ETV Bharat / health

2015 ರಿಂದ ಭಾರತದಲ್ಲಿ ಶೇ 16ರಷ್ಟು ಕುಸಿದ ಟಿಬಿ ಪ್ರಕರಣ: ಕೇಂದ್ರ ಆರೋಗ್ಯ ಸಚಿವ

ಸರ್ಕಾರ ಕ್ಷಯ ರೋಗ ಮುಕ್ತ ಭಾರತದ ಗುರಿ ಹೊಂದಿದ್ದು, ಈ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ.

tuberculosis  reduced in india
tuberculosis reduced in india
author img

By IANS

Published : Feb 9, 2024, 10:36 AM IST

ಹೈದರಾಬಾದ್​: ಜಾಗತಿಕವಾಗಿ ಹೋಲಿಕೆ ಮಾಡಿದಾಗ ಭಾರತದಲ್ಲಿ ಕ್ಷಯರೋಗದ ಪ್ರಮಾಣವು ಶೇ 16ರಷ್ಟು ಕಡಿಮೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ. ಸ್ಟಾಪ್​ ಟಿಬಿ ಪಾರ್ಟನರ್​ಶಿಪ್​ ಬೋರ್ಡ್​ನಲ್ಲಿ ಈ ಕುರಿತು ಮಾತನಾಡಿರುವ ಅವರು, ಭಾರತದಲ್ಲಿ ಟಿಬಿ ಪ್ರಕರಣಗಳು 2015 ರಲ್ಲಿ 1 ಮಿಲಿಯನ್ ನಿಂದ 2023 ರಲ್ಲಿ 0.26 ಮಿಲಿಯನ್‌ ಕಡಿಮೆ ಆಗಿದೆ ಎಂದರು. ಜಾಗತಿಕವಾಗಿ 2030ಕ್ಕೆ ಟಿಬಿ ಮುಕ್ತ ಭಾರತದ ಗುರಿ ಹೊಂದಿದ್ದು, ದೇಶ 2025ರ ಹೊತ್ತಿಗೆ ಭಾರತ ಟಿವಿ ಮುಕ್ತವಾಗಲಿದೆ ಎಂದರು

ಟಿಬಿ ದಶಕಗಳಿಂದ ಜಾಗತಿಕ ಆರೋಗ್ಯ ಸಮಸ್ಯೆಯಾಗಿದೆ. ಕೋವಿಡ್ -19 ಸಾಂಕ್ರಾಮಿಕ ಸಂದರ್ಭದಲ್ಲಿ ಉಂಟಾದ ಅಡ್ಡಿಯಿಂದ ಎರಡು ವರ್ಷದ ಸವಾಲನ್ನು ಕ್ಷಯರೋಗ ಹೊಂದಿತ್ತು. ಜಾಗತಿಕವಾಗಿ ಇದೀಗ 8.7ರಷ್ಟು ಟಿಬಿ ಪ್ರಕರಣ ಕಡಿಮೆಯಾಗಿದ್ದು, ಭಾರತದಲ್ಲಿ ಇದು ದುಪ್ಪಟ್ಟು ಪ್ರಮಾಣದಲ್ಲಿ ಶೇ 16ರಷ್ಟು ಕಡಿಮೆಯಾಗಿದೆ.

2025ರ ಟಿಬಿ ಮುಕ್ತ ಭಾರತದ ಗುರಿಗೆ ಇನ್ನು ಎರಡು ವರ್ಷ ಉಳಿದಿದೆ. ನಮ್ಮ ಗುರಿಯು ರೋಗ ತಡೆಗಟ್ಟುವಿಕೆ ಮತ್ತು ಟಿಬಿ ಪತ್ತೆ ಮತ್ತು ಸೇವೆಗಳನ್ನು ನೀಡುವುದಾಗಿದೆ. ನಮ್ಮ ನಿರಂತರ ಪ್ರಯತ್ನದಿಂದಾಗಿ ಭಾರತದಲ್ಲಿ ಟಿಬಿ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಭಾರತದ ಸಾರಥ್ಯದಲ್ಲಿ ನಡೆದ 20 ಶೃಂಗಸಭೆಯಲ್ಲೂ ಡಿಜಿಟಲ್ ಪರಿಹಾರಗಳನ್ನು ಬಳಸಿಕೊಂಡು ಆರೋಗ್ಯ ಸೇವೆಗಳ ಪರಿಣಾಮಕಾರಿತ್ವ ಮತ್ತು ವ್ಯಾಪ್ತಿಯನ್ನು ಸುಧಾರಿಸುವ ಕುರಿತು ಗಮನ ಹರಿಸಲಾಗಿದೆ. ಔಷಧೀಯ ಅಭಿವೃದ್ಧಿ ಮತ್ತು ಉತ್ಪಾದನಾ ಸಾಮರ್ಥ್ಯಗಳನ್ನು ಹೆಚ್ಚಿಸಲು ಸಹಕಾರವನ್ನು ಬಲಪಡಿಸುವುದು. ಒಂದು ಆರೋಗ್ಯ ಮತ್ತು ಆಂಟಿಮೈಕ್ರೊಬಿಯಲ್ ಪ್ರತಿರೋಧದ ಮೇಲೆ ಕೇಂದ್ರೀಕರಿಸುವುದು ಭಾರತ ಮತ್ತು ವಿಶ್ವದ ಮುಂದಿರುವ ಅಂಶಗಳಾಗಿವೆ.

ಖಾಸಗಿ ವಲಯ ಸೇರಿದಂತೆ ಹಲವು ಮಧ್ಯಸ್ಥಿಕೆಗಳ ಮೂಲಕ ಕಳೆದ 9 ವರ್ಷಗಳಲ್ಲಿ ಭಾರಿ ಪ್ರಮಾಣದಲ್ಲಿ ಗಮನಹರಿಸಲಾಗಿದೆ. 2023 ರಲ್ಲಿ, ಖಾಸಗಿ ವಲಯದಿಂದ 0.84 ಮಿಲಿಯನ್ ರೋಗಿಗಳಿಗೆ ಸೂಚನೆ ನೀಡಲಾಗಿದೆ. ಅವರು ಶೇ 33ರಷ್ಟು ಕೊಡುಗೆ ನೀಡಿದ್ದಾರೆ. ಈ ಮೂಲಕ ಭಾರತದ ಟಿಬಿ ಮುಕ್ತ ಗುರಿಗೆ ಉತ್ತೇಜಿಸಿದ್ದಾರೆ.

ಪ್ರಧಾನ ಮಂತ್ರಿ ಟಿಬಿ ಮುಕ್ತ ಭಾರತ್ ಅಭಿಯಾನವು ವಿಶ್ವದ ಅತ್ಯಂತ ದೊಡ್ಡ ಜನ ಬೆಂಬಲಿತ ಅಭಿಯಾನವಾಗಿದೆ. ವಿಕಸಿತ​ ಭಾರತ್​ ಸಂಕಲ್ಪ ಯಾತ್ರೆಯಲ್ಲಿ ಟಿಬಿ ಮುಕ್ತ ಅಭಿಯಾನವೂ ಕೂಡ ಸರ್ಕಾರದ ಒಂದು ಪ್ರಮುಖ ಭಾಗವಾಗಿದೆ. 28 ಮಿಲಿಯನ್​ ಜನರು ಟಿಬಿ ಪರೀಕ್ಷೆಗೆ ಒಳಗಾಗಿದ್ದು, 1 ಮಿಲಿಯನ್​ ಮಂದಿ ಪರೀಕ್ಷೆಯ ಶಿಫಾರಸನು ಹೊಂದಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವರು ಹೇಳಿದ್ದಾರೆ.

ಇದನ್ನೂ ಓದಿ: 2022ರಲ್ಲಿ ಜಾಗತಿಕವಾಗಿ 7.5 ಮಿಲಿಯನ್ ಜನರಲ್ಲಿ ಕ್ಷಯ ರೋಗ ಪತ್ತೆ: WHO

ETV Bharat Logo

Copyright © 2024 Ushodaya Enterprises Pvt. Ltd., All Rights Reserved.