ETV Bharat / health

ಪ್ರಪಂಚದಾದ್ಯಂತ ಮಕ್ಕಳು, ಹದಿಹರೆಯದವರಲ್ಲೇ ಸಮೀಪದೃಷ್ಟಿ ದೋಷ ಹೆಚ್ಚಳ: ಇದಕ್ಕೆ ಮುಖ್ಯ ಕಾರಣಗಳನ್ನು ತಿಳಿಸಿದ ಸಂಶೋಧನೆ - Myopia is increasing in children

ಪ್ರಪಂಚದಾದ್ಯಂತ ಮಕ್ಕಳು ಮತ್ತು ಹದಿಹರೆಯದವರಲ್ಲಿ ಸಮೀದೃಷ್ಟಿ (Myopia) ದೋಷದ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ ಎಂದು ಇತ್ತೀಚಿನ ಸಂಶೋಧನೆಯೊಂದು ತಿಳಿಸಿದೆ. ಈ ಸಮಸ್ಯೆ ಮುಖ್ಯ ಕಾರಣಗಳೇ ಎಂಬುದನ್ನು ತಿಳಿಯೋಣ.

author img

By ETV Bharat Health Team

Published : 2 hours ago

Myopia in children  Myopia in teenagers  What are the causes of Myopia  Myopia
ಸಾಂದರ್ಭಿಕ ಚಿತ್ರ (ETV Bharat)

Myopia is increasing in children and adolescents: ಪ್ರಪಂಚದಾದ್ಯಂತ ಚಿಕ್ಕ ಮಕ್ಕಳು ಮತ್ತು ಹದಿಹರೆಯದವರಲ್ಲಿ ಸಮೀಪದೃಷ್ಟಿ (Myopia) ದೋಷವು ವ್ಯಾಪಕವಾಗಿ ಕಂಡುಬರುತ್ತಿದೆ. ಅವರಲ್ಲಿ ಪ್ರತಿ ಮೂವರಲ್ಲಿ ಒಬ್ಬರು ದೃಷ್ಟಿದೋಷ ಹೊಂದಿದ್ದಾರೆ. ಮತ್ತು 2050ರ ವೇಳೆಗೆ ಅವರ ಸಂಖ್ಯೆ 74 ಕೋಟಿ ತಲುಪಬಹುದು ಎಂದು ಇತ್ತೀಚಿನ ಅಧ್ಯಯನವು ಹೇಳುತ್ತದೆ.

ದೂರದಲ್ಲಿರುವ ವಸ್ತುಗಳು ಸಮೀಪದೃಷ್ಟಿ ದೋಷವಿರುವವರಿಗೆ ಸ್ಪಷ್ಟವಾಗಿ ಗೋಚರಿಸುವುದಿಲ್ಲ. ಇದು ಸಾಮಾನ್ಯವಾಗಿ ಚಿಕ್ಕ ವಯಸ್ಸಿನಲ್ಲಿ ಪ್ರಾರಂಭವಾಗುತ್ತದೆ. ಇದು ವಯಸ್ಸಿನೊಂದಿಗೆ ಹೆಚ್ಚಾಗುತ್ತದೆ. ಇದರ ತೀವ್ರತೆಯನ್ನು ನಿರ್ಧರಿಸಲು, ಚೀನಾದ ಸನ್ ಯಾಟ್-ಸೆನ್ ವಿಶ್ವವಿದ್ಯಾಲಯದ ಸಂಶೋಧಕರು ಜೂನ್ 2023ರ ವರೆಗೆ ನಡೆಸಿದ 276 ಅಧ್ಯಯನಗಳನ್ನು ಪರಿಶೀಲಿಸಿದ್ದಾರೆ.

ಈ ಅಧ್ಯಯನದಲ್ಲಿ ಭಾಗವಹಿಸಿದ್ದ 5ರಿಂದ 19 ವರ್ಷ ವಯೋಮಾನದ 54 ಲಕ್ಷ ಜನರನ್ನು ಪರೀಕ್ಷಿಸಲಾಗಿದ್ದು, 19 ಲಕ್ಷ ದೂರದೃಷ್ಟಿಯ ಜನರ ವಿವರಗಳನ್ನು ವಿಶ್ಲೇಷಿಸಲಾಗಿದೆ. ಸಮೀಪದೃಷ್ಟಿಯು 1990ರಿಂದ 2000ರ ಮಧ್ಯದಲ್ಲಿ 24 ಪ್ರತಿಶತದಿಂದ 2001ರಿಂದ 10ರಲ್ಲಿ 25 ಪ್ರತಿಶತಕ್ಕೆ ಏರಿತು.

ಅದೇ 2011ರಿಂದ 19ರಲ್ಲಿ 30 ಪ್ರತಿಶತ ಮತ್ತು 2020ರಿಂದ 23 ರಲ್ಲಿ 36 ಪ್ರತಿಶತಕ್ಕೆ ಏರಿತು. ಈ ಸಮಸ್ಯೆಯು 1990ರಿಂದ 2023ರ ನಡುವೆ ಮೂರು ಪಟ್ಟು ಹೆಚ್ಚಾಗಿದೆ. ಶ್ರೀಮಂತ ರಾಷ್ಟ್ರಗಳಿಗೆ ಹೋಲಿಸಿದರೆ ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ಇದು ಗಮನಾರ್ಹವಾಗಿ ಹೆಚ್ಚಾಗಿದೆ ಸಂಶೋಧನೆಯಿಂದ ತಿಳಿದುಬಂದಿದೆ.

ಇದು ಹುಡುಗಿಯರಲ್ಲಿ ಅಂದ್ರೆ, ಪೂರ್ವ ಏಷ್ಯಾದವರಲ್ಲಿ ಮತ್ತು ನಗರ ಪ್ರದೇಶಗಳಲ್ಲಿ ವಾಸಿಸುವವರಲ್ಲಿಯೂ ಹೆಚ್ಚು ಕಂಡು ಬರುತ್ತಿದೆ. ಸುಮಾರು ಮೂರನೇ ಒಂದು ಭಾಗದಷ್ಟು ಮಕ್ಕಳು ಸಮೀಪದೃಷ್ಟಿಯಿಂದ ಬಳಲುತ್ತಿದ್ದಾರೆ ಎಂದು ಸಂಶೋಧಕರು ಹೇಳುತ್ತಾರೆ.

ಅವಧಿಗೂ ಮುಂಚೆಯೇ ಪ್ರೌಢಾವಸ್ಥೆಯನ್ನು ತಲುಪುವುದು ಮತ್ತು ಹೊರಾಂಗಣದಲ್ಲಿ ಹೆಚ್ಚು ಸಮಯ ಕಳೆಯದಿರುವ ಹುಡುಗಿಯರಲ್ಲಿ ಸಮೀಪದೃಷ್ಟಿ ಹೆಚ್ಚಳಕ್ಕೆ ಕಾರಣವಾಗಬಹುದು ಎಂದು ನಂಬಲಾಗಿದೆ. ಇದನ್ನು ಕಡಿಮೆ ಮಾಡಲು, ಹೆಚ್ಚು ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳು ಮಕ್ಕಳನ್ನು ಪ್ರೋತ್ಸಾಹಿಸಲು ಸೂಚಿಸಲಾಗಿದೆ. ಮೊಬೈಲ್ ಫೋನ್ ಮತ್ತು ಟ್ಯಾಬ್​ಗಳನ್ನು ವೀಕ್ಷಿಸುವವರು ಸಮಯವನ್ನು ಕಡಿಮೆ ಮಾಡಬೇಕು ಎಂಬುದನ್ನು ಸಂಶೋಧಕರು ಸೂಚಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಈ ವೆಬ್​ಸೈಟ್​ನ್ನು ಸಂಪರ್ಕಿಸಬಹುದು: https://www.ncbi.nlm.nih.gov/pmc/articles/PMC6170055/

ಓದುಗರಿಗೆ ಪ್ರಮುಖ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳುವಳಿಕೆಗಾಗಿ ಮಾತ್ರವೇ ಒದಗಿಸಲಾಗಿದೆ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ನಿಮಗೆ ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣತರ ಸಲಹೆ ಪಡೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.