ETV Bharat / health

ಏನಿದು ಹಠಾತ್​ ಕಿವುಡುತನ: ಈ ಸಮಸ್ಯೆಗೆ ಕಾರಣವೇನು? - rare sensory hearing loss

ಕಿವಿಯ ಒಳಾಂಗಣದಲ್ಲಿ ಆಗುವ ಶ್ರವಣ ದೋಷ ಅಥವಾ ಕಿವಿಯಿಂದ ಮಿದುಳಿಗೆ ಶಬ್ಧವನ್ನು ಸಾಗಿಸುವ ನರಗಳಿಂದ ಉಂಟಾಗುವ ದೋಷ ಇದಾಗಿದೆ. ಹಾಗಾದ್ರೆ ಈ ಅಪರೂಪದ ಸಂವೇದನಾ ಶ್ರವಣ ದೋಷ (rare sensory hearing loss) ಎಂದರೇನು? ಇದಕ್ಕೆ ಕಾರಣವೇನು ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.

whats-this-rare-sensory-hearing-loss-what-is-the-reason
ಹಠಾತ್​ ಕಿವುಡುತನ (ಐಎಎನ್​ಎಸ್​)
author img

By IANS

Published : Jun 19, 2024, 1:47 PM IST

ನವದೆಹಲಿ: ಬಾಲಿವುಡ್​ನ ಗಾಯಕಿ ಅಲ್ಕಾ ಯಾಗ್ನಿಕ್​ ತಾವು ಅಪರೂಪದ ಶ್ರವಣ ದೋಷದ ಸಮಸ್ಯೆಗೆ ಒಳಗಾಗಿರುವುದಾಗಿ ದೃಢಪಡಿಸಿದ್ದಾರೆ. ವೈರಲ್​ ಸೋಂಕಿನಿಂದ ಈ ರೀತಿ ಸಮಸ್ಯೆಗೆ ಒಳಗಾಗಿದ್ದು, ತಮಗೆ ಹಠಾತ್​ ಕಿವುಡುತನಕ್ಕೆ ಗುರಿಯಾಗಿರುವುದಾಗಿ ಅವರು ತಿಳಿಸಿದ್ದಾರೆ. ಹಾಗಾದ್ರೆ ಈ ಅಪರೂಪದ ಸಂವೇದನಾ ಶ್ರವಣ ದೋಷ (rare sensory hearing loss) ಎಂದರೇನು? ಇದಕ್ಕೆ ಕಾರಣವೇನು ಎಂಬ ಕುರಿತ ತಜ್ಞರ ಮಾತು ಇಲ್ಲಿದೆ.

ಕಿವಿಯ ಒಳಾಂಗಣದಲ್ಲಿ ಆಗುವ ಶ್ರವಣ ದೋಷ ಅಥವಾ ಕಿವಿಯಿಂದ ಮಿದುಳಿಗೆ ಶಬ್ಧವನ್ನು ಸಾಗಿಸುವ ನರಗಳಿಂದ ಉಂಟಾಗುವ ದೋಷ ಇದಾಗಿದೆ

ಈ ಕುರಿತು ಮಾತನಾಡಿರುವ ದೆಹಲಿಯ ಶ್ರೀ ಗಂಗಾ ರಾಮ್​ ಆಸ್ಪತ್ರೆಯ ಇಎನ್​ಟಿ ವಿಭಾಗದ ಉಪಾಧ್ಯಕ್ಷರಾಗಿರುವ ಡಾ ಮನೀಷ್​ ಮುಂಜಲ್​, ಧಿಡೀರ್​ ಸಂವೇದನಾ ಶ್ರವಣ ದೋಷವು ವೈದ್ಯಕೀಯ ತುರ್ತು ಪರಿಸ್ಥಿತಿಯಾಗಿದೆ. ಇದು ಹೆಚ್ಚ ಆಕ್ರಮಣಕಾರಿಯಾಗಿದ್ದಲ್ಲಿ 48 ರಿಂದ 72ಗಂಟೆಯೊಳಗೆ ಚಿಕಿತ್ಸೆ ನೀಡದೇ ಹೋದಲ್ಲಿ ಇದು ಗುಣಪಡಿಸಲಾಗದ ಪರಿಸ್ಥಿತಿ ನಿರ್ಮಾಣ ​ಮಾಡುತ್ತದೆ.

ಕಿವಿಯ ಒಳಾಂಗವಾಗಿರುವ ಕೊಕ್ಲಿಯಾದ ಸಮಸ್ಯೆ ಇದಾಗಿದೆ. ಕೂದಲಿನ ಕೋಶಗಳಿಗೆ ಹಾನಿಯಾಗುವುದರಿಂದ ಇದು ಸಂಭವಿಸುತ್ತದೆ ಎಂದಿದ್ದಾರೆ. ಹೆರ್ಪೆಸ್​, ವರಿಸೆಲ್ಲ, ಮಂಪ್ಸ್ ಎಂಬ ಸಾಮಾನ್ಯ ವೈರಸ್​​ ಅಥವಾ ದಿಢೀರ್​ ಎಂದು 85 ಡೆಸಿಬಲ್​ಗಿಂತಹ ಹೆಚ್ಚಿನ ಶಬ್ಧ ಮಟ್ಟಕ್ಕೆ ತೆರೆದುಕೊಂಡಾಗ ಈ ರೀತಿಯ ಶ್ರವಣ ಸಮಸ್ಯೆ ಉಂಟಾಗಬಹುದು. ಅಷ್ಟೇ ಅಲ್ಲದೇ ಈ ಸಮಸ್ಯೆಗೆ ನೋವು ನಿವಾರಕ ಮಾತ್ರೆಗಳ ಅತಿಯಾದ ಬಳಕೆ, ಕಿಮೋಥೆರಪಿ, ಗಡ್ಡೆಗಳ ಸಂಕೋಚನೆ, ಮಿದುಳಿನ ಊರಿಯುತವಾಗಿರುವ ಮೆನಿಂಜೈಟಿಸ್ ಅಥವಾ ಪಾರ್ಶ್ವವಾಯುವೂ ಕಾರಣವಾಗಬಹುದು.

ಈ ರೀತಿ ದಿಢೀರ್​ ಶ್ರವಣ ನಷ್ಟ ಉಂಟಾದಾಗ ತಕ್ಷಣಕ್ಕೆ ಇಎನ್​ಟಿ ವೈದ್ಯರ ಸಂಪರ್ಕಕ್ಕೆ ಬರುವುದು ಅಗತ್ಯ. ಇದಕ್ಕೆ ಸಂಬಂದಿಸಿದ ಅಗತ್ಯ ಚಿಕಿತ್ಸೆ,ಗಳನ್ನು ನಡೆಸಿ, ಸಮಸ್ಯೆ ಪತ್ತೆಯಾದಾಗ ಚಿಕಿತ್ಸೆ ಆರಂಭಿಸಬಹುದು. ಆಂಟಿವೈರಲ್‌ಗಳು, ಮೌಖಿಕ ಮತ್ತು ಇಂಟ್ರಾಟಿಂಪನಿಕ್ ಸ್ಟೀರಾಯ್ಡ್‌ಗಳ ಕಾಕ್‌ಟೈಲ್ ಚಿಕಿತ್ಸೆ ಅಗತ್ಯವಿರುತ್ತದೆ. ಜೊತೆಗೆ ಗದ್ದಲದ ವಾತಾವರಣದಿಂದ ವಿಶ್ರಾಂತಿ ಪಡೆಯಬಹುದು.

ವೈದ್ಯರ ಪ್ರಕಾರ, ಆರಂಭದಲ್ಲೇ ಈ ಸಮಸ್ಯೆಗೆ ಚಿಕಿತ್ಸೆ ಆರಂಭಿಸಿದಲ್ಲಿ, ಇದರಿಂದ ಗುಣಮುಖವಾಗುವ ಸಮಸ್ಯೆ ಶೇ 70ರಷ್ಟಿದೆ. ಒಂದು ಕಿವಿಗೆ ಹೋಲಿಕೆ ಮಾಡಿದಾಗ ಎರಡು ಕಿವಿಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಶೇ 1ರಷ್ಟು ಎಂದಿದೆ ಎಂದು ವೈದ್ಯರು ತಿಳಿಸಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: ಅಪರೂಪದ ಶ್ರವಣ ದೋಷದಿಂದ ಬಳಲುತ್ತಿದ್ದಾರೆ ಖ್ಯಾತ ಗಾಯಕಿ ಅಲ್ಕಾ ಯಾಗ್ನಿಕ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.