟ್ಟಿನಲ್ಲಿ 2019ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆ 2021-2030ರ ಪರಿಸರ ವ್ಯವಸ್ಥೆಯ ಪುನರ್​ಸ್ಥಾಪನೆಯ ನಿರ್ಣಯವನ್ನು ಅಂಗೀಕರಿಸಿತು. ಈ ವಿಶ್ವ ಪರಿಸರ ದಿನದ ಗುರಿ, ಈ ಬದ್ಧತೆಯೆಡೆಗಿನ ಪ್ರಗತಿಯನ್ನು ಬೆಂಬಲಿಸುವುದಾಗಿದೆ.

ಯುಎನ್​ಇಪಿ ಪ್ರಕಾರ, ಜಾಗತಿಕವಾಗಿ, ದೇಶಗಳು ಒಂದು ಬಿಲಿಯನ್​ ಹೆಕ್ಟೇರ್​ ಭೂಮಿಗಳನ್ನು ಪುನರ್​ಸ್ಥಾಪನೆಗೆ ನಿರ್ಣಯಿಸಿದೆ. ಅದರಲ್ಲೂ ದೊಡ್ಡ ಪ್ರದೇಶವಾಗಿರುವ ಚೀನಾ ಶೇ 30ರಷ್ಟು ಭೂಮಿ ಮತ್ತು ಸಮುದ್ರವನ್ನು ರಕ್ಷಿಸುವ ಗುರಿ ಹೊಂದಿದೆ.

ಭೂಮಿ ಬರಡಗಾದಂತೆ ತಡೆಯಲಿರುವ ಮಾರ್ಗಗಳು-

ಸಾವಯವ ಕೃಷಿಗೆ ಉತ್ತೇಜನ: ಸಾವಯವ ಕೃಷಿಗೆ ಉತ್ತೇಜಿಸುವುದರಿಂದ ಭೂಮಿ ಫಲವತ್ತತೆಯ ವಿನ್ಯಾಸ ರಕ್ಷಣೆ ಮಾಡಬಹುದಾಗಿದೆ. ಜೊತೆಗೆ ಆಹಾರಗಳು ಬೆಳೆಗಳು ಶೇ 100ರಷ್ಟು ಸುರಕ್ಷಿತ ಮತ್ತು ಆರೋಗ್ಯಯುತವಾಗಿರುತ್ತವೆ.

ಮರ ನೆಡುವುದು: ನಗರೀಕರಣ ಮತ್ತು ದೇಶಗಳು ವೇಗದ ಅಭಿವೃದ್ಧಿಯಿಂದಾಗಿ ಲಕ್ಷಾಂತರ ಮರಗಳ ನಾಶವಾಗಿವೆ. ಗಿಡ-ಮರ ನಾಶ ಮಾಡಿ ಕೈಗಾರಿಕೆ, ಮನೆ ಅಥವಾ ನಗರಗಳ ನಿರ್ಮಾಣ ಮಾಡಲಾಗಿದೆ. ಇದು ನೀರಿನ ಸಾಮರ್ಥ್ಯ ನಷ್ಟದ ಜೊತೆಗೆ ಪ್ರಮುಖ ಪರಿಸರ ಸಮಸ್ಯೆಯಾಗಿದೆ. ಈ ಹಿನ್ನೆಲೆ ಭೂಮಿಯ ಗುಣಮಟ್ಟ ರಕ್ಷಣೆ ಮತ್ತು ಆಮ್ಲಜನಕದ ಉದ್ದೇಶದಿಂದ ಹೆಚ್ಚು ಹೆಚ್ಚು ಮರಗಳನ್ನು ನೆಡಬೇಕಿದೆ.

ಶುದ್ಧ ಜಲದ ಪರಿಸರ ವ್ಯವಸ್ಥೆ ಮರು ನಿರ್ಮಾಣ: ಶುದ್ಧ ಜಲ ಪರಿಸರ ವ್ಯವಸ್ಥೆಯ ಜಲಚಕ್ರ ಭೂಮಿ ಫಲವತ್ತತೆ ಕಾಪಾಡುತ್ತದೆ. ಇದು ಬಿಲಿಯಾಂತರ ಜನರಿಗೆ ಆಹಾರ ಮತ್ತು ನೀರು ಒದಗಿಸುವ ಮೂಲಕ ಬರ, ಪ್ರವಾಹದಿಂದ ರಕ್ಷಿಸುತ್ತದೆ. ಅನೇಕ ಸಸ್ಯಗಳು ಮತ್ತು ಪ್ರಾಣಿಗಳಿಗೆ ಆವಾಸಸ್ಥಾನ ಕಲ್ಪಿಸುತ್ತದೆ. ಹವಾಮಾನ ಬದಲಾವಣೆ, ಮಾಲಿನ್ಯ, ಮೀನುಗಾರಿಕೆ ಅತಿ ಎನ್ನುವ ಮಟ್ಟದಲ್ಲಿ ಸಾಗಿದೆ. ನೀರಿನ ಗುಣಮಟ್ಟ ಸುಧಾರಣೆ ಮೂಲಕ ಜನರು ಇದನ್ನು ನಿಲ್ಲಿಸಬಹುದಾಗಿದೆ. ಮಾಲಿನ್ಯದ ಮೂಲ ಪತ್ತೆ ಮತ್ತು ಶುದ್ಧ ಜಲ ಪರಿಸರ ವ್ಯವಸ್ಥೆಯನ್ನು ನಿರ್ವಹಣೆ ಮಾಡಬೇಕಿದೆ.

ಕರಾವಳಿ ಮತ್ತು ಸಾಗರ ಪ್ರದೇಶಗಳ ನವೀಕರಣ: ಸಾಗರ ಮತ್ತು ಸಮುದ್ರಗಳು ಮಾನವರಿಗೆ ಆಮ್ಲಜನಕ, ಆಹಾರ ಮತ್ತು ನೀರನ್ನು ಒದಗಿಸುತ್ತವೆ. ಆದರೆ ಹವಾಮಾನ ಬದಲಾವಣೆಯನ್ನು ತಗ್ಗಿಸುತ್ತದೆ ಮತ್ತು ಸಮುದಾಯಗಳು ತೀವ್ರ ಹವಾಮಾನಕ್ಕೆ ಹೊಂದಿಕೊಳ್ಳಲು ಸಹಾಯ ಮಾಡುತ್ತವೆ. ವಿಶ್ವಸಂಸ್ಥೆಯ ಪ್ರಕಾರ, 3 ಬಿಲಿಯನ್​ಗೂ ಹೆಚ್ಚು ಜನರು, ಪ್ರಮುಖವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಸಾಗರ ಮತ್ತು ಕರಾವಳಿ ಜೀವವೈವಿಧ್ಯತೆಯನ್ನು ತಮ್ಮ ಜೀವನೋಪಾಯವಾಗಿ ಕಂಡುಕೊಂಡಿದ್ದಾರೆ. ಗ್ರೋವ್‌ಗಳು, ಉಪ್ಪು ಜವುಗುಗಳು, ಕೆಲ್ಪ್ ಕಾಡುಗಳು ಮತ್ತು ಹವಳದ ಬಂಡೆಗಳನ್ನು ಪುನಃಸ್ಥಾಪಿಸುವ ಮೂಲಕ ನೀಲಿ ಪರಿಸರ ವ್ಯವಸ್ಥೆ ಕಾಪಾಡಬೇಕಿದೆ.

ಹಣಕಾಸು ಪುನಃಸ್ಥಾಪನೆ: ಭೂಮಿ ರಕ್ಷಣೆಗೆ ಸುಸ್ಥಿರ ಉದ್ಯಮಗಳಲ್ಲಿ ಹೂಡಿಕೆ ಮಾಡುವ ಹಣಕಾಸು ಸಂಸ್ಥೆಗಳಿಗೆ ಬ್ಯಾಂಕ್ ಖಾತೆ ಮರುಸ್ಥಾಪನೆಗೆ ದೇಣಿಗೆ ನೀಡಿ ಅಥವಾ ಕ್ರೌಡ್-ಫಂಡ್ ಸಹಾಯ ಮಾಡಬೇಕಿದೆ.

ಇದನ್ನೂ ಓದಿ: ಕಳೆದ 10 ವರ್ಷಗಳಿಂದ 1.19 ಡಿಗ್ರಿ ಸೆಲ್ಸಿಯಸ್​ ತಾಪಮಾನ ಏರಿಕೆಗೆ ಮಾನವ ಚಟುವಟಿಕೆಗಳೇ ಕಾರಣವಂತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.