ETV Bharat / health

ಮಹಿಳೆಯರಲ್ಲಿ ಹೃದಯದ ಅಪಾಯವನ್ನು ನಾಲ್ಕು ಪಟ್ಟು ಹೆಚ್ಚಿಸುತ್ತದೆ ಎಚ್​ಪಿವಿ ಸೋಂಕು: ಅಧ್ಯಯನ - ಮಹಿಳೆಯರಲ್ಲಿ ಹೃದಯದ ಅಪಾಯ

ಎಚ್​ಪಿವಿ ಗರ್ಭ ಕಂಠ ಕ್ಯಾನ್ಸರ್​​ಗೆ ಕಾರಣ ಆಗುತ್ತದೆ ಎಂದು ನಂಬಲಾಗಿದೆ. ಆದರೆ, ಈ ವೈರಸ್​​ ರಕ್ತದ ಹರಿವಿನಲ್ಲೂ ಇರುತ್ತದೆ ಎಂಬುದನ್ನ ಸಂಶೋಧನೆ ಮೂಲಕ ಕಂಡುಕೊಳ್ಳಲಾಗಿದೆ.

women higher risk of dying from cardiovascular disease if they have HPV

author img

By IANS

Published : Feb 8, 2024, 10:29 AM IST

ಹೈದರಾಬಾದ್​: ಹ್ಯೂಮನ್ ಪ್ಯಾಪಿಲೋಮವೈರಸ್ ಹೊಂದಿರುವ ಮಹಿಳೆಯರು ಹೃದಯ ರೋಗ ಸಮಸ್ಯೆಯಿಂದ ಸಾಯುವ ಅಪಾಯ ನಾಲ್ಕು ಪಟ್ಟು ಹೆಚ್ಚಿರುತ್ತದೆ ಎಂದು ಅಧ್ಯಯನ ತಿಳಿಸಿದೆ. ಎಚ್​ಪಿವಿ ಎಂಬುದು ಸಾಮಾನ್ಯ ಸೋಂಕು ಆಗಿದ್ದು, ಇದು ಗರ್ಭ ಕಂಠ ಕ್ಯಾನ್ಸರ್​​ಗೆ ಕಾರಣವಾಗಿದೆ. ಹಿಂದಿನ ಸಂಶೋಧನೆಯಲ್ಲಿ ಎಚ್​ಪಿವಿ ಅಪಧಮನಿಗೆ ಅಪಾಯಕಾರಿಯಾಗಿದೆ ಎಂದು ತೋರಿಸಿದೆ. ಆದಾಗ್ಯೂ ಎಚ್​ಪಿವಿ ಹೃದಯರಕ್ತನಾಳದ ಕಾಯಿಲೆ ನಡವಿನ ಸಂಬಂಧವನ್ನು ತೋರಿಸುವ ಮೊದಲ ಅಧ್ಯಯನ ಇದಾಗಿದೆ.

ಈ ಅಧ್ಯಯನವನ್ನು ಯುರೋಪಿಯನ್ ಹಾರ್ಟ್ ಜರ್ನಲ್​​ನಲ್ಲಿ ಪ್ರಕಟಿಸಲಾಗಿದೆ. ಅಧ್ಯಯನದಲ್ಲಿ ಎಚ್​​ಪಿವಿ ಅಪಾಯ ಹೊಂದಿರುವ ಮಹಿಳೆಯರನ್ನು ಸೋಂಕು ಹೊಂದಿಲ್ಲದವರೊಂದಿಗೆ ಹೋಲಿಕೆ ಮಾಡಿದಾಗ, ಇವರಲ್ಲಿ ಅಪಧಮನಿ ಬ್ಲಾಕ್​ ಆಗುವ ಸಾಧ್ಯತೆ 3.15ರಷ್ಟು ಹೆಚ್ಚಿದೆ. ಹೃದಯ ಕಾಯಿಲೆಯಿಂದ ಸಾಯುವ ಅಪಾಯ 5.86ರಷ್ಟು ಇದೆ ಎಂದು ತೋರಿಸಿದೆ.

ಹೃದಯ ರೋಗಕ್ಕೆ ಕಾರಣವಾಗುವ ಧೂಮಪಾನ, ಅಧಿಕ ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ಅಂಶಗಳನ್ನು ನಿಯಂತ್ರಿಸಿದರೂ ಸೋಂಕು ಸಾವಿಗೆ ಪ್ರಮುಖ ಕಾರಣವಾಗಿದೆ. ಎಲ್ಲ ಹೃದಯ ಸಮಸ್ಯೆಗಳಲ್ಲಿ ಸಾಂಪ್ರದಾಯಿಕ ಅಪಾಯಕಾರಿ ಅಂಶಗಳನ್ನು ತಿಳಿಸುವುದಿಲ್ಲ. ಯಾವುದೇ ಸಮಸ್ಯೆ ಹೊಂದಿರದವರಲ್ಲಿ ಶೇ 20ರಷ್ಟು ಸಾವು ಸಂಭಿಸುತ್ತದೆ. ಈ ಅಧ್ಯಯನದ ಮೂಲಕ ಬದಲಾಯಿಸಬಹುದಾದ ಅಪಾಯಕಾರಿ ಅಂಶಗಳನ್ನು ತನಿಖೆ ಮಾಡುವುದಾಗಿದೆ ಎಂದು ದಕ್ಷಿಣ ಕೊರಿಯಾದ ಸುಂಗ್‌ಕ್ಯುಂಕ್ವಾನ್ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್‌ನ ಪ್ರೊ ಸೆಯುಂಘೋ ರ್ಯು ತಿಳಿಸಿದ್ದಾರೆ.

ತಂಡವು ಯುವ ಅಥವಾ ಮಧ್ಯವಯಸ್ಸಿನ 163,250 ಕೊರಿಯನ್ ಮಹಿಳೆಯರನ್ನು ತನಿಖೆಗೆ ಒಳಪಡಿಸಿತು. ಅಧ್ಯಯನದ ಆರಂಭದಲ್ಲಿ ಇವರಲ್ಲಿ ಯಾವುದೇ ಹೃದಯರೋಗ ಕಾಯಿಲೆ ಇರಲಿಲ್ಲ. ಅಲ್ಲದೇ ಇವರಲ್ಲಿ ಅಧಿಕ ಅಪಾಯದ 13 ತಳಿಯ ಗರ್ಭಕಂಠದ ಸ್ಕ್ರೀನಿಂಗ್ ಸೇರಿದಂತೆ ವಿವಿಧ ಆರೋಗ್ಯ ತಪಾಸಣೆ ಪರೀಕ್ಷೆಗೆ ಒಳಪಡಿಸಲಾಗಿದೆ.

ಎಂಟೂವರೆ ವರ್ಷಗಳ ಕಾಲ ಅಧ್ಯಯನ ನಡೆಸಲಾಗಿದ್ದು, ಪ್ರತಿ ಎರಡು ವರ್ಷಕ್ಕೆ ಒಮ್ಮೆ ಅವರ ತಪಾಸಣೆ ನಡೆಸಲಾಗಿದೆ. ಈ ವೇಳೆ, ಎಚ್​ಪಿವಿ ಸೋಂಕು ಮತ್ತು ಸ್ಥೂಲಕಾಯ ಹೊಂದಿರುವ ಮಹಿಳೆಯರಲ್ಲಿ ಅಪಾಯ ಕಂಡು ಬಂದಿದೆ. ಹೃದಯರಕ್ತನಾಳದ ಕಾಯಿಲೆಯ ಬೆಳವಣಿಗೆ ಮತ್ತು ಪ್ರಗತಿಯಲ್ಲಿ ಉರಿಯೂತವು ಪ್ರಮುಖ ಪಾತ್ರವನ್ನು ಹೊಂದಿದೆ. ಈ ಸೋಂಕು ಉರಿಯೂತದ ಪ್ರಚೋದಕವೂ ಆಗಿದೆ.

ಎಚ್​ಪಿವಿ ಎಂದರೆ ಗರ್ಭಕಂಠ ಕ್ಯಾನ್ಸರ್​​ನೊಂದಿಗೆ ಸಂಬಂಧ ಹೊಂದಿದೆ ಎಂದು ತಿಳಿದಿದೆ. ಆದರೆ, ಈ ಸೋಂಕು ರಕ್ತದ ಹರಿವಿನಲ್ಲಿ ಕಂಡು ಬರುತ್ತದೆ. ಈ ವೈರಸ್ ​​ಉರಿಯೂತವನ್ನು ಉಂಟು ಮಾಡುತ್ತದೆ. ಅಪಧಮನಿ ಬ್ಲಾಕ್​ ಮಾಡಿ ಹಾನಿಗೆ ಕಾರಣವಾಗುತ್ತದೆ. ಇದರಿಂದ ಹೃದಯ ರಕ್ತನಾಳದ ಕಾಯಿಲೆ ಅಪಾಯ ಹೆಚ್ಚಿದೆ ಎಂದಿದ್ದಾರೆ.

ಲಸಿಕೆ ದರವನ್ನು ಹೆಚ್ಚಿಸುವ ಮೂಲಕ ಈ ಸೋಂಕಿನ ಮೂಲಕ ಉಂಟಾಗುವ ದೀರ್ಘಾವಧಿಯ ಹೃದಯರಕ್ತನಾಳದ ಅಪಾಯಗಳನ್ನು ಕಡಿಮೆ ಮಾಡಬಹುದಾಗಿದೆ ಎಂದು ಸಂಶೋಧನೆ ತಿಳಿಸಿದೆ.

ಇದನ್ನೂ ಓದಿ: ಗರ್ಭಕಂಠ ಕ್ಯಾನ್ಸರ್​ ತಡೆಗೆ ಲಸಿಕೆ; ಸರ್ಕಾರದ ಕ್ರಮಕ್ಕೆ ವೈದ್ಯರಿಂದ ಮೆಚ್ಚುಗೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.