ETV Bharat / health

ಲೂಪಸ್ ರೋಗ ಪುರುಷರಿಗಿಂತ ಮಹಿಳೆಯರನ್ನೇ ಹೆಚ್ಚು ಕಾಡುವುದೇಕೆ?: ಅಷ್ಟಕ್ಕೂ ಏನಿದು ಲೂಪಸ್​​​​, ಪರಿಹಾರವೇನು? ​​ - autoimmune disorder lupus

ಜೀವನ ಬದಲಾಯಿಸುವ ಆಟೋಇಮ್ಯೂನ್​ ರೋಗ ಲೂಪಸ್​ ಕುರಿತು ಅರಿವು ಮೂಡಿಸುವುದು ಅವಶ್ಯವಾಗಿದೆ.

women more vulnerable to the autoimmune disorder lupus
women more vulnerable to the autoimmune disorder lupus (ಫೋಟೋ ಕೃಪೆ: ಐಎಎನ್​ಎಸ್​)
author img

By IANS

Published : May 10, 2024, 5:53 PM IST

ನವದೆಹಲಿ: ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚಾಗಿ ಕಾಡುವ ಲೂಪಸ್​ ಎಂಬ ಆಟೋಇಮ್ಯೂನ್​ ರೋಗಕ್ಕೆ ಪ್ರಮುಖ ಕಾರಣ ಈಸ್ಟೋಜನ್​ ಮತ್ತು ಎಕ್ಸ್​ ಕ್ರೊಮೊಜೋನ್​ ಆಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. ದೇಹದ ಪ್ರತಿ ರಕ್ಷಣಾ ವ್ಯವಸ್ಥೆ ಮೇಲೆ ಪ್ರಭಾವ ಬೀರುವ ಈ ರೋಗ ಮಹಿಳೆಯರನ್ನು ಹೆಚ್ಚು ದುರ್ಬಲವಾಗಿಸುತ್ತದೆ.

ಜೀವನ ಬದಲಾಯಿಸುವ ಆಟೋ ಇಮ್ಯೂನ್​ ರೋಗ ಲೂಪಸ್​ ಕುರಿತು ಅರಿವು ಮೂಡಿಸುವ ಕುರಿತು ಮೇ 10ರಂದು ವಿಶ್ವ ಲೂಪಸ್​ ದಿನವನ್ನು ಆಚರಣೆ ಮಾಡಲಾಗುವುದು. ಆಂಟಿಬಾಡೀಸ್​ ಎಂಬ ಕೆಲವು ಅಂಶಗಳನ್ನು ಉತ್ಪಾದಿಸುವ ಮೂಲಕ ದೇಹವು ಅದರ ಅಂಗಗಳ ಮೇಲೆ ದಾಳಿ ಮಾಡುತ್ತದೆ.

ಈ ರೋಗದ ಪ್ರಮುಖ ಲಕ್ಷಣಗಳು ಎಂದರೆ ಜ್ವರ, ಆಯಾಸ, ತ್ವಚೆಯಲ್ಲಿ ದದ್ದು, ಸಣ್ಣ ಮತ್ತು ದೊಡ್ಡ ಕೀಲು ನೋವು, ಉಸಿರಾಟ ಸಮಸ್ಯೆ, ಕೆಲವೊಮ್ಮೆ ನುಂಗಲು ಕಷ್ಟ ಮತ್ತು ಎದೆ ನೋವು ಆಗಿದೆ.

ಈ ಪರಿಸ್ಥಿತಿಯು ಸಿಸ್ಟಮಿಕ್ ಲೂಪಸ್ ಎರಿಥೆಮಾಟೋಸಸ್ (ಎಸ್​ಎಲ್​ಇ) ಎಂದು ಕರೆಯಲಾಗುವುದು. ಇದು ಜಗತ್ತಿನಾದ್ಯಂತ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುತ್ತದೆ. ಭಾರತದಲ್ಲಿ ಲಕ್ಷದಲ್ಲಿ ಎಸ್​​ಎಲ್​ಇ 3.2 ಪ್ರಕರಣಗಳು ವರದಿಯಾಗಿವೆ. ಆದಾಗ್ಯೂ, ಜಾಗತಿಕವಾಗಿ ಸಂತಾನೋತ್ಪತ್ತಿ ವಯಸ್ಸಿನ ವ್ಯಾಪ್ತಿಯಲ್ಲಿರುವ ಮಹಿಳೆಯರು ಎಸ್​ಎಲ್​ಇಯ ಶೇ 90ರಷ್ಟು ಪ್ರಕರಣಗಳು ಕಂಡು ಬಂದಿವೆ.

ಮಹಿಳೆಯರಲ್ಲಿ ಅನುವಂಶಿಕತೆಯ ಲೈಂಗಿಕ ಹಾರ್ಮೋನುಗಳು ಮತ್ತು ಈಸ್ಟ್ರೊಜೆನ್ ನಿರ್ದಿಷ್ಟವಾಗಿ ಲೂಪಸ್ ಬೆಳವಣಿಗೆಗೆ ಹೆಚ್ಚು ಕೊಡುಗೆ ನೀಡುತ್ತದೆ ಎಂದು ಗುರುಗ್ರಾಮದ ಪರಸ್​ ಹೆಲ್ತ್​ನ ಹಿರಿಯ ವೈದ್ಯ ಡಾ ಅನು ದಬೆರ್​​ ತಿಳಿಸಿದ್ದಾರೆ. ಮಹಿಳೆಯರಲ್ಲಿನ ಎಕ್ಸ್​ ಕ್ರೊಮಾಜೋನ್​ ಮತ್ತು ಲೂಪಸ್​ ಅಭಿವೃದ್ಧಿ ನಡುವಿನ ಸಂಬಂಧವನ್ನು ಅಧ್ಯಯನದಲ್ಲಿ ಈ ರೋಗದ ಬಗ್ಗೆ ಹೆಚ್ಚು ಗಮನಿಸಲಾಗಿದೆ. ಮಹಿಳೆಯರಲ್ಲಿರುವ ಎರಡು ಸಕ್ರಿಯ ಎಕ್ಸ್​ ಕ್ರೊಮಾಜೋನ್​ ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇದನ್ನು ನಿಯಂತ್ರಿಸಲು ಪ್ರತಿ ಅಭಿವೃದ್ಧಿ ಕೋಶದಲ್ಲಿ ಒಂದು ಎಕ್ಸ್​ ಕ್ರೊಮಾಜೋನ್​​ ಅನ್ನು ನಿಷ್ಕ್ರಿಯಗೊಳ್ಳುತ್ತದೆ.

ಎಕ್ಸ್-ಕ್ರೋಮಾಸೋಮ್ ನಿಷ್ಕ್ರಿಯಗೊಳಿಸುವಿಕೆ ಪ್ರಕ್ರಿಯೆಯು ಪ್ರತಿರಕ್ಷಣಾ ವ್ಯವಸ್ಥೆಯು ಬೆದರಿಕೆ ಪರಿಣಾಮ ಹೊಂದಿದೆ. ಈ ನಿಷ್ಕ್ರಿಯತೆಯು ಎಷ್ಟು ಪರಿಣಾಮಕಾರಿಯಾಗಿ ಸಂಭವಿಸುತ್ತದೆ ಎಂಬುದರ ವ್ಯತ್ಯಾಸಗಳು ಪ್ರತಿರಕ್ಷಣಾ ವ್ಯವಸ್ಥೆಯಲ್ಲಿ ಲೂಪಸ್‌ನಂತಹ ಸ್ವಯಂ ನಿರೋಧಕ ಕಾಯಿಲೆಗಳಿಗೆ ಕಾರಣವಾಗುತ್ತದೆ ಎಂದು ಅವರು ವಿವರಿಸಿದ್ದಾರೆ.

ಈ ಲೂಪಸ್​ ತ್ವಚೆ, ಕಿಡ್ನಿ, ಹೃದಯ, ಮಿದುಳು, ಕೀಲು, ಶ್ವಾಸಕೋಶ ಮತ್ತು ರಕ್ತನಾಳದ ಮೆಲೆ ಪರಿಣಾಮ ಬೀರುತ್ತದೆ. ಈ ಲೂಪಸ್​​ ರೋಗಕ್ಕೆ ಯಾವುದೆ ಲಸಿಕೆ ಇಲ್ಲ. ಇದು ಆಟೋಇಮ್ಯೂನ್​ ಪರಿಸ್ಥಿತಿಯಾಗಿದ್ದು, ಬಹುತೇಕ ಸಮಯದಲ್ಲಿ ಈ ರೋಗ ಅನುವಂಶಿಕತೆ ಕಾರಣವಾಗುತ್ತದೆ. ಆರಂಭಿಕ ಹಂತದಲ್ಲಿ ಇದರ ಪತ್ತೆಗೆ ಯಾವುದೇ ಲಕ್ಷಣಗಳು ಕಾಡುವುದಿಲ್ಲ. ಕೆಲವು ಪರಿಸ್ಥಿತಿಯಲ್ಲಿ ಆರಂಭಿಕ ಚಿಹ್ನೆ ಮೂಲಕ ಪತ್ತೆ ಮಾಡಬಹುದು ಎಂದು ಡಾ ಪ್ರಸಾದ್​ ತಿಳಿಸಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: ಅಸ್ಥಿಸಂಧಿವಾತ ರೋಗಿಗಳಲ್ಲಿ ಉರಿಯೂತವಿಲ್ಲದೆ ಕಾಡುವ ನೋವಿಗೆ ಕಾರಣ ಪತ್ತೆ ಮಾಡಿದ ಸಂಶೋಧಕರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.